ಸೊಳ್ಳೆಯ ಕಾಟದಿಂದ ಮುಕ್ತಿ ಪಡೆಯಲು ಈ ನ್ಯಾಚುರಲ್ ಟ್ರಿಕ್ ಟ್ರೈ ಮಾಡಿ

First Published | Feb 28, 2021, 3:28 PM IST

ಸೊಳ್ಳೆ ಕಾಟ ಯಾರಿಗಿಲ್ಲ ಹೇಳಿ.. ಸಂಜೆಯಾಗುತ್ತಿದ್ದಂತೆ ಕಾಯುತ್ತಿದ್ದ ಸೊಳ್ಳೆಗಳು ಮನೆಗೆ ದಾಳಿ ಮಾಡಿ ಕಚ್ಚತೊಡಗುತ್ತವೆ. ಇದರಿಂದ ತಪ್ಪಿಸಿಕೊಳ್ಳಲು ಕಾಯಿಲ್ ಇಟ್ಟರೂ ಪ್ರಯೋಜನವಾಗೋದಿಲ್ಲ. ಏನೆ ಮಾಡಿದರೂ ಈ ಸೊಳ್ಳೆಗಳನ್ನು ನಿವಾರಣೆ ಮಾಡಲು ಸಾಧ್ಯವಿಲ್ಲ ಅಂತೀರಾ? ಸೊಳ್ಳೆಗಳು ಕಚ್ಚಿದರೆ ಪರವಾಗಿಲ್ಲ ಎಂದು ಸುಮ್ಮನೆ ಕುಳಿತರೆ ಅದರಿಂದ ಹರಡುವ ರೋಗಗಳು ಜೀವವನ್ನೇ ತೆಗೆಯುತ್ತವೆ.  ನಿಮ್ಮ ಮನೆಯಲ್ಲೂ ಸೊಳ್ಳೆಕಾಟ ಜಾಸ್ತಿಯಾಗಿವೆಯೇ? ಹಾಗಿದ್ದರೆ ಈ ಟಿಪ್ಸ್ ಗಳನ್ನ  ಪಾಲಿಸಿ ಸೊಳ್ಳೆಗಳನ್ನು ಮನೆಯಿಂದ ಓಡಿಸಿ ...

ಕಾಫಿ ಬೀಜ : ಸೊಳ್ಳೆಗಳನ್ನು ನಿವಾರಣೆ ಮಾಡುವ ಒಂದು ವಿಧಾನ ಎಂದರೆ ಕಾಫಿ ಬೀಜಗಳನ್ನು ನಿಂತ ನೀರಿರುವ ಜಾಗದ ಮೇಲೆ ಹಾಕುವುದು. ಇವು ನೀರಿನ ಕೆಳಗೆ ಹೋದಾಗ ಸೊಳ್ಳೆ ಮೊಟ್ಟೆಗಳು ಸಹ ನೀರಿನ ಕೆಳಗೆ ಹೋಗುತ್ತವೆ. ಅಲ್ಲಿ ಆಕ್ಸಿಜನ್ ಕೊರತೆಯಿಂದ ಸೊಳ್ಳೆಗಳು ಹುಟ್ಟುವ ಮೊದಲು ಸಾಯುತ್ತವೆ.
undefined
ನಿಂಬೆ ಮತ್ತು ಲವಂಗ : ನಿಂಬೆ ಹಣ್ಣನ್ನು ಅರ್ಧಕ್ಕೆ ಕತ್ತರಿಸಿ ಅದರ ಮೇಲೆ ಲವಂಗಗಳನ್ನು ಸಿಕ್ಕಿಸಿ. ಇದನ್ನು ಮನೆಯ ಬೇರೆ ಬೇರೆ ಭಾಗಗಲ್ಲಿ ಇಡಿ. ಇದರಿಂದ ಮನೆಯಲ್ಲಿ ಸೊಳ್ಳೆ, ನೊಣ ಯಾವುದು ಸುಳಿಯುವುದಿಲ್ಲ.
undefined
Tap to resize

ಬೆಳ್ಳುಳ್ಳಿ : ಬೆಳ್ಳುಳ್ಳಿಯನ್ನು ಜಜ್ಜಿ ನೀರಿನಲ್ಲಿ ಹಾಕಿ ಕುದಿಸಿ. ಈ ನೀರನ್ನು ಸ್ಪ್ರೇ ಬಾಟಲ್ ಗೆ ಹಾಕಿ ಕೊನೆಯಲ್ಲಿ ಸ್ಪ್ರೇ ಮಾಡಿ. ಮತ್ತೆ ಮ್ಯಾಜಿಕ್ ನೋಡಿ. ಒಂದೇ ಒಂದು ಸೊಳ್ಳೆ ಸುಳಿಯೋದಿಲ್ಲ.
undefined
ಬೇವಿನ ಎಣ್ಣೆ ಮತ್ತು ಲಾವೆಂಡರ್ ಎಣ್ಣೆ : ಈ ಎರಡು ಎಣ್ಣೆಗಳನ್ನು ಮಿಕ್ಸ್ ಮಾಡಿ ತ್ವಚೆಗೆ ಹಚ್ಚಿದರೆ ಸೊಳ್ಳೆಗಳು ಹತ್ತಿರ ಸುಳಿಯೋದಿಲ್ಲ.
undefined
ಡಿಶ್ ಸೋಪ್ : ಡಿಶ್ ಸೋಪ್ ನ್ನು ನೀರಿನ ಜೊತೆ ಮಿಕ್ಸ್ ಮಾಡಿ ಸ್ಪ್ರೇ ಮಾಡಿದರೆ ಸೊಳ್ಳೆಗಳು ನಾಶವಾಗುತ್ತದೆ.
undefined
ಪುದೀನಾ : ಪುದೀನಾ ಸೊಪ್ಪಿನ ರಸ ಅಥವಾ ಮಿಂಟ್ ಆಯಿಲ್ ತೆಗೆದುಕೊಂಡು ನೀರಿನ ಜೊತೆ ಮಿಕ್ಸ್ ಮಾಡಿ ಬಾಟಲ್ ನಲ್ಲಿ ತುಂಬಿಸಿಡಿ. ಸೊಳ್ಳೆಗಳ ಕಾಟ ಪ್ರಾರಂಭವಾದರೆ ಅದನ್ನು ಸಿಂಪಡಿಸಿ ಸೊಳ್ಳೆ ಮಾಯವಾಗುವುದು.
undefined

Latest Videos

click me!