ಅಬ್ಬಾ ಅಲ್ಲೆಲ್ಲಾ ಪಿಂಪಲ್ ಆದ್ರೆ ಏನು ಮಾಡೋದು?

Suvarna News   | Asianet News
Published : May 09, 2021, 05:56 PM ISTUpdated : May 09, 2021, 05:58 PM IST

ಕುರ ಅಂದರೆ ಮುಖದ ಮೇಲೆ ಮೂಡುವ ಮೊಡವೆಯಂತಹದ್ದೇ ಆದ ಕೀವುಗುಳ್ಳೆಯಾಗಿದೆ. ಆದರೆ ಇದು ಅತಿ ಅನಪೇಕ್ಷಿತ ದೇಹದ ಭಾಗದ ಮೇಲೆ ಮೂಡುತ್ತದೆ. ಹೌದು, ಪ್ರಷ್ಠಭಾಗದ ನಟ್ಟ ನಡುವಿನಲ್ಲಿಯೇ ಹೆಚ್ಚಾಗಿ ಮೂಡುತ್ತದೆ. ಇದರಿಂದಾಗಿ ಕುಳಿತುಕೊಳ್ಳಲು ಬಿಡಿ ನಡೆದಾಡುವಾಗಲೂ ಅತೀವ ಮುಜುಗರ ಎದುರಿಸಬೇಕಾಗುತ್ತದೆ. ಈ ನೋವನ್ನು ಅನುಭವಿಸಿದ ಕನ್ನಡಿಗ ಹಿರಿಯರು “ಬಲ್ಲವನೇ ಬಲ್ಲ ಕುರದ ನೋವ” ಎಂಬ ಗಾದೆಯನ್ನೂ ಬರೆದುಬಿಟ್ಟಿದ್ದಾರೆ!

PREV
114
ಅಬ್ಬಾ ಅಲ್ಲೆಲ್ಲಾ ಪಿಂಪಲ್ ಆದ್ರೆ ಏನು ಮಾಡೋದು?

ಕುರ ಎದುರಾಗಲು ಸಾಮಾನ್ಯ ಕಾರಣಗಳು: ವಿಶೇಷವಾಗಿ ಪ್ರಷ್ಠಭಾಗದಲ್ಲಿ ಕುರ ಎದುರಾಗಲು ಕೆಲವು ಕಾರಣಗಳು ಇಂತಿವೆ: ಜಿಮ್ ಅಥವಾ ವ್ಯಾಯಾಮ ಶಾಲೆಯಿಂದ ಹಿಂತಿರುಗಿದ ನಂತರ ಒದ್ದೆಯಾದ ಅಥವಾ ಬೆವರಿನಿಂದ ತೋಯ್ದ ಬಟ್ಟೆಗಳನ್ನು ಬದಲಾಯಿಸದಿರುವುದು. ಈ ಬೆವರು ಶೀಘ್ರವೇ ಸೂಕ್ಷ್ಮಜೀವಿಗಳನ್ನು ಆಹ್ವಾನಿಸುತ್ತದೆ. ಇವುಗಳಿಗೆ ಅತಿ ಸೂಕ್ತವಾದ ಭಾಗ ಎಂದರೆ ಕತ್ತಲಿರುವ ಮತ್ತು ಅಡಗಲು ತೇವ ಇರುವ ಸಂಧು ಭಾಗ. ಪ್ರಷ್ಠಭಾಗಕ್ಕಿಂತ ಉತ್ತಮ ಸ್ಥಳ ಈ ಬ್ಯಾಕ್ಟೀರಿಯಾಗಳಿಗೆ ಇನ್ನೊಂದು ಸಿಗಲಾರದು. ಶೀಘ್ರವೇ ಇವು ಸೋಂಕು ಹರಡುವ ಮೂಲಕ ಚಿಕ್ಕ ಗುಳ್ಳೆ ಮೂಡುತ್ತದೆ. ಕ್ರಮೇಣ ಇದು ದೊಡ್ಡದಾಗುತ್ತಾ ಹೋಗುತ್ತದೆ.

214

ತುಂಬಾ ಬಿಗಿಯಾದ ಅಥವಾ ಸಿದ್ಧರೂಪದ ಬಟ್ಟೆಗಳನ್ನು ಧರಿಸುವುದರಿಂದ ಘರ್ಷಣೆಗೆ ಕಾರಣವಾಗಬಹುದು ಮತ್ತು ಇದು ಕೀವುಗಳ್ಳೆಗಳು ಮೂಡಲು ಕಾರಣವಾಗಬಹುದು.

ದೀರ್ಘಕಾಲ ಕುಳಿತುಕೊಳ್ಳುವುದರಿಂದ ದೇಹದ ಭಾರ ಸತತವಾಗಿ ಬೀಳುವ ಭಾಗದ ಮೇಲೆ ಗುಳ್ಳೆಗಳು ಕಾಣಿಸಿಕೊಳ್ಳಬಹುದು. ಗಾಳಿಯಾಡುವಿಕೆಯ ಕೊರತೆಯಿಂದ ಇದು ಪ್ರಾರಂಭವಾಗುತ್ತದೆ. ಅದರಲ್ಲೂ ಈ ಭಾಗದಲ್ಲಿ ಬೆವರುವಿಕೆ ಹೆಚ್ಚಾದಷ್ಟೂ ಗುಳ್ಳೆಗಳು ಮೂಡುವ ಸಾಧ್ಯತೆ ಇನ್ನಷ್ಟು ಹೆಚ್ಚುತ್ತದೆ. ಅಲ್ಲದೇ ಕೆಲವು ಆಹಾರಗಳೂ ಈ ಭಾಗದಲ್ಲಿ ಗುಳ್ಳೆಗಳು ಮೂಡುವ ಸಾಧ್ಯತೆಯನ್ನು ಹೆಚ್ಚಿಸುತ್ತವೆ. (ಉದಾಹರಣೆಗೆ ಬದನೆ)

314

ಉಳಿದಂತೆ ಬೆವರು, ಧೂಳು, ಸ್ವಚ್ಛತೆಯ ಕೊರತೆ ಹಾಗೂ ಚರ್ಮದ ಅಡಿಯಲ್ಲಿ ಕೀವು ಸಂಗ್ರಹವಾಗುವ ಇತರ ಕಾರಣಗಳಿಂದಲೂ ಕುರ ಎದುರಾಗಬಹುದು. ಕುರ ಮೂಡುವ ಸಾಧ್ಯತೆ ಪ್ರಷ್ಠಭಾಗದಲ್ಲಿ ಹೆಚ್ಚಾಗಿದ್ದರೂ ಉಳಿದ ಭಾಗದಲ್ಲಿ ಬರಬಾರದೆಂದೇನಿಲ್ಲ. ಸೊಂಟ, ಬೆನ್ನು, ತೊಡೆ, ಮೀನಖಂಡ, ಎದೆಯ ಭಾಗ, ಭುಜ ಮೊದಲಾದ ಕಡೆಯೂ ಕುರ ಕಾಣಿಸಿಕೊಳ್ಳಬಹುದು. ಆದರೆ ಪ್ರಷ್ಠಭಾಗದಲ್ಲಿ ಎದುರಾಗುವ ಕುರ ನಿತ್ಯದ ಚಲನೆ ಮತ್ತು ವಿಶೇಷವಾಗಿ ಕುಳಿತುಕೊಳ್ಳಲು ತೊಂದರೆ ಮಾಡುತ್ತದೆ. 

414

ಸಾಮಾನ್ಯವಾಗಿ ಕುರ ಚರ್ಮದ ಅಡಿಯಲ್ಲಿ ಪ್ರಾರಂಭವಾದಾಗ ಅತ್ಯಂತ ಕ್ಷೀಣ ನೋವಿನ ಅನುಭವವಾಗುತ್ತದೆ. ಹೆಚ್ಚಿನವರು ಇದನ್ನು ನಿರ್ಲಕ್ಷಿಸುತ್ತಾರೆ. ಕ್ರಮೇಣ ಈ ಭಾಗದಲ್ಲಿ ಕೊಂಚವೇ ಕೆಂಪಗಾಗುತ್ತಾ ಊದುತ್ತಾ ಬಂದು ಸುಮಾರು ಒಂದು ವಾರದ ಬಳಿಕ ಊದಿಕೊಂಡ ನಡುವಣ ಭಾಗದಲ್ಲಿ ಕೀವು ಹೊರ ಒಸರಿ ಚರ್ಮದ  ಹೊರಪದರವನ್ನು ಬೆಲೂನಿನಂತೆ ಉಬ್ಬಿಸುತ್ತದೆ. ಇದನ್ನು ಒಡೆಯಲು ಹೋದರೆ ಹೊರಚರ್ಮ ಬಿರಿದು ಕೀವು ಸಿಡಿಯುತ್ತದೆ. ಆದರೆ ಒಳಗಿನ ಸೋಂಕು ಹೊರಹೋಗದು. ಈ ಹಂತದಲ್ಲಿ ಅತ್ಯಧಿಕ ನೋವು ಕಾಣಿಸಿಕೊಳ್ಳುತ್ತದೆ ಹಾಗೂ ಮುಟ್ಟಲೂ ಆಗದಷ್ಟು ಚರ್ಮ ಸೂಕ್ಷ್ಮ ಸಂವೇದಿಯಾಗುತ್ತದೆ.

514

ಈ ಕುರಕ್ಕೆ ಪರಿಹಾರವೇನು?
ಮೊದಲಾಗಿ ಸ್ವಚ್ಛತೆಯೇ ಇದಕ್ಕೆ ಪರಿಹಾರ. ಪ್ರತಿ ಬಾರಿ ವ್ಯಾಯಾಮ ಮಾಡಿದ ಬಳಿಕ ಅಥವಾ ಯಾವುದೇ ದೈಹಿಕ ಶ್ರಮದ ಕೆಲಸ, ಬೆವರುವಿಕೆ ಉಂಟಾಗುವ ಪರಿಸ್ಥಿತಿಗಳಲ್ಲಿ ಸ್ನಾನ ಮಾಡಿ ಸ್ವಚ್ಛತೆ ಕಾಪಾಡಿಕೊಳ್ಳುವುದು ಅಗತ್ಯ. ವಿಶೇಷವಾಗಿ ಬೇಸಿಗೆಯ ದಿನಗಳಲ್ಲಿ ದಿನಕ್ಕೆ ಎರಡು ಬಾರಿ ಸ್ನಾನ ಮಾಡಬೇಕಾಗಿ ಬರಬಹುದು. 

614

ದೈಹಿಕ ಶ್ರಮದ ಯಾವುದೇ ಕೆಲಸದಲ್ಲಿ ದೇಹ ಬಿಸಿಯಾಗುತ್ತದೆ ಹಾಗೂ ಇದನ್ನು ತಂಪುಗೊಳಿಸಲು ದೇಹ ತ್ವಚೆಯ ಸೂಕ್ಷ್ಮರಂಧ್ರಗಳನ್ನು ವಿಶಾಲವಾಗಿ ತೆರೆದು ಬೆವರು ಹೊರಹರಿಯಲು ಅನುವು ಮಾಡಿಕೊಡುತ್ತದೆ. ಆದರೆ ಈ ಅವಕಾಶವನ್ನು ಬ್ಯಾಕ್ಟೀರಿಯಾಗಳು ಸದುಪಯೋಗಿಸಿಕೊಳ್ಳುವ ಅಪಾಯವಿದೆ. ಅಲ್ಲದೇ ವಿಶೇಷವಾಗಿ ಬೆವರು ನಿಲ್ಲುವ ಭಾಗಗಳಲ್ಲಿ ಕೊಳೆ ಧೂಳುಗಳೂ ತುಂಬಿಕೊಂಡು ಈ ಬ್ಯಾಕ್ಟೀರಿಯಾಗಳು ಹೆಚ್ಚಾಗಿ ಸಂಗ್ರಹಗೊಳ್ಳಲು, ತನ್ಮೂಲಕ ಕುರು ಏಳಲು ಕಾರಣವಾಗುತ್ತವೆ.

714

ಉಪ್ಪು ನೀರಿನಲ್ಲಿ ಸ್ನಾನ ಮಾಡಿ
ವಿಶೇಷವಾಗಿ ಬೆವರಿನ ದಿನ ಅಥವಾ ಸಂದರ್ಭಗಳ ಬಳಿಕ ಸ್ನಾನದ ನೀರಿಗೆ ಕೊಂಚ ಉಪ್ಪು ಬೆರೆಸಿ ಈ ನೀರಿನಲ್ಲಿ ಸ್ನಾನ ಮಾಡಿ. ಉಪ್ಪು ನೀರಿನ ವಾತಾವರಣದಲ್ಲಿ ಬ್ಯಾಕ್ಟೀರಿಯಾಗಳು ಬದುಕಲಾರವು. ಒಂದು ವೇಳೆ ಕುರ ಈಗ ತಾನೇ ಏಳುತ್ತಿದ್ದು ಒತ್ತಿದಾಗ ಒಳಗೆ ನೋವು ನೀಡುತ್ತಿರುವ ಅನುಭವವಾದರೆ ಈ ಭಾಗದಲ್ಲಿ ಉಗುರುಬೆಚ್ಚನೆಯ ಉಪ್ಪು ನೀರಿನಲ್ಲಿ ತೋಯಿಸಿದ ಒಂದು ಕಾಗದದ ಟವೆಲ್ ಒಂದನ್ನು ಅದ್ದಿ ನೋವು ಇರುವ ಭಾಗದ ಮೇಲೆ ಇರಿಸಿ.  ಉಪ್ಪನ್ನು ಬಿಸಿಮಾಡಿ ಬಟ್ಟೆಯ ಗಂಟು ಮಾಡಿಯೂ ನೋವಿರುವ ಭಾಗದ ಮೇಲೆ ಇರಿಸಬಹುದು. ಇದು ಕುರ ಒಳಗಿನಿಂದಲೇ ಗುಣವಾಗಲು ಸಾಧ್ಯವಾಗುತ್ತದೆ. ಆದರೆ ಕುರ ದೊಡ್ಡದಾಗಿದ್ದು ಕೀವು ಗುಳ್ಳೆ ಮೂಡಿದ್ದರೆ ಈ ವಿಧಾನ ಸೂಕ್ತವಲ್ಲ! ಮನೆಮದ್ದುಗಳನ್ನು ಎಚ್ಚರಿಕೆಯಿಂದ ನಿರ್ವಹಿಸಿ.

814

ಲಿಂಬೆ ರಸ
ಬ್ಯಾಕ್ಟೀರಿಯಾಗಳನ್ನು ನಿವಾರಿಸಲು ಲಿಂಬೆರಸ ಅತ್ಯುತ್ತಮ ಆಯ್ಕೆಯಾಗಿದೆ. ಇದರ ಪ್ರಬಲ ಉರಿಯೂತ ನಿವಾರಕ ಗುಣ ಮತ್ತು ಸೆಳೆತ ನೀಡುವ ಗುಣ ತ್ವಚೆಯ ಸೂಕ್ಷ್ಮರಂಧ್ರಗಳನ್ನು ಕಿರಿದಾಗಿಸಲು ನೆರವಾಗುವ ಮೂಲಕ ಬ್ಯಾಕ್ಟೀರಿಯಾಗಳ ನುಸುಳುವಿಕೆಯನ್ನು ತಡೆಯುತ್ತದೆ. ಒಂದು ವೇಳೆ ಕುರ ಈಗಾಗಲೇ ದೊಡ್ಡದಾಗಿದ್ದು ಇನ್ನೂ ಕೀವುಗುಳ್ಳೆ ಮೂಡಿರದೇ ಇದ್ದರೆ ಒಂದು ಲಿಂಬೆಯ ರಸದಲ್ಲಿ ಹತ್ತಿಯುಂಡೆಯನ್ನು ಅದ್ದಿ ನೋವಿರುವ ಭಾಗಕ್ಕೆ ಅದ್ದಿ ಒಣಗಲು ಬಿಡಿ. ಇದರ ಪ್ರಬಲ ಬ್ಯಾಕ್ಟೀರಿಯಾ ನಿವಾರಕ ಗುಣ ಚರ್ಮದ ಒಳಗಿನ ಬ್ಯಾಕ್ಟೀರಿಯಾಗಳನ್ನು ಕೊಂದು ದೇಹದ ರೋಗ ನಿರೋಧಕ ಶಕ್ತಿಯೇ ಒಳಗಿನಿಂದ ಕುರವನ್ನು ಗುಣಪಡಿಸಲು ನೆರವಾಗುತ್ತದೆ.

914

ಹಲ್ಲುಜ್ಜುವ ಪೇಸ್ಟ್ ಅಥವಾ ಅಡುಗೆ ಸೋಡಾ:
ಹಲ್ಲುಗಳನ್ನು ಬಿಳುಪುಗೊಳಿಸುವ ಜೊತೆಗೇ ಈ ಪ್ರಸಾದನಗಳಿಗೆ ಮೊಡವೆಗಳನ್ನು ಗುಣಪಡಿಸುವ ಗುಣವೂ ಇದೆ. ಕುರಗಳನ್ನು ತೆಗೆದುಹಾಕಲು,  ಹಲ್ಲುಜ್ಜುವ ಪೇಸ್ಟ್ ಅಥವಾ ಅಡಿಗೆ ಸೋಡಾವನ್ನು ಬಳಸಬಹುದು, ಇವೆರಡೂ ಚರ್ಮದಿಂದ ಹೆಚ್ಚುವರಿ ಎಣ್ಣೆಯನ್ನು ಹೀರಿಕೊಳ್ಳಲು ಮತ್ತು ಪಿಹೆಚ್ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದಕ್ಕಾಗಿ,  ಹತ್ತಿಯ ಉಂಡೆಯ ಸಹಾಯದಿಂದ ಕುರದ ಮೇಲೆ ಹಲ್ಲುಜ್ಜುವ ಪೇಸ್ಟ್ ಅಥವಾ ಕೊಂಚ ನೀರಿನಲ್ಲಿ ಬೆರೆಸಿದ ಅಡುಗೆ ಸೋಡಾವನ್ನು ಹಚ್ಚಿ ಒಣಗಲು ಬಿಡಿ. ಬಳಿಕ ಉಗುರು ಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.ನಂತರ ತೊಳೆಯಲು ಅನುಮತಿಸಿ.

1014

ಕುರ ಬಲಿತುಕೊಂಡಿದ್ದರೆ ವೈದ್ಯರಲ್ಲಿಗೆ ಹೋಗಬೇಕು
ಈ ಮೇಲಿನ ಕ್ರಮಗಳು ಕೇವಲ ಕುರ ಇನ್ನೂ ತನ್ನ ಪೂರ್ಣಾವಸ್ಥೆ ಪಡೆಯುವ ಮುನ್ನವೇ ನಿರ್ವಹಿಸಬೇಕಾದ ಮದ್ದುಗಳಾಗಿವೆ. ಆದರೆ ಒಮ್ಮೆ ಕುರ ಪೂರ್ಣವಾಗಿ ಬಲಿತು ಕೀವುಗುಳ್ಳೆ ಕಾಣಿಸಿಕೊಂಡಿತೋ ಈ ಕ್ರಮಗಳು ಇವನ್ನು ಇನ್ನಷ್ಟು ಉಲ್ಬಣಗೊಳಿಸಬಹುದು.  ಈಗ ವೈದ್ಯರಲ್ಲಿ ಭೇಟಿ ನೀಡುವುದು ಅನಿವಾರ್ಯವಾಗಿದೆ. 

1114

ಕುರ ಇದ್ದಷ್ಟೂ ದಿನ ವಹಿಸಬೇಕಾದ ಎಚ್ಚರಿಕೆಗಳು
* ಕುರದ ಭಾಗದ ಮೇಲೆ ಕೊಂಚ ಒತ್ತಡ ಬಿದ್ದರೂ ಇದು ಒಳಗಿನಿಂದ ಹರಡಬಹುದು ಮತ್ತು ಇನ್ನಷ್ಟು ವಿಸ್ತಾರವಾಗಬಹುದು ಹಾಗಾಗಿ ಒತ್ತಡ ಬೀಳದೇ ಇರದಂತೆ ಆದಷ್ಟೂ ಜಾಗ್ರತೆ ವಹಿಸಿ.
* ಕುರ ಪೂರ್ಣವಾಗಿ ಗುಣವಾಗುವವರೆಗೆ ಕೆಲಸದಿಂದ ರಜೆ ಪಡೆದುಕೊಳ್ಳುವುದು ಉತ್ತಮ

1214

ಒಂದು ವೇಳೆ ಕುರ ಪೂರ್ಣವಾಗಿ ಹಣ್ಣಾಗುವ ಮುನ್ನವೇ ತುದಿಯ ಕೀವುಗುಳ್ಳೆ ಒಡೆದಿದ್ದರೆ ಇಲ್ಲಿಂದ ಕೀವು ಸೋರತೊಡಗುತ್ತದೆ. ಇದು ಬಟ್ಟೆಗಳನ್ನು ಮಲಿನಗೊಳಿಸುವುದು ಮಾತ್ರವಲ್ಲ, ಈ ಸೋಂಕು ತಗುಲಿತ ಇತರ ಭಾಗಗಳಿಗೂ ಇತರ ವ್ಯಕ್ತಿಗಳಿಗೂ ಸೋಂಕು ಹರಡುವ ಅಪಾಯವಿದೆ. ಆದ್ದರಿಂದ ಕೊಂಚವೂ ಸೋರುವಿಕೆ ಕಾಣಿಸಿಕೊಂಡರೆ ಈ ಭಾಗದ ಮೇಲೆ ದಪ್ಪನಾಗಿ ಹತ್ತಿಯ ಮೆತ್ತೆಯನ್ನು ಇರಿಸಿ ಈ ಸೋಂಕನ್ನು ಹೀರಿಕೊಳ್ಳುವಂತೆ ಮಾಡಬೇಕು ಹಾಗೂ ದಿನದಲ್ಲಿ ಕೆಲವಾರು ಬಾರಿ ಇದನ್ನು ಬದಲಿಸುತ್ತಾ ಇರಬೇಕು.

1314

* ಕುರ ಗುಣವಾಗುವವರೆಗೂ ಬದನೆ, ಹೂಕೋಸು, ಎಲೆಕೋಸು, ಸಿಮ್ಲಾ ಮಿರ್ಚಿ, ಆಲುಗಡ್ಡೆ ಮೊದಲಾದ ವಾಯುಪ್ರಕೋಪ ಹೆಚ್ಚಿಸುವ ಅಹಾರಗಳನ್ನು ವರ್ಜಿಸಿ ದ್ರವಾಹಾರ ಮತ್ತು ವಿಶೇಷವಾಗಿ ಎಳನೀರಿನ ಸೇವನೆಯನ್ನು ಹೆಚ್ಚಿಸಿ.

* ಕುರದಲ್ಲಿ ತಡೆಯಲಾರದ ಉರಿ ಇದ್ದರೆ ಹತ್ತಿಯ ಮೆತ್ತೆಯ ಒಳಗೆ ಕೊಂಚ ಜೇನುತುಪ್ಪ ಸವರಿ ಇರಿಸಿ.

1414

* ಕುರ ದಿನದಿಂದ ದಿನಕ್ಕೆ ಹೆಚ್ಚು ಹೆಚ್ಚು ದೊಡ್ಡದಾಗುತ್ತಾ ಹೋಗುತ್ತದೆ. ಹೀಗಾಗದೇ ಒಂದೇ ಗಾತ್ರದಲ್ಲಿದೆ ಎಂದಾಗ ವೀಳ್ಯದೆಲೆಯನ್ನು ಚೆನ್ನಾಗಿ ಅರೆದು ಈ ಭಾಗದ ಮೇಲೆ ದಪ್ಪನಾಗಿ ಹಚ್ಚಿ ಮರುದಿನ ಬೆಳಿಗ್ಗೆ ತೊಳೆದುಕೊಳ್ಳುವ ಮೂಲಕ ಶೀಘ್ರವೇ ಹಣ್ಣಾಗುತ್ತದೆ.

click me!

Recommended Stories