ದಿನದಿಂದ ದಿನಕ್ಕೆ ತೂಕ ಹೆಚ್ಚುತ್ತಿದೆಯೇ? ಹಠಾತ್ ತೂಕ ಏರಿಕೆ ಕಾರಣಗಳಿವು

Suvarna News   | Asianet News
Published : May 09, 2021, 10:59 AM IST

ಹೆಚ್ಚಿನ ಜನರ ಸಮಸ್ಯೆ ಎಂದರೆ ಅದು ತೂಕ ಹೆಚ್ಚಳ. ಅಯ್ಯೋ ನನ್ನ ತೂಕ ಕಡಿಮೆ ಇರಬೇಕಿತ್ತು, ನಾನು ಸ್ವಲ್ಪ ದಪ್ಪ ಇರಬೇಕಿತ್ತು... ಹೀಗೆ ಎಲ್ಲರಿಗೂ ಒಂದೊಂದು ರೀತಿಯಲ್ಲೂ ತೂಕದ ಬಗ್ಗೆ ತುಂಬಾನೆ ಯೋಚನೆ ಇರುತ್ತದೆ. ಹೆಚ್ಚಿನ ಜನ ತೂಕ ಕಳೆದುಕೊಳ್ಳುವತ್ತ ಕಸರತ್ತುಗಳನ್ನು ಮಾಡುತ್ತಾರೆ. ಕೆಲವರಿಗೆ ಹಠಾತ್ ಆಗಿ ತೂಕ ಹೆಚ್ಚಳ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಕಾರಣ ಏನು ಗೊತ್ತಾ? ನಾವು ಪ್ರತಿದಿನ ಮಾಡುವ ಸಣ್ಣ ಪುಟ್ಟ ತಪ್ಪುಗಳಿಂದಲೇ ತೂಕ ಹೆಚ್ಚುತ್ತದೆ. ಯಾವೆಲ್ಲಾ ಕಾರಣಗಳಿಂದ ತೂಕ ಹೆಚ್ಚುತ್ತದೆ ನೋಡೋಣ...   

PREV
18
ದಿನದಿಂದ ದಿನಕ್ಕೆ ತೂಕ ಹೆಚ್ಚುತ್ತಿದೆಯೇ? ಹಠಾತ್ ತೂಕ ಏರಿಕೆ ಕಾರಣಗಳಿವು

ರಾತ್ರಿ ತಡವಾಗಿ ಊಟ: ತಡರಾತ್ರಿ ಊಟ ಮಾಡುವುದು ಹಠಾತ್ ತೂಕ ಹೆಚ್ಚಾಗಲು ಕಾರಣವಾಗಬಹುದು. ಏಕೆಂದರೆ ಎಷ್ಟು ತಡವಾಗಿ ಆಹಾರವನ್ನು ಸೇವಿಸುತ್ತೇವೋ, ಅದು ಅಷ್ಟು ಹೆಚ್ಚು ಕಾಲ ದೇಹವು ಹೆಚ್ಚು ಕೊಬ್ಬನ್ನು ಸಂಗ್ರಹಿಸುತ್ತದೆ. 

28

ರಾತ್ರಿಯ ಊಟ ಮತ್ತು ಮಲಗುವ ನಡುವೆ ಕನಿಷ್ಠ 2 ಗಂಟೆಗಳ ಅಂತರವಿರಬೇಕು. ಇದರಿಂದ ಊಟ ಜೀರ್ಣವಾಗಲು ಸಾಧ್ಯವಾಗುತ್ತದೆ. ಇದರಿಂದ ತೂಕ ಹೆಚ್ಚಳ ಆಗೋದಿಲ್ಲ. 

38

ಹೆಚ್ಚು ಒತ್ತಡ ತೆಗೆದುಕೊಳ್ಳುವುದು: ಸತತ ಎರಡು ಮೂರು ದಿನಗಳವರೆಗೆ ಒತ್ತಡವನ್ನು ತೆಗೆದುಕೊಳ್ಳುವುದರಿಂದ ತೂಕ ಹೆಚ್ಚಾಗುತ್ತದೆ. ಇದು ನಿಮ್ಮ ದೇಹದಲ್ಲಿ ಹೆಚ್ಚು ಕಾರ್ಟಿಸೋಲ್ ಬಿಡುಗಡೆಗೆ ಕಾರಣವಾಗುತ್ತದೆ. 

48

ಒತ್ತಡ ಹೆಚ್ಚಾಗುವ ಕಾರಣದಿಂದಾಗಿ, ದೇಹದಲ್ಲಿ ಕೊಬ್ಬು ಸಂಗ್ರಹವಾಗುತ್ತದೆ. ಇದರಿಂದ ದೂರವಿರಲು, ಯೋಗ ಅಥವಾ ಧ್ಯಾನವನ್ನು ಪ್ರಯತ್ನಿಸಬಹುದು. ಇದು ಮನಸ್ಸನ್ನು ಶಾಂತವಾಗಿರಿಸುತ್ತದೆ.

58

ಔಷಧಿಗಳನ್ನು ಸೇವಿಸುವುದು: ಕೆಲವೊಂದು ಔಷಧಗಳನ್ನು ಸೇವಿಸಿದ ಕೂಡಲೇ ತುಂಬಾ ವೇಗವಾಗಿ ಹಸಿವಾಗುತ್ತದೆ. ಇದು ಚಯಾಪಚಯ ದರವನ್ನು ಕಡಿಮೆ ಮಾಡುತ್ತದೆ ಮತ್ತು ತೂಕವನ್ನು ಹೆಚ್ಚಿಸುತ್ತದೆ. ಈ ಬಗ್ಗೆ ಖಂಡಿತವಾಗಿಯೂ ವೈದ್ಯರೊಂದಿಗೆ ಮಾತನಾಡಬೇಕು.

68

ಸಾಕಷ್ಟು ನಿದ್ರೆ: ತೂಕ ಹೆಚ್ಚಾಗಲು ಒಂದು ಮುಖ್ಯ ಕಾರಣ ನಿದ್ರೆ ಕಡಿಮೆ ಇರಬಹುದು. ಆದ್ದರಿಂದ ದಿನದಲ್ಲಿ ಕನಿಷ್ಟ 7 ರಿಂದ 8 ಗಂಟೆಗಳ ಕಾಲ ಮಲಗಬೇಕು ಮತ್ತು ಅದೂ ಸಂಪೂರ್ಣವಾಗಿ ಟೆನ್ಷನ್ ಮುಕ್ತವಾಗಿರಬೇಕು, ಏಕೆಂದರೆ  ಸಾಕಷ್ಟು ನಿದ್ರೆ ಪಡೆದರೆ ಮತ್ತು ಗುಣಮಟ್ಟದ ನಿದ್ರೆ ಪಡೆಯದಿದ್ದರೆ ತೂಕ ಹೆಚ್ಚಾಗಲು ಕಾರಣವಾಗಬಹುದು. 

78

ಆಲ್ಕೊಹಾಲ್ ಕುಡಿಯುವುದು ಅಥವಾ ಕಡಿಮೆ ನೀರು ಕುಡಿಯುವುದು : ಹಿಂದಿನ ರಾತ್ರಿ ಹೆಚ್ಚು ಆಲ್ಕೊಹಾಲ್ ಸೇವಿಸಿದ್ದೀರಾ? ಅಥವಾ ದಿನವಿಡೀ ಬಹಳ ಕಡಿಮೆ ನೀರು ಕುಡಿದಿದ್ದೀರಾ?. ಹೌದು ಎಂದಾದರೆ, ರಾತ್ರಿಯಲ್ಲಿ ತೂಕ ಹೆಚ್ಚಾಗಲು ಇದು ಒಂದು ಕಾರಣವಾಗಬಹುದು. 
 
88

ಆಲ್ಕೊಹಾಲ್ ದೇಹದಲ್ಲಿ ನೀರು ಕಡಿಮೆಯಾಗಲು ಕಾರಣವಾಗುತ್ತದೆ. ಮತ್ತು ಕಡಿಮೆ ನೀರು ಕುಡಿದರೆ ದೇಹವು ನೀರನ್ನು ಸಂಗ್ರಹಿಸಲು ಪ್ರಾರಂಭಿಸುತ್ತದೆ. ಅದರಿಂದ, ಆಲ್ಕೊಹಾಲ್ ಕುಡಿಯಬಾರದು. ಆದರೆ ಕುಡಿಯುತ್ತಿದ್ದರೂ ಅದನ್ನು ತುಂಬಾ ಕಡಿಮೆ ಪ್ರಮಾಣದಲ್ಲಿ ಇರಿಸಿ ಮತ್ತು ಪ್ರತಿದಿನ ಕುಡಿಯಬೇಡಿ.

click me!

Recommended Stories