ಹಸಿವು ಆಗೋಲ್ವಾ? ಹಾಗಿದ್ರೆ ಹಸಿವನ್ನು ಹೆಚ್ಚಿಸುವ ಮ್ಯಾಜಿಕ್ ಇಲ್ಲಿದೆ

First Published Mar 20, 2021, 5:04 PM IST

ಇತ್ತೀಚಿಗೆ ಹಸಿವೆಯೇ ಆಗುವುದಿಲ್ಲ ಎಂದು ಜನರು ಹೇಳಿರೋದನ್ನು ಅನೇಕರು ಕೇಳಿರಬಹುದು. ಹಸಿವಾದರೂ ತುಂಬಾ ಆಹಾರ ಸೇವಿಸಲು ಮನಸಾಗುವುದಿಲ್ಲ. ಸರಿಯಾದ ಸಮಯದಲ್ಲಿ ಹಸಿವಾಗದಿದ್ದರೆ, ಕೆಲವು ಮನೆಮದ್ದುಗಳನ್ನು ತೆಗೆದುಕೊಳ್ಳಬಹುದು. ಆಹಾರ ಮತ್ತು ಆಹಾರದ ವಾಸನೆಯಿಂದಲೂ ಅನೇಕರಿಗೆ ಹಸಿವೆಯೂ ಇರುವುದಿಲ್ಲ. ಕೆಲವೊಮ್ಮೆ ಹೊಟ್ಟೆ ಸಮಸ್ಯೆಯಿಂದಾಗಿ ಹಸಿವಿನ ಕೊರತೆಗೆ ಕಾರಣವಾಗುತ್ತದೆ.   ಹಸಿವನ್ನು ಹೆಚ್ಚಿಸಲು ಸಹಾಯ ಮಾಡುವ ಮನೆ ಮದ್ದುಗಳ ಬಗ್ಗೆ ಇಲ್ಲಿದೆ ಮಾಹಿತಿ.. 

ತ್ರಿಫಲಾ ಪುಡಿಯು ಅನೇಕ ಗೃಹ ಬಳಕೆಯ ವಿಧಾನಗಳಿಗೆ ಒಂದು ಉತ್ತಮ ಪರಿಹಾರ. ಮಲಬದ್ಧತೆಸಮಸ್ಯೆಯಲ್ಲಿ ಇದನ್ನು ಹೆಚ್ಚಾಗಿ ಬಳಸುತ್ತಾರೆ. ಸರಿಯಾದ ಸಮಯದಲ್ಲಿ ಹೆಚ್ಚು ಹಸಿವಿಲ್ಲದಿದ್ದರೆ, ತ್ರಿಫಲಾ ಪುಡಿಯನ್ನು ನೀವು ಸೇವಿಸಬಹುದು.
undefined
ಇದಕ್ಕಾಗಿ ಮಾಡಬೇಕಾದ್ದು ಸುಲಭ, ಒಂದು ಚಮಚ ತ್ರಿಫಲಾ ಪುಡಿಯನ್ನು ಲಘುವಾದ ಬಿಸಿ ಹಾಲಿನಲ್ಲಿ ಬಳಸಬೇಕು. ಇದರ ನಿಯಮಿತ ಸೇವನೆಯು ಹಸಿವನ್ನು ಹೆಚ್ಚಿಸುತ್ತದೆ. ಇದರಿಂದ ಆರೋಗ್ಯವೂ ಉತ್ತಮವಾಗಿರುತ್ತದೆ.
undefined
ಗ್ರೀನ್ ಟೀ ಸೇವನೆಹಸಿವನ್ನು ಹೆಚ್ಚಿಸಲು ಗ್ರೀನ್ ಟೀ ಉತ್ತಮ ಮನೆ ಮದ್ದೆಂದು ಪರಿಗಣಿಸಲಾಗಿದೆ. ಇದರ ನಿಯಮಿತ ಸೇವನೆಹಸಿವನ್ನು ಹೆಚ್ಚಿಸುವುದು ಮಾತ್ರವಲ್ಲದೆ ಹಲವಾರು ರೋಗಗಳನ್ನು ನಿವಾರಿಸುತ್ತದೆ.
undefined
ಬೆಳಿಗ್ಗೆ ಮತ್ತು ಸಂಜೆಯ ಚಹಾ ಇಷ್ಟವಾದರೆ, ಇತರೆಚಹಾಗಳನ್ನು ಕುಡಿಯುವ ಬದಲು ಗ್ರೀನ್ ಟೀಯನ್ನು ಬಳಸಬಹುದು. ಚಳಿಗಾಲದಲ್ಲಿ ಜನರು ಹೆಚ್ಚು ಗ್ರೀನ್ ಟೀ ಕುಡಿಯುತ್ತಾರೆ. ಗ್ರೀನ್ ಟೀ ಸೇವಿಸಿ ಉತ್ತಮ ಅರೋಗ್ಯ ಹೆಚ್ಚಿಸಿ.
undefined
ಲೆಮನೇಡ್ಚಳಿಗಾಲದಲ್ಲಿ ಸಾಮಾನ್ಯವಾಗಿ ಎಲ್ಲರೂ ಕುಡಿಯುವ ನೀರನ್ನು ಕಡಿಮೆ ಮಾಡುತ್ತಾರೆ, ಆದರೆ ಇದನ್ನು ಮಾಡಬಾರದು. ಚಳಿಗಾಲದಲ್ಲೂ ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ನೀರಿನ ಅವಶ್ಯಕತೆ ಇರುತ್ತದೆ. ಆದ್ದರಿಂದ ಚಳಿಗಾಲದಲ್ಲಿ ನಿಯಮಿತವಾಗಿ ನೀರನ್ನು ಅಥವಾ ಲೆಮನೇಡ್ ಸೇವಿಸುತ್ತಲೇ ಇರಿ.
undefined
ಎಲ್ಲಾ ಸಮಯದಲ್ಲಿ ಉತ್ತಮವಾಗಿ ನೀರು ಸೇವನೆ ಮಾಡುತ್ತಿದ್ದರೆ, ಅರೋಗ್ಯ ಉತ್ತಮವಾಗಿರುತ್ತದೆ. ಲೆಮೆನಾಡ್ ಅಥವಾ ನಿಂಬೆ ಜ್ಯೂಸ್ ಸೇವಿಸಿ, ಇದು ಹಸಿವನ್ನು ಹೆಚ್ಚಿಸುತ್ತದೆ ಮತ್ತು ದೇಹದಲ್ಲಿ ನೀರಿನ ಕೊರತೆಯನ್ನೂ ಸಹ ಉಂಟು ಮಾಡುವುದಿಲ್ಲ. ನೀರಿನಲ್ಲಿ ನಿಂಬೆರಸ ಬೆರೆಸಿ ಸೇವಿಸಬಹುದು.
undefined
ಅಜ್ವೈನ್ ಸೇವನೆಅಜವೈನ್ ಅಥವಾ ಓಂ ಕಾಳುಸೇವನೆಯು ಹೊಟ್ಟೆಯ ಅನೇಕ ತೊಂದರೆಗಳಲ್ಲಿ ಒಂದು ಮನೆಮದ್ದು.ಅಜೀರ್ಣ ಅಥವಾ ಹಸಿವಿನ ತೊಂದರೆ ಇದ್ದರೆ ಇದನ್ನು ಬಳಸಬಹುದು.
undefined
ಅಜ್ವೈನ್ ತಿನ್ನುವ ಮೂಲಕ ಹೊಟ್ಟೆಯನ್ನು ಸ್ವಚ್ಛವಾಗಿಡಬಹುದು. ಅನೇಕ ಭಾರತೀಯರು ಇದಕ್ಕೆ ಉಪ್ಪು ಸೇರಿಸಿ, ಲಘು ಫ್ರೈ ಮಾಡಿ ಬಳಸುತ್ತಾರೆ. ಹಸಿವೆಯಿಲ್ಲದಿದ್ದರೆ ದಿನಕ್ಕೆ ಒಂದು ಬಾರಿಯಿಂದ ಎರಡು ಬಾರಿ ಸೇವಿಸಬೇಕು.
undefined
ಜ್ಯೂಸ್ಸಮಯಕ್ಕೆ ಹಸಿವಿಲ್ಲದಿದ್ದರೆ ಅಥವಾ ಏನನ್ನೂ ತಿನ್ನುವುದಿಲ್ಲ ಎಂದಾದಲ್ಲಿ, ಜ್ಯೂಸ್ ಸೇವಿಸಬಹುದು. ಇದನ್ನು ಬಳಸುವಾಗ ರಸಕ್ಕೆ ಸ್ವಲ್ಪ ಉಪ್ಪು ಅಥವಾ ಕಲ್ಲು ಉಪ್ಪನ್ನು ಸೇರಿಸಿ. ಇದು ಹೊಟ್ಟೆಯನ್ನು ಸ್ವಚ್ಛವಾಗಿಟ್ಟು ಹಸಿವನ್ನು ಕಾಪಾಡುತ್ತದೆ.
undefined
click me!