ಸ್ಮೋಕಿಂಗ್ ಬಿಟ್ಟು ಬಿಡಬೇಕು ಎಂದು ಯೋಚಿಸುತ್ತಿದ್ದೀರಾ? ಹಾಗಿದ್ರೆ ಈ ಆಹಾರ ಟ್ರೈ ಮಾಡಿ

First Published Mar 20, 2021, 4:57 PM IST

ಸ್ಮೋಕಿಂಗ್ ಕೆಟ್ಟ ಅಭ್ಯಾಸ ಅನ್ನೋದು ಎಲ್ಲರಿಗೂ ತಿಳಿದಿದೆ. ಅದರಿಂದ ಏನೆಲ್ಲಾ ಸಮಸ್ಯೆಗಳು ಕಾಡುತ್ತವೆ ಅನ್ನೋದು ತಿಳಿದಿವೆ. ಸಿಗರೇಟ್ ಸೇದುವವರಿಗೆ ಹಾನಿಯನ್ನುಂಟು ಮಾಡುವುದಲ್ಲದೆ, ಧೂಮಪಾನದ ಸಂಪರ್ಕದಲ್ಲಿರುವವರಿಗೆ ಕೂಡ ಹಾನಿಯುಂಟು ಮಾಡುತ್ತದೆ ಎಂದು ವೈದ್ಯರು ಹೇಳುತ್ತಾರೆ. ಧೂಮಪಾನದಿಂದ ಕ್ಯಾನ್ಸರ್ ಮತ್ತು ಹೃದಯಾಘಾತದಂತಹ ಅಪಾಯಕಾರಿ ರೋಗಗಳು ಬರಬಹುದು. ಆದರೆ ಅಭ್ಯಾಸವಾಗಿ ಬಿಟ್ಟ ಈ ಕೆಟ್ಟ ಅಭ್ಯಾಸವನ್ನು ದೂರ ಮಾಡಲು ಸಾಧ್ಯವಾಗದೆ ಕೆಲವರು ಒದ್ದಾಡುತ್ತಿರುತ್ತಾರೆ. 

ಧೂಮಪಾನ ಬೇಡದಂದು ಸಿಗರೇಟಿನಿಂದ ದೂರ ಹೋಗಲು ಪ್ರಯತ್ನಿಸುತ್ತಿದ್ದರೆ, ಇಲ್ಲಿದೆ ಸೂಪರ್ ಟ್ರಿಕ್ಸ್. ಧೂಮಪಾನ ಚಟದಿಂದ ಹೊರಬರುವುದು ಕಷ್ಟವಾದರೂ, ಕೆಲವು ಮನೆಮದ್ದುಗಳನ್ನು ಪ್ರಯತ್ನಿಸಿ ತ್ಯಜಿಸಬಹುದು. ಧೂಮಪಾನವನ್ನು ತ್ಯಜಿಸಲು ಕೆಲವು ಮನೆಮದ್ದುಗಳ ಬಗ್ಗೆ ಇಲ್ಲಿದೆ ಮಾಹಿತಿ. ಅವುಗಳನ್ನು ಅಳವಡಿಸಿಕೊಂಡು ಧೂಮಪಾನವನ್ನು ಸಂಪೂರ್ಣವಾಗಿ ತ್ಯಜಿಸಿ. ಉತ್ತಮ ಅರೋಗ್ಯ ಪಡೆಯಿರಿ..
undefined
ಧೂಮಪಾನ ತ್ಯಜಿಸಲು ಮನೆಮದ್ದುಗಳುದಿನವಿಡೀ ಸಾಕಷ್ಟು ನೀರು ಕುಡಿಯಿರಿ. ವಾಸ್ತವವಾಗಿ, ದೇಹದಿಂದ ವಿಷಕಾರಿ ಅಂಶಗಳನ್ನು ಹೊರಹಾಕಲು ನೀರು ತುಂಬಾ ಪ್ರಯೋಜನಕಾರಿ. ಊಟಕ್ಕೂ 15 ನಿಮಿಷ ಮೊದಲು ಒಂದು ಲೋಟ ನೀರು ಕುಡಿಯಿರಿ, ಇದು ಚಯಾಪಚಯ ದರವನ್ನು ನಿಯಂತ್ರಣದಲ್ಲಿಡುತ್ತದೆ. ಅಲ್ಲದೇ ಧೂಮಪಾನದ ಅಭ್ಯಾಸವನ್ನೂ ಕ್ರಮೇಣ ಕಡಿಮೆ ಮಾಡುತ್ತದೆ.
undefined
ಒಂದು ಲೋಟ ಉಗುರು ಬೆಚ್ಚನೆಯ ನೀರಿನಲ್ಲಿ ಒಂದು ಚಮಚ ಜೇನುತುಪ್ಪವನ್ನು ಪ್ರತಿದಿನ ಸೇರಿಸಿ ಕುಡಿಯುವುದರಿಂದ ಧೂಮಪಾನದ ಚಟವನ್ನು ದೂರ ಮಾಡಲು ಸಹಾಯವಾಗುತ್ತದೆ.
undefined
ಮೂಲಂಗಿಯನ್ನು ತಿನ್ನುವ ಮೂಲಕ ಚೈನ್ ಸ್ಮೋಕರ್ ಅಥವಾ ಕೆಟ್ಟ ಚಟದಿಂದ ಬಳಲುತ್ತಿರುವ ಜನ ಪ್ರಯೋಜನವನ್ನು ಪಡೆಯಬಹುದು. ಇದನ್ನು ಜೇನುತುಪ್ಪದೊಂದಿಗೆ ತಿನ್ನಬಹುದು.
undefined
ಓಟ್ಸ್ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ತೆಗೆದು ಹಾಕುವ ಮೂಲಕ ಸ್ಮೋಕಿಂಗ್ಬಯಕೆಯನ್ನು ಕಡಿಮೆ ಮಾಡಲು ನೆರವಾಗುತ್ತದೆ. ಓಟ್ಸ್ ಅನ್ನು ಬೆಳಗಿನ ಉಪಾಹಾರದಲ್ಲಿ ಸೇರಿಸಿಕೊಳ್ಳಬೇಕು.
undefined
ಧೂಮಪಾನ ಮಾಡಬೇಕು ಎಂದು ಅನಿಸಿದಾಗಲೆಲ್ಲಾ.ನೀವು ಜೇಷ್ಟ ಮಧು ತೆಗೆದುಕೊಂಡು ಜಗಿಯಬಹುದು. ಹೀಗೆ ಮಾಡುವುದರಿಂದ ಧೂಮಪಾನದ ಬಯಕೆ ಕಡಿಮೆಯತ್ತದೆ.
undefined
ಧೂಮಪಾನ ಮಾಡಲು ಬಯಸಿದಾಗ ಒಂದು ಚಿಟಿಕೆ ಕೆಂಪು ಮೆಣಸಿನ ಪುಡಿಯನ್ನು 1 ಲೋಟ ನೀರಿನಲ್ಲಿ ಹಾಕಿ. ಇದರಿಂದ ತಕ್ಷಣ ಪರಿಹಾರ ದೊರೆಯುವುದು.
undefined
ಜಿನ್ಸೆಂಗ್ ಎಂಬುದು ಒಂದು ಆಯುರ್ವೇದೀಯ ಸಸ್ಯವಿದೆ. ಇದು ದೇಹದಲ್ಲಿ ಕಾರ್ಟಿಸೋಲ್ ಮಟ್ಟವನ್ನು ಕಡಿಮೆ ಮಾಡುವ ಮತ್ತು ಶಕ್ತಿಯ ಮಟ್ಟವನ್ನು ಹೆಚ್ಚಿಸುವ ಮೂಲಕ ಸಿಗರೇಟ್ ಸೇದುವುದನ್ನು ತಡೆಯುವಂತೆ ಮಾಡುತ್ತದೆ.
undefined
click me!