ಎಷ್ಟೇ ವರ್ಕೌಟ್ ಮಾಡಿದ್ರೂ ಹೊಟ್ಟೆ ಫ್ಯಾಟ್ ಯಾಕೆ ಕರಗಲ್ಲ..? ಈ ತಪ್ಪುಗಳನ್ನು ನೀವೂ ಮಾಡ್ತಿದ್ದೀರಾ

First Published Nov 5, 2020, 2:54 PM IST

ಹೊಟ್ಟೆ ಕರಗಿಸೋಕೆಂದೇ ವ್ಯಾಯಾಮ ಮಾಡಿದ್ರೂ ಯಾವುದೇ ಪ್ರಯೋಜನ ಸಿಕ್ತಿಲ್ಲ ಎಂದು ಆರೋಪಿಸುವವರಲ್ಲಿ ನೀವೂ ಒಬ್ಬರಾ..? ಹಾಗಾದ್ರೆ ನೀವು ಈ ಕೆಲವು ಮಿಸ್ಟೇಕ್ಸ್ ಮಾಡ್ತಿರಬಹುದು

ಫಿಟ್ ಆಗಿರ್ಬೇಕು ಅನ್ನೋದು ಎಲ್ಲರ ಆಸೆ. ಎಲ್ಲ ತಿನ್ಬೇಕು ಅನಿಸಿದ್ರೂ ಹೊಟ್ಟೆಯ ಭಾಗದ ಬೆಲ್ಲಿ ಕರಗಿಸೋದು ಸುಲಭದ ಕೆಲಸ ಅಲ್ಲ. ಅದಕ್ಕೆಂದೇ ವರ್ಕೌಟ್ ಮಾಡಿದ್ರೂ ಇದು ಫಲ ಕೊಡಲ್ಲ ಅನ್ನೋ ಆರೋಪ ಬಹಳ ಜನರದ್ದು
undefined
ಡಯೆಟ್ ಇದ್ರೂ ಪೌಷ್ಟಿಕಾಂಶ ಸೇವನೆ ಅಗತ್ಯ: ಬಹಳಷ್ಟು ಸಲ ತೆಳ್ಳಗಾಗೋ ಭರದಲ್ಲಿ ಆಹಾರ ತ್ಯಜಿಸುವ ತಪ್ಪು ಕೆಲಸ ಮಾಡುತ್ತಾರೆ. ಆದರೆ ಇದು ಸರಿಯಲ್ಲ. ಹೆಚ್ಚು ಆಹಾರದ ಬದಲು ಪೌಷ್ಟಿಕಾಂಶಗಳಿರುವ ಸ್ವಲ್ಪ ಆಹಾರ ಸೇವಿಸಬೇಕು. ಈ ಮೂಲಕ ಕ್ಯಾಲೊರಿ ಕಡಿಮೆ ಮಾಡಿ ತೂಕ ಇಳಿಸಬಹುದು
undefined
ನೀವು ತಪ್ಪಾಗಿ ವರ್ಕೌಟ್ ಮಾಡ್ತದ್ದೀರಿ: ವರ್ಕೌಟ್‌ನಲ್ಲಿ ಬಹಳಷ್ಟು ವಿಧ ಇದೆ. ಒಂದೊಂದರಲ್ಲೂ ದೇಹದ ನಿರ್ದಿಷ್ಟ ಭಾಗಕ್ಕೆ ಪ್ರಯೋಜನವಿದೆ. ಯಾವುದೇ ವ್ಯಾಯಾಮ ಮಾಡಿದ್ರೂ ಹೊಟ್ಟೆ ಕೊಬ್ಬು ಕರಗುತ್ತೆ ಎಂಬುದು ತಪ್ಪು ಕಲ್ಪನೆ. ಹಾಗಾಗಿ ಹೊಟ್ಟೆ ಫ್ಯಾಟ್ ಕರಗಿಸಲು ಸೂಕ್ತ ವ್ಯಾಯಾಮ ಆರಿಸಿಕೊಳ್ಳಬೇಕು
undefined
ನಿದ್ದೆಗೆಡುವಿಕೆ: ನಿದ್ದೆ ಕಡಿಮೆ ಮಾಡಬೇಡಿ. ಅರೆನಿದ್ರೆ ಮುಗಿಸಿ ಏಳುವುದು, ತಡವಾಗಿ ಮಲಗುವ ಅಭ್ಯಾಸದಿಂದ ತೂಕ ಹೆಚ್ಚಾಗುತ್ತದೆ. ಸರಿಯಾದ ಹೊತ್ತಿಗೆ ಮಲಗುವುದು ಮತ್ತು ಏಳುವುದು ಅಗತ್ಯ
undefined
ಒತ್ತಡ, ಆತಂಕ: ಆತಂಕ ಮತ್ತು ಒತ್ತಡ ದೇಹದಲ್ಲಿ ಕೋರ್ಟಿಸೋಲ್ ಹಾಮ್ಓನ್ ಹೆಚ್ಚಾಗುವಂತೆ ಮಾಡುತ್ತದೆ. ಇದರಿಂದ ಫ್ಯಾಟ್ ಹೆಚ್ಚುತ್ತದೆ.
undefined
ನೀವು ಮದ್ಯಪಾನಿಯಾ..?: ಹೈಕ್ಯಾಲೊರಿ ಆಲ್ಕೋಹಾಲ್‌ ಕುಡಿಯುವವರಾಗಿದ್ದರೆ ಫ್ಯಾಟ್ ಕರಗಿಸುವುದು ಕಷ್ಟ. ಆಲ್ಕೊಹಾಲ್‌ನಿಂತ ಹೊಟ್ಟೆ ಭಾಗದ ಫ್ಯಾಟ್ ಹೆಚ್ಚಾಗುತ್ತದೆ.
undefined
click me!