ಇಮ್ಯುನಿಟಿ ಹೆಚ್ಚಿಸೋಕೆ ಕಷಾಯ ಕುಡಿಯೋ ಭರದಲ್ಲಿ ಅಪ್ಪಿತಪ್ಪಿಯೂ ಹೀಗೆ ಮಾಡ್ಬೇಡಿ

First Published | Nov 3, 2020, 4:39 PM IST

ರೋಗ ನಿರೋಧಕ ಶಕ್ತಿ ಹೆಚ್ಚಿಸೋಕೆ ಹಲವು ಕಷಾಯಗಳ ಮೊರೆ ಹೋಗಿದ್ದೀರಾ..? ಮನೆಯಲ್ಲೇ ಆಯುರ್ವೇದಿಕ್ ಕಷಾಯ ಮಾಡಿ ಕುಡಿಯುತ್ತಿದ್ದರೆ ನೀವು ಗಮನಿಸಲೇ ಬೇಕಾದ ಪ್ರಮುಖ ವಿಚಾರಗಳಿವು

ಕೊರೋನಾ ಬಂದ ನಂತರ ಜನರು ಪ್ರತಿರೋಧ ಶಕ್ತಿ ಹೆಚ್ಚಿಸಿಕೊಳ್ಳುವ ಪ್ರಾಮುಖ್ಯತೆಯನ್ನು ಅರಿತುಕೊಂಡಿದ್ದಾರೆ.
ಕೊರೋನಾ ಬರುವುದಕ್ಕೂ ಮುನ್ನ ನೈಸರ್ಗಿಕವಾಗಿ ರೋಗ ಪ್ರತಿರೋಧ ಶಕ್ತಿ ಹೆಚ್ಚಿಸಿಕೊಳ್ಳೋ ಬಗ್ಗೆ ನಾವೆಂದೂ ಯೋಚಿಸಿಯೇ ಇರಲಿಲ್ಲ.
Tap to resize

ಆದರೆ ಕೊರೋನಾ ಅಟ್ಟಹಾಸ ಯಾವಾಗ ಆರಂಭವಾಯ್ತೋ ಆಗಿನಿಂದ ಮನೆಯಲ್ಲೇ ನೈಸರ್ಗಿಕ ಕಷಾಯಗಳನ್ನು ಮಾಡುವ ಕೆಲಸವೂ ಶುರುವಾಯ್ತು.
ತುಳಸಿ, ಕರಿಮೆಣಸು, ಅರಶಿನ, ಜೇನು ಹೀಗೆ ನೈಸರ್ಗಿಕವಾಗಿ ಸಿಗೋ ವಸ್ತುಗಳ ಕಷಾಯದ ಮೊರೆ ಹೋದ್ರು ಜನ.
ಬಹಳಷ್ಟು ಜನ ಕಾಫಿ, ಟೀ ಬಿಟ್ಟು ದಿನದಲ್ಲಿ ನಾಲ್ಕೈದು ಬಾರಿ ಕಷಾಯ ಕುಡಿಯೋಕೆ ಶುರು ಮಾಡಿದ್ರು.
ಅತ್ಯಧಿಕ ಪ್ರಮಾಣದಲ್ಲಿ ಸೇವಿಸದ್ರೆ ಆರೋಗ್ಯಕರ ವಸ್ತುಗಳ ಅಪಾಯಕಾರಿ ಅನ್ನುವುದನ್ನು ಇನ್ನೂ ಬಹಳಷ್ಟು ಜನರು ತಿಳಿದುಕೊಂಡಿಲ್ಲ.
ತಪ್ಪಾದ ರೀತಿಯಲ್ಲಿ ಕಷಾಯ ಕುಡಿಯುವುದರ ತೊಂದರೆ: ಯಾವುದೇ ಆದರೂ ಅತಿಯಾದರೆ ತೊಂದರೆಯೇ.
ಹೆಚ್ಚು ಕುಡಿದಷ್ಟು, ಆಯುರ್ವೇದಿಕ್ ಗಿಡ ಮೂಲಿಕೆ ಹೆಚ್ಚು ಕುದಿಸಿದಷ್ಟು ಫಲ ಹೆಚ್ಚು ಎಂಬ ಭಾವನೆ ಬಹಳಷ್ಟು ಜನರಲ್ಲಿದೆ. ಇದು ಸುಳ್ಳು.
ಸರಿಯಾದ ರೀತಿಯಲ್ಲಿ ಕಷಾಯ ಕುಡಿಯದಿರೋದು ಬಹಳಷ್ಟು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಕಷಾಯ ಕುಡಿಯುವ ರೀತಿ: ಕಷಾಯವನ್ನು ಅತಿಯಾಗಿ ಕುದಿಸಬೇಡಿ. ಕುದಿಸಿದರೆ ಕಷಾಯ ಕಹಿಯಾಗಿ, ಅಸಿಡಿಟಿಗೆ ಕಾರಣವಾಗಬಹುದು.
ಬೇಗನೆ ಬೇಯಿಸಿ, ಕುದಿಸಿ ತೆಗೆದು ಕುಡಿಯುವುದು ಸರಿಯಾದ ವಿಧಾನ
ದಿನಕ್ಕೆ ಅರ್ಧ ಕಪ್ ಕಷಾಯವಷ್ಟೇ ಕುಡಿಯಿರಿ: ಮೂರು ನಾಲ್ಕು ಬಾರಿ ಕಷಾಯ ಕುಡಿಯೋದ್ರಿಂದ ಒಂದೇ ದಿನದಲ್ಲಿ ಇಮ್ಯುನಿಟಿ ಹೆಚ್ಚುವುದಿಲ್ಲ. ಅರ್ಧ ಕಪ್ ಕಷಾಯ ಕುಡಿದರೆ ಸಾಕು

Latest Videos

click me!