ಮದ್ಯಪಾನ ಸೇವನೆ ಆರೋಗ್ಯಕ್ಕೆ ಹಾನಿಕಾರಕ ಎಂದು ನಮಗೆಲ್ಲರಿಗೂ ತಿಳಿದಿದೆ. ಆದರೂ, ಕೆಲವ್ರು ಕುಡಿಯೋದನ್ನು ನಿಲ್ಲಿಸಲ್ಲ. ಕೆಲವರು ಆಗಾಗ್ಗೆ ಮದ್ಯ ಸೇವಿಸಿದ್ರೆ, ಇನ್ನು ಕೆಲವ್ರು ಪ್ರತಿನಿತ್ಯ ಮದ್ಯ ಸೇವಿಸುತ್ತಾರೆ.
ಪ್ರತಿದಿನ ಆಲ್ಕೋಹಾಲ್ ಕುಡಿಯುವುದು ಚಟಕ್ಕೆ ಕಾರಣವಾಗುತ್ತದೆ, ಇದು ಆರೋಗ್ಯಕ್ಕೆ ತುಂಬಾ ಹಾನಿಕಾರಕವಾಗಿದೆ. ಇದು ಯಕೃತ್ತಿನ ಹಾನಿಗೆ ಕಾರಣವಾಗುತ್ತದೆ. ಮತ್ತೊಂದೆಡೆ, ಒಬ್ಬ ವ್ಯಕ್ತಿಯು ಆಲ್ಕೋಹಾಲ್ ತ್ಯಜಿಸಲು ಬಯಸಿದರೆ, ಅದು ಒಳ್ಳಯದೇ. ಆದರೆ ಮದ್ಯವನ್ನು ತ್ಯಜಿಸುವುದು ಅನಾನುಕೂಲಗಳನ್ನು ಸಹ ಹೊಂದಿರಬಹುದು. ಅಂದ್ರೆ, ಹಠಾತ್ ಆಗಿ ಮದ್ಯಪಾನವನ್ನು ತ್ಯಜಿಸುವುದು ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು.
ಅತಿಯಾಗಿ ಮದ್ಯಪಾನ ಮಾಡುವವರು ಮದ್ಯವನ್ನು ಹಠಾತ್ ಹಿಂತೆಗೆದುಕೊಳ್ಳುವುದರಿಂದ ಪ್ರಾರಂಭದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದ್ದಕ್ಕಿದ್ದಂತೆ ಮದ್ಯಪಾನವನ್ನು ತ್ಯಜಿಸುವುದು ವ್ಯಕ್ತಿಯನ್ನು ಚಿಂತೆಗೀಡು ಮಾಡುತ್ತದೆ. ಅವರ ಗಮನ ಯಾವ ಕೆಲಸದಲ್ಲೂ ಇದ್ದಂತಿಲ್ಲ. ಕೇಂದ್ರೀಕರಿಸಲು ಕಷ್ಟವಾಗುತ್ತದೆ.
ಅಂತಹ ವ್ಯಕ್ತಿಯು ಮಾನಸಿಕ ಒತ್ತಡ ಉಳ್ಳವನಾಗ್ತಾನೆ. ಅವನು ಹೆಚ್ಚಾಗಿ ಖಿನ್ನತೆಯನ್ನು ಅನುಭವಿಸುತ್ತಾನೆ. ಕೆಲವೊಮ್ಮೆ ಹೃದಯ ಬಡಿತವೂ ಹೆಚ್ಚಾಗುತ್ತದೆ. ಇದ್ದಕ್ಕಿದ್ದಂತೆ ಮದ್ಯಪಾನವನ್ನು ತ್ಯಜಿಸುವುದು ವ್ಯಕ್ತಿಯನ್ನು ಕೆರಳಿಸುತ್ತದೆ. ಅವನು ಕಡಿಮೆ ಹಸಿವನ್ನು ಅನುಭವಿಸಲು ಪ್ರಾರಂಭಿಸುತ್ತಾನೆ. ಇದರೊಂದಿಗೆ ನಡುಕ, ಅತಿಯಾದ ಬೆವರುವಿಕೆ, ನಿದ್ರಾಹೀನತೆಯಂತಹ ಸಮಸ್ಯೆಗಳು ಸಂಭವಿಸಲು ಪ್ರಾರಂಭಿಸುತ್ತವೆ.
ಹಾಗಾದ್ರೆ ಮದ್ಯಪಾನವನ್ನು ನಿಲ್ಲಿಸುವುದು ಹೇಗೆ?
ಪ್ರತಿದಿನ ಅಥವಾ ಮಿತಿಮೀರಿದ ಮದ್ಯಪಾನ ಮಾಡುವ ವ್ಯಕ್ತಿಯು ಇದ್ದಕ್ಕಿದ್ದಂತೆ ಕುಡಿಯುವುದನ್ನು ಬಿಡಬಾರದು. ಅಂತಹ ವ್ಯಕ್ತಿಯು ಕ್ರಮೇಣ ಅದರ ಪ್ರಮಾಣವನ್ನು ಕಡಿಮೆ ಮಾಡಬೇಕು ಮತ್ತು ಸ್ವಲ್ಪ ಸಮಯದ ನಂತರ ಮದ್ಯವನ್ನು ತ್ಯಜಿಸಬೇಕು. ಇದಕ್ಕಾಗಿ ಮೊದಲು ವೈದ್ಯರನ್ನು ಸಂಪರ್ಕಿಸುವುದು ಅವಶ್ಯಕ.
ಮದ್ಯಪಾನವನ್ನು ತ್ಯಜಿಸುವುದರಿಂದ ಆಗುವ ಪ್ರಯೋಜನಗಳೇನು?
ಆಲ್ಕೋಹಾಲ್ ಯಕೃತ್ತಿನ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ, ಇದು ಯಕೃತ್ತನ್ನು ಹೆಚ್ಚು ಹಾನಿಗೊಳಿಸುತ್ತದೆ. ಆಲ್ಕೋಹಾಲ್ ತ್ಯಜಿಸುವುದು ಯಕೃತ್ತಿನ ಆರೋಗ್ಯಕ್ಕೆ ಒಳ್ಳೆಯದು. ದೇಹವು ಶಕ್ತಿಯುತವಾಗಿರುತ್ತದೆ ಮತ್ತು ವ್ಯಕ್ತಿಯು ಉತ್ತಮ ನಿದ್ರೆ ಪಡೆಯುತ್ತಾನೆ.
ಆಲ್ಕೋಹಾಲ್ ತ್ಯಜಿಸುವುದರಿಂದ ಏಕಾಗ್ರತೆ ಹೆಚ್ಚಾಗುತ್ತದೆ. ಒಬ್ಬ ವ್ಯಕ್ತಿಯು ತನ್ನ ಕೆಲಸದ ಮೇಲೆ ಕೇಂದ್ರೀಕರಿಸಲು ಸಾಧ್ಯವಾಗುತ್ತದೆ. ಇದರೊಂದಿಗೆ ಚರ್ಮವೂ ಚೆನ್ನಾಗಿರುತ್ತದೆ. ಆಲ್ಕೋಹಾಲ್ ತ್ಯಜಿಸುವುದರಿಂದ ತೂಕವೂ ಕಡಿಮೆಯಾಗುತ್ತದೆ, ಬಿಯರ್ ಕುಡಿಯುವ ಅಭ್ಯಾಸ ಇರುವವರಿಗೆ ಬೇಗ ಹೊಟ್ಟೆ ಬರುತ್ತದೆ.