ಕತ್ತಿನ ಸುತ್ತ ಇರುವ ಕಪ್ಪು ಸರ್ಕಲ್ ಹೋಗಲಾಡಿಸಲು ಇಲ್ಲಿದೆ ಪರಿಹಾರ

First Published | Jan 3, 2025, 5:03 PM IST

ಕೆಲವರು ಎಷ್ಟೇ  ಸೌಂದರ್ಯದ ಬಗ್ಗೆ ಕಾಳಜಿ ತೋರಿದರು ಕತ್ತಿನ ಸುತ್ತಲು ಕಪ್ಪಾದ ಕಲೆಗಳಿರುತ್ತವೆ. ಇದರಿಂದ ಎಷ್ಟೇ ಸುಂದರವಾಗಿ ರೆಡಿಯಾದ್ರೂ  ಚೆಂದ ಕಾಣಿಸುವುದಿಲ್ಲ, ಇಂತಹ ಕಲೆಯನ್ನು ಹೊಗಲಾಡಿಸಲು ಸುಲಭ ಪರಿಹಾರ ಇಲ್ಲಿದೆ. 

ಹೆಂಗಸರು ಅಂದವಾಗಿ ಕಾಣಲು, ಚೆನ್ನಾಗಿರಲು ಎಷ್ಟೋ ಪ್ರಯತ್ನ ಮಾಡ್ತಾರೆ. ಚರ್ಮದ ಆರೈಕೆಯಲ್ಲಿ ಅವರು ರಾಜಿಯಾಗಲ್ಲ. ಆದರೆ ಮುಖದ ಚರ್ಮದಷ್ಟು ಕುತ್ತಿಗೆ ಕಡೆ ಗಮನ ಕೊಡಲ್ಲ. ಇದರಿಂದ ಮುಖ ಬೆಳ್ಳಗಿದ್ರೂ ಕುತ್ತಿಗೆ ಮಾತ್ರ ಕಪ್ಪಾಗಿ ಕಾಣುತ್ತೆ. ಇದನ್ನ ಹಾಗೇ ಬಿಟ್ಟರೆ ಇನ್ನೂ ಕಪ್ಪಾಗುತ್ತೆ. ಈ ಸಮಸ್ಯೆಗೆ ಕೆಲವರು ಪಾರ್ಲರ್ ಹೋದ್ರೆ ಇನ್ನು ಕೆಲವರು ಏನೇನೋ ಲೋಷನ್‌ಗಳನ್ನು ಹಚ್ಚುತ್ತಾರೆ. 

ಕುತ್ತಿಗೆ ಕಪ್ಪಗಿರಲು ಕಾರಣಗಳೇನು? 

ಹೆಣ್ಣು ಮಕ್ಕಳಿಗೆ ಮಾತ್ರವಲ್ಲ, ಕೆಲವು ಗಂಡಸರಿಗೂ ಕುತ್ತಿಗೆ ಉಳಿದ ಚರ್ಮಕ್ಕಿಂತ ಕಪ್ಪಗಿರುತ್ತೆ. ಇದನ್ನ 'ಅಕಾಂಥೋಸಿಸ್ ನೈಗ್ರಿಕಾನ್ಸ್' ಅಂತಾರೆ. ತಜ್ಞರ ಪ್ರಕಾರ, ಕುತ್ತಿಗೆ ಕಪ್ಪಗಾಗಲು ಬೊಜ್ಜು ಒಂದು ಮುಖ್ಯ ಕಾರಣ.  ಹೆಂಗಸರಲ್ಲಿ ಈ ಸಮಸ್ಯೆಗೆ ಕೆಲವು ಕಾರಣಗಳಿವೆ. ಹಾರ್ಮೋನುಗಳ ಏರುಪೇರು, ಪಿಸಿಓಎಸ್, ದೈಹಿಕ ಶ್ರಮ ಇತ್ಯಾದಿಗಳಿಂದ ಕುತ್ತಿಗೆ ಕಪ್ಪಾಗುತ್ತೆ. ಕೆಲವರಿಗೆ ಸುಗಂಧ ದ್ರವ್ಯಗಳು, ಹೇರ್ ಡೈ ಗಳಿಂದ ಅಲರ್ಜಿ ಇದ್ದರೂ ಕುತ್ತಿಗೆ ಕಪ್ಪಾಗುತ್ತೆ ಅಂತ ತಜ್ಞರು ಹೇಳ್ತಾರೆ. 
 

Tap to resize

ಕಪ್ಪು ಕುತ್ತಿಗೆಗೆಯಿಂದ ಮುಕ್ತಿ ಪಡೆಯಲು ಸಿಂಪಲ್ ಟಿಪ್ಸ್

ಕುತ್ತಿಗೆಯ ಕಪ್ಪು ಹೋಗಲಾಡಿಸಲು ಕಸ್ತೂರಿ ಅರಿಶಿನ ಪರಿಣಾಮಕಾರಿ. ಮೊದಲು ಈ ಅರಿಶಿನವನ್ನು ಮಧ್ಯಮ ಉರಿಯಲ್ಲಿ ಹುರಿಯಬೇಕು. ಬಂಗಾರದ ಬಣ್ಣಕ್ಕೆ ಬಂದಾಗ ಸ್ಟವ್ ಆಫ್ ಮಾಡಿ. ಒಂದು ಬಟ್ಟಲಿಗೆ ಅರಿಶಿನ, ಜೇನುತುಪ್ಪ, ಮೊಸರು, ಕಾಫಿ ಪುಡಿ, ನಿಂಬೆ ರಸ ಹಾಕಿ ಚೆನ್ನಾಗಿ ಕಲಸಿ.ಈ ಪ್ಯಾಕ್ ಹಚ್ಚುವ ಮುನ್ನ ಕುತ್ತಿಗೆಯನ್ನು ಸೋಪು ಅಥವಾ ಟೊಮೇಟೊ-ಸಕ್ಕರೆಯಿಂದ ಸ್ಕ್ರಬ್ ಮಾಡಿ. ಇದರಿಂದ ಕುತ್ತಿಗೆ ಕ್ಲೀನ್ ಆಗುತ್ತೆ. ಈಗ ಅರಿಶಿನ ಪ್ಯಾಕ್ ಹಚ್ಚಿ 15 ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆಯಿರಿ. ವಾರಕ್ಕೆ 3 ದಿನ ಹೀಗೆ ಮಾಡಿದರೆ ಕುತ್ತಿಗೆ ಕಪ್ಪು ಕಡಿಮೆಯಾಗುತ್ತೆ. 

ಕಪ್ಪಾದ ಕುತ್ತಿಗೆ

ನಿಂಬೆಹಣ್ಣು, ಬೇಕಿಂಗ್ ಸೋಡಾ

ಕುತ್ತಿಗೆ ಕಪ್ಪು ಹೋಗಲಾಡಿಸಲು ನಿಂಬೆಹಣ್ಣು, ಬೇಕಿಂಗ್ ಸೋಡಾ ಉಪಯುಕ್ತ. ಸ್ವಲ್ಪ ಬೇಕಿಂಗ್ ಸೋಡಾಗೆ ಅರಿಶಿನ, ನಿಂಬೆ ರಸ ಹಾಕಿ ಕಲಸಿ. ಇದನ್ನು ಕುತ್ತಿಗೆಗೆ ಹಚ್ಚಿ. ಈ ಪ್ಯಾಕ್ ಆಗಾಗ್ಗೆ ಉಪಯೋಗಿಸಿದರೆ ಕುತ್ತಿಗೆ ಕಪ್ಪು ಕಡಿಮೆಯಾಗುತ್ತೆ. 

ಹಾಲು, ಜೇನುತುಪ್ಪ
 
ಹಾಲು, ಜೇನುತುಪ್ಪದಿಂದಲೂ ಕಪ್ಪು ಕುತ್ತಿಗೆಯನ್ನು ಸಾಮಾನ್ಯ ಬಣ್ಣಕ್ಕೆ ತರಬಹುದು. ಸ್ವಲ್ಪ ಹಾಲಿಗೆ ನಿಂಬೆ ರಸ, ಜೇನುತುಪ್ಪ ಹಾಕಿ ಕಲಸಿ ಪ್ಯಾಕ್ ಮಾಡಿ. ಇದನ್ನು ಕುತ್ತಿಗೆಗೆ ಹಚ್ಚಿ 20 ನಿಮಿಷ ಬಿಟ್ಟು ತೊಳೆಯಿರಿ. ಇದರಿಂದ ಕುತ್ತಿಗೆ ಕಪ್ಪು ಕಡಿಮೆಯಾಗುತ್ತೆ. 

ಕುತ್ತಿಗೆ ಕಪ್ಪು ಹೋಗಬೇಕಾದರೆ ಇವು ಮಾಡಲೇಬೇಕು:

ಕುತ್ತಿಗೆ ಕಪ್ಪು ಹೋಗಬೇಕಾದರೆ ಎಣ್ಣೆಯುಕ್ತ ತಿಂಡಿಗಳನ್ನು ತಿನ್ನಬಾರದು. ಮಸಾಲೆ ಆಹಾರ ಬೇಡ. ಇವು ಬೊಜ್ಜಿಗೆ ಕಾರಣವಾಗುತ್ತವೆ. ಇದರಿಂದ ಕುತ್ತಿಗೆ ಕಪ್ಪಾಗುತ್ತದೆ. ಹಾರ್ಮೋನುಗಳ ಬದಲಾವಣೆ, ಪಿಸಿಓಎಸ್ ನಿಂದಲೂ ಕುತ್ತಿಗೆ ಕಪ್ಪಾಗುತ್ತದೆ. ಹಾಗಾಗಿ ಮೇಲಿನ ಮನೆಮದ್ದುಗಳನ್ನು ಬಳಸುವ ಮುನ್ನ ಸರಿಯಾದ ವೈದ್ಯರ ಸಲಹೆ ಪಡೆಯುವುದು ಒಳ್ಳೆಯದು.

Latest Videos

click me!