ಡಯಟಲ್ಲಿ ಈ ಆಹಾರ ಸೇರಿಸಿ, ಲೈಫ್ ಸ್ಟೈಲ್ ಡಿಸೀಸ್ ದೂರ ಮಾಡಿ

First Published | Dec 2, 2022, 3:02 PM IST

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಕ್ರೋನಿಕ್ ಲೈಫ್ ಸ್ಟೈಲ್ ಡಿಸೀಸಸ್ 2030 ರ ವೇಳೆಗೆ ಜಾಗತಿಕ ಸಾವುಗಳಲ್ಲಿ (Global Death) ಶೇಕಡಾ 70 ರಷ್ಟನ್ನು ಪಾಲು ಹೊಂದಿರಲಿದೆ ಎಂದು ಹೇಳಿದೆ. ಇದನ್ನು ತಪ್ಪಿಸಲು, ಜೀವನಶೈಲಿ ಮತ್ತು ಆಹಾರ ಸುಧಾರಿಸೋದು ಬಹಳ ಮುಖ್ಯ. ಅದು ಹೇಗೆ ಎಂದು ಇಲ್ಲಿ ತಿಳಿಯಿರಿ.  

ಕೆಲವು ಸಮಯದಿಂದ, ದೀರ್ಘ ಕಾಲದ ರೋಗದ ಪ್ರಕರಣಗಳು ಜನರಲ್ಲಿ ನಿರಂತರವಾಗಿ ಹೆಚ್ಚುತ್ತಿವೆ. ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ನಿರಂತರವಾಗಿ ಬರುತ್ತಿವೆ, ವಿಶೇಷವಾಗಿ ಕೆಲಸ ಮಾಡುವ ಜನರಲ್ಲಿ ಈ ಸಮಸ್ಯೆ ಕಾಡುತ್ತೆ. ಆರೋಗ್ಯದ ವಿಷಯದಲ್ಲಿ ನಿರ್ಲಕ್ಷ್ಯವು ನಂತರ ಗಂಭೀರ ರೋಗಗಳಾಗಿ ಬದಲಾಗುತ್ತೆ. ತಪ್ಪು ಜೀವನಶೈಲಿ (Wrong Lifestyle) ಮತ್ತು ಆಹಾರಕ್ರಮದಿಂದಾಗಿ (Food Style), ಜನರು ಅನೇಕ ರೀತಿಯ ದೀರ್ಘಕಾಲದ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಈ ಕಾರಣದಿಂದಾಗಿ, ಹೃದ್ರೋಗ(Heart disease), ಪಾರ್ಶ್ವವಾಯು, ಮಧುಮೇಹ, ಬೊಜ್ಜು, ಮೆಟಾಬಾಲಿಕ್  ಸಿಂಡ್ರೋಮ್ ಮತ್ತು ಕೆಲವು ರೀತಿಯ ಕ್ಯಾನ್ಸರ್ (Cancer) ಅಪಾಯ ತುಂಬಾ ಹೆಚ್ಚಾಗುತ್ತಿದೆ.

2030ರ ವೇಳೆಗೆ ಜಾಗತಿಕ ಸಾವುಗಳಲ್ಲಿ ಶೇ.70ರಷ್ಟು ಕ್ರೋನಿಕ್ ಲೈಫ್ ಸ್ಟೈಲ್ ಡಿಸೀಸಸ್ ಕಾರಣವಾಗಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಒಂದು ಸಂಶೋಧನೆಯ ನಂತರ ಅಂದಾಜು ಮಾಡಿದೆ. ಅನಿಯಮಿತ ಆಹಾರ, ನಿದ್ರೆಯ ಕೊರತೆ, ಒತ್ತಡ (Stress), ಊಟ ತಪ್ಪುವುದು (Skipping Meal), ದೈಹಿಕ ಚಟುವಟಿಕೆಯ ಕೊರತೆ (Lack of Physical Activity) ಮತ್ತು ಕಳಪೆ ಸಂಬಂಧಗಳು ಇದಕ್ಕೆ ಪ್ರಮುಖ ಕಾರಣಗಳಾಗಿವೆ. ಈ ಎಲ್ಲಾ ಅಂಶಗಳು ದೀರ್ಘಕಾಲದ ರೋಗದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ.

Latest Videos


ಅನೇಕ ವೈದ್ಯಕೀಯ ವರದಿಗಳ ಪ್ರಕಾರ, ಪುರುಷರು ಮಧುಮೇಹ(Diabetes) ಮತ್ತು ಹೃದಯ ಸಂಬಂಧಿ ಕಾಯಿಲೆಗಳ (Heart Related Disease) ಹೆಚ್ಚಿನ ಅಪಾಯದಲ್ಲಿದ್ದಾರೆ. ಹಾಗಾಗಿ, ಪ್ರತಿಯೊಬ್ಬರೂ ಸಮಯಕ್ಕೆ ಸರಿಯಾಗಿ ತಮ್ಮ ಜೀವನಶೈಲಿಯ ಬಗ್ಗೆ ಗಂಭೀರವಾಗಿ ಗಮನ ಹರಿಸೋದು ಮತ್ತು ದೈನಂದಿನ ದಿನಚರಿಯಲ್ಲಿ ಕೆಲವು ಬದಲಾವಣೆ ಮಾಡೋದು ಬಹಳ ಮುಖ್ಯ, ಇದು ಅವರನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತೆ. ಆರೋಗ್ಯವಾಗಿರಲು ದೇಹಕ್ಕೆ ಈ ಪೋಷಕಾಂಶಗಳ ಅಗತ್ಯವಿದೆ.

ಫೈಬರ್(Fiber) ಜೀರ್ಣಕ್ರಿಯೆಯನ್ನು ಸರಿಯಾಗಿರಿಸುತ್ತೆ

ಜನರಲ್ಲಿ ವಯಸ್ಸು ಹೆಚ್ಚಾದಂತೆ, ಜೀರ್ಣಕ್ರಿಯೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಬರಲು ಪ್ರಾರಂಭಿಸುತ್ತವೆ. ಎನ್ಸಿಬಿಐನ ವರದಿಯ ಪ್ರಕಾರ, ಹೊಟ್ಟೆಗೆ ಸಂಬಂಧಿಸಿದ ಈ ಸಮಸ್ಯೆಗಳನ್ನು ದೂರವಿಡಲು ಫೈಬರ್ ಸಮೃದ್ಧ ಆಹಾರ (Fibre Rich Food) ತುಂಬಾ ಸಹಾಯ ಮಾಡುತ್ತೆ. ಇದು ತೂಕ ನಿಯಂತ್ರಣದಲ್ಲಿ (Weight Management) ಮತ್ತು ಹೃದಯವನ್ನು ಆರೋಗ್ಯಕರವಾಗಿಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತೆ. ನಾರಿನಂಶಕ್ಕಾಗಿ, ತಾಜಾ ಹಣ್ಣು (Fresh Fruits),  ಸೊಪ್ಪು ತರಕಾರಿ, ಸಂಪೂರ್ಣ ಬೇಳೆಕಾಳುಗಳು ಮತ್ತು ಓಟ್ಸ್ ಅನ್ನು ಆಹಾರದಲ್ಲಿ ಸೇರಿಸಬಹುದು.

ಕ್ಯಾಲ್ಸಿಯಂ(calcium) ದೇಹಕ್ಕೆ ಬಹಳ ಮುಖ್ಯ

ಆರೋಗ್ಯಕರವಾಗಿರುವುದರ ಜೊತೆಗೆ, ಮೂಳೆಗಳ ಆರೈಕೆ ಮಾಡೋದು ಸಹ ಬಹಳ ಮುಖ್ಯ. ಮೂಳೆ ಬಲಪಡಿಸಲು ಮತ್ತು  ಆರೋಗ್ಯಕರವಾಗಿಡಲು, ದೇಹ ಸಾಕಷ್ಟು ಪ್ರಮಾಣದಲ್ಲಿ ಕ್ಯಾಲ್ಸಿಯಂ (Calcium) ಪೂರೈಸೋದು ಮುಖ್ಯ. ಹಾಗಾಗಿ, ಕ್ಯಾಲ್ಸಿಯಂ ಭರಿತ ಆಹಾರಗಳನ್ನು ಖಂಡಿತವಾಗಿಯೂ ನಿಮ್ಮ ಆಹಾರದಲ್ಲಿ ಸೇರಿಸಿ. ಕ್ಯಾಲ್ಸಿಯಂಗಾಗಿ, ಹಾಲು (Milk), ಮೊಸರು (Curd), ಮೀನು ಮತ್ತು ಹಸಿರು ಎಲೆ ತರಕಾರಿಗಳನ್ನು ತಿನ್ನಬಹುದು.

ಪೊಟ್ಯಾಸಿಯಮ್(Potassium) ಸ್ನಾಯುಗಳನ್ನು ಬಲಪಡಿಸುತ್ತೆ

ಮೂಳೆಗಳೊಂದಿಗೆ ಸ್ನಾಯುಗಳನ್ನು ಬಲವಾಗಿಡೋದು ಸಹ ಬಹಳ ಮುಖ್ಯ. ಪೊಟ್ಯಾಸಿಯಮ್ ಇದಕ್ಕೆ ಹೆಚ್ಚು ಸಹಾಯ ಮಾಡುತ್ತೆ. ಇದು ರಕ್ತದೊತ್ತಡವನ್ನು (Blood Pressure) ನಿರ್ವಹಿಸಲು ಸಹಾಯ ಮಾಡುತ್ತೆ. ಹೃದಯವನ್ನು ಆರೋಗ್ಯಕರವಾಗಿಡುವಲ್ಲಿ ಪೊಟ್ಯಾಸಿಯಮ್ ಪ್ರಮುಖ ಪಾತ್ರ ವಹಿಸುತ್ತೆ. ಪೊಟ್ಯಾಸಿಯಮ್ ಗಾಗಿ, ಡ್ರೈ ಫ್ರೂಟ್ಸ್ , ಬಾಳೆಹಣ್ಣು, ಆವಕಾಡೊ, ಸಿಟ್ರಸ್ ಹಣ್ಣುಗಳು ಮತ್ತು ಆಲೂಗಡ್ಡೆಗಳನ್ನು ಆಹಾರದಲ್ಲಿ ಸೇರಿಸಬಹುದು.

ಜಿಂಕ್(zinc) ಸೋಂಕಿನಿಂದ ದೂರವಿರಿಸುತ್ತೆ

ಮಾಂಸಾಹಾರ (Non-Veg) ಸೇವಿಸುವವರಿಗೆ ಕಡಿಮೆ ಜಿಂಕ್ನ್ ಸಮಸ್ಯೆಗಳಾಗುತ್ತವೆ. ಸಸ್ಯಾಹಾರಿಯಾಗಿರುವ ಜನರಲ್ಲಿ ಈ ಸಮಸ್ಯೆ ಹೆಚ್ಚು ಕಂಡುಬರುತ್ತೆ . ಜಿಂಕ್ ನಮ್ಮ ದೇಹದೊಳಗಿನ ಸೋಂಕುಗಳ (Infection) ವಿರುದ್ಧ ಹೋರಾಡಲು ಸಹಾಯ ಮಾಡುತ್ತೆ. ಇದು ದೇಹದ ಒಳಗೆ ಮತ್ತು ಹೊರಗೆ ಯಾವುದೇ ರೀತಿಯ ಸೋಂಕು ಮತ್ತು ಗಾಯ ಗುಣಪಡಿಸಲು ಸಹಾಯ ಮಾಡುತ್ತೆ. ಇದರ ಕೊರತೆಯು ಅನೇಕ ರೋಗಗಳಿಗೆ ಕಾರಣವಾಗಬಹುದು. ರೆಡ್ ಮೀಟ್ (Red Meat), ಸೀ ಫುಡ್ (Sea Food), ಬೀನ್ಸ್ ಮತ್ತು ಸಂಪೂರ್ಣ ಧಾನ್ಯಗಳು ಜಿಂಕ್ನ ಉತ್ತಮ ಮೂಲಗಳಾಗಿವೆ.

ಆಂಟಿ-ಆಕ್ಸಿಡೆಂಟ್ ರೋಗಗಳಿಂದ ದೂರವಿರಿಸುತ್ತೆ

ಹಾನಿಕಾರಕ ಕೀಟಾಣು ಮತ್ತು ವೈರಸ್ ಗಳಿಂದ ದೇಹವನ್ನು ರಕ್ಷಿಸಲು ಮತ್ತು ಫ್ರೀ ರಾಡಿಕಲ್ ಗಳನ್ನು ತನ್ನಿಂದ ದೂರವಿರಿಸಲು ಆಂಟಿ-ಆಕ್ಸಿಡೆಂಟ್ ಬಹಳ ಮುಖ್ಯ. ಸಾಕಷ್ಟು ಆಂಟಿ-ಆಕ್ಸಿಡೆಂಟ್ ಗಳಿಗಾಗಿ, ಒಬ್ಬ ವ್ಯಕ್ತಿ ಪ್ರತಿದಿನ ಸುಮಾರು ಒಂದೂವರೆ ಕಪ್ ಹಣ್ಣುಗಳನ್ನು(fruits) ಸೇವಿಸಬೇಕು. ಅವು ದೇಹಕ್ಕೆ ಅನೇಕ ರೀತಿಯ ವಿಟಮಿನ್ಸ್ ಮತ್ತು ಫ್ಲೇವನಾಯ್ಡ್ ಗಳನ್ನು ಸಹ ಪೂರೈಸುತ್ತವೆ.

click me!