Quick Sleep Tips ರಾತ್ರಿ ಬೇಗ ನಿದ್ರೆ ಬರ್ತಿಲ್ವಾ? ಇಲ್ಲಿದೆ ನೋಡಿ ನಿಮಿಷಗಳಲ್ಲಿ ನಿದ್ರಾ ಲೋಕಕ್ಕೆ ಜಾರುವ ಟ್ರಿಕ್ಸ್

Published : Jan 20, 2026, 12:50 PM IST

Fast Sleeping Tricks: ರಾತ್ರಿ ಹೊತ್ತು ಬೇಗ ನಿದ್ರೆ ಬರೋದೆ ಇಲ್ವಾ? ಆ ಕಡೆಗೆ ಒಮ್ಮೆ, ಈ ಕಡೆಗೆ ಒಮ್ಮೆ ಮಗ್ಗುಲು ಬದಲಿಸಿ ಸಾಕಾಗಿ ಹೋಗಿದ್ಯಾ? ಹಾಗಿದ್ರೆ ಇದನ್ನೊಮ್ಮೆ ಓದಿ. ಇಲ್ಲಿರೋ ಟ್ರಿಕ್ಸ್ ನೀವು ಪಾಲಿಸಿದ್ದೆ ಆದರೆ, ಹಾಸಿಗೆಯಲ್ಲಿ ಮಲಗಿದ ಕೆಲವೇ ನಿಮಿಷಗಳಲ್ಲಿ ನೀವು ನಿದ್ರೆಗೆ ಜಾರುತ್ತೀರಿ. 

PREV
17
ಕಣ್ಣು ತೆರೆದು ಇಟ್ಟುಕೊಳ್ಳಿ

ನಿಮಗೆ ರಾತ್ರಿ ಹೊತ್ತಿ ನಿದ್ರೆ ಬೇಗನೆ ಬರೋದಿಲ್ಲ ಅಂದ್ರೆ, ನಿಮಗೆ ಎಷ್ಟು ಸಾಧ್ಯ ಆಗುತ್ತೋ ಅಷ್ಟು ಹೊತ್ತು ಕಣ್ಣು ತೆರೆದು ನೋಡುತ್ತಲೇ ಇರಿ. ಇದರಿಂದ ಬ್ರೈನ್ ಮಲಗಲು ಸೂಚನೆ ನೀಡುತ್ತದೆ. ಇದಕ್ಕೆ ಪ್ಯಾರಡಾಕ್ಸಿಕಲ್ ಇಂಟೆನ್ಶನ್ ಎನ್ನುತ್ತಾರೆ. ಇದರಿಂದ ಬೇಗನೆ ನಿದ್ರೆ ಬರುತ್ತದೆ.

27
ಮುಖ ರಿಲ್ಯಾಕ್ಸ್ ಆಗಿರಲಿ, ಭುಜಗಳನ್ನು ಇಳಿ ಬಿಡಿ

ಇದನ್ನು ಯುಎಸ್ ಮಿಲಿಟರಿಯನ್ನು ಪಾಲಿಸುತ್ತಾರೆ. ಇದರಿಂದ ಯೋಧರಿಗೆ ಎರಡು ನಿಮಿಷದಲ್ಲಿ ನಿದ್ರೆ ಮಾಡಲು ಸಾಧ್ಯವಾಗುತ್ತಂತೆ. ಮಲಗುವಾಗ ಮುಖವನ್ನು ಬಿಗಿದಿಟ್ಟುಕೊಳ್ಳಬೇಡಿ, ಬದಲಾಗಿ ರಿಲ್ಯಾಕ್ಸ್ ಆಗಿ ಬಿಡಿ, ನಿಮ್ಮ ಭುಜಕ್ಕೆ ಬಲವೇ ಇಲ್ಲವೇನೋ ಎಂಬಂತೆ ಇಳಿ ಬಿಡಿ, ನೀವು ಬೆಡ್ ನಲ್ಲಿ ಮುಳುಗುತ್ತಿದ್ದೀರಿ ಎಂದು ಯೋಚನೆ ಮಾಡಿ, ಇದರಿಂದ ಚೆನ್ನಾಗಿ ನಿದ್ರೆ ಮಾಡಲು ಸಾಧ್ಯ ಆಗುತ್ತೆ.

37
4-7-8 ಉಸಿರಾಟದ ಕ್ರಮ ಅನುಸರಿಸಿ

4 ಸೆಕೆಂಡುಗಳ ಕಾಲ ಉಸಿರನ್ನು ನಿಧಾನವಾಗಿ ಒಳಗೆ ತೆಗೆದುಕೊಳ್ಳಿ, 7 ಸೆಕೆಂಡು ಉಸಿರನ್ನು ಹಿಡಿದಿಡಿ, 8 ಸೆಕೆಂಡ್ ಉಸಿರನ್ನು ಹೊರಕ್ಕೆ ಬಿಡಿ. ಇದರಿಂದ ನಿಮ್ಮ ಪ್ಯಾರಸಿಂಪಥಿಟಿಕಲ್ ನರಗಳು ಆಕ್ಟಿವ್ ಆಗಿ, ಬೇಗನೆ ನಿದ್ರೆ ಬರಲು ಸಹಾಯ ಮಾಡುತ್ತದೆ.

47
ಕಣ್ಣುಗಳನ್ನು ಮುಚ್ಚಿ ಇದನ್ನ ಮಾಡಿ

ಕಣ್ಣುಗಳನ್ನು ಮುಚ್ಚಿ, ಕಣ್ಣಿನ ಗುಡ್ಡೆಗಳನ್ನು ಮೇಲಕ್ಕೆ ರೋಲ್ ಮಾಡಿ, ಹೀಗೆ ಮೂರು ನಾಲ್ಕು ಬಾರಿ ರಿಪೀಟ್ ಮಾಡಿ. ನೀವು ನಿದ್ರೆ ಮಾಡುವಾಗ ಇದನ್ನೇ ಮಾಡೋದ್ರಿಂದಾಗಿ ಮೆದುಳಿಗೆ ಇದು ನಿದ್ರೆ ಮಾಡುವ ಸಮಯ ಎಂದು ಕನ್ಫ್ಯೂಸ್ ಆಗಿ ಬೇಗನೆ ನಿದ್ರೆ ಬರುತ್ತೆ.

57
ನಿಮ್ಮ ದಿಂಬಿನ ತಂಪಾದ ಭಾಗದಲ್ಲಿ ತಲೆಇಟ್ಟು ಮಲಗಿ

ಹೌದು, ಮಲಗುವಾಗ ದಿಂಬಿನ ಯಾವ ಭಾಗ ತಂಪಾಗಿದೆಯೋ, ಆ ಭಾಗದಲ್ಲಿ ತಲೆ ಇಟ್ಟು ಮಲಗಿ, ಇದರಿಂದ ತಲೆಯ ತಾಪಮಾನ ಕಡಿಮೆಯಾಗಿ, ಬೇಗನೆ ನಿದ್ರೆ ಬರಲು ಸಾಧ್ಯವಾಗುತ್ತದೆ.

67
ಮಲಗುವ ಮುನ್ನ ಸಾಕ್ಸ್ ಧರಿಸಿ

ಬಿಸಿಯಾದ ಪಾದಗಳು ನಿಮ್ಮ ರಕ್ತನಾಳಗಳನ್ನು ಹಿಗ್ಗಿಸುತ್ತೆ ಮತ್ತು ನಿಮ್ಮ ದೇಹದ ಒಳಗಿನ ತಾಪಾಮಾನವನ್ನು ಇಳಿಸುತ್ತೆ. ಆ ಮೂಲಕ ಬೇಗನೆ ನಿದ್ರೆ ಮಾಡು ಎನ್ನುವ ಸೂಚನೆಯನ್ನು ಬ್ರೈನ್ ಗೆ ಕಳುಹಿಸುತ್ತೆ.

77
300ರಿಂದ ಹಿಂದಕ್ಕೆ ಎಣಿಸಿ

ಹೌದು, ನಿಮ್ಮ ಮೆದುಳನ್ನು ಬ್ಯುಸಿಯಾಗಿಡೋದು ಕಷ್ಟ. ಆದರೆ ಎಣಿಕೆಯೂ ಅಷ್ಟೇ ಬೋರಿಂಗ್ ಆಗಿದೆ. ನಿಮಗೆ ನಿದ್ರೆ ಬಾರದೆ ಇದ್ದಾಗ, 300 ರಿಂದ ಹಿಂದಕ್ಕೆ ಅಂದರೆ 299, 298 ಹೀಗೆ ಎಣಿಸುತ್ತಾ ಬನ್ನಿ. ಇದರಿಂದ 200 ಬರೋವಷ್ಟರಲ್ಲಿ ನೀವು ನಿದ್ರೆ ಮಾಡಿರುತ್ತೀರಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories