ನಿಯಮಿತವಾಗಿ ಡ್ರ್ಯಾಗನ್ ಫ್ರೂಟ್ ಸೇವಿಸಿದರೆ, ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಕಾಪಾಡಿಕೊಳ್ಳಬಹುದು. ಯಾಕೆಂದರೆ ಈ ಹಣ್ಣಿನಲ್ಲಿ ಹಲವಾರು ರೀತಿಯ ಔಷಧೀಯ ಗುಣಗಳಿವೆ. ಮಾತ್ರವಲ್ಲ ಈ ಹಣ್ಣಿನ 100 ಗ್ರಾಂನಲ್ಲಿ 60 ಗ್ರಾಂ ಆರೋಗ್ಯಕರ ಕ್ಯಾಲೋರಿಗಳು, 1.2 ಗ್ರಾಂ ಪ್ರೋಟೀನ್, ಝೀರೋ ಫ್ಯಾಟ್, 13 ಗ್ರಾಂ ಕಾರ್ಬೋಹೈಡ್ರೇಟ್ ಗಳು, 3 ಗ್ರಾಂ ಫೈಬರ್ ಕಂಡುಬರುತ್ತದೆ. ಇದರ ಜೊತೆಗೆ ದೇಹಕ್ಕೆ ಅಗತ್ಯವಿರುವ ವಿಟಮಿನ್ ಸಿ, ಕಬ್ಬಿಣ ಮತ್ತು ಮೆಗ್ನೀಸಿಯಮ್ ಕೂಡಾ ಸಿಗುತ್ತದೆ. ಇದರಿಂದ ಮಧುಮೇಹಿಗಳು ಯಾವಾಗಲೂ ಆರೋಗ್ಯವಾಗಿರಲು ಸಾಧ್ಯವಾಗುತ್ತದೆ.