ನಮ್ಮ ದೇಹವನ್ನು ಸಮರ್ಥವಾಗಿ ನಿಯಂತ್ರಿಸುವುದು ಆರೋಗ್ಯಕರ ಜೀವನಕ್ಕೆ (Healthy Life) ಬಹುಮುಖ್ಯ. ಅದರಲ್ಲೂ ದೈಹಿಕ ಹಾಗೂ ಮಾನಸಿಕ ಸಮತೋಲನ ಕಾಪಾಡಬೇಕು ಅಂದ್ರೆ ನೀವು ಕೆಲವೊಂದು ಟ್ರಿಕ್ಸ್ ಟ್ರೈ ಮಾಡಬಹುದು. ಇವುಗಳಿಂದ ನೀವು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು.
26
ನಿಮಗೆ ರಾತ್ರಿ ಏನೆ ಮಾಡಿದ್ರೂ ನಿದ್ರೆ ಬಾರದೇ (not getting sleep)ಇದ್ದರೆ ಏನು ಮಾಡಬೇಕು ಎಂದು ಯೋಚ್ನೆ ಮಾಡ್ತಿದ್ದೀರಾ? ನಿದ್ದೆ ತಕ್ಷಣ ಬರುವ ಉಪಾಯ ಇಲ್ಲಿದೆ. ನೀವು "4-7-8" ಶ್ವಾಸೋಚ್ಛ್ವಾಸ ತಂತ್ರವನ್ನು ಟ್ರೈ ಮಾಡಬೇಕು. ಅಂದರೆ 4 ಸೆಕೆಂಡು ಉಸಿರೆಳೆಯುವುದು, 7 ಸೆಕೆಂಡು ಉಸಿರು ತಡೆ ಹಿಡಿಯಿರಿ, 8 ಸೆಕೆಂಡು ಉಸಿರು ಬಿಡಿ. ಇದರಿಂದ ಮಿದುಳಿಗೆ ಶಾಂತಿ ಸಿಗುತ್ತದೆ. ಬೇಗನೆ ನಿದ್ರೆ ಮಾಡಲು ಸಾಧ್ಯ ಆಗುತ್ತೆ.
36
ತುಂಬಾ ಜೋರಾಗಿ ತಲೆ ಸಿಡಿಯುತ್ತಿದೆಯೇ? ತಲೆಯ ನೋವು (headache)ತಕ್ಷಣ ಕಡಿಮೆಯಾಗಬೇಕು ಅಂದ್ರೆ, ನಿಮ್ಮ ಹುಬ್ಬುಗಳ ನಡುವಿನ ಪ್ರದೇಶವನ್ನು ಸ್ವಲ್ಪ ಒತ್ತಿ ಹಿಡಿಯಿರಿ. ಅಲ್ಲಿ ನಿಧಾನವಾಗಿ ಮಸಾಜ್ ಮಾಡಿ. ಇದರಿಂದ ಶೀಘ್ರದಲ್ಲಿ ತಲೆ ನೋವು ನಿವಾರಣೆಯಾಗುತ್ತೆ.
ಪದೇ ಪದೇ ಬಿಕ್ಕಳಿಕೆ ಬಂದರೆ ಅದಕ್ಕೂ ಒಂದು ಸಿಂಪಲ್ ಟೆಕ್ನಿಕ್ ಟ್ರೈ ಮಾಡಬಹುದು. ಬಿಕ್ಕಳಿಕೆ ಬಂದಾಗ ಮೂಗನ್ನು ಗಟ್ಟಿಯಾಗಿ ಹಿಡಿದು, ಉಸಿರನ್ನು ತಡೆದು ಮೂರು ಬಾರಿ ನುಂಗಿ. ಹೀಗೆ ಮಾಡೊದ್ರಿಂದ ಬಿಕ್ಕಳಿಕೆ ಶೀಘ್ರದಲ್ಲಿ ಕಡಿಮೆಯಾಗುತ್ತದೆ.
56
ಮಾನಸಿಕ ಒತ್ತಡ (mental stress)ಇದ್ರೆ, ಅದನ್ನು ಹೇಗೆ ನಿವಾರಣೆ ಮಾಡೋದು ಎಂದು ಯೋಚನೆ ಮಾಡುತ್ತಿದ್ದರೆ, ಇದನ್ನ ಮಾಡಿ ಸಾಕು, ಒತ್ತಡ ದೂರ ಓಡುತ್ತೆ. ಅದಕ್ಕಾಗಿ ನೀವು ಚುಯಿಂಗ್ ಗಮ್ ಅಗೆಯಿರಿ, ಇದರಿಂದ ಕಾರ್ಟಿಸಾಲ್ (ಒತ್ತಡದ ಹಾರ್ಮೋನ್) ಮಟ್ಟ ಕಡಿಮೆಯಾಗುತ್ತೆ. ಇದರಿಂದ ಮನಸ್ಸು ನಿರಾಳ ಆಗುತ್ತೆ.
66
ತಕ್ಷಣದ ವಿಶ್ರಾಂತಿ ಬೇಕಾದರೆ, ದೇಹಕ್ಕೆ ಮನಸಿಗೆ ಆರಾಮ ಸಿಗಬೇಕು ಅಂದ್ರೆ ಕೈ ಮುಷ್ಟಿ ಮಾಡಿ, ಮತ್ತೆ ಬಿಡಿಸಿ. ಹೀಗೆ ಒಂದು ಐದು ನಿಮಿಷಗಳವರೆಗೆ ನಿರಂತರವಾಗಿ ಮಾಡಿ. ಹೀಗೆ ಮಾಡುವುದರಿಂದ ದೇಹದ ಒತ್ತಡ ನಿವಾರಣೆಯಾಗುತ್ತದೆ.