ತುಳಸಿಯನ್ನು ನೀರಿನಲ್ಲಿ ಕುದಿಸಿ ಕುಡಿದರೆ ಅರೋಗ್ಯ ಪ್ರಯೋಜನ ದುಪ್ಪಟ್ಟು

First Published Jun 23, 2021, 4:35 PM IST

ತುಳಸಿ ಎಲೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಮತ್ತು ಇದನ್ನು ಪ್ರತಿದಿನ ಸೇವಿಸಬೇಕು ಎಂದು ನಾವೆಲ್ಲರೂ ಅಜ್ಜಿ ಹೇಳಿದ್ದನ್ನು ಕೇಳಿದ್ದೇವೆ. ಇದು ಶೀತ ಕೆಮ್ಮಿಗೆ ಮಾತ್ರ ಮದ್ದಲ್ಲ. ನಮ್ಮ ರೋಗ ನಿರೋಧಕ ಶಕ್ತಿಯನ್ನು ಸದೃಢಗೊಳಿಸುವ ಮೂಲಕ ಅನೇಕ ರೋಗಗಳಿಂದ ನಮ್ಮನ್ನು ರಕ್ಷಿಸುತ್ತದೆ. ಇದನ್ನು ಶತಮಾನಗಳಿಂದಲೂ ಆಯುರ್ವೇದದಲ್ಲಿ ಬಳಸಲಾಗುತ್ತಿದೆ. ಧಾರ್ಮಿಕ ಕಾರಣಗಳಿಗಾಗಿ ತುಳಸಿಗೆ ಅನೇಕ ಮನೆಗಳಲ್ಲಿ ಸ್ಥಾನ ನೀಡಲಾಗುತ್ತದೆ ಆದರೆ ಇದು ಆರೋಗ್ಯವನ್ನು ಕಾಪಾಡಿಕೊಳ್ಳಲು ತುಂಬಾ ಸಹಕಾರಿ.

ತುಳಸಿಯನ್ನು ಕುದಿಸಿ ನೀರಿನೊಂದಿಗೆ ಸೇವಿಸಿದರೆ, ಅದರ ಗುಣಮಟ್ಟಹಲವು ಪಟ್ಟು ಹೆಚ್ಚಾಗುತ್ತದೆ ಎಂದು ಕೆಲವೇ ಜನರಿಗೆ ತಿಳಿದಿದೆ. ಬಿಸಿ ನೀರು ಅಥವಾ ಟೀ ಕುಡಿಯಲು ಅಥವಾ ಬೆಳಗ್ಗೆ ನಿಂಬೆ ಪಾನಕ ಸೇವಿಸಲು ಇಷ್ಟವಿಲ್ಲದಿದ್ದರೆ, ತುಳಸಿ ನೀರು ಸೇವಿಸಿದರೆ ಆರೋಗ್ಯಕ್ಕೆ ತುಂಬಾ ಲಾಭ. ಹಾಗಾದರೆ ತುಳಸಿ ನೀರಿನ ಇತರೆ ಪ್ರಯೋಜನಗಳು ಯಾವುವು ಮತ್ತು ಅದನ್ನು ಹೇಗೆ ಬಳಸಬಹುದು?
undefined
ತುಳಸಿ ಎಲೆ ನೀರನ್ನು ತಯಾರಿಸುವುದು ಹೇಗೆ?ಒಂದು ಪ್ಯಾನ್ಗೆ ಒಂದು ಲೋಟ ನೀರನ್ನು ಸೇರಿಸಿ ಮತ್ತು ಅದನ್ನು ಕುದಿಯಲು ಬಿಡಿ. ಈಗ ಸ್ವಲ್ಪ ತುಳಸಿ ಎಲೆ ಸೇರಿಸಿ ಮತ್ತು ನೀರು ಅರ್ಧದಷ್ಟು ಆಗುವವರೆಗೆ ಈ ನೀರನ್ನು ಕುದಿಯಲು ಬಿಡಿ. ಗ್ಯಾಸ್ ಆಫ್ ಮಾಡಿ ಮತ್ತು ಅದನ್ನು ಸೋಸಿ. ಈಗ ಇದಕ್ಕೆ ಜೇನುತುಪ್ಪ ಸೇರಿಸಿ ಸೇವಿಸಿ.
undefined
ಪ್ರಯೋಜನಗಳು ಇಲ್ಲಿವೆಚಯಾಪಚಯ ಕ್ರಿಯೆಈ ತುಳಸಿ ನೀರನ್ನು ಕುಡಿಯುವುದರಿಂದ ಚಯಾಪಚಯ ಕ್ರಿಯೆ ಉತ್ತಮವಾಗುತ್ತದೆ, ಇದರಿಂದ ಕಾರ್ಬ್ಸ್ ಮತ್ತು ಕೊಬ್ಬುಗಳನ್ನು ಸುಡುವುದು ಸುಲಭವಾಗುತ್ತದೆ.
undefined
ಸಕ್ಕರೆ ಮಟ್ಟದ ನಿಯಂತ್ರಣಇದುರಕ್ತದಲ್ಲಿನ ಸಕ್ಕರೆ ಮಟ್ಟನಿಯಂತ್ರಿಸುತ್ತದೆ. ಈ ಎಲ್ಲಾ ಗುಣಲಕ್ಷಣಗಳು ಮಧುಮೇಹ ರೋಗಿಗಳನ್ನು ತಮ್ಮ ಸಕ್ಕರೆಯನ್ನು ಉತ್ತಮವಾಗಿ ನಿಯಂತ್ರಿಸುತ್ತದೆ.
undefined
ಒತ್ತಡ ನಿವಾರಣೆಇಂದಿನ ಜೀವನಶೈಲಿಯಲ್ಲಿ ಎಲ್ಲರೂ ಒತ್ತಡದಿಂದ ಒದ್ದಾಡುತ್ತಿದ್ದಾರೆ. ಈ ಒತ್ತಡದೀರ್ಘಾವಧಿಯಲ್ಲಿ ಅನೇಕ ಗಂಭೀರ ರೋಗಗಳಿಗೆ ಕಾರಣವಾಗುತ್ತದೆ. ಈ ಸಂದರ್ಭದಲ್ಲಿ ತುಳಸಿ ಎಲೆಗಳನ್ನು ಕುದಿಸಿ ಬಳಸಿದರೆ ಒತ್ತಡದಿಂದ ಪರಿಹಾರ ಪಡೆಯಬಹುದು.
undefined
ತುಳಸಿಯಲ್ಲಿರುವ ಅಂಶಒತ್ತಡಕ್ಕೆ ಮುಖ್ಯ ಕಾರಣವಾಗಿರುವ ಕಾರ್ಟಿಸೋಲ್ ಹಾರ್ಮೋನ್ ಅನ್ನು ಸಮತೋಲನಗೊಳಿಸುತ್ತದೆ. ಆದುದರಿಂದ ಇದನ್ನು ಪ್ರತಿದಿನ ಮುಂಜಾನೆ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೇಯದು.
undefined
ತೂಕಇಳಿಸುತ್ತದೆಇಂದು, ಪ್ರತಿಯೊಬ್ಬ ವ್ಯಕ್ತಿಯು ತೂಕ ಹೆಚ್ಚಳದಿಂದ ಬಳಲುತ್ತಿದ್ದಾನೆ, ತೂಕ ಹೆಚ್ಚಳರೋಗ ತರಿಸುವ ಜೊತೆಗೆ ಮಾನಸಿಕ ಒತ್ತಡಕ್ಕೆ ಕಾರಣವಾಗುತ್ತದೆ. ತುಳಸಿ ಎಲೆಗಳನ್ನು ಬಳಸುವುದರಿಂದಲೂ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
undefined
ಜೀರ್ಣಕ್ರಿಯೆಗಾಗಿತುಳಸಿ ಎಲೆಗಳಲ್ಲಿ ಜೀರ್ಣಕ್ರಿಯೆ ಉತ್ತಮಗೊಳಿಸುವ ಮತ್ತು ಅಜೀರ್ಣ, ಗ್ಯಾಸ್ ಮೊದಲಾದವುಗಳನ್ನು ನಿವಾರಿಸುವ ಅನೇಕ ಗುಣಗಳಿವೆ. ಇದರ ಸೇವನೆಯು ದೇಹದಿಂದ ವಿಷವನ್ನು ಹೊರಹಾಕಬಹುದು
undefined
ಉಸಿರಾಟದ ಕಾಯಿಲೆಗಳ ತಡೆಗಟ್ಟುವಿಕೆತುಳಸಿ ಎಲೆಗಳು ಇಮ್ಯುನೊ ಮಾಡ್ಯುಲೇಶನ್ ಮತ್ತು ಎಕ್ಸ್ ಪೋಶರ್ ಗುಣಲಕ್ಷಣಗಳನ್ನು ಹೊಂದಿದ್ದು, ಅವು ಉಸಿರಾಟದ ವ್ಯವಸ್ಥೆಯನ್ನು ನೋಡಿಕೊಳ್ಳುತ್ತವೆ ಮತ್ತು ಉಸಿರಾಟದ ಸಮಸ್ಯೆಗಳನ್ನು ಪರಿಹರಿಸುತ್ತವೆ.
undefined
click me!