ಸದಾಪುಷ್ಪವೆಂದರೆ ಸದಾ ಅರಳುವ ಹೂವು . ಇದನ್ನು ಹಿಂದಿಯಲ್ಲಿ ಸದಾಬಹಾರ್ ಆಂಗ್ಲ ಭಾಷೆಯಲ್ಲಿ ಮದಗಾಸ್ಕರ್ ಪೇರಿವಿಂಕಲ್ , ಪಂಜಾಬಿಯಲ್ಲಿ ರತನ್ ಜೋತ್ , ಮರಾಠಿಯಲ್ಲಿ ಸದಾ ಫೂಲ್ , ಬೆಂಗಾಲಿಯಲ್ಲಿ ನಯನತಾರ , ಮಲಯಾಳಂ ನಲ್ಲಿ ಉಷಾಮಲಾರಿ , ಸಂಸ್ಕೃತ ದಲ್ಲಿ ನಿತ್ಯಕಲ್ಯಾಣಿ , ಕನ್ನಡದಲ್ಲಿ ಮಸಣದ ಹೂವು , ಸಣ್ಣ ಕಣಗಿಲೆ ಎಂದು ಕರೆಯಲ್ಪಡುವ ಈ ಹೂವಿನಲ್ಲಿರುವ ಔಷಧೀಯ ಗುಣ ಅದೆಷ್ಟೋ ಖಾಯಿಲೆಗಳಿಗೆ ರಾಮಬಾಣವಾಗಿದೆ.
ಇದು ಹೆಚ್ಚಾಗಿ ಭಾರತದಲ್ಲಿ ಕಂಡುಬರುತ್ತದೆ. ಇದನ್ನು ಬೆಳೆಸಲು ಕಡಿಮೆ ನೀರು ಸಾಕು. ಇದರ ಬುಡ ಒಣಗಿದಾಗ ಮಾತ್ರ ನೀರು ಹಾಕಿದರಾಯಿತು. ಇದು ಮಣ್ಣಿನಲ್ಲಿರುವ ತೇವಾಂಶವನ್ನು ಹಿಡಿದಿಟ್ಟುಕೊಳ್ಳುವ ಗುಣವಿದೆ. ಇದಕ್ಕೆ ಸೂರ್ಯನ ಬೆಳಕು ಬೇಕು.

211
ವಿಂಕಾ ಸಸ್ಯವೆಂದು ಕರೆಯುವ ಸದಾಪುಷ್ಪವನ್ನು ಆಯುರ್ವೇದದಲ್ಲೂ ಮತ್ತು ಆಧುನಿಕ ಔಷಧಿಗಳಲ್ಲಿ ಉಪಯೋಗಿಸುತ್ತಾರೆ. ಈ ಗಿಡವನ್ನು ಕ್ಯಾನ್ಸರ್ ನಂತಹ ಖಾಯಿಲೆಗಳಿಗೆ ಉಪಯೋಗಿಸುತ್ತಾರೆ.

311
1950 ರಲ್ಲಿ ಈ ಗಿಡವನ್ನು ವಿಜ್ಞಾನಿಗಳು ಪರೀಕ್ಷೆಗೆ ಒಳಪಡಿಸಿದಾಗ ಇದರಲ್ಲಿ ಇರುವ ನಾಲ್ಕು ಅಂಶಗಳು ರಕ್ತದ ಕ್ಯಾನ್ಸರ್ ಗಳಲ್ಲಿ ಬಳಸಬಹುದು ಎಂದು ತಿಳಿದು ಬಂದಿತು. ಅಷ್ಟೇ ಅಲ್ಲದೆ ಅಧಿಕ ರಕ್ತದೊತ್ತಡ , ಖಿನ್ನತೆ , ಸಕ್ಕರೆ ಖಾಯಿಲೆಗಳಿಗೆ ಇದರ ಔಷಧೀಯ ಗುಣಗಳು ಉಪಯೋಗಿಸಲ್ಪಡುತ್ತಿದೆ . ಇದಲ್ಲದೆ ಮನೆ ಮದ್ದುಗಳಾಗಿ ಉಪಯೋಗಿಸುತ್ತಾರೆ .

411
ಗಾಯವಾದ ಜಾಗಕ್ಕೆ ಸದಾಪುಷ್ಪದ ಎಲೆಗಳನ್ನು ತೆಗೆದುಕೊಂಡು ಅರಶಿನದ ಜೊತೆ ನುಣ್ಣಗೆ ಅರೆದು ಅದರ ಲೇಪವನ್ನು ಗಾಯವಾದ ಜಾಗಕ್ಕೆ ದಿನದಲ್ಲಿ ಎರಡರಿಂದ ಮೂರು ಬಾರಿ ಹಚ್ಚಿದರೆ ಗಾಯ ಕೂಡಲೇ ವಾಸಿಯಾಗುತ್ತದೆ.

511
ಸದಾಪುಷ್ಪದ ಬೇರನ್ನು ತೆಗೆದುಕೊಂಡು ತೊಳೆದು ನೆರಳಿನಲ್ಲಿ ಒಣಗಿಸಿ ಸಣ್ಣಗೆ ಪುಡಿಮಾಡಿ ಒಂದರಿಂದ ಎರಡು ಚಿಟಿಕಿಯಷ್ಟು ಪುಡಿಯನ್ನು ಜೇನುತುಪ್ಪದೊಂದಿಗೆ ಬೆರೆಸಿ ನಿಯಮಿತವಾಗಿ ತಿಂದರೆ ಸಕ್ಕರೆ ಖಾಯಿಲೆಯು ಹತೋಟಿಗೆ ಬರುತ್ತದೆ.

611
ಅಧಿಕ ರಕ್ತದ ಒತ್ತಡ ಇದ್ದವರು ಪ್ರಾರಂಭದ ಸಮಯದಲ್ಲಿ ಬಿಳಿ ಸದಾಪುಷ್ಪದ ಎಲೆಗಳನ್ನು ತೆಗೆದುಕೊಂಡು ಅದರ ರಸ ತೆಗೆದು ಬೆಳಗ್ಗೆ ಅಥವಾ ರಾತ್ರಿ ಎರಡರಿಂದ ಮೂರು ಸಣ್ಣ ಚಮಚದಷ್ಟು ತೆಗೆದುಕೊಂಡರೆ ಅಧಿಕ ರಕ್ತದೊತ್ತಡ ಹಿಡಿತದಲ್ಲಿ ಬರುತ್ತದೆ .

711
ಮುಟ್ಟಿನ ಸಮಸ್ಯೆ ಇದ್ದವರು ಆರರಿಂದ ಎಂಟು ಎಲೆಗಳನ್ನು ತೆಗೆದು ತೊಳೆದು ಎರಡು ಲೋಟ ನೀರಿನೊಂದಿಗೆ ಕುದಿಸಿ ಅದು ಅರ್ಧ ಲೋಟ ಆಗುವರೆಗೆ ಕುದಿಸಿ ಸತತ ಮೂರು ತಿಂಗಳ ಕಾಲ ತೆಗೆದು ಕೊಂಡರೆ ಅಧಿಕ ರಕ್ತ ಸ್ರಾವ ಮತ್ತು ಅಲ್ಪ ಹರಿವು ಇದ್ದಲ್ಲಿ ಸರಿಯಾಗುತ್ತದೆ.

811
ಮೂಗಿನಿಂದ ರಕ್ತ ಸ್ರಾವ ಆಗುತ್ತಿದ್ದರೆ ಸದಾಪುಷ್ಪ ಮತ್ತು ಎಳ ದಾಳಿಂಬೆಯ ರಸವನ್ನು ತೆಗೆದು ಮೂಗಿಗೆ ಹಾಕಿದರೆ ಮೂಗಿನಿಂದ ಆಗುವ ರಕ್ತಸ್ರಾವ ಗುಣವಾಗುತ್ತದೆ, ಅಲ್ಲದೆ ಗಂಟಲು ಕೆರೆತ, ಬಾಯಿ ಹುಣ್ಣು, ಒಸಡಿನಲ್ಲಿ ರಕ್ತಸ್ರಾವ ಆಗುತ್ತಿದ್ದರು ಗುಣವಾಗುತ್ತದೆ .

911
ಕೀಟಗಳು ಕಚ್ಚಿದ ಜಾಗಕ್ಕೆ ಎಲೆಯ ರಸ ತೆಗೆದು ಹಚ್ಚಿದರೆ ಊತ ಹಾಗು ತುರಿಕೆ ಕಡಿಮೆ ಆಗುತ್ತದೆ .

1011
ಮುಖದಲ್ಲಾದ ಮೊಡವೆ ಗಾಯಗಳಿಗೆ ಸಮಪ್ರಮಾಣದಲ್ಲಿ ಸದಾಪುಷ್ಪದ ಎಲೆ ಕಹಿಬೇವಿನ ಎಲೆ , ಹಾಗು ಅರಶಿನವನ್ನು ತೆಗೆದುಕೊಂಡು ಅದರ ಲೇಪವನ್ನು ಮೊಡವೆ ಇದ್ದ ಜಾಗಕ್ಕೆ ಮತ್ತು ಗಾಯಗಳಾದ ಜಾಗಕ್ಕೆ ಪ್ರತಿ ದಿನ ಹಚ್ಚಿದರೆ ಒಳ್ಳೆಯ ಫಲಿತಾಂಶ ದೊರೆಯಲಿದೆ.

1111
ಗರ್ಭಿಣಿ ಹಾಗು ಹಾಲುಣಿಸುವ ತಾಯಿಯಂದಿರು ಇದರ ಉಪಯೋಗ ಮಾಡದೇ ಇದ್ದರೆ ಒಳ್ಳೆಯದು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.