ಪಾಲಕ್ (Palak) ಮತ್ತು ಟೊಮೆಟೊ ಜ್ಯೂಸ್ ಅನೇಕ ಅಗತ್ಯ ವಿಟಮಿನ್ಸ್ ಮತ್ತು ಮಿನರಲ್ಸ್ ಗಳಿಂದ ಸಮೃದ್ಧವಾಗಿದೆ, ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಗ್ರೀನ್ ವೆಜೆಟೇಬಲ್ಸ್ನಲ್ಲಿ ಒಂದಾದ ಪಾಲಕ್ ಸೊಪ್ಪು ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ನಿವಾರಿಸಲು ಬೆಸ್ಟ್ ತರಕಾರಿಯಾಗಿದೆ. ಇದರಲ್ಲಿ ಪೊಟ್ಯಾಸಿಯಮ್, ಮ್ಯಾಂಗನೀಸ್, ವಿಟಮಿನ್ ಎ, ವಿಟಮಿನ್ ಕೆ ಮತ್ತು ವಿಟಮಿನ್ ಬಿ -2 ನಂತಹ ಪೋಷಕಾಂಶಗಳಿವೆ.
ಟೊಮೆಟೋ (Tomato) ಕೂಡ ಆರೋಗ್ಯಕ್ಕೆ ಉತ್ತಮವಾಗಿದೆ. ಟೊಮೆಟೊದಲ್ಲಿ ಲೈಕೋಪೀನ್, ವಿಟಮಿನ್ ಸಿ, ವಿಟಮಿನ್ ಇ ಮತ್ತು ಕ್ಯಾಲ್ಸಿಯಂ ಇದೆ. ಆದ್ದರಿಂದ ಈ ಎರಡು ತರಕಾರಿಗಳಿಂದ ತಯಾರಿಸಿದ ಜ್ಯೂಸ್ ಚಳಿಗಾಲದಲ್ಲಿ ನಮ್ಮ ದೇಹವನ್ನು ಆರೋಗ್ಯಕರವಾಗಿರಿಸುತ್ತೆ. ಈ ಜ್ಯೂಸ್ ಸೇವಿಸೋದ್ರಿಂದ ಇತರ ಏನೆಲ್ಲಾ ಪ್ರಯೋಜನಗಳಿವೆ ಇಲ್ಲಿ ತಿಳಿಯಿರಿ.
ಜೀರ್ಣಕ್ರಿಯೆಗೆ (Digestion) ಬೆಸ್ಟ್
ಪಾಲಕ್ ಮತ್ತು ಟೊಮೆಟೊ ಜ್ಯೂಸ್ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಉತ್ತಮ. ಪಾಲಕ್ ಸೊಪ್ಪಿನಲ್ಲಿ ನಾರಿನಂಶ ಇರೋದ್ರಿಮ್ದ ಇದು ಜೀರ್ಣಕ್ರಿಯೆಯನ್ನು ಬಲವಾಗಿ ಮಾಡಲು ಸಹಾಯ ಮಾಡುತ್ತೆ. ಹಾಗೇ ಟೊಮೆಟೊಗಳ ಲೈಕೋಪೀನ್ ಅಂಶವು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತೆ.
ದೇಹವನ್ನು ನಿರ್ವಿಷಗೊಳಿಸುತ್ತೆ
ಅನಾರೋಗ್ಯಕರ ಆಹಾರದಿಂದಾಗಿ, ದೇಹದಲ್ಲಿ ವಿಷವು ಹೆಚ್ಚಾಗಲು ಪ್ರಾರಂಭಿಸುತ್ತೆ. ಇದರಿಂದಾಗಿ ಬೊಜ್ಜು (Obesity), ಮಧುಮೇಹ, ಚರ್ಮ ಮತ್ತು ಹೃದಯ ಮತ್ತು ಯಕೃತ್ತಿನ ಸಮಸ್ಯೆಗಳ ಅಪಾಯವೂ ಹೆಚ್ಚಾಗುತ್ತೆ. ಪಾಲಕ್ ಮತ್ತು ಟೊಮೆಟೊ ರಸವನ್ನು ಕುಡಿಯೋದರಿಂದ ದೇಹದಲ್ಲಿರುವ ವಿಷ ಸುಲಭವಾಗಿ ಸ್ವಚ್ಛವಾಗುತ್ತೆ.
ಮುಖದ ಹೊಳಪನ್ನು (Face glow) ಹೆಚ್ಚಿಸುತ್ತೆ
ಪಾಲಕ್-ಟೊಮೆಟೊ ಜ್ಯೂಸ್ ಕುಡಿಯೋದ್ರಿಂದ ಮುಖದ ಹೊಳಪು ಹೆಚ್ಚಾಗುತ್ತೆ, ಅಷ್ಟೇ ಅಲ್ಲದೇ ಚರ್ಮವು ಆರೋಗ್ಯಕರವಾಗಿರುತ್ತೆ ಯಾಕಂದ್ರೆ ಈ ಜ್ಯೂಸ್ ಕುಡಿಯೋದರಿಂದ ದೇಹದ ವಿಷ ನಿವಾರಣೆಯಾಗುತ್ತೆ, ಇದರಿಂದಾಗಿ ಮೊಡವೆ ಸಮಸ್ಯೆ ಸಹ ಇರೋದಿಲ್ಲ. ಈ ಜ್ಯೂಸ್ ಕುಡಿಯೋದರಿಂದ ಉಂಟಾಗುವ ದೊಡ್ಡ ಪ್ರಯೋಜನವೆಂದರೆ ಇದು ವಯಸ್ಸಾಗುವಿಕೆಯ ಪರಿಣಾಮವನ್ನು ಕಡಿಮೆ ಮಾಡುತ್ತೆ.
ರಕ್ತ ಹೀನತೆ ಇರೋದಿಲ್ಲ
ಪಾಲಕ್ -ಟೊಮೆಟೊ ಜ್ಯೂಸ್ ಕುಡಿಯೋದರಿಂದ ರಕ್ತಹೀನತೆಯ ಸಮಸ್ಯೆಯನ್ನು ನಿವಾರಿಸುತ್ತೆ. ಪಾಲಕ್ ಸೊಪ್ಪಿನಲ್ಲಿ ಉತ್ತಮ ಪ್ರಮಾಣದ ಕಬ್ಬಿಣಾಂಶವಿದೆ (Iron), ಇದು ಕೆಂಪು ರಕ್ತ ಕಣಗಳ ರಚನೆಗೆ ಸಹಾಯ ಮಾಡುತ್ತೆ. ದೇಹದಲ್ಲಿ ಕಬ್ಬಿಣದ ಕೊರತೆಯಿಂದಾಗಿ ರಕ್ತಹೀನತೆಯ ಸಮಸ್ಯೆ ಉಂಟಾಗುತ್ತೆ.
ಪಾಲಕ್ (Spinach) -ಟೊಮೆಟೊ ಜ್ಯೂಸ್ ತಯಾರಿಸುವ ವಿಧಾನ
ಬೇಕಾಗುವ ಸಾಮಾಗ್ರಿಗಳು:
1 ಕಪ್ ತಾಜಾ ಪಾಲಕ್ ಸೊಪ್ಪಿನ ಎಲೆಗಳು
2 ಕೆಂಪು ಮಾಗಿದ ಟೊಮೆಟೊ
(ಕ್ಯಾರೆಟ್ ಮತ್ತು ನೆಲ್ಲಿಕಾಯಿ ಬೇಕಾದಲ್ಲಿ ನಿಮ್ಮ ಜ್ಯೂಸ್ ಗೆ ಸೇರಿಸಬಹುದು)
ತಯಾರಿಸುವ ವಿಧಾನ
- ಪಾಲಕ್ ಸೊಪ್ಪು ಮತ್ತು ಟೊಮೆಟೊವನ್ನು ನೀರಿನಿಂದ ಕ್ಲೀನ್ ಮಾಡಿ.
- ತೊಳೆದ ನಂತರ, ಟೊಮೆಟೊವನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ.
- ನಂತರ ಈ ಎರಡು ವಸ್ತುಗಳನ್ನು ಮಿಕ್ಸರ್ /ಗ್ರೈಂಡರ್ ನಲ್ಲಿ ಚೆನ್ನಾಗಿ ರುಬ್ಬಿಕೊಳ್ಳಿ.
- ಈಗ ಅದನ್ನು ಸೋಸಿ.
-ಜ್ಯೂಸ್ ಇನ್ನೂ ಸ್ವಲ್ಪ ಆರೋಗ್ಯಕರವಾಗಿಸಲು ಕ್ಯಾರೆಟ್ (Carrot) ಮತ್ತು ನೆಲ್ಲಿಕಾಯಿಯನ್ನು ಸಹ ನೀವು ಅದರಲ್ಲಿ ಮಿಕ್ಸ್ ಮಾಡಬಹುದು.