ENO: ಆಸಿಡಿಟಿಗೆ ಮಾತ್ರವಲ್ಲ, ಈ ರೀತಿಯಾಗಿಯೂ ಬಳಸಬಹುದು

First Published | Nov 1, 2022, 5:35 PM IST

ಅಸಿಡಿಟಿಯನ್ನು ನಿವಾರಿಸಲು ಈನೋವನ್ನು ಬಳಸಲಾಗುತ್ತದೆ, ಆದರೆ ಅದರ ಸಹಾಯದಿಂದ, ಇತರ ಅನೇಕ ಕಾರ್ಯಗಳನ್ನು ಸಹ ಸುಲಭಗೊಳಿಸಬಹುದು ಎಂದು ನಿಮಗೆ ತಿಳಿದಿದೆಯೇ. ಹೌದು ಈನೋದಿಂದ ಮನೆಯಲ್ಲಿನ ಹಲವು ಕೆಲಸಗಳನ್ನು ಸುಲಭಗೊಳಿಸಬಹುದು. ಅಭರಣಗಳ ಹೊಳಪು ಹೆಚ್ಚಿಸಬಹುದು, ಪಾತ್ರೆಗಳ ಹಠಮಾರಿ ಕಲೆಯನ್ನು ಸಹ ನಿವಾರಿಸಬಹುದು. ಅದು ಹೇಗೆ ಅನ್ನೋದನ್ನು ತಿಳಿಯೋಣ. 

ಮನೆಯಲ್ಲಿ ಹೊಟ್ಟೆನೋವು ಅಥವಾ ಅಸಿಡಿಟಿಯ ಸಮಸ್ಯೆ (acidity problem) ಉಂಟಾದಾಗಲೆಲ್ಲಾ, ಮೊದಲಿಗೆ ನಾವು ಈನೋವನ್ನು ಹೊರ ತೆಗೆಯುತ್ತೇವೆ. ಯಾಕೆಂದರೆ ಇವುಗಳನ್ನು ಬಳಸೋದ್ರಿಂದ ಸಮಸ್ಯೆ ಶೀಘ್ರವೇ ಗುಣಮುಖವಾಗುತ್ತೆ. ಆದರೆ  ಈನೋ ವನ್ನು ಗ್ಯಾಸ್ ಸಮಸ್ಯೆಯಲ್ಲಿ ಮಾತ್ರವಲ್ಲದೆ, ಇತರ ಅನೇಕ ಕಾರ್ಯಗಳನ್ನು ಸುಲಭಗೊಳಿಸಲು ಸಹ ಬಳಸಬಹುದು. 

ಈನೋವನ್ನು ಅಡುಗೆಗೆ ಸಹ ಬಳಸಬಹುದು. ಮನೆಯಲ್ಲಿ ನಡೆಯುವ ಕೆಲಸದಲ್ಲಿ ಈನೋದ ಬಳಕೆಯನ್ನು ನೀವು ವಿವರವಾಗಿ ತಿಳಿಯಲು ಬಯಸಿದರೆ, ವಿವಿಧ ಕಾರ್ಯಗಳನ್ನು ಸುಲಭಗೊಳಿಸಲು ನೀವು ಈನೋವನ್ನು ಹೇಗೆ ಬಳಸಬಹುದು ಎಂಬುದನ್ನು ಇಲ್ಲಿ ನಾವು ನಿಮಗೆ ಹೇಳುತ್ತಿದ್ದೇವೆ. ಈನೋ ಹ್ಯಾಕ್ ಗಳನ್ನು ತಿಳಿದುಕೊಳ್ಳೋಣ.

Tap to resize

ಈನೋದ ಕೆಲವು ಸುಲಭ ಹ್ಯಾಕ್ ಗಳು ಇಲ್ಲಿವೆ
ಆಭರಣಗಳನ್ನು ಸ್ವಚ್ಛಗೊಳಿಸಿ (clean ornaments)
ಈನೋ ಸಹಾಯದಿಂದ ನೀವು ಪ್ರತಿದಿನ ಧರಿಸುವ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದು. ಇದಕ್ಕಾಗಿ, ಒಂದು ಬೌಲ್ ನಲ್ಲಿ ಬಿಸಿ ನೀರು ತೆಗೆದುಕೊಂಡು ಅದಕ್ಕೆ ಒಂದು ಪೌಚ್ ಈನೋ ಸೇರಿಸಿ. ಈಗ ಈ ನೀರಿಗೆ ಆಭರಣಗಳನ್ನು ಹಾಕಿ ಮತ್ತು 15 ನಿಮಿಷಗಳ ಕಾಲ ನೀರಿನಲ್ಲಿ ಬಿಡಿ. ನಂತರ ಎನೊ ನೀರಿನಿಂದ ಆಭರಣಗಳನ್ನು ಹೊರತೆಗೆಯಿರಿ ಮತ್ತು ಸ್ವಚ್ಛವಾದ ನೀರಿನಿಂದ ತೊಳೆಯಿರಿ. ನಿಮ್ಮ ಆಭರಣಗಳು ಹೊಳೆಯುತ್ತವೆ.

ಪಾತ್ರೆಗಳ ಹಠಮಾರಿ ಕಲೆಗಳನ್ನು ದೂರ ಮಾಡಲು
ಪಾತ್ರೆಗಳು ಸುಟ್ಟಿದ್ದರೆ (burnt utensils) ನೀವು ಈನೋ ಬಳಸಬಹುದು. ಅವುಗಳನ್ನು ಸ್ವಚ್ಛಗೊಳಿಸಲು, ನೀವು ಒಂದು ಟಬ್ ನಲ್ಲಿ ಬಿಸಿ ನೀರನ್ನು ಹಾಕಿ. ಅದಕ್ಕೆ 3 ರಿಂದ 4 ಪ್ಯಾಕೆಟ್ ಈನೋವನ್ನು ಸೇರಿಸಿ. ಸುಟ್ಟ ಪಾತ್ರೆಗಳನ್ನು ಈ ಟಬ್ ನಲ್ಲಿ ಹಾಕಿ ಮತ್ತು ರಾತ್ರಿಯಿಡೀ ಹಾಗೆ ಬಿಡಿ. ಬೆಳಿಗ್ಗೆ ನಿಂಬೆ ಮತ್ತು ಉಪ್ಪಿನ ಸಹಾಯದಿಂದ ಈ ಪಾತ್ರೆಗಳನ್ನು ಉಜ್ಜಿ. ನಿಮ್ಮ ಪಾತ್ರೆಗಳು ಹೊಸದರಂತೆ ಹೊಳೆಯುತ್ತವೆ.
 

ಶೂಗಳ ವಾಸನೆಯನ್ನು ನಿವಾರಿಸಲು 
ನಿಮ್ಮ ಬೂಟುಗಳು ಕೆಟ್ಟ ವಾಸನೆಯನ್ನು (smelly shoes) ಹೊಂದಿದ್ದರೆ, ಶೂಗಳ ಒಳಗೆ ಈನೋ ಪ್ಯಾಕೆಟ್ ಇರಿಸಿ ಮತ್ತು ರಾತ್ರಿಯಿಡೀ ಬಿಡಿ. ಈನೋದಲ್ಲಿರುವ ಪರಿಮಳವು ಶೂಗಳ ವಾಸನೆ ದೂರ ಮಾಡಲು ಸಹಾಯ ಮಾಡುತ್ತೆ. ಇದರಿಂದ ಶೂಗಳನ್ನು ಸಹ ನೀವು ಮರುದಿನ ಆರಾಮವಾಗಿ ಧರಿಸಬಹುದು..

ಕೈಯಿಂದ ಈರುಳ್ಳಿಯ ವಾಸನೆ ತೆಗೆದುಹಾಕುತ್ತೆ
ಈರುಳ್ಳಿಯನ್ನು ಕತ್ತರಿಸಿದ ನಂತರ, ಕೈಗಳಲ್ಲಿ ಈರುಳ್ಳಿಯ ವಾಸನೆ (onion smell) ಇದ್ದರೆ, ಸ್ವಲ್ಪ ಈನೋ ತೆಗೆದುಕೊಂಡು ಅದನ್ನು ನಿಮ್ಮ ಕೈಗಳಿಗೆ ಉಜ್ಜಿ ಮತ್ತು ನೀರಿನಿಂದ ಸ್ವಚ್ಛಗೊಳಿಸಿ. ಕೈಯಿಂದ ಈರುಳ್ಳಿಯ ಕಟು ವಾಸನೆ ಮಾಯವಾಗುತ್ತದೆ. 

ಪಾದಗಳನ್ನು ಸ್ವಚ್ಛಗೊಳಿಸಲು  
ಪಾದಗಳ ಚರ್ಮವನ್ನು ಎಕ್ಸ್ ಫೋಲಿಯೇಟ್ ಮಾಡಲು ಅನೇಕ ಆಯ್ಕೆಗಳಿವೆ, ಆದರೆ ಸುಲಭವಾದ ಮತ್ತು ಅಗ್ಗದ ಆಯ್ಕೆ ಈನೋ ಆಗಿದೆ. ಹೌದು, ನಿಮ್ಮ ಪಾದಗಳು ಸತ್ತ ಚರ್ಮ ನಿವಾರಿಸಲು ಅಥವಾ ಪಾದಗಳು ತುಂಬಾ ಕೊಳಕಾಗಿದ್ದರೆ, ನೀವು ಬಿಸಿ ನೀರಿನಲ್ಲಿ ಈನೋ ಹಾಕಿ ಮತ್ತು ಪಾದಗಳನ್ನು ಆ ನೀರಿನಲ್ಲಿ ಇರಿಸಿ. 15 ನಿಮಿಷಗಳ ನಂತರ,  ಪಾದಗಳನ್ನು ನೀರಿನಿಂದ ಹೊರತೆಗೆದಾಗ, ಅವು ಕ್ಲೀನ್ ಆಗಿರುತ್ತವೆ.

ಬಾಚಣಿಗೆಗಳನ್ನು ಸ್ವಚ್ಛಗೊಳಿಸಲು
ಬಾಚಣಿಗೆಯನ್ನು ಬಳಸುವಾಗ (clean combo), ಅವು ಕೊಳಕಾಗುತ್ತವೆ. ಅವುಗಳನ್ನು ಸ್ವಚ್ಛಗೊಳಿಸಲು ಈನೋ ಬಳಸಬಹುದು. ಇದಕ್ಕಾಗಿ, ಬಿಸಿ ನೀರಿನಲ್ಲಿ 2 ಪೌಚ್ ಈನೋ ಹಾಕಬೇಕು ಮತ್ತು ನಂತರ ಆ ನೀರಿನಲ್ಲಿ ಬಾಚಣಿಗೆಯನ್ನು ಹಾಕಬೇಕು. 15 ನಿಮಿಷಗಳ ನಂತರ, ನೀವು ಹಳೆಯ ಟೂತ್ ಬ್ರಷ್ ಸಹಾಯದಿಂದ ಬಾಚಣಿಗೆಯನ್ನು ಸ್ವಚ್ಛಗೊಳಿಸಬಹುದು.  

Latest Videos

click me!