ಹೊತ್ತು ಗೊತ್ತಿಲ್ಲದ ಹೊತ್ತಲ್ಲಿ ಟಾಯ್ಲೆಟ್‌ಗೆ ಹೋಗೋದು ಅನಾರೋಗ್ಯದ ಲಕ್ಷಣ!

First Published | Feb 4, 2023, 5:27 PM IST

ಆರೋಗ್ಯವಾಗಿರಲು ಮತ್ತು ರೋಗಗಳನ್ನು ದೂರವಿರಿಸಲು, ಜೀವನಶೈಲಿಯನ್ನು ಆರೋಗ್ಯಕರವಾಗಿಡೋದು ಬಹಳ ಮುಖ್ಯ. ಆದ್ದರಿಂದ, ತಜ್ಞರು ಎಂದಿಗೂ ಈ ತಪ್ಪುಗಳನ್ನು ಮಾಡಬಾರದು ಎಂದು ಶಿಫಾರಸು ಮಾಡುತ್ತಾರೆ. ಅವುಗಳ ಬಗ್ಗೆ ತಿಳಿಯೋಣ.

ಆರೋಗ್ಯವಾಗಿರಲು, ಸರಿಯಾದ ಜೀವನಶೈಲಿಯನ್ನು(Lifestyle) ಹೊಂದಿರೋದು ಬಹಳ ಮುಖ್ಯ. ಆದರೆ ಜೀವನಶೈಲಿ ಎಂದರೇನು ಎಂದು ನಿಮಗೆ ತಿಳಿದಿದ್ಯಾ? ವಾಸ್ತವವಾಗಿ, ನೀವು ಏನು ಮಾಡುತ್ತೀರಿ ಮತ್ತು ಪ್ರತಿದಿನ ನೀವು ಹೇಗೆ ಜೀವನ ನಡೆಸುತ್ತೀರಿ, ಅದು ನಿಮ್ಮ ಜೀವನಶೈಲಿಯಾಗುತ್ತೆ. ಇದರಲ್ಲಿ ತಿನ್ನುವುದು ಮತ್ತು ಕುಡಿಯುವುದು, ವ್ಯಾಯಾಮ, ಒತ್ತಡ ಎಲ್ಲವೂ ಸೇರಿರುತ್ತೆ.

ದೇಹವು ಏಕೆ ಅನಾರೋಗ್ಯಕ್ಕೆ(Unhealthy) ಒಳಗಾಗುತ್ತೆ ಗೊತ್ತಾ?
ನಿಮ್ಮ ಜೀವನಶೈಲಿ ಹದಗೆಡಲು ಪ್ರಾರಂಭಿಸಿದಾಗ, ದೇಹದ ಭಾಗಗಳ ಮೇಲೂ ಕೆಟ್ಟ ಪರಿಣಾಮ ಬೀರುತ್ತೆ. ಕ್ರಮೇಣ, ಹೃದಯ, ಶ್ವಾಸಕೋಶ, ಯಕೃತ್ತು, ಹೊಟ್ಟೆ ಇತ್ಯಾದಿ ದುರ್ಬಲವಾಗುತ್ತವೆ ಮತ್ತು ರೋಗಗಳು ಪ್ರಾರಂಭವಾಗುತ್ತವೆ. ಆದ್ದರಿಂದ, ಪ್ರತಿದಿನ ಮಾಡುವ ಈ ತಪ್ಪುಗಳನ್ನು ತಪ್ಪಿಸಲು ತಜ್ಞರು ಸಲಹೆ ನೀಡುತ್ತಾರೆ.

Latest Videos


ಹಸಿ ಸಲಾಡ್(Raw salad) ತಿನ್ನುವುದು
ಸಲಾಡ್ಸ್ ಕಚ್ಚಾ ತರಕಾರಿ ಮತ್ತು ಹಣ್ಣುಗಳನ್ನು ಹೊಂದಿರುತ್ತವೆ, ಇದು ತಂಪು ಮತ್ತು ಶುಷ್ಕತೆಗೆ ಕಾರಣವಾಗುತ್ತೆ. ಇದನ್ನು ಪ್ರತಿದಿನ ಸೇವಿಸೋದರಿಂದ, ಜೀರ್ಣಾಂಗ ವ್ಯವಸ್ಥೆಯ ಬಿಸಿ ತಣ್ಣಗಾಗಲು ಪ್ರಾರಂಭಿಸುತ್ತೆ. ನಂತರ ಇದು ವಾಯುಪ್ರಕೋಪ ಮತ್ತು ವಾಯು ದೋಷಗಳಿಗೆ ಕಾರಣವಾಗಬಹುದು. ಆದ್ದರಿಂದ, ಆರೋಗ್ಯಕರ ಕೊಬ್ಬು ಮತ್ತು ಮಸಾಲೆಗಳಲ್ಲಿ ಲಘುವಾಗಿ ಬೇಯಿಸಿದ ಸಲಾಡ್ಸ್ ಸೇವಿಸಿ.

ಖಾಲಿ ಹೊಟ್ಟೆಯಲ್ಲಿ ಚಹಾ ಮತ್ತು ಕಾಫಿ(Coffee) ಕುಡಿಯೋದು 
ಉಗುರು ಬೆಚ್ಚಗಿನ ನೀರು ಮೊದಲು ಖಾಲಿ ಹೊಟ್ಟೆ ಒಳಗೆ ಹೋಗಬೇಕು, ಇದು ದಿನವಿಡೀ ಜೀರ್ಣಕ್ರಿಯೆಯನ್ನು ಸರಿಯಾಗಿಡಲು ಸಹಾಯ ಮಾಡುತ್ತೆ. ಖಾಲಿ ಹೊಟ್ಟೆಯಲ್ಲಿ ನೀವು ಚಹಾ ಮತ್ತು ಕಾಫಿ ಕುಡಿದರೆ, ದೇಹದಲ್ಲಿ ಸಾಕಷ್ಟು ಜೀವಾಣುಗಳು ತುಂಬುತ್ತವೆ. ಅದು ಒಳ್ಳೇದಲ್ಲ. 

ಯಾವುದ್ಯಾವುದೋ ಸಮಯದಲ್ಲಿ ಟಾಯ್ಲೆಟ್(Toilet) ಮಾಡೋದು 
ದಿನದ ಯಾವುದೇ ಸಮಯದಲ್ಲಿ ನೀವು ಟಾಯ್ಲೆಟ್‌ಗೆ ಹೋಗ್ತೀರಾ? ಇದನ್ನು ಮಾಡೋದರಿಂದ, ದೇಹದಿಂದ ಕೊಳೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲಾಗೋದಿಲ್ಲ. ಬೆಳಗ್ಗೆ ಎದ್ದ ಎರಡು ಗಂಟೆಯೊಳಗೆ ಹೊಟ್ಟೆಯನ್ನು ಸ್ವಚ್ಛಗೊಳಿಸಬೇಕು. ಮಲಬದ್ಧತೆಯು ಈ ಅಭ್ಯಾಸದಿಂದ ದೂರವಿರುತ್ತೆ. ಹಾಗೆಯೇ, ಮಲವಿಸರ್ಜನೆಯ ಮೊದಲು ನೀರನ್ನು ಹೊರತುಪಡಿಸಿ ಏನನ್ನೂ ತಿನ್ನಬೇಡಿ ಅಥವಾ ಕುಡಿಯಬೇಡಿ.

ಸರಿಯಾಗಿ ಜಗಿಯದೇ(Chew) ತಿನ್ನುವುದು

ನಮಗೆ ಹೊಟ್ಟೆಯಲ್ಲಿ ಹಲ್ಲುಗಳಿಲ್ಲ, ಆದ್ದರಿಂದ ಆಹಾರವನ್ನು 40 ಬಾರಿ ಜಗಿಯೋದು ಒಳ್ಳೆಯದು. ಇದು ಸ್ವಲ್ಪ ಕಷ್ಟಕರವಾಗಿದ್ದರೂ, ಒಟ್ಟಾರೆಯಾಗಿ ಆಹಾರವನ್ನು ಚೆನ್ನಾಗಿ ಜಗಿಯಬೇಕು. ಈ ಕೆಲಸವನ್ನು 30 ದಿನಗಳವರೆಗೆ ಮಾಡೋದರಿಂದ ಪ್ರಯೋಜನವಾಗುತ್ತೆ. ಅಲ್ಲದೆ, ಆಹಾರವನ್ನು ತಿನ್ನುವಾಗ ಬೇರೆ ಯಾವುದೇ ಕೆಲಸವನ್ನು ಮಾಡಬಾರದು.
 

ಏನನ್ನಾದರೂ ತಿಂದ ತಕ್ಷಣ ಸ್ನಾನ(Bath) ಮಾಡೋದು

ನಾವು ಏನನ್ನಾದರೂ ತಿನ್ನುವಾಗ, ಅದು ದೇಹದಲ್ಲಿ ಶಾಖ ಉತ್ಪಾದಿಸುತ್ತೆ. ಈ ಶಾಖವು ವಿಶೇಷವಾಗಿ ಜೀರ್ಣಾಂಗ ಪ್ರದೇಶದಲ್ಲಿ ಹೆಚ್ಚಾಗುತ್ತೆ, ಅದರ ನಂತರ ತಕ್ಷಣ ಸ್ನಾನ ಮಾಡೋದರಿಂದ ಅದನ್ನು ಅಡ್ಡಿಪಡಿಸಬಹುದು ಮತ್ತು ದೇಹದಲ್ಲಿ ತೊಂದರೆಗಳನ್ನು ಉಂಟುಮಾಡಬಹುದು.

ಹಾಗಾಗಿ ಮೇಲೆ ಹೇಳಿದ ತಪ್ಪುಗಳನ್ನು ತಪ್ಪಿಸಿದರೆ ನಿಮ್ಮ ದೇಹವನ್ನು ಅರೋಗ್ಯಕರವಾಗಿಡಲು ಸಾಧ್ಯ. ನೀವು ಒಮ್ಮೆ ಟ್ರೈ ಮಾಡಿ ನೋಡಿ.    

click me!