ದೀರ್ಘ ಕಾಲ ಕುಳೀತೇ ಇರ್ತೀರಾ? ಹಾಗಿದ್ರೆ ಬುದ್ಧಿಮಾಂದ್ಯತೆ ಸಮಸ್ಯೆ ಕಾಡಬಹುದು!

First Published | Oct 4, 2023, 3:09 PM IST

ನೀವು ಸಹ ಕಂಪ್ಯೂಟರ್ ವರ್ಕ್, ಸೋಮಾರಿತನ ಎಂದು ಹೇಳುತ್ತಾ ದಿನಪೂರ್ತಿ ಒಂದೇ ಕಡೆ ಕುಳಿತು ಕೊಂಡಿರುತ್ತೀರಾ? ಹಾಗಿದ್ರೆ ನೀವು ಎಚ್ಚರ ವಹಿಸಲೇ ಬೇಕು. ಯಾಕಂದ್ರೆ ಹೆಚ್ಚು ಹೊತ್ತು ಕುಳಿತುಕೊಳ್ಳೊದ್ರಿಂದ ಬುದ್ಧಿಮಾಂದ್ಯತೆ ಉಂಟಾಗುತ್ತೆ ಜೋಪಾನ. 
 

 ದೀರ್ಘಕಾಲದವರೆಗೆ ಕುಳಿತುಕೊಳ್ಳುವುದು (Sitting for long time) ಬುದ್ಧಿಮಾಂದ್ಯತೆಯ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನವೊಂದು ಕಂಡುಹಿಡಿದಿದೆ. ಬುದ್ಧಿಮಾಂದ್ಯತೆ ಮಾತ್ರವಲ್ಲ, ಇದು ಇತರ ಅನೇಕ ಅನಾನುಕೂಲತೆಗಳನ್ನು ಸಹ ಉಂಟು ಮಾಡುತ್ತೆ. ಈ ಅಧ್ಯಯನವು ಹೆಚ್ಚು ಹೊತ್ತು ಕುಳಿತುಕೊಳ್ಳುವುದರಿಂದ ಏನೆಲ್ಲಾ ಸಮಸ್ಯೆಯಾಗಲಿದೆ ಅನ್ನೋದನ್ನು ತಿಳಿಸಿದೆ. ಅವುಗಳ ಬಗ್ಗೆ ತಿಳಿಯೋಣ. 

ಅಧ್ಯಯನದ ಪ್ರಕಾರ, 10 ಗಂಟೆಗಳಿಗಿಂತ ಹೆಚ್ಚು ಕಾಲ ಕುಳಿತುಕೊಳ್ಳುವುದು ಬುದ್ಧಿಮಾಂದ್ಯತೆಯ (dementia) ಅಪಾಯ ಹೆಚ್ಚಿಸುತ್ತದೆ. ಅಧ್ಯಯನವು 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಜನರನ್ನು ಒಳಗೊಂಡಿತ್ತು ಮತ್ತು 10 ಗಂಟೆಗಳಿಗಿಂತ ಕಡಿಮೆ ಕುಳಿತುಕೊಳ್ಳುವ ಜನರು ದೀರ್ಘಕಾಲದವರೆಗೆ ಕುಳಿತುಕೊಳ್ಳುವವರಿಗಿಂತ ಬುದ್ಧಿಮಾಂದ್ಯತೆಯ ಅಪಾಯ ಕಡಿಮೆ ಹೊಂದಿದ್ದಾರೆ ಎಂದು ಕಂಡುಹಿಡಿದಿದೆ.

Latest Videos


ವ್ಯಾಯಾಮದ ನಂತರವೂ ದೀರ್ಘಕಾಲ ಕುಳಿತುಕೊಳ್ಳುವ ಜನರು ಅದರಿಂದ ಹೆಚ್ಚಿನ ಪ್ರಯೋಜನವನ್ನು ಪಡೆಯುವುದಿಲ್ಲ ಎಂದು ಈ ಅಧ್ಯಯನದಲ್ಲಿ ಕಂಡುಬಂದಿದೆ. ಬುದ್ಧಿಮಾಂದ್ಯತೆಯ ಅಪಾಯದ ಜೊತೆಗೆ ಹೆಚ್ಚು ಸಮಯ ಕುಳಿತುಕೊಳ್ಳುವುದರಿಂದ ಮತ್ತೆ ಏನೆಲ್ಲಾ ಸಮಸ್ಯೆ ಉಂಟಾಗುತ್ತೆ ಅನ್ನೋದನ್ನು ತಿಳಿಯೋಣ. 
 

ದೇಹದ ನೋವು (body pain)

ಹೆಚ್ಚು ಹೊತ್ತು ಕುಳಿತುಕೊಳ್ಳುವುದು ನಿಮ್ಮ ಕುತ್ತಿಗೆ, ಬೆನ್ನು, ಭುಜಗಳು ಮತ್ತು ಸೊಂಟದಲ್ಲಿ ನೋವು ಕಾಣಿಸಿಕೊಳ್ಳಬಹುದು. ಇದನ್ನು ಸಮಯಕ್ಕೆ ಸರಿಯಾಗಿ ನೋಡಿಕೊಳ್ಳದಿದ್ದರೆ, ಈ ನೋವು ದೀರ್ಘಕಾಲದವರೆಗೆ ಇರುತ್ತದೆ. ನೀವು ಕಂಪ್ಯೂಟರ್ ನಲ್ಲಿ ಕುಳಿತು ಕೆಲಸ ಮಾಡಿದರೆ, ನಿಮ್ಮ ಭಂಗಿಯು ಹಾನಿಗೊಳಗಾಗುವ ಸಾಧ್ಯತೆಯಿದೆ.

ತೂಕ ಹೆಚ್ಚಳ (weight gain)
ದೀರ್ಘಕಾಲ ಕುಳಿತುಕೊಳ್ಳುವುದು ನಿಮ್ಮ ತೂಕವನ್ನು ಹೆಚ್ಚಿಸುತ್ತದೆ. ಕಡಿಮೆ ದೈಹಿಕ ಚಲನೆಯಿಂದಾಗಿ, ನೀವು ಬೊಜ್ಜಿಗೆ ಬಲಿಯಾಗಬಹುದು. ದೀರ್ಘಕಾಲದವರೆಗೆ ಕುಳಿತುಕೊಳ್ಳುವುದು ಹೊಟ್ಟೆ ಮತ್ತು ಸೊಂಟದಲ್ಲಿ ಹೆಚ್ಚಿನ ಕೊಬ್ಬನ್ನು ಸಂಗ್ರಹಿಸುವ ಸಾಧ್ಯತೆಯಿದೆ.
 

ಹೃದ್ರೋಗ (Heart Problem)
ದೀರ್ಘಕಾಲದವರೆಗೆ ಕುಳಿತುಕೊಳ್ಳುವುದರಿಂದ ದೇಹದಲ್ಲಿನ ಕೊಬ್ಬು ಬರ್ನ್ ಆಗೋದು ಕಡಿಮೆ ಇದು ನಿಮ್ಮ ಅಪಧಮನಿಯಲ್ಲಿ ಕೊಬ್ಬು ಸಂಗ್ರಹವಾಗಲು ಕಾರಣವಾಗುತ್ತದೆ. ಈ ಕಾರಣಕ್ಕಾಗಿ, ಹೃದಯ ರಕ್ತ ನಾಳದ ಕಾಯಿಲೆ ಬರುವ ಸಾಧ್ಯತೆಗಳು ಹೆಚ್ಚಾಗುತ್ತವೆ.

ಮಧುಮೇಹ (Diabetes)
ಜೀವನಶೈಲಿ ಸಕ್ರಿಯವಾಗಿಲ್ಲದ ಜನರ ದೇಹ ಹೆಚ್ಚು ಇನ್ಸುಲಿನ್ (Insuling) ಪ್ರತಿರೋಧವನ್ನು ಹೊಂದಿರುತ್ತದೆ. ಇದು ಮಧುಮೇಹಕ್ಕೆ ಬಹಳ ದೊಡ್ಡ ಕಾರಣವಾಗಿದೆ. ಆದ್ದರಿಂದ, ದೀರ್ಘಕಾಲ ಕುಳಿತುಕೊಳ್ಳುವುದು ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ.

ಮಾನಸಿಕ ಆರೋಗ್ಯ (Mental Problem)
ವ್ಯಾಯಾಮವು ನಮ್ಮ ದೈಹಿಕತೆಗೆ ಮಾತ್ರವಲ್ಲ, ಮಾನಸಿಕ ಆರೋಗ್ಯಕ್ಕೂ ಹೆಚ್ಚಿನ ಪ್ರಯೋಜನ ನೀಡುತ್ತೆ. ನಮ್ಮ ದೇಹವು ಸಕ್ರಿಯವಾಗಿರುವಾಗ, ನಮ್ಮ ದೇಹದಲ್ಲಿ ಸಂತೋಷದ ಹಾರ್ಮೋನುಗಳು ಉತ್ಪತ್ತಿಯಾಗುತ್ತವೆ, ಅವು ಒತ್ತಡ (Stress) ಮತ್ತು ಆತಂಕದ (Anxiety) ವಿರುದ್ಧ ಪರಿಣಾಮಕಾರಿಯಾಗಿರುತ್ತವೆ, ಆದರೆ ನಿರಂತರ ಕುಳಿತು ಕೊಳ್ಳುವ ಅಭ್ಯಾಸವು ಬುದ್ಧಿಮಾಂದ್ಯತೆ ಸಮಸ್ಯೆಗೆ ಬಲಿಯಾಗುವಂತೆ ಮಾಡುತ್ತೆ. ನಾವು ಕುಳಿತಾಗ ಈ ಹಾರ್ಮೋನುಗಳು ಬಿಡುಗಡೆಯಾಗುವುದಿಲ್ಲ. ಈ ಕಾರಣಕ್ಕಾಗಿ, ನಮ್ಮ ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
 

ಸಮಸ್ಯೆಗೆ ಪರಿಹಾರವೇನು?
ಕೆಲಸದ ಕಾರಣದಿಂದಾಗಿ ನೀವು ದೀರ್ಘಕಾಲ ಕುಳಿತುಕೊಳ್ಳಬೇಕಾದರೆ, ಮಧ್ಯದಲ್ಲಿ ಸಣ್ಣ ವಿರಾಮ ತೆಗೆದುಕೊಳ್ಳಲು ಪ್ರಯತ್ನಿಸಿ ಮತ್ತು ಫೋನ್ ಕರೆಯಲ್ಲಿ ಮಾತನಾಡುವಾಗ ಸ್ವಲ್ಪ ನಡೆಯಿರಿ.
ಪ್ರತಿದಿನ ವ್ಯಾಯಾಮ ಮಾಡಿ. ಇದು ತೂಕ ಹೆಚ್ಚಳ, ಹೃದ್ರೋಗಗಳು, ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ.
ರಜಾ ದಿನಗಳಲ್ಲಿ ಟಿವಿ ಅಥವಾ ಕಂಪ್ಯೂಟರ್ ಮುಂದೆ ದೀರ್ಘಕಾಲ ಕುಳಿತುಕೊಳ್ಳುವ ಬದಲು, ದೈಹಿಕ ಚಟುವಟಿಕೆಯನ್ನು (physical activities) ಮಾಡಿ.

click me!