ಖಾಲಿ ಹೊಟ್ಟೇಲಿ ನೀರು ಕುಡಿಯುವುದರಿಂದ ಇಷ್ಟೆಲ್ಲಾ ಪ್ರಯೋಜನಗಳಿವೆಯಾ?

Suvarna News   | Asianet News
Published : Mar 16, 2021, 05:52 PM IST

ನೀರು ದೇಹದ ಆರೋಗ್ಯ ಮತ್ತು ಕಾರ್ಯನಿರ್ವಹಣೆಗೆ ಅತ್ಯಗತ್ಯವಾಗಿದ್ದು, ದಿನವಿಡೀ ಸಾಕಷ್ಟು ನೀರನ್ನು ಸೇವಿಸದೇ ಉತ್ತಮ ಅರೋಗ್ಯ ಪಡೆಯಲು ಸಾಧ್ಯವಿಲ್ಲ. ಪ್ರತಿದಿನ ಮುಂಜಾನೆಯನ್ನು ನೀರಿನೊಂದಿಗೆ ಪ್ರಾರಂಭಿಸಬೇಕು, ಇದು ಯಾವುದೇ ಆರೋಗ್ಯಕರ ದಿನಚರಿಯ ಒಂದು ಅತ್ಯಗತ್ಯ ಭಾಗ. ಬಾಯಾರಿಕೆಯನ್ನು ತಣಿಸಲು ನೀರು ಅತ್ಯುತ್ತಮ ಪಾನೀಯವಾಗಿದ್ದು, ಖಾಲಿ ಹೊಟ್ಟೆಯಲ್ಲಿ ಇದನ್ನು ಕುಡಿಯುವುದರಿಂದ ದೇಹದ ಬಹುತೇಕ ಎಲ್ಲಾ ಸಮಸ್ಯೆಗಳನ್ನು ಗುಣಪಡಿಸಬಹುದು. ನೀರು ಆರೋಗ್ಯವನ್ನು ಉತ್ತಮಗೊಳಿಸಲು ಕೆಲವು ಗುಣಗಳನ್ನು ಹೊಂದಿದೆ. ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ಆಗುವ ಹಲವಾರು ಪ್ರಯೋಜನಗಳು ಇಲ್ಲಿವೆ.

PREV
112
ಖಾಲಿ ಹೊಟ್ಟೇಲಿ ನೀರು ಕುಡಿಯುವುದರಿಂದ ಇಷ್ಟೆಲ್ಲಾ ಪ್ರಯೋಜನಗಳಿವೆಯಾ?

ಚಯಾಪಚಯ ಕ್ರಿಯೆಯನ್ನು ವೇಗಮಾಡುತ್ತದೆ
ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದು ಆಹಾರ ಜೀರ್ಣವಾಗಲು ಉತ್ತೇಜಿಸುತ್ತದೆ. ಇದು ಚಯಾಪಚಯ ದರವನ್ನು ಸುಮಾರು 25% ರಷ್ಟು ಹೆಚ್ಚಿಸಲು ಸಹಾಯ ಮಾಡುತ್ತದೆ. ಚಯಾಪಚಯ ಕ್ರಿಯೆಯನ್ನು ವೇಗಗೊಳಿಸುವುದರಿಂದ ಆಹಾರವು ವೇಗವಾಗಿ ಜೀರ್ಣವಾಗುತ್ತದೆ, ಮತ್ತು ಇದು ದೀರ್ಘಾವಧಿಯಲ್ಲಿ ತೂಕ ಕಳೆದುಕೊಳ್ಳಲು ನೆರವಾಗುತ್ತದೆ. ಉತ್ತಮ ಫಲಿತಾಂಶಕ್ಕಾಗಿ ದಿನಕ್ಕೆ ಕನಿಷ್ಠ ನಾಲ್ಕು ಲೀಟರ್ ನೀರು ಕುಡಿಯುವುದು ಒಳ್ಳೆಯದು.

212

ಮೆದುಳಿಗೆ ಇಂಧನದಂತೆ ಕೆಲಸ ಮಾಡುತ್ತದೆ
ಮೆದುಳಿನಲ್ಲಿ ಸುಮಾರು 75% ನೀರಿದೆ.  ಮೆದುಳಿಗೆ ಇಂಧನವನ್ನು ತುಂಬುವುದು ಮತ್ತು ಅದನ್ನು ಆರೋಗ್ಯಕರವಾಗಿ ಇಡುವುದು ಎಷ್ಟು ಮುಖ್ಯವೆಂದು ತಿಳಿದಿರಬೇಕು. ಹೈಡ್ರೇಟ್ ಮಾಡದಿದ್ದರೆ ಮೆದುಳು ಅದರ ಸೂಕ್ತ ಮಟ್ಟದಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ.

312

ಹಸಿವು ಹೆಚ್ಚಿಸುತ್ತದೆ
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ದೇಹದಲ್ಲಿರುವ ಎಲ್ಲಾ ತ್ಯಾಜ್ಯಗಳನ್ನು ಹೊರಹಾಕಿ ಹಸಿವೆಯ ಅನುಭವವಾಗುತ್ತದೆ.

412

ಮೈಗ್ರೇನ್ ತಡೆಯುತ್ತದೆ
ಪದೇ ಪದೇ ತಲೆನೋವು ಮತ್ತು ಮೈಗ್ರೇನ್‌ನಿಂದ ಜನರು ತೊಂದರೆಗೊಳಗಾಗಲು ಪ್ರಮುಖ ಕಾರಣವೆಂದರೆ ದೇಹದಲ್ಲಿ ನೀರಿನ ಕೊರತೆ. ನಿರ್ಜಲೀಕರಣವೇ ತಲೆನೋವಿನ ಮೂಲ ಕಾರಣ, ಆಗಾಗ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದು, ತಲೆನೋವಿನಿಂದ ಸಹಜವಾಗಿ ಮುಕ್ತಿ ಪಡೆಯಲು ನೆರವಾಗುತ್ತದೆ. ಇಷ್ಟೇ ಅಲ್ಲ, ಸಾಕಷ್ಟು ನೀರು ಕುಡಿಯುವುದರಿಂದ ಬಾಯಿ ಮತ್ತು ದಂತದ ಸಮಸ್ಯೆಗಳನ್ನು ದೂರವಿಡಲು ಸಹಾಯವಾಗುತ್ತದೆ.

512

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ಒಟ್ಟಾರೆ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ನೀರು ಅತ್ಯಗತ್ಯ ಎಂಬ ಸತ್ಯದ ಅರಿವು ನಮಗಿದೆ. ದೇಹದಲ್ಲಿ ದ್ರವದ ಸಮತೋಲನವನ್ನು ಕಾಯ್ದುಕೊಳ್ಳಲು ನೀರಿನ ಅವಶ್ಯಕತೆ ಇದೆ ಎಂದು ತಿಳಿದುಕೊಳ್ಳಬೇಕು. ಖಾಲಿ ಹೊಟ್ಟೆಯಲ್ಲಿ ನಿಯಮಿತವಾಗಿ ನೀರು ಕುಡಿಯುವ ಅಭ್ಯಾಸ ರೂಢಿಸಿಕೊಳ್ಳುವುದು. ಇದರಿಂದ ರೋಗ ನಿರೋಧಕ ವ್ಯವಸ್ಥೆಗೆ ಪ್ರಯೋಜನಕಾರಿಯಾಗಿದೆ. ಇದು ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

612

ತೂಕ ಇಳಿಸಲು ಸಹಾಯ ಮಾಡುತ್ತದೆ
ನೀರಿನಲ್ಲಿ ಯಾವುದೇ ಕ್ಯಾಲರಿಗಳಿಲ್ಲ, ಆದ್ದರಿಂದ ಆಹಾರ ಕ್ರಮದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯುವುದು ಅಗತ್ಯ, ಏಕೆಂದರೆ ಇದು ತೂಕ ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಅಲ್ಲದೇ ಇದು ಎಲ್ಲಾ ವಿಷಕಾರಿ ಅಂಶಗಳನ್ನೂ ಹೊರಹಾಕಿ ಆಮ್ಲೀಯತೆಯನ್ನು ಕಡಿಮೆ ಮಾಡುತ್ತದೆ. ನೀರು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಿದಂತೆ, ದೇಹವು ಸಹ ವೇಗವಾಗಿ ಕ್ಯಾಲೋರಿಗಳನ್ನು ದಹಿಸುತ್ತದೆ. ಇದು ತೂಕ ಇಳಿಸಲು ಇರುವ ಅತ್ಯುತ್ತಮ ತಂತ್ರಗಳಲ್ಲಿ ಒಂದಾಗಿದೆ.

712

ಕರುಳುಗಳನ್ನು ಸ್ವಚ್ಛಮಾಡುತ್ತದೆ
ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ಜೀರ್ಣಕ್ರಿಯೆಯನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ. ಹೆಚ್ಚು ನೀರು ಕುಡಿದಾಗ, ಕರುಳಿನಲ್ಲಿರುವ ಕಲ್ಮಶಗಳನ್ನು ಹೊರಹಾಕಲು ಸಹಾಯವಾಗುತ್ತದೆ. ಈ ಅಭ್ಯಾಸವನ್ನು ನಿತ್ಯವೂ ಅಭ್ಯಾಸ ಮಾಡುವುದರಿಂದ ನಿಯಮಿತವಾಗಿ ಮಲವಿಸರ್ಜನೆಗೆ ಸಹಾಯ ಮಾಡುತ್ತದೆ ಮತ್ತು  ದೇಹದಿಂದ ನಿಯಮಿತವಾಗಿ ತ್ಯಾಜ್ಯ ಹೊರಹಾಕಲು ಸಹಾಯ ಮಾಡುತ್ತದೆ.

812

ಕಿಡ್ನಿ ಕಲ್ಲುಗಳನ್ನು ತಡೆಯುತ್ತದೆ
ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ಕಿಡ್ನಿ ಕಲ್ಲುಗಳು ಉತ್ಪತ್ತಿಯಾಗುವುದನ್ನು ತಡೆಯುತ್ತದೆ. ಇದು ಮೂತ್ರಕೋಶದ ಸೋಂಕುಗಳನ್ನು ತಡೆಯುತ್ತದೆ. ನೀರು ಆಮ್ಲಗಳನ್ನು ದುರ್ಬಲಗೊಳಿಸಿ ಮೂತ್ರಪಿಂಡದಲ್ಲಿ ಕಲ್ಲುಗಳು ಉತ್ಪತ್ತಿಯಾಗುವುದನ್ನು ತಡೆಯುತ್ತದೆ.

912

ದೇಹದ ದ್ರವಗಳನ್ನು ಸಮತೋಲನಗೊಳಿಸಿ
ಬೆಳಗ್ಗೆ ಹೆಚ್ಚು ನೀರು ಕುಡಿಯುವುದರಿಂದ  ದೇಹವು  ದೇಹದ ದ್ರವಗಳನ್ನು ದಿನವಿಡೀ ಸರಿಯಾಗಿ ಸಮತೋಲನದಲ್ಲಿಟ್ಟುಕೊಳ್ಳುವುದು. ದೇಹದ ದ್ರವಗಳ ಸರಿಯಾದ ಸಮತೋಲನದಿಂದ ಅಂಗಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತವೆ.  

1012

ಚರ್ಮವನ್ನು ಸುಧಾರಿಸುತ್ತದೆ
ನಿರ್ಜಲೀಕರಣದಿಂದ ಹಲವಾರು ಸಮಸ್ಯೆಗಳು ಉಂಟಾಗುತ್ತವೆ, ಅವುಗಳಲ್ಲಿ ಚರ್ಮದ ಸಮಸ್ಯೆಯೂ ಒಂದು. ನಿರ್ಜಲೀಕರಣವು ಅಕಾಲಿಕ ಸುಕ್ಕುಗಳನ್ನು ಉಂಟುಮಾಡುತ್ತದೆ ಮತ್ತು ಚರ್ಮವನ್ನು ರಂಧ್ರಮಯಗೊಳಿಸುತ್ತದೆ. ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ರಕ್ತ ಸಂಚಾರ ನಿಯಂತ್ರಿಸಿ, ಚರ್ಮದ ಗುಣಮಟ್ಟವನ್ನು ಸುಧಾರಿಸುತ್ತದೆ. ಇದು ದೇಹದಿಂದ ವಿಷಕಾರಿ ಅಂಶವನ್ನು ಹೊರಹಾಕಲು ಮತ್ತು ಚರ್ಮವು ಕಾಂತಿಯನ್ನು ಪಡೆಯಲು ಸಹಾಯ ಮಾಡುತ್ತದೆ.

1112

ದೇಹದಿಂದ ವಿಷಗಳನ್ನು ಹೊರಹಾಕುವಿಕೆ
ಮೂತ್ರ ವಿಸರ್ಜನೆ ಮಾಡಿದಾಗಲೆಲ್ಲ, ದ್ರವರೂಪದಲ್ಲಿರುವ ವಿಷಗಳನ್ನು ಹೊರಹಾಕುತ್ತೀರಿ. ಹೆಚ್ಚು ಹೆಚ್ಚು ನೀರು ಕುಡಿದಷ್ಟೂ ಬಾತ್ ರೂಮ್ ಗೆ ಹೆಚ್ಚುಸಲ ಹೋಗಬೇಕಾಗುತ್ತದೆ. ಈ ರೀತಿಯಲ್ಲಿ, ದೇಹವನ್ನು ಸ್ವಚ್ಛಗೊಳಿಸಿ, ನಿರ್ವಿಷಗೊಳಿಸುತ್ತೀರಿ. 

1212

ದೇಹದ ನೈಸರ್ಗಿಕ ತ್ಯಾಜ್ಯವನ್ನು ತೆಗೆದುಹಾಕಿ
ಬೆಳಗ್ಗೆ ಎದ್ದ ತಕ್ಷಣ  ನೀರು ಕುಡಿಯುವುದರಿಂದ ದೇಹದಿಂದ ಹೊರಹಾಕಲ್ಪಡುವ ತ್ಯಾಜ್ಯಗಳು ನಿವಾರಣೆಯಾಗುತ್ತದೆ. ಎಚ್ಚರವಾದ ತಕ್ಷಣ ಮೂತ್ರ ವಿಸರ್ಜನೆ ಮಾಡುವ ಮೂಲಕ, ಮೂತ್ರಪಿಂಡಗಳು ದೇಹದಲ್ಲಿರುವ ತ್ಯಾಜ್ಯವನ್ನು ತೊಡೆದು ಹಾಕುತ್ತವೆ. ಮಲಗುವ ಮುನ್ನ ನೀರು ಕುಡಿಯುವುದರಿಂದ ಏಳುತ್ತಿದ್ದಂತೆ ದೇಹವು ತ್ಯಾಜ್ಯಗಳನ್ನು ತೆಗೆದು ಹಾಕುತ್ತದೆ. 
 
click me!

Recommended Stories