ಹೃದಯ, ಮೂಳೆ ಸ್ಟ್ರಾಂಗ್ ಆಗಬೇಕು ಅಂದ್ರೆ ಬ್ರೇಕ್ ಫಾಸ್ಟ್ ಗೆ ಇವನ್ನ ತಿನ್ನಿ

Published : Oct 05, 2023, 04:38 PM ISTUpdated : Oct 05, 2023, 05:42 PM IST

ಉತ್ತಮ ಆರೋಗ್ಯಕ್ಕೆ ಬೆಳಗಿನ ಉಪಾಹಾರ ತುಂಬಾ ಮುಖ್ಯ. ಬೆಳಗಿನ ಉಪಾಹಾರವನ್ನು ಸೇವಿಸದಿರುವುದು ನಿಮಗೆ ದಿನವಿಡೀ ಆಯಾಸವನ್ನುಂಟು ಮಾಡುತ್ತದೆ. ಬೆಳಗಿನ ಉಪಾಹಾರವು ಪ್ರೋಟೀನ್ ಭರಿತ ವಸ್ತುಗಳನ್ನು ಒಳಗೊಂಡಿರಬೇಕು, ಅದು ನಿಮಗೆ ದಿನವಿಡೀ ಬೇಕಾದ ಶಕ್ತಿ ನೀಡುತ್ತೆ. ಇದಕ್ಕಾಗಿ, ನೀವು ಬೆಳಿಗ್ಗೆ ಉಪಾಹಾರದಲ್ಲಿ ಮೊಟ್ಟೆ (Egg), ಬ್ರೆಡ್ (Bread), ಹಸಿರು ತರಕಾರಿಗಳು (Green Leaves) ಇತ್ಯಾದಿಗಳನ್ನು ಆಹಾರದಲ್ಲಿ ಸೇರಿಸಬಹುದು.  

PREV
18
ಹೃದಯ, ಮೂಳೆ ಸ್ಟ್ರಾಂಗ್ ಆಗಬೇಕು ಅಂದ್ರೆ ಬ್ರೇಕ್ ಫಾಸ್ಟ್ ಗೆ ಇವನ್ನ ತಿನ್ನಿ

ಬೆಳಗಿನ ಉಪಾಹಾರವು (morning breakfast) ದಿನದ ಪ್ರಮುಖ ಆಹಾರ. ಉಪಾಹಾರ ಹೆವಿಯಾಗಿರಬೇಕು. ಇದರಿಂದ ವ್ಯಕ್ತಿಯು ದಿನವಿಡೀ ಶಕ್ತಿಯಿಂದ ತುಂಬಿರುತ್ತದೆ. ಬೆಳಗಿನ ಉಪಾಹಾರ ಆರೋಗ್ಯಕರವಾಗಿರಬೇಕು ಇದರಿಂದ ದೇಹವು ಸಂಪೂರ್ಣ ಪೌಷ್ಠಿಕಾಂಶವನ್ನು ಪಡೆಯಬಹುದು. ಬೆಳಗಿನ ನಡಿಗೆ ನಂತರ ಉಪಾಹಾರ ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ನಡಿಗೆ ನಂತರ ಆರೋಗ್ಯಕರ ಮತ್ತು ಪೌಷ್ಟಿಕ ಉಪಾಹಾರ ಸೇವಿಸುವುದು ಹೃದಯ ಮತ್ತು ಮೂಳೆಗಳನ್ನು ಬಲಪಡಿಸುತ್ತದೆ. ಹಾಗಾಗಿ ನಿಮ್ಮ ಬೆಳಗ್ಗಿನ ಉಪಹಾರದಲ್ಲಿ ಏನೆಲ್ಲಾ ಸೇವಿಸಬಹುದು ಅನ್ನೊದನ್ನು ನೋಡೋಣ. 

28

ಮೊಟ್ಟೆಗಳು (Eggs)
ಮೊಟ್ಟೆಗಳಲ್ಲಿ ಪ್ರೋಟೀನ್ ಮತ್ತು ವಿಟಮಿನ್-ಡಿ (Vitamin D) ಸಮೃದ್ಧವಾಗಿದೆ, ಇದು ದೇಹದಲ್ಲಿ ಕ್ಯಾಲ್ಸಿಯಂ ಹೀರಿಕೊಳ್ಳಲು ಅಗತ್ಯವೆಂದು ಪರಿಗಣಿಸಲಾಗಿದೆ, ಇದು ಮೂಳೆಗಳನ್ನು ಬಲಪಡಿಸುತ್ತದೆ. ಉತ್ತಮ ಆರೋಗ್ಯಕ್ಕೆ ಸಹಾಯಕವಾಗಿದೆ. 

38

ಮಲ್ಟಿ ಗ್ರೇನ್ ಬ್ರೆಡ್ (Multigrain Bread)
ಬೆಳಗಿನ ಉಪಾಹಾರಕ್ಕಾಗಿ ನೀವು ಮಲ್ಟಿ ಗ್ರೇನ್ ಬ್ರೆಡ್ ಆಯ್ಕೆ ಮಾಡಬಹುದು. ಇದರಲ್ಲಿ ಹೇರಳವಾಗಿ ಫೈಬರ್ ಇರುತ್ತದೆ. ಇದು ಜೀರ್ಣಾಂಗ ವ್ಯವಸ್ಥೆಗೆ ಮತ್ತು ಹೃದಯಕ್ಕೆ ತುಂಬಾ ಪ್ರಯೋಜನಕಾರಿ.

48

ಹಸಿರು ತರಕಾರಿಗಳು (Green Vegetables)
ವಿಟಮಿನ್-ಕೆ ಪಾಲಕ್, ಕೇಲ್ ಇತ್ಯಾದಿಗಳಲ್ಲಿ ಹೇರಳವಾಗಿ ಕಂಡುಬರುತ್ತದೆ, ಇದು ಮೂಳೆಗಳನ್ನು ಬಲವಾಗಿರಿಸುತ್ತದೆ. ಇದರಲ್ಲಿ ಕ್ಯಾಲೊರಿ ತುಂಬಾ ಕಡಿಮೆ ಇದ್ದು, ತೂಕವನ್ನು ನಿಯಂತ್ರಣದಲ್ಲಿಡುತ್ತದೆ.

58

ಸಾಲ್ಮನ್ (Salmon)
ಸಾಲ್ಮನ್ ಮೀನುಗಳಲ್ಲಿ ಒಮೆಗಾ -3 ಕೊಬ್ಬಿನಾಮ್ಲಗಳು (omega 3 fatty acids) ಸಮೃದ್ಧವಾಗಿವೆ. ಇದು ದೇಹವನ್ನು ಹೃದ್ರೋಗದ (heart problem) ಅಪಾಯದಿಂದ ರಕ್ಷಿಸುತ್ತದೆ, ಜೊತೆಗೆ ಮೂಳೆಗಳು ಬಲವಾಗಿರುತ್ತವೆ.

68

ಬೆರ್ರಿ ಹಣ್ಣುಗಳು (Berry Fruits)
ಸ್ಟ್ರಾಬೆರಿ (Strawberry), ಬ್ಲೂಬೆರಿ ಇತ್ಯಾದಿಗಳು ಸಾಕಷ್ಟು ಪ್ರಮಾಣದ ಜೀವಸತ್ವಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ, ಇದು ಹೃದಯ ಮತ್ತು ಮೂಳೆಗಳನ್ನು (bones) ಆರೋಗ್ಯಕರವಾಗಿರಿಸುತ್ತದೆ.

78

ಬೀಜಗಳು (Nuts)
ಬಾದಾಮಿ, ವಾಲ್ನಟ್, ಚಿಯಾ ಬೀಜಗಳಂತಹ ಬೀಜಗಳನ್ನು ಆಹಾರದಲ್ಲಿ ಸೇರಿಸಿ, ಇದು ಉತ್ತಮ ಪ್ರಮಾಣದ ಫೈಬರ್, ಕೊಬ್ಬು ಮತ್ತು ಕ್ಯಾಲ್ಸಿಯಂ (Calcium) ಅನ್ನು ಹೊಂದಿರುತ್ತದೆ. ಇದರಿಂದಾಗಿ ಹೃದಯ (Heart) ಮತ್ತು ದೇಹವು ಆರೋಗ್ಯಕರವಾಗಿರುತ್ತದೆ.

88

ಆವಕಾಡೊ (Avacado)
ಮೊನೊಸ್ಯಾಚುರೇಟೆಡ್ ಕೊಬ್ಬುಗಳಿಂದ ಸಮೃದ್ಧವಾಗಿರುವ ಆವಕಾಡೊ ಹೃದಯವನ್ನು ಆರೋಗ್ಯಕರವಾಗಿರಿಸುತ್ತದೆ (Healthy heart), ಪೊಟ್ಯಾಸಿಯಮ್ ಸಹ ಇದರಲ್ಲಿ ಕಂಡುಬರುತ್ತದೆ, ಇದು ರಕ್ತದೊತ್ತಡವನ್ನು (controls blood pressure) ನಿಯಂತ್ರಣದಲ್ಲಿಡುತ್ತದೆ.

Read more Photos on
click me!

Recommended Stories