ಕೊರೋನಾದಿಂದಾಗಿ ಮನೆಯಲ್ಲೇ ಬಾಕಿಯಾಗಿರುವಾಗ ದೇಹದ ತೂಕ ಹೆಚ್ಚಾಗುವುದು ದೊಡ್ಡ ಸಮಸ್ಯೆಯಾಗಿ ಬದಲಾಗಿದೆ. ನೀವು ತೂಕ ಉಳಿಸಲು ಪ್ರಯತ್ನಿಸುತ್ತಿದ್ದರೆ ಈ ರೀತಿಯ ಆಹಾರ ಅಭ್ಯಾಸಗಳನ್ನು ಬಿಡಲೇಬೇಕು.
ತೂಕ ಇಳಿಸಿಕೊಳ್ಳುವ ಕಷ್ಟದ ನಡುವೆ ಹಲವು ಪ್ರಮುಖ ವಿಚಾರ ಗಮನದಲ್ಲಿರಿಸಬೇಕು. ಇಲ್ಲದಿದ್ದರೆ ನೀವು ಮಾಡುವ ವರ್ಕೌಟ್ ವೇಸ್ಟ್ ಆಗಬಹುದು
ಕೆಲವೊಂದು ಸಿಂಪಲ್ ವಿಚಾರವನ್ನು ನೀವು ಗಮನದಲ್ಲಿಟ್ಟುಕೊಂಡರೆ ನಿಮ್ಮ ತೂಕ ಇಳಿಸುವ ಕೆಲಸ ಸುಲಭವಾಗಬಹುದು. ನೀವೇನು ಮಾಡಬೇಕು..? ಇಲ್ಲಿ ಓದಿ
ದೇಹ ಡಿಹೈಡ್ರೇಟ್ ಆಗದಿರಲಿ: ಹೆಚ್ಚು ವರ್ಕೌಟ್ ಮಾಡದೆ ತೂಕ ಇಳಿಸಿಕೊಳ್ಳಲು ಇದು ಸುಲಭ ದಾರಿ. ಬೆಳಗ್ಗೆ ಖಾಲಿ ಹೊಟ್ಟೆಗೆ ನೀರು ಕುಡಿಯುವುದು ಉತ್ತಮ. ನಮ್ಮ ದೇಹದಲ್ಲಿ 75% ನೀರಿನಂಶದಿಂದ ಕೂಡಿದೆ. ನಿಮ್ಮ ತೂಕ ಇಳಿಸಲು ಜೀರಿಗೆ, ತುಳಸಿ, ಮೆಂತ್ಯ ಸಹಕಾರಿ. ಗಿಡಮೂಲಿಕೆಗಳು ಮತ್ತು ಮಸಾಲೆಗಳನ್ನು ನಿಮ್ಮ ನೀರಿಗೆ ಸೇರಿಸಬಹುದು.
ಹೆಚ್ಚಿನ ಪ್ರೋಟೀನ್‌ಗಳನ್ನು ಸೇವಿಸಿ: ರೋಗನಿರೋಧಕ ಶಕ್ತಿ ಹೆಚ್ಚಿಸಲು ನೈಸರ್ಗಿಕವಾಗಿ ತೂಕ ಕಡಿಮೆ ಮಾಡಲು ನೀವು ಬಯಸಿದರೆ, ಪ್ರೋಟೀನ್ ಭರಿತ ಆಹಾರ ಸೇವಿಸಬೇಕು. ಮಾಂಸ, ಮೀನು, ಮೊಟ್ಟೆ, ಬಾಳೆಹಣ್ಣು ಮತ್ತು ಧಾನ್ಯಗಳಲ್ಲಿ ಪ್ರೋಟೀನ್ ಸಮೃದ್ಧವಾಗಿದೆ.
ಫೈಬರ್ ಹೆಚ್ಚಿರುವ ಆಹಾರ ಸೇವಿಸಿ: ಆಹಾರದಲ್ಲಿ ಹೆಚ್ಚಿನ ಫೈಬರ್ ಇರಲಿ. ಆಹಾರದಲ್ಲಿ ನಾರಿನ ಅಂಶದ ಆಹಾರ ತೂಕ ಇಳಿಸುವ ಸಹಕಾರಿ. ಫೈಬರ್ ಭರಿತ ಆಹಾರಗಳಾದ ಓಟ್ಸ್ ಮತ್ತು ಬಾರ್ಲಿಯಲ್ಲಿ ಬೀಟಾ ಗ್ಲುಕನ್‌ಗಳಲ್ಲಿ ಸಮೃದ್ಧವಾಗಿದೆ, ಇದು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವ ಮೂಲಕ ಹೃದಯದ ಆರೋಗ್ಯಕ್ಕೆ ನೆರವಾಗುತ್ತದೆ.
ಕೆಫೀನ್ ನಿಮ್ಮ ಚಯಾಪಚಯ ಕ್ರಿಯೆಯನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ ಮತ್ತು ತೂಕವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ ಎಂಬ ಅಂಶವನ್ನು ಅಲ್ಲಗಳೆಯುವಂತಿಲ್ಲ, ಆದರೆ ಸಕ್ಕರೆ ಮತ್ತು ಹಾಲಿನ ಸೇರ್ಪಡೆ ಅಸ್ವಸ್ಥತೆಗೆ ಕಾರಣವಾಗಬಹುದು. ನಿಮ್ಮ ಸಾಮಾನ್ಯ ಚಹಾ ಕಾಫಿಯನ್ನು ಗಿಡಮೂಲಿಕೆ ಅಥವಾ ಡಿಕಾಫ್ ಆಯ್ಕೆ ಮಾಡಿ ಅಥವಾ ಕೋಲ್ಡ್ ಬ್ರೂ ಬಳಸಿ. ಪೂರ್ಣ ಕೊಬ್ಬಿನ ಹಾಲನ್ನು ಬಾದಾಮಿ ಅಥವಾ ಸೋಯಾ ಹಾಲಿನಂತಹ ಆರೋಗ್ಯಕರ ಪರ್ಯಾಯಗಳೊಂದಿಗೆ ಬಳಸಬಹುದು
ಸಕ್ಕರೆ ಸೇವನೆ ಕಡಿಮೆ ಮಾಡಿ: ಸಕ್ಕರೆ ಸೇವನೆ ನಿಯಂತ್ರಿಸಿ ನಿಮ್ಮ ತೂಕ ಇಳಿಸಬಹುದು. ಅನಾಯಾಸವಾಗಿ ತೂಕವನ್ನು ಕಳೆದುಕೊಳ್ಳಲು ಇದು ಅತ್ಯುತ್ತಮ ದಾರಿ. ಬೆಲ್ಲದಂತಹ ನೈಸರ್ಗಿಕ ಸಿಹಿ ಬಳಸಿ ಸಕ್ಕರೆ ಸೇವನೆ ಕಡಿಮೆ ಮಾಡಿ