ಸೊಂಪಾದ ರೇಷ್ಮೆಯಂತ ಕೂದಲು ಬೇಕಾ? ಹಾಗಿದ್ರೆ ಅನ್ನ ಬೇಯಿಸಿದ ನೀರನ್ನ ಸಿಂಕ್‌ಗೆ ಸುರಿಬೇಡಿ

First Published | Oct 23, 2024, 1:28 PM IST

ಅನ್ನ ಬೇಯಿಸಿದ ನೀರು ಅಥವಾ ತೆಳಿ, ಆರೋಗ್ಯ ಪ್ರಯೋಜನಗಳು ಒಂದೆರಡಲ್ಲ, ಹುಷಾರು ತಪ್ಪಿದಾಗ ಇದು ಗಂಜಿಯಂತೆ ಹೊಟ್ಟೆಯನ್ನು ತಂಪು ಮಾಡಿ ಶಕ್ತಿ ಕೊಡುತ್ತದೆ. ಆದರೆ ಈ ಅನ್ನ ಬೇಯಿಸಿದ ನೀರು ತಲೆಕೂದಲಿನ ಬೆಳವಣಿಗೆಗೂ  ಸಹಾಯ ಮಾಡುತ್ತದೆ ಎಂಬ ವಿಚಾರ ನಿಮಗೆ ಗೊತ್ತಾ? ಅಚ್ಚರಿ ಎನಿಸಿದರು ಇದು ನಿಜ ಅನ್ನ ಬೇಯಿಸಿದ ನೀರು ಹಾಗೂ ಅನ್ನವನ್ನು ಒಟ್ಟಿಗೆ ಸೇರಿಸಿ ಪ್ಯಾಕ್ ಮಾಡಿ ಹಾಕುವುದರಿಂದ ಕೂದಲು ದಟ್ಟವಾಗಿಯೂ, ಉದ್ದವಾಗಿಯೂ ಬೆಳೆಯುವುದಕ್ಕೆ ಸಹಾಯ ಮಾಡುತ್ತದ ಎನ್ನುತ್ತಾರೆ ತಜ್ಞರು.

ಈಗಿನ ಅಧುನಿಕ ಯುಗದಲ್ಲಿ ಮಕ್ಕಳು ದೊಡ್ಡವರು ಹರೆಯದ ಯುವಕರು ಎನ್ನದೇ ಎಲ್ಲರ ತಲೆ ಕೂದುಲುದುರಿ ಬೋಳಾಗುತ್ತಿದೆ. ಹೀಗಿರುವಾಗ ತಲೆಯಲ್ಲಿ ಇರುವ ಕೂದಲನ್ನು ಉಳಿಸಿಕೊಳ್ಳುವುದು ಹುಡುಗರ ಕನಸಾಗಿದ್ದರೆ, ಎಲ್ಲರ  ಆಕರ್ಷಿಸುವ ಸೊಂಪಾದ ಉದ್ದನೆಯ ಕೂದಲು ಬೇಕು ಎಂಬುದು ಹೆಂಗೆಳೆಯರ ಆಸೆ. ಇದಕ್ಕಾಗಿ ಏನೇನೋ ಪ್ರಯತ್ನ ಮಾಡ್ತಾರೆ. ಆದರೆ ನಮ್ಮ ಅಡುಗೆ ಮನೆಯಲ್ಲೇ ಇರುವ ಈ ಅನ್ನ ಬೇಯಿಸಿದ ನೀರಿನಿಂದ ಕೂದಲಿಗೆ ಏನೆಲ್ಲಾ ಪ್ರಯೋಜನ ಇದೆ ಎಂಬುದು ತುಂಬಾ ಜನರಿಗೆ ಗೊತ್ತಿಲ್ಲ,

ಕೆಮಿಕಲ್ ಪ್ರಾಡಕ್ಟ್ಸ್ ಜಾಸ್ತಿ ಉಪಯೋಗಿಸಿದ್ರೆ ಕೂದಲು ಹಾಳಾಗುತ್ತೆ. ಕೂದಲು ಉದುರುತ್ತೆ. ಕೂದಲು ಒಣಗುತ್ತೆ. ಹಾಗಾಗಿ ಕೂದಲಿಗೆ ನೈಸರ್ಗಿಕ ಪದ್ಧತಿ ಫಾಲೋ ಮಾಡೋದು ಒಳ್ಳೆಯದು  ತಜ್ಞರ ಪ್ರಕಾರ, ಬೇಯಿಸಿದ ಅನ್ನ ಹಾಗೂ ಅದರ ನೀರು ಕೂದಲಿಗೆ ತುಂಬಾ ಒಳ್ಳೆಯದು. ಇದು ಕೂದಲಿಗೆ ಒಳ್ಳೆ ಪೋಷಣೆ ಕೊಟ್ಟು ಆರೋಗ್ಯವಾಗಿ ಇಡುತ್ತೆ. ಅನ್ನದ ನೀರನ್ನು ಕೂದಲಿಗೆ ಹಚ್ಚುವುದರಿಂದ ಕೂದಲನ್ನು ಉದ್ದವಾಗಿ, ದಟ್ಟವಾಗಿ, ಬಲವಾಗಿ ಬೆಳೆಸಬಹುದು. ಈಗ ಅನ್ನದ ನೀರಿನಿಂದ ಕೂದಲಿಗೆ ಏನೆಲ್ಲಾ ಲಾಭ ಇದೆ ಅಂತ ನೋಡೋಣ.

Tap to resize

ಕೂದಲು ಬೆಳೆಯೋಕೆ ಅನ್ನ ಹೇಗೆ ಉಪಯೋಗಿಸಬೇಕು?

ಬೇಕಾಗುವ ಸಾಮಗ್ರಿಗಳು: ಬೇಯಿಸಿದ ಅನ್ನ ಒಂದು ಕಪ್, ಮೆಂತ್ಯ, ಬೀಟ್ರೂಟ್ ಜ್ಯೂಸ್, ಫ್ರೆಶ್ ಅಲೋವೇರಾ ಜೆಲ್ (1 ದೊಡ್ಡ ಬಟ್ಟಲು) ಇವೆಲ್ಲವ್ನು ಒಟ್ಟಿಗೆ ಸೇರಿಸಿ ಕೂದಲಿಗೆ ಹಚ್ಚುವುದರಿಂದ ಕೂದಲು ಚೆನ್ನಾಗಿ ಬೆಳೆಯುತ್ತೆ. ಕೂದಲು ಉದುರುವುದು ಕಡಿಮೆಯಾಗುತ್ತೆ. ಕೂದಲು ಹೊಳೆಯುತ್ತೆ, ಸ್ಟ್ರಾಂಗ್ ಆಗುತ್ತದೆ.

ಕೂದಲು  ಉದ್ದ ಬೆಳೆಯೋಕೆ ಏನು ಮಾಡಬೇಕು?

ಮೆಂತ್ಯವನ್ನು ಮೊದಲ ದಿನ ರಾತ್ರಿ ನೀರಿನಲ್ಲಿ ನೆನೆಸಿಡಿ. ನೆನೆಸಿದ ಮೆಂತ್ಯ, ಬೇಯಿಸಿದ ಅನ್ನವನ್ನು ರುಬ್ಬಿ ಪೇಸ್ಟ್ ಮಾಡಿ. ಮೆಂತ್ಯ ನೆನೆಸಿದ ನೀರನ್ನೇ ರುಬ್ಬಲು ಉಪಯೋಗಿಸಿ. ಇದಕ್ಕೆ ಬೀಟ್ರೂಟ್ ಜ್ಯೂಸ್, ಅಲೋವೆರಾ ಜೆಲ್ ಮಿಕ್ಸ್ ಮಾಡಿ. ಎಲ್ಲವನ್ನೂ ಒಂದು ಬಟ್ಟಲಲ್ಲಿ ಹಾಕಿ ಮಿಕ್ಸ್ ಮಾಡಿ ಮೆಹಂದಿ ಹೇರ್ ಮಾಸ್ಕ್ ತರ ಹಚ್ಚಿ. ಒಂದು ಗಂಟೆ ಹಾಗೆ ಬಿಡಿ. ಸ್ವಚ್ಛ ನೀರಿನಿಂದ ತಲೆ ತೊಳೆಯಿರಿ. ಕಂಡೀಷನರ್ ಹಚ್ಚಿ. ಆಗಾಗ್ಗೆ ಹೀಗೆ ಮಾಡಿದ್ರೆ ಕೂದಲು ಚೆನ್ನಾಗಿ ಪೋಷಣೆ ಪಡೆದು ಉದ್ದವಾಗಿ ಬೆಳೆಯುತ್ತೆ. 

ಗಮನಿಸಿ - ಯಾವುದೇ ರೆಸಿಪಿ ಟ್ರೈ ಮಾಡೋ ಮುಂಚೆ ತಜ್ಞರ ಸಲಹೆ ಪಡೆಯಿರಿ. ಪ್ಯಾಚ್ ಟೆಸ್ಟ್ ಮಾಡಿ ನೋಡಿ.

ನೆಲ್ಲಿಕಾಯಿಯಿಂದ ಕೂದಲಿಗೆ ಆಗೋ ಲಾಭಗಳು

ನೆಲ್ಲಿಕಾಯಿ ಕೂದಲಿಗೆ ತುಂಬಾ ಒಳ್ಳೆಯದು. ಹೇರ್ ಆಯಿಲ್‌ನಲ್ಲಿ ಕೂಡ ಇದನ್ನು ಉಪಯೋಗಿಸಬಹುದು. ಈ ಹೇರ್ ಆಯಿಲ್ ಕೂದಲಿನ ಬುಡವನ್ನು ಬಲಪಡಿಸುತ್ತದೆ. ನೆಲ್ಲಿಕಾಯಿಯಲ್ಲಿ ಅಂಟಿ ಆಕ್ಸಿಡೆಂಟ್ಸ್ ತುಂಬಾ ಇರುತ್ತೆ. ಇದು ಕೂದಲು ಬೆಳ್ಳಗಾಗೋದು, ಉದುರುವುದನ್ನು ಕಡಿಮೆ ಮಾಡುತ್ತೆ. ಹೇರ್ ಫೋಲಿಕಲ್ಸ್‌ ಅನ್ನು ಬಲಪಡಿಸುತ್ತೆ. ನೆತ್ತಿಯಲ್ಲಿ ರಕ್ತ ಸಂಚಾರ ಹೆಚ್ಚಿಸಿ ಕೂದಲು ಚೆನ್ನಾಗಿ ಬೆಳೆಯೋಕೆ ಸಹಾಯ ಮಾಡುತ್ತೆ. ಕೂದಲಿನ ಆರೋಗ್ಯಕ್ಕೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆಲ್ಲಿಕಾಯಿಯನ್ನು ಜೇನುತುಪ್ಪದೊಂದಿಗೆ ಸೇವಿಸಬಹುದು. ನೆಲ್ಲಿಕಾಯಿ ಜ್ಯೂಸ್ ಕೂಡ ಕುಡಿಯಬಹುದು. ಇದು ಆರೋಗ್ಯಕ್ಕೂ ಒಳ್ಳೆಯದು, ಕೂದಲಿಗೆ ಒಳ್ಳೆಯದು.

Latest Videos

click me!