ಮನೆಯಲ್ಲಿ ಅಮೃತಬಳ್ಳಿ ಕಷಾಯ ಅಥವಾ ರಸವನ್ನು ಸೇವಿಸೋ ಮೂಲಕ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು, ಅದರ ಸರಿಯಾದ ವಿಧಾನ ಮತ್ತು ಸರಿಯಾದ ಪ್ರಮಾಣವನ್ನು ತಿಳಿದಿರಬೇಕು. ಅಮೃತಬಳ್ಳಿ ಕಷಾಯವನ್ನು ಮನೆಯಲ್ಲಿ ಮಾಡುವ ವಿಧಾನ ಮತ್ತು ಸರಿಯಾದ ಪ್ರಮಾಣವನ್ನು ತಿಳಿದುಕೊಳ್ಳೋಣ.

ಅಮೃತಬಳ್ಳಿ ಅನೇಕ ಗುಣಲಕ್ಷಣಗಳ ಭಂಡಾರವಾಗಿದ್ದು, ಗಿಲ್ಲೊಯಿನ್ ಎಂದು ಕರೆಯಲ್ಪಡುವ ಇದು ಗ್ಲುಕೋಸೈಡ್‌ಗಳು ಮತ್ತು ಟೆನೋಸ್ಪೊರಿನ್, ಪಾಲ್ಮರಿನ್ ಮತ್ತು ಟಿನೋಸ್ಪೊರಿಕ್‌ನಂತಹ ಆಮ್ಲಗಳಿಂದ ಸಮೃದ್ಧವಾಗಿದೆ.

ಅಮೃತಬಳ್ಳಿ ತಾಮ್ರ, ಕಬ್ಬಿಣ, ರಂಜಕ, ಸತು, ಕ್ಯಾಲ್ಸಿಯಂ, ಮೆಗ್ನೀಷಿಯಮ್ ಮತ್ತು ಅನೇಕ ಆಂಟಿ-ಆಕ್ಸಿಡೆಂಟ್, ಉರಿಯೂತ, ಕ್ಯಾನ್ಸರ್ ವಿರೋಧಿ ಗುಣಗಳಿಂದಲೂ ಕೂಡಿದೆ. ಈ ಎಲ್ಲಾ ಅಂಶಗಳು ಒಟ್ಟಾಗಿ ಎಲ್ಲಾ ರೀತಿಯ ಕಾಯಿಲೆಗಳಿಂದ ದೂರವಿರಿಸುತ್ತದೆ.

ಅಮೃತಬಳ್ಳಿಯನ್ನು ಹೇಗೆ ಸೇವಿಸಬೇಕು?
ರೋಗನಿರೋಧಕ ಶಕ್ತಿಯನ್ನು ಉಳಿಸಿಕೊಳ್ಳಲು ಜನರು ಅಮೃತಬಳ್ಳಿಯನ್ನು ಬಳಸುವುದರಲ್ಲಿ ನಿರತರಾಗಿದ್ದರೂ, ಹೆಚ್ಚಿನ ಜನರಿಗೆ ಅಮೃತಬಳ್ಳಿಯನ್ನು ಹೇಗೆ ಸೇವಿಸಬೇಕು ಮತ್ತು ಆರೋಗ್ಯಕ್ಕೆ ಎಷ್ಟು ಬೇಕೆಂದು ಗೊತ್ತಿಲ್ಲ.

ಅಮೃತಬಳ್ಳಿ ಅನ್ನು 3 ರೀತಿಯಲ್ಲಿ ಸೇವಿಸಬಹುದು 1-ಅಮೃತಬಳ್ಳಿ ಚೂರ್ಣ ಮತ್ತು ಮಾತ್ರೆಗಳು 2- ಅಮೃತಬಳ್ಳಿ ರಸ 3-ಅಮೃತಬಳ್ಳಿ ಕಷಾಯ.

ದುರ್ಬಲ ರೋಗ ನಿರೋಧಕ ಶಕ್ತಿ ಹೊಂದಿರುವ ಜನರು ನಿಯಮಿತವಾಗಿ ಅಮೃತಬಳ್ಳಿ ಕಷಾಯವನ್ನು ತೆಗೆದುಕೊಳ್ಳಬೇಕು. ಏಕೆಂದರೆ ಹಾಗೆ ಮಾಡುವುದರಿಂದ ಕೆಲವೇ ದಿನಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.

ಅಮೃತಬಳ್ಳಿ ಕಷಾಯ ಮಾಡಲು, ಮೊದಲನೆಯದಾಗಿ, 4-5 ತುಳಸಿ ಎಲೆ, 2 ಕರಿ ಮೆಣಸು, ಸ್ವಲ್ಪ ಕಚ್ಚಾ ಅರಿಶಿನ, ಸ್ವಲ್ಪ ಶುಂಠಿ, ಒಂದು ಚಿಟಿಕೆ ಅಶ್ವಗಂಧವನ್ನು ಅಮೃತಬಳ್ಳಿ ತುಂಡಿಗೆ ಸೇರಿಸಿ. ಇವೆಲ್ಲವನ್ನೂ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ.

ಒಂದು ಪ್ಯಾನ್ ಅಥವಾ ಪಾತ್ರೆಯಲ್ಲಿ ಕನಿಷ್ಠ 2 ಗ್ಲಾಸ್ ನೀರನ್ನು ಬಿಸಿ ಮಾಡಿ ಮತ್ತು ಅದರಲ್ಲಿ ರುಬ್ಬಿದ ಮಿಶ್ರಣ ಹಾಕಿ. ಕಡಿಮೆ ಶಾಖದಲ್ಲಿ ನೀರನ್ನು ಕುದಿಸಿ. ಮಡಕೆ ಅಥವಾ ಬಾಣಲೆಯಲ್ಲಿ ನೀರು ಅರ್ಧ ಆದಾಗ, ಆಫ್ ಮಾಡಿ ಮತ್ತು ನೀರನ್ನು ಫಿಲ್ಟರ್ ಮಾಡಿ. ಕಷಾಯವನ್ನು ಉಗುರು ಬಿಸಿ ಇರುವಾಗ ಕುಡಿಯಿರಿ. ಒಂದು ಸಮಯದಲ್ಲಿ ಅರ್ಧದಿಂದ ಒಂದು ಲೋಟ ಕುಡಿಯಬಹುದು.

ಅಮೃತಬಳ್ಳಿ ಕಷಾಯವನ್ನು ಕುಡಿಯಲು ಬಯಸದಿದ್ದರೆ, ಅಮೃತಬಳ್ಳಿ ಜ್ಯೂಸ್ ಅನ್ನು ಸಹ ಕುಡಿಯಬಹುದು. ಇದಕ್ಕಾಗಿ, ಅಮೃತಬಳ್ಳಿ ಕಾಂಡವನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ತೊಳೆಯಿರಿ. ಅಮೃತಬಳ್ಳಿ ಕಾಂಡವನ್ನು ಬಿಸಿ ನೀರಿನಲ್ಲಿ ಕುದಿಸಿ, ನೀರು ಅರ್ಧ ಆದಾಗ, ಆಫ್ ಮಾಡಿ ಮತ್ತು ಅದನ್ನು ತಣ್ಣಗಾಗಲು ಬಿಡಿ. ಪ್ರತಿದಿನ ಒಂದು ಲೋಟ ರಸವನ್ನು ಸೇವಿಸಬಹುದು.

ಯಾವಾಗ ಸೇವಿಸಬೇಕು?
ಒಂದು ಕಪ್ ನೀರಿನಲ್ಲಿ ಎರಡು ಮೂರು ಟೀ ಚಮಚ (10-15 ಮಿಲಿ) ಅಮೃತಬಳ್ಳಿ ರಸವನ್ನು ಬೆರೆಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಕಷಾಯ ಮಾಡುವಾಗ ಜೇನುತುಪ್ಪವನ್ನು ಸೇರಿಸಿ ಮತ್ತು ದಿನಕ್ಕೆ ಎರಡು ಮೂರು ಬಾರಿ ಊಟದ ನಂತರ ಮಾತ್ರ ಸೇವಿಸಿ. ಒಂದೆರಡು ಚಮಚ ಸೇರಿಸಿ ಸಾಕು.

ಒಂದು ವೇಳೆ ಅತಿಯಾಗಿ ಅಮೃತಬಳ್ಳಿ ರಸ ಸೇವಿಸಿದರೆ ಅದರಿಂದ ಹೆಚ್ಚು ಸಮಸ್ಯೆ ಉಂಟಾಗುತ್ತದೆ. ಇದನ್ನು ವೈದ್ಯರೇ ಖಚಿತ ಪಡಿಸಿದ್ದಾರೆ. ಅಮೃತಬಳ್ಳಿ ರಸದ ಕಷಾಯವನ್ನು ದಿನದಲ್ಲಿ ಒಂದೊಂದು ಲೋಟದಂತೆ ಮೂರು ಬಾರಿ ಸೇವಿಸಿದರೆ ಯಕೃತ್ತಿನ ಸಮಸ್ಯೆ ಕಾಣಿಸಿಳ್ಳಬಹುದು.