ಎಲ್ಲ ಸರಿ, ಈ ಹೊಟ್ಟೆ ಕೊಬ್ಬಿಗೇನು ಪರಿಹಾರ, ಯೋಚಿಸ್ಬೇಡಿ ಹೀಗ್ ಓಡಿ ನೋಡಿ

First Published | Jan 28, 2021, 4:51 PM IST

ಆರೋಗ್ಯಕರವಾಗಿ ತಿನ್ನುವುದರ ಹೊರತಾಗಿ,  ದೇಹವನ್ನು ಆರೋಗ್ಯಕರ ಮತ್ತು ಸುಂದರವಾಗಿಸಲು ದೈಹಿಕವಾಗಿ ಸಕ್ರಿಯವಾಗಿರುವುದು ಮೂಲ ಅವಶ್ಯಕತೆಯಾಗಿದೆ. ಜಿಮ್ ಸೆಷ ಸೆಷನ್‌ಗಳಿಗೆ ಹೋಗಲು ಸಮಯ ಇಲ್ಲವಾದರೂ, ಒಂದು ಸಣ್ಣ  ಓಟವನ್ನು ಪ್ರಯತ್ನಿಸಬಹುದು. ಏನದು?

ರನ್ನಿಂಗ್ ಸರಳ ಮತ್ತು ಪರಿಣಾಮಕಾರಿ ಹೃದಯ ವ್ಯಾಯಾಮ. ಇದು ಹೃದಯ ರಕ್ತನಾಳದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ಅದೇ ಸಮಯದಲ್ಲಿ ತೂಕ ಇಳಿಸಿಕೊಳ್ಳಲು ಸಹಕರಿಸುತ್ತದೆ.ಓಡುವುದರಿಂದ ಹೊಟ್ಟೆಯ ಕೊಬ್ಬು ಇಳಿಸಿ ಫ್ಲಾಟ್ ಬೆಲ್ಲಿ ಪಡೆದು ಕೊಳ್ಳಬಹುದು. ಹೇಗೆ?
ಆರ್ಮಿ ಸೈನಿಕರು ಶಿಕ್ಷೆಯಾಗಿ ತಮ್ಮ ಕೈಗಳನ್ನು ಮೇಲೆ ಮಾಡಿ ಓಡುತ್ತಿರುವ ಹಳೆಯ ಹಿಂದಿ ಚಲನಚಿತ್ರಗಳನ್ನು ನೋಡಿದ ನೆನಪಿದೆಯೇ? ಸಾಮಾನ್ಯ ಓಟಕ್ಕಿಂತ ಈ ರೀತಿ ಓಡುವುದು ಹೆಚ್ಚು ಶ್ರಮದಾಯಕವಾಗಿದೆ ಎಂಬುದು ಇದಕ್ಕೆ ಕಾರಣ. ಮತ್ತು ಒಬ್ಬರು ತಮ್ಮ ತೋಳುಗಳನ್ನು ಮೇಲಕ್ಕೆತ್ತಲು ಉತ್ತಮ ತ್ರಾಣ ಮತ್ತು ದೇಹದ ಶಕ್ತಿಯನ್ನು ಹೊಂದಿರಬೇಕು.
Tap to resize

ತೋಳುಗಳನ್ನು ಎತ್ತಿ ರನ್ನಿಂಗ್ ಮಾಡುವುದರಿಂದ ವ್ಯಾಯಾಮ ಮಾಡಿದ ಅನುಭವ ನೀಡುತ್ತದೆ, ಇದು ಹೃದಯ ಉತ್ತಮವಾಗಿಕಾರ್ಯನಿರ್ವಹಿಸುತ್ತದೆ ಮತ್ತು ಸ್ನಾಯು ಟೋನಿಂಗ್‌ಗೆ ಸಹಾಯ ಮಾಡುತ್ತದೆ.
ಹೆಚ್ಚಿನ ಕ್ಯಾಲೊರಿ ಬರ್ನ್ ಮಾಡುತ್ತೆತೋಳುಗಳನ್ನು ಎತ್ತಿ ರನ್ನಿಂಗ್ ಮಾಡುವುದಕ್ಕೆ ಹೆಚ್ಚಿನ ಶಕ್ತಿಯ ಅಗತ್ಯವಿರುತ್ತದೆ, ಇದಕ್ಕಾಗಿ ದೇಹವು ಹೆಚ್ಚಿನ ಕ್ಯಾಲೊರಿಗಳನ್ನು ಬರ್ನ್ ಮಾಡುವ ಅಗತ್ಯವಿರುತ್ತದೆ, ಇದು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜೊತೆಗೆ ಹೊಟ್ಟೆಯ ಸ್ನಾಯುಗಳ ಮೇಲೆ ಪರಿಣಾಮ ಬೀರುತ್ತದೆ.
ತೋಳುಗಳನ್ನು ಎತ್ತಿ ಹಿಡಿದಾಗ ಕೋರ್, ಎದೆ ಮತ್ತು ಭುಜಗಳು ಗರಿಷ್ಠ ಹಿಗ್ಗುತ್ತವೆ. ಇದರ ಪರಿಣಾಮವು ಮೇಲಿನ ದೇಹದಿಂದ ಅನುಭವಿಸಲ್ಪಡುತ್ತದೆ. ಇದರಿಂದ ಸಮತಟ್ಟಾದ ಹೊಟ್ಟೆ ಮತ್ತು ಚೆನ್ನಾಗಿ ಟೋನ್ಡ್ ಆದ ಭುಜಗಳನ್ನು ಪಡೆಯಲು ಕಾರಣವಾಗುತ್ತದೆ.
ಗಾಯದ ಸಾಧ್ಯತೆ ಕಡಿಮೆ ಮಾಡುತ್ತದೆವೇಗವಾಗಿ ಓಡುವುದರಿಂದ ಗಾಯವಾಗಬಹುದು. ಕೈಗಳನ್ನು ಮೇಲಕ್ಕೆ ಹಿಡಿದು ಓಡಿದಾಗ, ನಿಜವಾಗಿಯೂ ವೇಗವಾಗಿ ಓಡಲು ಸಾಧ್ಯವಿಲ್ಲ, ಅದು ಗಾಯದ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.
ವ್ಯಾಯಾಮವು ಹೆಚ್ಚು ಪರಿಣಾಮ ಬೀರುವ ವ್ಯಾಯಾಮದಿಂದ ಕಡಿಮೆ-ಪ್ರಭಾವಕ್ಕೆ ಪರಿವರ್ತನೆಗೊಳ್ಳುತ್ತದೆ. ಇದು ಸ್ನಾಯುಗಳ ವೆರ್ ಟೀರ್ ಕಡಿಮೆ ಮಾಡುತ್ತದೆ.

Latest Videos

click me!