ಬ್ಲ್ಯಾಕ್‌ಹೆಡ್‌ಗಳಿಗೆ ಕೊತ್ತಂಬರಿ ಸೊಪ್ಪು ಮತ್ತು ಅರಿಶಿನದ ಫೇಸ್ ಪ್ಯಾಕ್:ಈ ಪ್ಯಾಕ್ ವಿಶೇಷವಾಗಿ ಮೂಗಿನ ಮೇಲೆ ಅತಿಯಾದ ಬ್ಲ್ಯಾಕ್‌ಹೆಡ್ ಇದ್ದರೆಉತ್ತಮ ಪರಿಹಾರ ನೀಡುತ್ತದೆ. ಕೊತ್ತಂಬರಿ ಕೊಳೆಯನ್ನು ಸ್ವಚ್ಛಗೊಳಿಸುವ ಕಾಸ್ಟಿಕ್ ಆಗಿ ಕಾರ್ಯನಿರ್ವಹಿಸಿ, ಚರ್ಮದ ರಂಧ್ರಗಳನ್ನು ತಡೆಯುತ್ತದೆ. ಅರಿಶಿನ ಸ್ಕೀನ್ ಪೋರ್‌ಗಳಲ್ಲಿರುವ ಹೆಚ್ಚುವರಿ ಎಣ್ಣೆಯನ್ನು ಹೊರತೆಗೆಯಲು ಸಹಾಯ ಮಾಡುತ್ತದೆ.
ಕೊತ್ತಂಬರಿ ಸೊಪ್ಪನ್ನು ಎರಡು ಟೀ ಚಮಚ ಅರಿಶಿನ ಪುಡಿಯೊಂದಿಗೆ ಬೆರೆಸಿ ಉತ್ತಮ ಪೇಸ್ಟ್ ಮಾಡಿ. ಈ ಪೇಸ್ಟ್ ರಾತ್ರಿ ಮುಖಕ್ಕೆ ಹಚ್ಚಿ ಮರುದಿನ ಬೆಳಿಗ್ಗೆ ಅದನ್ನು ತಣ್ಣೀರಿನಿಂದ ತೊಳೆಯಿರಿ. ವಾರಕ್ಕೆ ಎರಡು ಬಾರಿಯಾದರೂ ಇದನ್ನು ಬಳಸುವುದರಿಂದ ಸುಲಭವಾಗಿ ಬ್ಲ್ಯಾಕ್‌ಹೆಡ್‌ಗಳ ತೊಂದರೆಯಿಂದ ಮುಕ್ತಿ ಪಡೆಯಬಹುದು.
ಒಣ ಚರ್ಮಕ್ಕಾಗಿ ಮೊಸರು ಮತ್ತು ಕಡಲೆ ಹಿಟ್ಟು ಫೇಸ್ ಪ್ಯಾಕ್:ಮೊಸರು ಮತ್ತು ಕಡಲೆ ಹಿಟ್ಟಿನ ಫೇಸ್ ಪ್ಯಾಕ್ ಒಣ ಚರ್ಮವನ್ನು ಪೋಷಿಸಲು ಮತ್ತು ಸತ್ತ ಜೀವಕೋಶಗಳನ್ನು ತೆಗೆದುಹಾಕಲು ಬೆಸ್ಟ್. ಕಡಲೆ ಹಿಟ್ಟು ಚರ್ಮದ ಮೇಲೆಕ್ಲೀನಿಂಗ್ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ ಮತ್ತು ಮೊಸರು ಚರ್ಮವನ್ನು ಮಾಯಿಶ್ಚರೈಸ್ ಮಾಡುತ್ತದೆ.
ಎರಡು ಚಮಚ ಕಡಲೆ ಹಿಟ್ಟು, ಒಂದು ಚಮಚ ಮೊಸರು, ಒಂದು ಚಮಚ ಜೇನುತುಪ್ಪ ಮತ್ತು ಚಿಟಿಕೆ ಅರಿಶಿನ ಬೆರೆಸಿ ಪೇಸ್ಟ್ ಮಾಡಿಕೊಳ್ಳಿ. ಅಪ್ಲೈ ಮಾಡಿದಸುಮಾರು ಐದು ನಿಮಿಷಗಳ ಕಾಲ ಬಿಟ್ಟು ತಣ್ಣೀರಿನಿಂದ ತೊಳೆಯಿರಿ. ಮೊಸರು ನೈಸರ್ಗಿಕ ಮಾಯಿಶ್ಚರೈಸರ್.ಜೇನುತುಪ್ಪವು ಚರ್ಮವನ್ನು ಶುದ್ಧಗೊಳಿಸುತ್ತದೆ ಮತ್ತು ಅರಿಶಿನವು ಆಂಟಿಬ್ಯಾಟಿಕ್ ಆಗಿ ಕಾರ್ಯನಿರ್ವಹಿಸುತ್ತದೆ. ಈ ಫೇಸ್ ಪ್ಯಾಕ್ ಚರ್ಮದ ಪಿಹೆಚ್ ಮಟ್ಟವನ್ನು ಕಾಪಾಡಿಕೊಳ್ಳುತ್ತದೆ.
ಮೊಡವೆಗೆ ಮುಲ್ತಾನಿ ಮಿಟ್ಟಿ ಮತ್ತು ಲಿಂಬೆ ರಸದ ಪ್ಯಾಕ್:ಮುಲ್ತಾನಿ ಮಿಟ್ಟಿ ಮೊಡವೆ ಕಲೆಗಳನ್ನು ಗುಣಪಡಿಸುವ ಗುಣಗಳಿಗೆ ಫೇಮಸ್. ಮೆಗ್ನೀಷಿಯಮ್ ಕ್ಲೋರೈಡ್ ಸಮೃದ್ಧವಾಗಿರುವ ಇದು ಮೊಡವೆಗಳನ್ನು ಕಡಿಮೆ ಮಾಡುತ್ತದೆ ಮತ್ತು ಚರ್ಮವನ್ನು ಸ್ವಚ್ಛವಾಗಿರಿಸುತ್ತದೆ. ನಿಂಬೆಯಲ್ಲಿರುವ ಆ್ಯಸಿಡ್ ಅಂಶವು ಕೊಳೆಯನ್ನು ಹೊರತೆಗೆದದು ಚರ್ಮವನ್ನು ಸೂಕ್ಷ್ಮಾಣು ಮುಕ್ತವಾಗಿಸುತ್ತದೆ.
ಎರಡು ಟೀ ಚಮಚ ಮುಲ್ತಾನಿ ಮಿಟ್ಟಿ, ಅರಿಶಿನ ಮತ್ತು ಅರ್ಧ ಟೀ ಚಮಚ ಶ್ರೀಗಂಧದ ಪುಡಿಯನ್ನು ನಿಂಬೆ ರಸದೊಂದಿಗೆ ಮಿಕ್ಸ್‌ಮಾಡಿ ಪೇಸ್ಟ್ ತಯಾರಿಸಿಕೊಳ್ಳಿ. ಈ ಫೇಸ್ ಪ್ಯಾಕ್ ಅನ್ನು ಮುಖಕ್ಕೆ ಹಚ್ಚಿ ಒಣಗುವವರೆಗೆ ಇರಿಸಿ. ತಣ್ಣೀರಿನಿಂದ ತೊಳೆಯಿರಿ.
ಕೇಸರಿ ಫೇಸ್ ಪ್ಯಾಕ್:ಕೇಸರಿಯಲ್ಲಿ ಕಬ್ಬಿಣ, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಸೆಲೆನಿಯಮ್, ಸತು ಮತ್ತು ತಾಮ್ರ ಮತ್ತು ವಿಟಮಿನ್ ಎ, ಫೋಲಿಕ್ ಆ್ಯಸಿಡ್, ನಿಯಾಸಿನ್ ಮತ್ತು ವಿಟಮಿನ್ ಸಿ ಸೇರಿ ಅನೇಕ ಜೀವಸತ್ವಗಳು ಸಮೃದ್ಧವಾಗಿವೆ. ಕೇಸರಿ ಚರ್ಮದ ಟೋನ್ ಸುಧಾರಿಸಲು ಸಹಾಯ ಮಾಡುತ್ತದೆ. ಇದು ಡಾರ್ಕ್ ಸರ್ಕಲ್ ಮತ್ತು ಸುಕ್ಕುಗಳನ್ನು ಕಡಿಮೆ ಮಾಡುತ್ತದೆ.
ಮೂರರಿಂದ ನಾಲ್ಕು ಎಳೆ ಕೇಸರಿಯನ್ನು ತೆಗೆದುಕೊಂಡು ಅವುಗಳನ್ನು ಎರಡು ಟೀ ಚಮಚ ನೀರಿನಲ್ಲಿ ರಾತ್ರಿ ನೆನೆಸಿ. ಕೇಸರಿ ನೀರಿಗೆ ಒಂದು ಟೀಸ್ಪೂನ್ ಹಾಲು, ಸಕ್ಕರೆ ಮತ್ತು ಕೆಲವು ಹನಿ ಕೊಬ್ಬರಿ ಎಣ್ಣೆಯನ್ನು ಸೇರಿಸಿ. ಈ ಮಿಶ್ರಣದಲ್ಲಿ ಒಂದು ತುಂಡು ಬ್ರೆಡ್ ಅದ್ದಿ , ಅದರಿಂದ ಮಿಶ್ರಣವನ್ನು ಮುಖಕ್ಕೆ ಹಚ್ಚಿ. ಸುಮಾರು ಹದಿನೈದು ನಿಮಿಷಗಳ ನಂತರ ತಣ್ಣೀರಿನಿಂದ ತೊಳೆಯಿರಿ.ಉತ್ತಮ ಫಲಿತಾಂಶವನ್ನು ಪಡೆಯಲು ವಾರಕ್ಕೆ ಕನಿಷ್ಠ ಎರಡು ಮೂರು ಬಾರಿ ಇದನ್ನು ಪುನರಾವರ್ತಿಸಿ.
ಮೆಂತ್ಯ (ಮೆಥಿ) ಫೇಸ್ ಪ್ಯಾಕ್:ಮೆಂತ್ಯೆ ತಂಪಾಗಿಸುವ ಗುಣವನ್ನು ಹೊಂದಿದೆ.ಗುಳ್ಳೆಗಳಿಂದ ಉಂಟಾಗುವ ಉರಿಯೂತವನ್ನು ಗುಣಪಡಿಸುತ್ತದೆ. ಮೆಂತ್ಯೆಯಲ್ಲಿರುವ ಆ್ಯಂಟಿಬಯೋಟಿಕ್ ಮತ್ತು ಆಂಟಿ ಸೆಪ್ಟಿಕ್ ಅಂಶಗಳು ಸೋಂಕುಗಳನ್ನು ಗುಣಪಡಿಸುವುದರ ಜೊತೆ ಚರ್ಮವನ್ನು ಹೈಡ್ರೇಟ್ ಮಾಡಿ ಸ್ವಚ್ಛವಾಗಿರಿಸುತ್ತದೆ.
ಈ ಫೇಸ್ ಪ್ಯಾಕ್ ಅನ್ನು 2 ವಿಧಗಳಲ್ಲಿ ತಯಾರಿಸಬಹುದು. ಒಂದು ಕಪ್ ನೀರಿನಲ್ಲಿಮೆಂತ್ಯೆ ಬೀಜಗಳನ್ನು ಕುದಿಸಿ. ಕುದಿಸಿದ ನೀರು ತಣ್ಣಗಾದ ನಂತರ ಮುಖಕ್ಕೆ ಹಚ್ಚಿ ಒಂದರಿಂದ ಎರಡು ಗಂಟೆಗಳ ಕಾಲ ಬಿಡಿ. ಇನ್ನೊಂದು ವಿಧ ಎರಡು ಮೂರು ಟೀ ಚಮಚ ಮೆಂತ್ಯೆ ಕಾಳನ್ನು ರಾತ್ರಿಯಿಡೀ ನೆನೆಸಿ ಪೇಸ್ಟ್ ಮಾಡಿ ಕೊಳ್ಳಿ. ಮುಖಕ್ಕೆ ಅಪ್ಲೈ ಮಾಡಿ. ಅದನ್ನು ತೊಳೆಯುವ ಮೊದಲು ಒಣಗಲು ಬಿಡಿ. ಈ ಫೇಸ್ ಪ್ಯಾಕ್ ಅನ್ನು ಸುಮಾರು ಒಂದು ವಾರದ ವರೆಗೆ ಫ್ರಿಜ್‌ನಲ್ಲಿಡಬಹುದು. ಮೆಂತ್ಯೆ ಪ್ಯಾಕ್ ತಕ್ಷಣವೇ ಕೂಲಿಂಗ್ ಪರಿಣಾಮವನ್ನು ನೀಡುತ್ತದೆ.
ಸನ್ ಟ್ಯಾನ್ ಕಪ್ಪು ಕಲೆಗಳಿಗೆ ಅಲೋವೆರಾ ಫೇಸ್ ಪ್ಯಾಕ್:ಪ್ರಾಚೀನ ಈಜಿಪ್ಟ್‌ನಲ್ಲಿ ಫೇರೋಗಳ ಕಾಲದಿಂದಲೂ ಅಲೋವೆರಾವನ್ನು ಸೌಂದರ್ಯವರ್ಧಕಗಳಲ್ಲಿ ಬಳಸಲಾಗುತ್ತದೆ. ಎಲೆಗಳಲ್ಲಿ ಮನ್ನನ್ಸ್, ಲೆಕ್ಟಿನ್ ಮತ್ತು ಪಾಲಿಸ್ಯಾಕರೈಡ್‌ಗಳಂತಹ ಅದ್ಭುತ ಅಂಶಗಳನ್ನು ಹೊಂದಿದೆ. ಬಿಸಿಲಿನಿಂದ ಉಂಟಾಗುವ ಟ್ಯಾನ್ ಮತ್ತು ಕಪ್ಪು ಕಲೆಗಳಿಗೆ ಅಲೋವೆರಾ ಬೆಸ್ಟ್ ರೆಮಿಡಿ.
ಅಲೋವೆರಾ ಜೆಲ್‌ಗೆ ಕೆಲವು ಹನಿ ನಿಂಬೆ ಸೇರಿಸಿ. ಮುಖಕ್ಕೆ ಹಚ್ಚಿ. ತಣ್ಣೀರಿನಿಂದ ತೊಳೆಯುವ ಮೊದಲು ಅದನ್ನು ಸುಮಾರು 20 ನಿಮಿಷಗಳ ಕಾಲ ಇರಿಸಿ. ಅಲೋವೆರಾ ಉತ್ತಮ ಮಾಯಿಶ್ಚರೈಸರ್ ಆಗಿಕೆಲಸ ಮಾಡುತ್ತದೆ. .
ಆಯಿಲ್ ಸ್ಕೀನ್‌ಗೆ ನಿಂಬೆ ಮತ್ತು ಜೇನುತುಪ್ಪದ ಪ್ಯಾಕ್:ಚರ್ಮವನ್ನು ಸ್ವಚ್ಛಗೊಳಿಸಲು, ಡೆಡ್ ಸ್ಕೀನ್ ನಿವಾರಿಸಲು ಮತ್ತು ಆಯಿಲ್ ಅಂಶ ಕಡಿಮೆ ಮಾಡಲು ನಿಂಬೆ ಬೆಸ್ಟ್. ಜೇನುತುಪ್ಪವು ವಿವಿಧ ಆಂಟಿಬಯೋಟಿಕ್ ಮತ್ತು ಆಂಟಿ ಸೆಪ್ಟಿಕ್ ಗುಣಗಳನ್ನು ಹೊಂದಿದೆ. ಚರ್ಮದ ಹೆಚ್ಚುವರಿ ಎಣ್ಣೆ ಅಂಶ ಕಡಿಮೆ ಮಾಡುವುದರ ಜೊತೆಗೆ ಗುಳ್ಳೆ ಮತ್ತು ಮೊಡವೆಗಳನ್ನು ಮರಳಿ ಬರದಂತೆ ತಡೆಯುತ್ತದೆ.
ನಿಂಬೆ ರಸ ಜೇನುತುಪ್ಪದ ಮಿಶ್ರಣಮುಖಕ್ಕೆ ಹಚ್ಚಿ ಮತ್ತು ಸುಮಾರು 15-20 ನಿಮಿಷಗಳ ಕಾಲ ಒಣಗಲು ಬಿಡಿ. ಇದು ಅತಿಯಾದ ಎಣ್ಣೆಯನ್ನು ತೆಗೆಯುವುದರ ಜೊತಗೆ ಚರ್ಮವನ್ನು ಮಾಯಿಶ್ಚರೈಸ್ ಮಾಡುತ್ತದೆ.