Rainbow Diet: ರೈನ್‌ಬೋ ಡಯಟ್ ಫಾಲೋ ಮಾಡಿ ರೋಗಗಳನ್ನು ದೂರ ಮಾಡಿ

First Published | Nov 29, 2022, 4:44 PM IST

ರೈನ್’ಬೋ ಡಯಟ್ ಕಾಮನಬಿಲ್ಲಿನ ಪ್ರತಿಯೊಂದು ಬಣ್ಣವನ್ನು ಹೊಂದಿರುವ ಆಹಾರವನ್ನು ಹೊಂದಿರುತ್ತದೆ. ಮನೆಯಲ್ಲಿ ರೈನ್’ಬೋ ಡಯಟ್ ತಯಾರಿಸಲು, ಕೆಂಪು, ಹಳದಿ, ಕಿತ್ತಳೆ, ಹಸಿರು, ನೀಲಿ, ನೇರಳೆ, ಗಾಢ ಕೆಂಪು, ಬಿಳಿ ಮತ್ತು ಕಂದು ತರಕಾರಿಗಳು ಮತ್ತು ಹಣ್ಣುಗಳನ್ನು ಒಟ್ಟಿಗೆ ತಿನ್ನಬೇಕು.

ಹಣ್ಣುಗಳು ಮತ್ತು ತರಕಾರಿಗಳನ್ನು ನಿಯಮಿತವಾಗಿ ತಿನ್ನುವುದು ಅಗತ್ಯ  ಪೌಷ್ಟಿಕಾಂಶವನ್ನು ಒದಗಿಸುತ್ತದೆ. ಆದರೆ ರೈನ್’ಬೋ ಡಯಟ್ (rainbow diet) ಇದಕ್ಕಿಂತ ಹೆಚ್ಚು ಪ್ರಯೋಜನಕಾರಿಯಾಗಿದೆ. ಕಾಮನಬಿಲ್ಲನ್ನು ನೋಡುವುದರಿಂದ ನೀವು ಪ್ರತಿಯೊಂದು ಸಮಸ್ಯೆಯನ್ನು ಮರೆಯುವಂತೆ, ಕಾಮನಬಿಲ್ಲು ಆಹಾರ ತಿನ್ನೋದ್ರಿಂದ ಪ್ರತಿಯೊಂದು ರೋಗವನ್ನು ದೂರ ಮಾಡಬಹುದು. ನೀವು ಮನೆಯಲ್ಲಿ ರೈನ್’ಬೋ ಡಯಟ್ ನ್ನು ಸುಲಭವಾಗಿ ತಯಾರಿಸಬಹುದು.
 

ರೈನ್’ಬೋ ಡಯಟ್ ಕಾಮನಬಿಲ್ಲಿನ ಎಲ್ಲಾ ಬಣ್ಣಗಳನ್ನು ಹೊಂದಿರುವ ಆಹಾರವನ್ನು ಒಳಗೊಂಡಿದೆ. ವಾಸ್ತವವಾಗಿ, ಪ್ರತಿಯೊಂದು ಹಣ್ಣು ಮತ್ತು ತರಕಾರಿಯು ಫೈಟೋನ್ಯೂಟ್ರಿಯಂಟ್ ಹೊಂದಿರುತ್ತದೆ, ಅದು ತರಕಾರಿಗಳಿಗೆ, ಹಣ್ಣುಗಳಿಗೆ ಬಣ್ಣವನ್ನು ನೀಡುತ್ತದೆ. ಆಹಾರದ ಪ್ರತಿಯೊಂದು ಬಣ್ಣವು ವಿಭಿನ್ನ ಆರೋಗ್ಯ ಪದಾರ್ಥಗಳಿಂದ ತುಂಬಿರುತ್ತದೆ. ರೈನ್’ಬೋ ಡಯಟ್ ತಯಾರಿಸುವ ವಿಧಾನ ಯಾವುದು ಮತ್ತು ಯಾವ ರೋಗಗಳನ್ನು ಇದು ದೂರವಿಡುತ್ತವೆ ಎಂದು ತಿಳಿಯೋಣ.
 

Tap to resize

ರೈನ್‌ಬೋ ಡಯಟ್ ತಯಾರಿಸಲು ಕೆಂಪು ಬಣ್ಣ: ರೈನ್’ಬೋ ಡಯಟ್ ನ ಕೆಂಪು ಬಣ್ಣದ ಆಹಾರಗಳು (red color foods) ಉರಿಯೂತ ಶಮನಕಾರಿಯಾಗಿವೆ. ಅವು ಸಾಕಷ್ಟು ಉತ್ಕರ್ಷಣ ನಿರೋಧಕ ಗುಣ ಹೊಂದಿರುತ್ತವೆ, ಇದು ಹೃದ್ರೋಗ ಮತ್ತು ಕೆಲವು ಕ್ಯಾನ್ಸರ್ ಗಳ ಅಪಾಯವನ್ನು ನಿವಾರಿಸುತ್ತೆ. ಕೆಂಪು ಬಣ್ಣದ ಆಹಾರ ಸೇವಿಸುವುದರಿಂದ ಸೂರ್ಯನ ಬೆಳಕಿನಿಂದ ಚರ್ಮಕ್ಕೆ ಹಾನಿಯಾಗುವುದಿಲ್ಲ. ಟೊಮೆಟೊ, ಕಲ್ಲಂಗಡಿ, ಗುಲಾಬಿ ಪೇರಳೆ, ದ್ರಾಕ್ಷಿ, ಸೇಬು, ಸ್ಟ್ರಾಬೆರಿ ಇತ್ಯಾದಿಗಳು ಕೆಂಪು ಆಹಾರಗಳಾಗಿವೆ.

ಹಳದಿ ಮತ್ತು ಕಿತ್ತಳೆ ಆಹಾರಗಳು: ಹಳದಿ ಮತ್ತು ಕಿತ್ತಳೆ ಬಣ್ಣದ ಆಹಾರಗಳು ಕಣ್ಣುಗಳಿಗೆ ತುಂಬಾ ಪ್ರಯೋಜನಕಾರಿ. ಅವು ಉರಿಯೂತ ಶಮನಕಾರಿ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳನ್ನು ಸಹ ಹೊಂದಿವೆ, ಇದು ಹೃದ್ರೋಗ ಮತ್ತು ಕ್ಯಾನ್ಸರ್ ನಿಂದ ರಕ್ಷಿಸುತ್ತದೆ. ಕ್ಯಾರೆಟ್, ಬಾಳೆಹಣ್ಣು, ಅನಾನಸ್, ಕುಂಬಳಕಾಯಿ, ಜೋಳದಿಂದ ರೈನ್’ಬೋ ಡಯಟ್ ನಲ್ಲಿ ಹಳದಿ ಮತ್ತು ಕಿತ್ತಳೆ ಬಣ್ಣಗಳನ್ನು ಸೇರಿಸಬಹುದು.

ಹಸಿರು ಆಹಾರ (Green Foods): ರೈನ್’ಬೋ ಡಯಟ್ ನಲ್ಲಿ ಹಸಿರು ಬಣ್ಣವು ಅತ್ಯಂತ ಮುಖ್ಯವಾಗಿದೆ. ಈ ಆಹಾರಗಳನ್ನು ಸೇವಿಸುವ ಮೂಲಕ, ದೇಹವು ಅಗತ್ಯವಾದ ಪ್ರೋಟೀನ್, ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳನ್ನು ಪಡೆಯುತ್ತದೆ. ಈ ವಿಷಯಗಳು ದೇಹವನ್ನು ಆರೋಗ್ಯಕರವಾಗಿಸಲು (healthy body) ಸಹಾಯ ಮಾಡುತ್ತವೆ. ನಮ್ಮಲ್ಲಿ ಸಾಕಷ್ಟು ಹಸಿರು ತರಕಾರಿಗಳಿವೆ. ಇದರಲ್ಲಿ ಪಾಲಕ್ ಸೊಪ್ಪು, ಬ್ರೊಕೋಲಿ, ಹಸಿರು ಎಲೆಕೋಸು, ಆವಕಾಡೊ, ಇತ್ಯಾದಿಗಳು ಸೇರಿವೆ.

ನೀಲಿ ಮತ್ತು ನೇರಳೆ ಆಹಾರ: ನೀಲಿ ಮತ್ತು ನೇರಳೆ ಆಹಾರಗಳು ಮೆದುಳನ್ನು ತೀಕ್ಷ್ಣಗೊಳಿಸುತ್ತವೆ. ಅವುಗಳನ್ನು ತಿನ್ನುವ ಮೂಲಕ, ಟೈಪ್ -2 ಮಧುಮೇಹ (Type 2 Diabetes), ನರವೈಜ್ಞಾನಿಕ ಅಸ್ವಸ್ಥತೆಗಳು, ಹೃದ್ರೋಗ ಮತ್ತು ಕೆಲವು ಕ್ಯಾನ್ಸರ್ ಗಳನ್ನು ದೂರವಿಡಬಹುದು. ಬೆರ್ರಿಗಳು, ಬದನೆಕಾಯಿಗಳು, ಕೆಂಪು-ನೇರಳೆ ಎಲೆಕೋಸು, ದ್ರಾಕ್ಷಿಗಳಲ್ಲಿ ನೀಲಿ ಮತ್ತು ನೇರಳೆ ಬಣ್ಣಗಳು ಕಂಡುಬರುತ್ತವೆ.

ಗಾಢ ಕೆಂಪು ಆಹಾರಗಳು: ಗಾಢ ಕೆಂಪು ಬಣ್ಣದ ಆಹಾರಗಳು ದೇಹದಲ್ಲಿ ಆಮ್ಲಜನಕವನ್ನು ಹೆಚ್ಚಿಸಲು ಸಹಾಯ ಮಾಡುವ ಆಹಾರಗಳನ್ನು ಹೊಂದಿರುತ್ತದೆ. ಅವುಗಳನ್ನು ತಿನ್ನುವುದರಿಂದ ಅಧಿಕ ರಕ್ತದೊತ್ತಡ, ಹೃದ್ರೋಗ ಮತ್ತು ಕ್ಯಾನ್ಸರ್ ದೂರವಿರುತ್ತದೆ. ಅಲ್ಲದೆ, ಗಾಢ ಕೆಂಪು ಆಹಾರಗಳು ಕ್ರೀಡಾಪಟುಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತವೆ. ಬೀಟ್ ರೂಟ್ ಮತ್ತು ಪ್ರಿಸಿಲ್ಲಿ ಪಿಯರ್ ಗಳು ಗಾಢ ಕೆಂಪು ಆಹಾರಗಳಾಗಿವೆ.

ಬಿಳಿ ಮತ್ತು ಕಂದು ಆಹಾರ: ರೈನ್’ಬೋ ಡಯಟ್ ತಯಾರಿಸಲು ಬಿಳಿ ಮತ್ತು ಕಂದು ಬಣ್ಣದ ಆಹಾರಗಳನ್ನು ಸಹ ತೆಗೆದುಕೊಳ್ಳಿ. ಈ ಬಣ್ಣದ ಆಹಾರವನ್ನು ಸೇವಿಸುವುದರಿಂದ ಹೊಟ್ಟೆಯ ಕ್ಯಾನ್ಸರ್ ಮತ್ತು ಹೃದ್ರೋಗದಿಂದ ರಕ್ಷಿಸುತ್ತದೆ. ಅವುಗಳನ್ನು ತಿನ್ನುವುದರಿಂದ ಫೈಬರ್, ಫೋಲೇಟ್, ಮೆಗ್ನೀಸಿಯಮ್, ಪೊಟ್ಯಾಸಿಯಮ್, ವಿಟಮಿನ್ ಬಿ 6 ಅನ್ನು ಒದಗಿಸುತ್ತದೆ. ನೀವು ಎಲೆಕೋಸು, ಬೆಳ್ಳುಳ್ಳಿ, ಈರುಳ್ಳಿ, ಅಣಬೆಗಳು, ಬಿಳಿ ಆಲೂಗಡ್ಡೆಗಳನ್ನು ಡಯಟ್ ನಲ್ಲಿ ಸೇರಿಸಬಹುದು.

Latest Videos

click me!