ಕಿತ್ತಳೆ ಹಣ್ಣನ್ನು ತಿನ್ನುವ ಅಥವಾ ಕಿತ್ತಳೆ ಸಿಪ್ಪೆಯ ಪ್ಯಾಕ್ ಮಾಡಿ ಮುಖಕ್ಕೆ ಹಚ್ಚುವ ಎರಡೂ ವಿಧಾನಗಳು ಆರೋಗ್ಯ ಮತ್ತು ಚರ್ಮಕ್ಕೆ ಪ್ರಯೋಜನಕಾರಿಯಾಗಿದೆ ಅನ್ನೋದು ಗೊತ್ತು. ಕಿತ್ತಳೆ ಸಿಪ್ಪೆ ಮತ್ತು ರಸವು ಅನೇಕ ಪೋಷಕಾಂಶಗಳನ್ನು ಹೊಂದಿರುತ್ತದೆ, ಇದು ಆರೋಗ್ಯಕ್ಕೆ ತುಂಬಾನೆ ಪ್ರಯೋಜನಕಾರಿಯಾಗಿದೆ. ಆದರೆ ನೀವು ಎಂದಾದರೂ ಕಿತ್ತಳೆ ಹೂವುಗಳ ಬಗ್ಗೆ ಕೇಳಿದ್ದೀರಾ? ಕಿತ್ತಳೆ ಹೂವಿನ ರಸವು (Orange Blossom Water) ರೋಸ್ ವಾಟರ್ ನಂತೆ ಆರೋಗ್ಯಕರವಾಗಿದೆ. ಇತ್ತೀಚಿನ ದಿನಗಳಲ್ಲಿ ಕಿತ್ತಳೆ ಹೂವುಗಳ ಬಳಕೆಯು ಸಾಕಷ್ಟು ಜನಪ್ರಿಯವಾಗುತ್ತಿದೆ. ಇದನ್ನು ಚಹಾ, ಕೇಕ್, ಕುಕೀಗಳು ಮತ್ತು ಐಸ್ ಕ್ರೀಮ್ ಪರಿಮಳಯುಕ್ತವಾಗಿಸಲು ಬಳಸಲಾಗುತ್ತಿದೆ. ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ಸಹ ಹೊಂದಿದೆ. ಇದು ಚರ್ಮದಿಂದ ಹೃದಯದ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಇದಲ್ಲದೇ ಈ ಹೂವಿನಿಂದ ಇನ್ನು ಏನೆಲ್ಲಾ ಪ್ರಯೋಜನಗಳಿವೆ ತಿಳಿಯೋಣ.