ಆರೋಗ್ಯಕರ ಆಹಾರ ತಿನ್ನುವುದು ಎಷ್ಟು ಮುಖ್ಯವೋ, ಯಾವಾಗ ತಿನ್ನುತ್ತೀವಿ ಅನ್ನೋದೂ ಅಷ್ಟೇ ಮುಖ್ಯ. ಆರೋಗ್ಯಕರ ಅಂತ ಯಾವಾಗ ಬೇಕಾದ್ರೂ ತಿಂದ್ರೆ ಆರೋಗ್ಯ ಸಮಸ್ಯೆ ಬರುತ್ತಂತೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕೆಲವು ಆಹಾರ ತಿನ್ನೋದೇ ಬೇಡ. ಯಾವುವು ಅಂತ ನೋಡೋಣ...
26
ಸಿಟ್ರಸ್ ಹಣ್ಣುಗಳು
1.ಸಿಟ್ರಸ್ ಹಣ್ಣುಗಳು...
ಹಣ್ಣುಗಳು ಆರೋಗ್ಯಕ್ಕೆ ಒಳ್ಳೆಯದು. ಸಿಟ್ರಸ್ ಹಣ್ಣುಗಳಂತೂ ಇನ್ನೂ ಒಳ್ಳೆಯದು. ವಿಟಮಿನ್ ಸಿ ಇದರಲ್ಲಿ ಹೇರಳವಾಗಿದೆ. ಆರೋಗ್ಯ ಮತ್ತು ಸೌಂದರ್ಯಕ್ಕೆ ಸಹಾಯ ಮಾಡುತ್ತವೆ. ಆದರೆ ಖಾಲಿ ಹೊಟ್ಟೆಯಲ್ಲಿ ಇವು ಬೇಡ. ಗ್ಯಾಸ್ಟ್ರಿಕ್, ಎದೆಯುರಿ, ಜೀರ್ಣ ಸಮಸ್ಯೆ ಶುರುವಾಗಬಹುದು.
36
ಖಾರ ಪದಾರ್ಥಗಳು....
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಖಾರ ತಿನ್ನಬಾರದು. ಹೊಟ್ಟೆಯಲ್ಲಿ ಉರಿ, ಅಸ್ವಸ್ಥತೆ, ಜೀರ್ಣ ಸಮಸ್ಯೆ ಬರಬಹುದು. ಖಾರದ ಜೊತೆ ಬೇರೆ ಪದಾರ್ಥ ಸೇರಿಸಿ ತಿನ್ನುವುದು ಉತ್ತಮ.
46
ಕಾಫಿ:
ಬೆಳಗ್ಗೆ ಒಂದು ಕಪ್ ಕಾಫಿ ಚೆನ್ನಾಗಿರುತ್ತೆ. ಆದರೆ ಖಾಲಿ ಹೊಟ್ಟೆಯಲ್ಲಿ ಕಾಫಿ ಬೇಡ. ಆಮ್ಲೀಯತೆ ಹೆಚ್ಚುತ್ತೆ, ಲೂಸ್ ಮೋಷನ್ ಆಗಬಹುದು ಅಂತಾರೆ ತಜ್ಞರು. ಉಪಹಾರ ತಿಂದು ಕಾಫಿ ಕುಡಿಯುವುದು ಒಳ್ಳೆಯದು.
56
ಸಕ್ಕರೆ ಪದಾರ್ಥಗಳು:
ಕೇಕ್, ಪೇಸ್ಟ್ರಿ, ಡೋನಟ್, ಸಕ್ಕರೆ ಹೆಚ್ಚಿರುವ ತಿಂಡಿಗಳನ್ನು ಖಾಲಿ ಹೊಟ್ಟೆಯಲ್ಲಿ ತಿಂದರೆ ರಕ್ತದಲ್ಲಿ ಸಕ್ಕರೆ ಪ್ರಮಾಣ ಬೇಗ ಹೆಚ್ಚುತ್ತದೆ. ಹಸಿವು ಜಾಸ್ತಿಯಾಗುತ್ತದೆ. ಹಣ್ಣು, ಡ್ರೈ ಫ್ರೂಟ್ಸ್ ತಿನ್ನುವುದು ಉತ್ತಮ.
66
ಕಾರ್ಬೊನೇಟೆಡ್ ಪಾನೀಯಗಳು:
ಸೋಡಾ, ಪೆಪ್ಸಿ, ಕೋಕ್ ಗಳನ್ನು ಖಾಲಿ ಹೊಟ್ಟೆಯಲ್ಲಿ ಕುಡಿದರೆ ಗ್ಯಾಸ್, ಹೊಟ್ಟೆ ಉಬ್ಬರ ಬರುತ್ತದೆ. ಜೀರ್ಣಕ್ರಿಯೆಗೆ ಸಹಾಯ ಮಾಡಲು, ಅಸ್ವಸ್ಥತೆ ತಡೆಯಲು ಆಹಾರದ ಜೊತೆ ಕುಡಿಯುವುದು ಉತ್ತಮ.