ಉಪ್ಪು(Salt) ಆಹಾರದಲ್ಲಿ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಉಪ್ಪು ಆಹಾರದ ಎಲ್ಲಾ ರುಚಿಗಳನ್ನು ಬಂಧಿಸುವ ವಸ್ತು. ಉಪ್ಪು ಸೋಡಿಯಂನ ಅತ್ಯಂತ ಸಾಮಾನ್ಯ ಮೂಲ. ಆಹಾರದಲ್ಲಿ ಟೇಸ್ಟ್ ಜೊತೆಗೆ, ಸೋಡಿಯಂ ಬೈಕಾರ್ಬೊನೇಟ್ ಮತ್ತು ಮೊನೊಸೋಡಿಯಂ ಗ್ಲುಟಮೇಟ್ ಸಹ ಸೋಡಿಯಂ ಹೊಂದಿರುತ್ತವೆ. ಸೋಡಿಯಂ ದೇಹದಲ್ಲಿ ರಕ್ತದೊತ್ತಡ ಮತ್ತು ರಕ್ತದ ಪ್ರಮಾಣ ನಿಯಂತ್ರಿಸಲು ಸಹಾಯ ಮಾಡುತ್ತೆ. ಇದಲ್ಲದೆ, ಸೋಡಿಯಂ ಸ್ನಾಯು ಮತ್ತು ನರಗಳ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತೆ.
ಏನನ್ನಾದರೂ ಅತಿಯಾಗಿ ಸೇವಿಸೋದು ಆರೋಗ್ಯಕ್ಕೆ ಹಾನಿಕಾರಕ. ಅದೇ ರೀತಿ, ಹೆಚ್ಚಿನ ಪ್ರಮಾಣದ ಸೋಡಿಯಂ ದೇಹಕ್ಕೆ ಹಾನಿ ಮಾಡಬಹುದು. ಅತಿಯಾದ ಸೋಡಿಯಂ ಸೇವನೆ ಮೂತ್ರದಲ್ಲಿ ಕ್ಯಾಲ್ಸಿಯಂ ಪ್ರಮಾಣ ಹೆಚ್ಚಿಸುತ್ತೆ, ಇದರಿಂದಾಗಿ ಮೂತ್ರಪಿಂಡಗಳಿಗೆ ಸಂಬಂಧಿಸಿದ ಸಮಸ್ಯೆ ಎದುರಿಸಬೇಕಾಗುತ್ತೆ. ಇದಲ್ಲದೆ, ದೇಹದಲ್ಲಿ ಹೆಚ್ಚಿನ ಪ್ರಮಾಣದ ಸೋಡಿಯಂ ಇರೋದರಿಂದ ಆಸ್ಟಿಯೊಪೊರೋಸಿಸ್ (osteoporosis) ಅಪಾಯವೂ ಹೆಚ್ಚಾಗುತ್ತೆ. ಆಸ್ಟಿಯೊಪೊರೋಸಿಸ್ ಮೂಳೆಯ ಒಂದು ಕಾಯಿಲೆಯಾಗಿದ್ದು, ಇದು ಮೂಳೆ ಮುರಿತಗಳ ಅಪಾಯವನ್ನು ಹೆಚ್ಚಿಸುತ್ತೆ.
ದೇಹದಲ್ಲಿ ಸೋಡಿಯಂ(Sodium) ಪ್ರಮಾಣ ಕಡಿಮೆ ಮಾಡೋದರಿಂದ ರಕ್ತದೊತ್ತಡ ಮತ್ತು ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳ ಅಪಾಯ ಕಡಿಮೆ ಮಾಡಬಹುದು. ದೇಹದಲ್ಲಿ ಸೋಡಿಯಂ ಕಡಿಮೆ ಮಾಡಲು ಉತ್ತಮ ಮಾರ್ಗವೆಂದರೆ ಹೆಚ್ಚಿನ ಸೋಡಿಯಂ ಭರಿತ ಆಹಾರ ಸೇವನೆ ಕಡಿಮೆ ಮಾಡೋದು ಮತ್ತು ಅದರ ಬದಲಿಗೆ ಅತ್ಯಂತ ಕಡಿಮೆ ಪ್ರಮಾಣದ ಸೋಡಿಯಂ ಹೊಂದಿರುವ ಆಹಾರ ತಿನ್ನೋದು. ಹಾಗಾದರೆ ಯಾವ ಆಹಾರ ಸೇವಿಸಬಹುದು ನೋಡೋಣ.
ಸೇಬು (Apple)
ಹಣ್ಣುಗಳು ನೈಸರ್ಗಿಕವಾಗಿ ಕಡಿಮೆ ಪ್ರಮಾಣದ ಸೋಡಿಯಂ ಮತ್ತು ಹೆಚ್ಚಿನ ಪೊಟ್ಯಾಸಿಯಮ್ ಹೊಂದಿರುತ್ತವೆ. ಸೇಬಿನಲ್ಲಿ ಸೋಡಿಯಂನ ಪ್ರಮಾಣ ತುಂಬಾ ಕಡಿಮೆ. ಸೇಬುಗಳಲ್ಲಿ ಕೊಬ್ಬು (Cholestrol) ಕಡಿಮೆ ಇರುತ್ತೆ ಮತ್ತು ವಿಟಮಿನ್ ಸಿ ಮತ್ತು ಫೈಬರ್ ನ ಉತ್ತಮ ಮೂಲ. ಸೇಬು ಮತ್ತು ಇತರ ಹಣ್ಣುಗಳಲ್ಲಿ ಕಂಡು ಬರುವ ಪಾಲಿಫಿನಾಲ್ಸ್ ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ.
ಸೌತೆಕಾಯಿ (Cucumber)
ಸೌತೆಕಾಯಿಯು ಯಾವುದೇ ಕ್ಯಾಲೋರಿ, ಸೋಡಿಯಂ ಮತ್ತು ಕೊಬ್ಬನ್ನು ಹೊಂದಿಲ್ಲದ ಕಾರಣ ಇದನ್ನ ಆರೋಗ್ಯಕ್ಕೆ ತುಂಬಾ ಆರೋಗ್ಯಕರ. ಒಂದು ಕಪ್ ಸೌತೆಕಾಯಿಯಲ್ಲಿ 3 ಗ್ರಾಂ ಸೋಡಿಯಂ ಇದೆ. ಇದರಲ್ಲಿ ನೀರಿನ ಮಟ್ಟವು ತುಂಬಾ ಹೆಚ್ಚಾಗಿದೆ, ಇದರಿಂದಾಗಿ ದೇಹವು ನಿರ್ಜಲೀಕರಣಗೊಳ್ಳೋದಿಲ್ಲ.
ಬಾದಾಮಿ- (Almond)
ಬಾದಾಮಿಯನ್ನು ಆರೋಗ್ಯಕರ ಆಹಾರ ಎಂದು ಪರಿಗಣಿಸಲಾಗುತ್ತೆ. 100 ಗ್ರಾಂ ಬಾದಾಮಿಯಲ್ಲಿ 1 ಮಿಗ್ರಾಂ ಸೋಡಿಯಂ ಇರುತ್ತೆ. ಬಾದಾಮಿಯಲ್ಲಿ ಅನೇಕ ಪೋಷಕಾಂಶ ಮತ್ತು ಉತ್ಕರ್ಷಣ ನಿರೋಧಕಗಳಿವೆ. ಬಾದಾಮಿಯಲ್ಲಿ ವಿಟಮಿನ್ ಇ, ಮೆಗ್ನೀಸಿಯಮ್, ಪ್ರೋಟೀನ್, ಜಿಂಕ್ ಇತ್ಯಾದಿಗಳಿವೆ. ಬಾದಾಮಿ ರಕ್ತದಲ್ಲಿನ ಸಕ್ಕರೆ ಮಟ್ಟ, ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುತ್ತೆ. ಬಾದಾಮಿ ತಿನ್ನೋದರಿಂದ ಹಸಿವು ಕಡಿಮೆಯಾಗುತ್ತೆ, ಇದು ತೂಕ ಇಳಿಸಿಕೊಳ್ಳಲು ಬಹಳಷ್ಟು ಸಹಾಯ ಮಾಡುತ್ತೆ.
ನಿಂಬೆ ರಸ(Lemon juice) ಮತ್ತು ಹರ್ಬ್ಸ್-
ನೀವು ಆಹಾರದಲ್ಲಿ ಉಪ್ಪಿನ ಬದಲು ನಿಂಬೆ ರಸ ಮತ್ತು ಹರ್ಬ್ಸ್ ಬಳಸುವ ಮೂಲಕ ಸೋಡಿಯಂನ ಪ್ರಮಾಣ ಕಡಿಮೆ ಮಾಡಬಹುದು. ಇದರೊಂದಿಗೆ, ಉಪ್ಪಿನಕಾಯಿ, ಹಪ್ಪಳ, ಉಪ್ಪು ಹಾಕಿದ ಬಿಸ್ಕತ್ತು, ಉಪ್ಪು ಹಾಕಿದ ಬೆಣ್ಣೆ, ಚೀಸ್ ಮುಂತಾದ ಹೆಚ್ಚಿನ ಸೋಡಿಯಂ ಆಹಾರಗಳ ಸೇವನೆಯನ್ನು ತಪ್ಪಿಸಿ. ಆಹಾರದಲ್ಲಿ ಬದಲಾವಣೆ ಮಾಡುವುದರ ಜೊತೆಗೆ, ಪ್ರತಿದಿನ ವ್ಯಾಯಾಮ ಮಾಡಿ.