Methi Water Benefits: ಕೇವಲ ತಿಂಗಳ ಕಾಲ ಕುಡಿದು, ಕಮಾಲ್ ನೋಡಿ

First Published | Nov 15, 2021, 1:58 PM IST

ಇಲ್ಲಿಯವರೆಗೆ ನಾವು ಪರೋಟಾ ಅಥವಾ ತರಕಾರಿಗಳಲ್ಲಿ ಮೆಂತ್ಯೆಯನ್ನು (methi) ಬಳಸಿದ್ದೆವು. ಆದರೆ  ಆರೋಗ್ಯವನ್ನು (Health benefits) ಉತ್ತಮವಾಗಿಡಲು ನೀವು ಅದನ್ನು ಬಳಸಬಹುದು ಗೊತ್ತಾ?. ಹೌದು, ಇದನ್ನು ರಾತ್ರಿ ನೀರಿನಲ್ಲಿ ನೆನೆಸಿ ಬೆಳಿಗ್ಗೆ ಕುಡಿದರೆ  ಅನೇಕ ಸಮಸ್ಯೆಗಳನ್ನು ಗುಣಪಡಿಸಬಹುದು. ಮೆಂತ್ಯೆಯನ್ನು ಆಯುರ್ವೇದದಲ್ಲಿ ವರ್ಷಗಳಿಂದ ಬಳಸಲಾಗುತ್ತಿದೆ. ಇದು ಜೀರ್ಣಕ್ರಿಯೆಯನ್ನು ಗುಣಪಡಿಸುವ ಜೊತೆಗೆ ಕೊಲೆಸ್ಟ್ರಾಲ್ ನಿಯಂತ್ರಿಸಲು ಮತ್ತು ಕೆಮ್ಮು ಶೀತವನ್ನು ಗುಣಪಡಿಸುತ್ತದೆ. ಮೆಂತ್ಯದ ನೀರು (fenugreek water)  ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಎಂಬುದನ್ನು ನಾವಿಲ್ಲಿ ನಿಮಗೆ ತಿಳಿಸುತ್ತೇವೆ.

ಮೆಂತ್ಯದ ನೀರನ್ನು ಒಂದು ತಿಂಗಳ ಕಾಲ ಸೇವಿಸಿದರೆ ಆರೋಗ್ಯ (health) ಹಲವು ರೀತಿಯಲ್ಲಿ ಸುಧಾರಿಸಬಹುದು. ಮೆಂತ್ಯೆ ನೀರನ್ನು ತಯಾರಿಸಲು, ರಾತ್ರಿ ಮಲಗುವ ಮೊದಲು ಒಂದು ಲೋಟ ನೀರಿಗೆ ಎರಡು ಟೀ ಚಮಚ ಮೆಂತ್ಯೆ ಕಾಳುಗಳನ್ನು ಸೇರಿಸಿ ಮುಚ್ಚಿ. ಮರುದಿನ ಬೆಳಿಗ್ಗೆ ಈ ನೀರನ್ನು ಕುಡಿಯಿರಿ. ಮೆಂತ್ಯೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ, ಆದರೆ ರಾತ್ರಿಯಿಡೀ ನೀರಿನಲ್ಲಿ ನೆನೆಸಿ ಸೇವಿಸಿದರೆ ಆರೋಗ್ಯಕ್ಕೆ ಹೆಚ್ಚು ಪ್ರಯೋಜನವಾಗುತ್ತದೆ. ಇದರ ಸೇವನೆಯು ಮಧುಮೇಹಕ್ಕೂ ಸಹಕಾರಿ. ಮೆಂತ್ಯದ ನೀರನ್ನು ಸೇವಿಸುವುದರಿಂದ ಏನು ಪ್ರಯೋಜನ ಎಂಬುದನ್ನು ಇಲ್ಲಿ ತಿಳಿಯಿರಿ.

1.ಜೀರ್ಣಕ್ರಿಯೆ (digestion) 

ಮೆಂತ್ಯದ ನೀರು ಅಜೀರ್ಣ ಅಥವಾ ಮಲಬದ್ಧತೆ ಸಮಸ್ಯೆ ಎದುರಿಸುತ್ತಿರುವ ಜನರಿಗೆ ಒಳ್ಳೆಯದು. ಮೆಂತ್ಯೆಯಲ್ಲಿರುವ ಜೀರ್ಣಕಾರಿ ಕಿಣ್ವ ಮೇದೋಜೀರಕ ಗ್ರಂಥಿಯನ್ನು ಹೆಚ್ಚು ಸಕ್ರಿಯಗೊಳಿಸುತ್ತದೆ, ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಇದರಲ್ಲಿ ಸಾಕಷ್ಟು ಫೈಬರ್ ಇರುವುದರಿಂದ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ.

Tap to resize

2.ಕೊಲೆಸ್ಟ್ರಾಲ್ ನಿಯಂತ್ರಿಸಿ (control cholesterol) 

ಮೆಂತ್ಯೆ ಕಾಳುನೀರು ಕುಡಿದರೆ ಕೆಟ್ಟ ಕೊಲೆಸ್ಟ್ರಾಲ್ ನಿಂದ ದೇಹ ಗುಣಮುಖವಾಗಿ ಒಳ್ಳೆಯ ಕೊಲೆಸ್ಟ್ರಾಲ್ ದೇಹದಲ್ಲಿ ಹೆಚ್ಚು ಉತ್ಪತ್ತಿಯಾಗುತ್ತದೆ. ದೇಹದಲ್ಲಿ ಎಚ್ ಡಿಎಲ್ ಉತ್ತಮ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ.

3.ಶೀತ ಕೆಮ್ಮು ದೂರ (best for cough)
ಮೆಂತ್ಯೆ ಕಾಳುಗಳಲ್ಲಿ ಶೀತ ಕೆಮ್ಮು ನಿವಾರಿಸುವ ಮ್ಯೂಸಿಲೇಜ್ ಎಂಬ ಅಂಶ ಇದೆ. ಒಂದು ಟೀ ಚಮಚ ಮೆಂತ್ಯೆ ಕಾಳುಗಳನ್ನು ಒಂದು ಕಪ್ ನೀರಿನಲ್ಲಿ ಕುದಿಸಿ ಸೋಸಿ ನೀರು ಅರ್ಧ ಮುಗಿದ ಮೇಲೆ ಕುಡಿಯಿರಿ. ನಿಮ್ಮ ಶೀತ ಕೆಮ್ಮು ದೂರವಾಗುತ್ತದೆ. ಇದರಿಂದ ಆರೋಗ್ಯವೂ ಉತ್ತಮವಾಗಿರುತ್ತದೆ. ಇದನ್ನು ಪ್ರತಿದಿನ ಸೇವನೆ ಮಾಡಿದರೆ ಉತ್ತಮ. 

4.ಮಧುಮೇಹ ನಿಯಂತ್ರಣ (controls diabetes) 
ಇತ್ತೀಚಿನ ದಿನಗಳಲ್ಲಿ ಮಧುಮೇಹ ಹೆಚ್ಚಿನ ಜನರನ್ನು ಕಾಡುತ್ತಿರುವ ಆರೋಗ್ಯ ಸಮಸ್ಯೆ. ಇದಕ್ಕೆ ಮೆಂತೆ ಉತ್ತಮ ಮದ್ದು. ಖಾಲಿ ಹೊಟ್ಟೆಯಲ್ಲಿ ಮೆಂತ್ಯೆ ಕಾಳುಗಳನ್ನು ಕುಡಿಯುವುದರಿಂದ ಸಕ್ಕರೆ ಪ್ರಮಾಣ ನಿಯಂತ್ರಿಸಬಹುದು. ಮೆಂತ್ಯೆಯು ರಕ್ತದಲ್ಲಿ ಗ್ಲುಕೋಸ್ ಮಟ್ಟವನ್ನು ಕಡಿಮೆ ಮಾಡುತ್ತದೆ, 

5.ತೂಕವನ್ನು ನಿಯಂತ್ರಣಕ್ಕೆ (weight control)
ಮಕ್ಕಳಿಂದ ಹಿಡಿದು, ಹಿರಿಯರವರೆಗೆ ಹೆಚ್ಚಿನ ಜನ ತೂಕ ಹೆಚ್ಚಳದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ನಿಮಗೂ ತೂಕ ಹೆಚ್ಚಳದ ಸಮಸ್ಯೆ ಇದ್ದರೆ, ಮೆಂತ್ಯೆ ಕಾಳುಗಳ ನೀರನ್ನು ಬೆಳಿಗ್ಗೆ ಸೇವಿಸುವುದರಿಂದ ದಿನವಿಡೀ ಹಸಿವು ಕಡಿಮೆಯಾಗುತ್ತದೆ. ಇದು ತೂಕ ಇಳಿಸಲು ನೆರವಾಗುತ್ತದೆ. 

6.ಮೂತ್ರಪಿಂಡಗಳಿಗೆ ಪ್ರಯೋಜನಕಾರಿ (helpful for kidney)
ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರೆ, ವೈದ್ಯರ ಸಲಹೆ ಮೇರೆಗೆ ಒಂದು ತಿಂಗಳ ಕಾಲ ಮೆಂತ್ಯದ ನೀರನ್ನು ಕುಡಿಯಿರಿ. ಇದರಲ್ಲಿ ಆಂಟಿ ಆಕ್ಸಿಡೆಂಟ್ ಅಂಶಗಳು ಇವೆ, ಇದು ಮೂತ್ರಪಿಂಡಗಳ ಆರೋಗ್ಯಕ್ಕೆ ಒಳ್ಳೆಯದು. ಮೂತ್ರ ಪಿಂಡದ ಸೋಂಕು, ಮೂತ್ರದ ಸಮಸ್ಯೆ ಮೊದಲಾದ ಹಲವು ಸಮಸ್ಯೆಗಳ ನಿವಾರಣೆಗೆ ಮೆಂತೆ ನೀರು ಉತ್ತಮ ಪರಿಹಾರ. 

7.ಹೃದಯಕ್ಕೆ ಪ್ರಯೋಜನಕಾರಿ (good for heart)
ಮೆಂತ್ಯೆ ಹೃದಯಕ್ಕೆ ಸಾಕಷ್ಟು ಒಳ್ಳೆಯದು. ಇದರಲ್ಲಿ ಹೈಪೋಕೊಲೆಸ್ಟರಾಲ್ಮಿಕ್ ಅಂಶವಿದೆ, ಇದು ಕೊಲೆಸ್ಟ್ರಾಲ್ ನಿಯಂತ್ರಣ ಮಾಡುತ್ತದೆ. ಪ್ರತಿದಿನ ನಿಯಮಿತವಾಗಿ ಮೆಂತೆ ನೀರು ಸೇವಿಸುತ್ತಿದ್ದರೆ,  ಇದು ಹೃದಯವನ್ನು ಆರೋಗ್ಯಕರವಾಗಿರಿಸುತ್ತದೆ. ಇದರ ಸೇವನೆ ರಕ್ತ ಪರಿಚಲನೆಯನ್ನು ಸಹ ಸುಧಾರಿಸುತ್ತದೆ.

8.ಚರ್ಮಕ್ಕಾಗಿ (effective for skin)
ಮೆಂತ್ಯದ ನೀರು ಚರ್ಮಕ್ಕೆ ಸಾಕಷ್ಟು ಪ್ರಯೋಜನಕಾರಿ. ಇದು ಚರ್ಮದ ಅಲರ್ಜಿ, ತುರಿಕೆ ಮೊದಲಾದ ಸಮಸ್ಯೆಯನ್ನು ನಿವಾರಿಸುತ್ತದೆ ಮತ್ತು  ಮೊಡವೆಯ ಸಮಸ್ಯೆಯನ್ನು ಸಹ ನಿವಾರಿಸುತ್ತದೆ. ಇದು ಆಂಟಿಏಜಿಂಗ್ ಗುಣಗಳನ್ನು ಸಹ ಹೊಂದಿದೆ ಮತ್ತು ಚರ್ಮವನ್ನು ಹೈಡ್ರೇಟ್ ಆಗಿರಿಸುತ್ತದೆ. ಒಟ್ಟಿನಲ್ಲಿ ಚರ್ಮದ ಉತ್ತಮ ಆರೈಕೆಗೆ ಇದು ಬೆಸ್ಟ್ ಪರಿಹಾರ. 

9.ಕೂದಲಿಗೆ (for healthy hair)
ಮೆಂತ್ಯೆ ಕಾಳುಗಳನ್ನು ರಾತ್ರಿಯಿಡೀ ನೆನೆಸಿ ಬೆಳಗ್ಗೆ ರುಬ್ಬಿಕೂದಲಿನ ಬೇರುಗಳಿಗೆ ಲೇಪಿಸಿದರೆ ಕೂದಲು ಉದುರುವುದು ನಿಂತು ಹೊಳಪನ್ನು ಪಡೆಯುತ್ತದೆ. ಜೊತೆಗೆ ಕೂದಲನ್ನು ರೇಷ್ಮೆಯಂತಾಗಿಸುತ್ತದೆ. ಇನ್ನು ಮೆಂತೆ ಕಾಳುಗಳನ್ನು ತೆಂಗಿನ ಎಣ್ಣೆಗೆ ಹಾಕಿ ಬಿಸಿ ಮಾಡಿ, ತಲೆಗೆ ಹಚ್ಚುವುದುದರಿಂದ ಕೂದಲಿನ ಹಲವಾರು ಸಮಸ್ಯೆಗಳು ನಿವಾರಣೆಯಾಗುತ್ತವೆ. 

Latest Videos

click me!