ನೀರು ನಮ್ಮ ದೇಹಕ್ಕೆ ತುಂಬಾನೇ ಅವಶ್ಯಕ ಮತ್ತು ಪ್ರಯೋಜನಕಾರಿ, ಅದಕ್ಕಾಗಿಯೇ ದಿನಕ್ಕೆ ಎರಡರಿಂದ ಮೂರು ಲೀಟರ್ ನೀರನ್ನು ಕುಡಿಯಬೇಕು ಎಂದು ಸಲಹೆ ನೀಡಲಾಗುತ್ತದೆ. ಆದರೆ ಅಷ್ಟೊಂದು ನೀರು ಕುಡಿಯುವುದು (drinking water) ನಿಜವಾಗಿಯೂ ನಮ್ಮ ಆರೋಗ್ಯಕ್ಕೆ ಒಳ್ಳೆಯದೇ? ನಿಜ ಹೇಳಬೇಕು ಅಂದ್ರೆ, ನಮ್ಮ ದೇಹದ ಅಗತ್ಯಗಳಿಗೆ ಅನುಗುಣವಾಗಿ ನಾವು ನೀರನ್ನು ಕುಡಿಯಬೇಕು,, ನಮ್ಮ ದೇಹಕ್ಕೆ ಎಷ್ಟು ನೀರು ಬೇಕು ಅನ್ನೋದನ್ನು ಮೂತ್ರದ ಬಣ್ಣದ ಮೂಲಕ ತಿಳಿಯಬಹುದು. ನೀವು ಆಗಾಗ್ಗೆ ಅತಿಯಾದ ಬಾಯಾರಿಕೆಯನ್ನು ಅನುಭವಿಸುತ್ತಿದ್ದರೆ, ಅದು ದೇಹದಲ್ಲಿನ ಸಮಸ್ಯೆಯನ್ನು ಸೂಚಿಸಬಹುದು, ಇದು ಆರೋಗ್ಯಕ್ಕೆ ಅಪಾಯಕಾರಿ. ನಿರಂತರ ಅತಿಯಾದ ಬಾಯಾರಿಕೆ ಒಳ್ಳೆಯ ಸಂಕೇತವಲ್ಲ. ನಿಮಗೆ ದಿನವಿಡೀ ಬಾಯಾರಿಕೆಯಾದರೆ, ಅದು ಗಂಭೀರ ಕಾಯಿಲೆಗಳ ಸಂಕೇತವಾಗಿರಬಹುದು.