ರಾತ್ರಿ 8.30ರ ಮುನ್ನ ಈ ಕೆಲಸ ಮಾಡ್ಬೇಡಿ… ಹೃದಯದ ಸಮಸ್ಯೆ ಹೆಚ್ಚುತ್ತೆ!

Published : Feb 27, 2025, 04:48 PM ISTUpdated : Feb 27, 2025, 05:17 PM IST

ಹೃದ್ರೋಗವನ್ನು ತಡೆಗಟ್ಟುವಲ್ಲಿ ಜೀವನಶೈಲಿ ಪ್ರಮುಖ ಪಾತ್ರ ವಹಿಸುತ್ತದೆ. ಒಂಟಿತನ, ಅತಿಯಾಗಿ ತಿನ್ನುವುದು ಮತ್ತು ಹೆಚ್ಚು ಸಮಯ ಕುಳಿತುಕೊಳ್ಳುವುದು ಎಲ್ಲವೂ ಹೃದ್ರೋಗವನ್ನು ಉಂಟು ಮಾಡುತ್ತೆ.   

PREV
15
ರಾತ್ರಿ 8.30ರ ಮುನ್ನ ಈ ಕೆಲಸ ಮಾಡ್ಬೇಡಿ… ಹೃದಯದ ಸಮಸ್ಯೆ ಹೆಚ್ಚುತ್ತೆ!

ಇತ್ತೀಚಿನ ದಿನಗಳಲ್ಲಿ ಹೃದ್ರೋಗವು (heart disease) ಸಾವಿಗೆ ಪ್ರಮುಖ ಕಾರಣವಾಗಿದೆ ಎಂದು ಹೃದ್ರೋಗ ತಜ್ಞರು ಹೇಳುತ್ತಾರೆ. ಆದ್ದರಿಂದ, ನಿಮ್ಮ ಸಾವಿನ ಅಪಾಯವನ್ನು ಕಡಿಮೆ ಮಾಡಲು ಎಲ್ಲಾ ಪ್ರಯತ್ನಗಳನ್ನು ಮಾಡುವುದು ಅತ್ಯಗತ್ಯ. ಹೃದ್ರೋಗಗಳನ್ನು ತಪ್ಪಿಸಲು ಸಮತೋಲಿತ ಆಹಾರ, ವ್ಯಾಯಾಮ, ಧೂಮಪಾನ, ಮದ್ಯಪಾನವನ್ನು ತ್ಯಜಿಸಲು ತಜ್ಞರು ಶಿಫಾರಸು ಮಾಡುತ್ತಾರೆ. ಆದರೆ ಹೃದ್ರೋಗಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ನೀವು ಏನನ್ನು ಮಾಡಬಹುದು ಅನ್ನೋದನ್ನು ನೋಡೋಣ. 
 

25

ಅತಿಯಾಗಿ ತಿನ್ನೋದನ್ನು ತಪ್ಪಿಸಿ
ದಿ ಸನ್ ವರದಿಯ ಪ್ರಕಾರ, ಹೃದ್ರೋಗ ತಜ್ಞ ಡಾ.ಜೊನಾಥನ್ ಬೆಹರ್ ಅವರು ಹೃದ್ರೋಗಗಳನ್ನು ತಪ್ಪಿಸಲು 4 ಪ್ರಮುಖ ವಿಷಯಗಳ ಮೇಲೆ ಹೇಗೆ ಕೇಂದ್ರೀಕರಿಸಬಹುದು ಅನ್ನೋದನ್ನು ವಿವರಿಸಿದ್ದಾರೆ. ಮೊದಲನೆಯದು ಅತಿಯಾಗಿ ತಿನ್ನೋದನ್ನು (over eating) ತಪ್ಪಿಸುವುದು. ಕೊಬ್ಬು, ಉಪ್ಪು ಮತ್ತು ಸಕ್ಕರೆ ಹೆಚ್ಚಿರುವ ಆಹಾರವನ್ನು ಸಾಧ್ಯವದಷ್ಟು ಅವಾಯ್ಡ್ ಮಾಡಿ.

35

10 ಗಂಟೆಗಳ ಕಾಲ ಕುಳಿತುಕೊಂಡಿರುವುದು
ಜಡ ಜೀವನಶೈಲಿ ಅಧಿಕ ರಕ್ತದೊತ್ತಡ (high blood pressure), ಅಧಿಕ ಕೊಲೆಸ್ಟ್ರಾಲ್ ಮತ್ತು ಬೊಜ್ಜನ್ನು ಹೆಚ್ಚಿಸುತ್ತದೆ. ಇದು ಹೃದಯಾಘಾತ ಮತ್ತು ಪಾರ್ಶ್ವವಾಯುವಿನ ಅಪಾಯವನ್ನು ಹೆಚ್ಚಿಸುತ್ತದೆ. ದೀರ್ಘಕಾಲದವರೆಗೆ ಕುಳಿತುಕೊಳ್ಳುವುದು, ವಿಶೇಷವಾಗಿ ದಿನಕ್ಕೆ 10 ಗಂಟೆಗಳಿಗಿಂತ ಹೆಚ್ಚು ಕಾಲ ಕುಳಿತುಕೊಳ್ಳುವುದು ಹೃದಯದ ಆರೋಗ್ಯಕ್ಕೆ ಹಾನಿಕಾರಕ ಎಂದು ಹಲವಾರು ಅಧ್ಯಯನಗಳು ಸೂಚಿಸಿವೆ. ಆದ್ದರಿಂದ, ಮೆಟ್ಟಿಲುಗಳನ್ನು ಹತ್ತುವುದು ಮತ್ತು ನಡೆಯುವುದು ಮುಂತಾದ ಅಭ್ಯಾಸಗಳನ್ನು ನಿಮ್ಮ ಜೀವನಶೈಲಿಯಲ್ಲಿ (lifestyle) ಅಳವಡಿಸಿಕೊಳ್ಳಿ.

45

ರಾತ್ರಿ 8:30 ರ ಮೊದಲು ಸೋಫಾದ ಮೇಲೆ ಕುಳಿತುಕೊಳ್ಳುವುದು 
ದಿನದ ಕೊನೆಯಲ್ಲಿ ವಿಶ್ರಾಂತಿ ಪಡೆಯೋದು ಒಳ್ಳೆಯದು, ಆದರೆ ಅತಿಯಾಗಿ ವಿಶ್ರಾಂತಿ ಪಡೆಯೋದು ಜಡ ಜೀವನಶೈಲಿಯನ್ನು ಉತ್ತೇಜಿಸುತ್ತದೆ. ಡಾ. ಬೆಹರ್ ಅವರು ರಾತ್ರಿ 8:30 ರ ಮೊದಲು ತಮ್ಮ ಸೋಫಾದ ಮೇಲೆ ಕುಳಿತುಕೊಳ್ಳದಿರಲು ಪ್ರಯತ್ನಿ ಎನ್ನುತ್ತಾರೆ. ಅಂದರೆ ರಾತ್ರಿ 8.30ರವರೆಗೂ ಏನಾದರೊಂದು ಚಟುವಟಿಕೆ ಮಾಡುತ್ತಲೇ ಇರಿ. ಅಥವಾ ನಿಂತೇ ಇರುವುದು, ಸಣ್ಣದಾಗಿ ವಾಕ್ ಮಾಡುವುದು ಉತ್ತಮ. ಇದು ಕ್ಯಾಲೊರಿಗಳನ್ನು ಬರ್ನ್ ಮಾಡುತ್ತೆ. ಆದರೆ 8.30ಕ್ಕೂ ಮುನ್ನ ಅಂದರೆ ಊಟ ಮಾಡಿದ ತಕ್ಷಣ ಸೋಫಾದಲ್ಲಿ ಹಾಸಿನರಾದರೆ ಆರೋಗ್ಯ ಕೆಡುವುದು ಖಚಿತ. 

55

ಒಂಟಿತನವು ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ
ಸಮಾಜದಿಂದ ಬೇರೆಯಾಗಿರುವುದು ಮತ್ತು ಒಂಟಿತನವು (loneliness) ಹೃದ್ರೋಗ ಮತ್ತು ಪಾರ್ಶ್ವವಾಯುವಿನ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಸಂಶೋಧನೆ ತೋರಿಸುತ್ತದೆ. ನೀವು ಜನರೊಂದಿಗೆ ಬೆರೆತಷ್ಟು ನಿಮ್ಮ ಆರೋಗ್ಯ ಕೂಡ ಉತ್ತಮವಾಗಿರುತ್ತೆ. ಹಾಗಾಗಿ ಸಾಧ್ಯವಾದಷ್ಟು ನಿಮ್ಮ ಸ್ನೇಹಿತರನ್ನು, ಕುಟುಂಬದವರನ್ನು ಭೇಟಿಯಾಗಿ ಅವರೊಂದಿಗೆ ಸಮಯ ಕಳೆಯೋದನ್ನು ಮರೆಯಬೇಡಿ. 

click me!

Recommended Stories