ಒಂದೇ ವರ್ಷದಲ್ಲಿ 45 ಕೆಜಿ ತೂಕ ಇಳಿಸಿಕೊಂಡ ಫಿಟ್‌ನೆಸ್ ಇನ್‌ಫ್ಲುಯೆನ್ಸರ್‌ ಸಾವು

First Published | Sep 21, 2023, 12:55 PM IST

ಬ್ರೆಜಿಲ್‌ನ ಫಿಟ್‌ನೆಸ್ ಇನ್‌ಫ್ಲುಯೆನ್ಸರ್‌ ಮಹಿಳೆಯೊಬ್ಬರು ಒಂದೇ ವರ್ಷದಲ್ಲಿ 45 ಕೇಜಿ ತೂಕ ಇಳಿಸಿಕೊಂಡಿದ್ದು, ನಿಗೂಢವಾಗಿ ಸಾವನ್ನಪ್ಪಿದ್ದಾರೆ.  49 ವರ್ಷದ ಆಡ್ರಿಯಾನಾ ಥೈಸೆನ್ ಸಾವಿಗೀಡಾದವರು. ಇವರು ಕೇವಲ ಒಂದೇ ವರ್ಷದಲ್ಲಿ 45 ಕೇಜಿ ತೂಕ ಇಳಿಸಿಕೊಂಡು ಫೇಮಸ್ ಆಗಿದ್ದರು. ಇವರು ಸಾವಿಗೀಡಾಗಿರುವ ಬಗ್ಗೆ ಇವರ ಸೋದರ ಸಂಬಂಧಿ ಇನ್ಸ್ಟಾಗ್ರಾಮ್‌ನಲ್ಲಿ ತಿಳಿಸಿದ್ದಾರೆ. ಇವರು ಇನ್ಸ್ಟಾಗ್ರಾಮ್‌ನಲ್ಲಿ blogdadrika ಎಂದೇ ಫೇಮಸ್ ಆಗಿದ್ದರು. 

Adriana Thyssen

ಬ್ರೆಜಿಲ್‌ನ ಫಿಟ್‌ನೆಸ್ ಇನ್‌ಫ್ಲುಯೆನ್ಸರ್‌ ಮಹಿಳೆಯೊಬ್ಬರು ಒಂದೇ ವರ್ಷದಲ್ಲಿ 45 ಕೇಜಿ ತೂಕ ಇಳಿಸಿಕೊಂಡಿದ್ದು, ನಿಗೂಢವಾಗಿ ಸಾವನ್ನಪ್ಪಿದ್ದಾರೆ.  49 ವರ್ಷದ ಆಡ್ರಿಯಾನಾ ಥೈಸೆನ್ ಸಾವಿಗೀಡಾದವರು. 

Adriana Thyssen

ಇವರು ಕೇವಲ ಒಂದೇ ವರ್ಷದಲ್ಲಿ 45 ಕೇಜಿ ತೂಕ ಇಳಿಸಿಕೊಂಡು ಫೇಮಸ್ ಆಗಿದ್ದರು. ಇವರು ಸಾವಿಗೀಡಾಗಿರುವ ಬಗ್ಗೆ ಇವರ ಸೋದರ ಸಂಬಂಧಿ ಇನ್ಸ್ಟಾಗ್ರಾಮ್‌ನಲ್ಲಿ ತಿಳಿಸಿದ್ದಾರೆ. ಇವರು ಇನ್ಸ್ಟಾಗ್ರಾಮ್‌ನಲ್ಲಿ blogdadrika ಎಂದೇ ಫೇಮಸ್ ಆಗಿದ್ದರು. 

Tap to resize

Adriana Thyssen

ನಾವು, ದೃಕಾ ಬ್ಲಾಗ್ ಮತ್ತು ಡ್ರಿಕಾ ಸ್ಟೋರ್ ಟೀಮ್ ಮತ್ತು ನಮ್ಮ ಕುಟುಂಬವು ನಮ್ಮ ಪ್ರೀತಿಯ ದೃಕಾ ಅವರು ಅಕಾಲಿಕವಾಗಿ ಸಾವಿಗೀಡಾಗಿದ್ದಾರೆ ಎಂಬುದನ್ನು ತಿಳಿಸಲು ವಿಷಾದಿಸುತ್ತೇವೆ. ಈ ದುಃಖಕರವಾದ ಸಂದರ್ಭದಲ್ಲಿ ನಾವು ಎಲ್ಲರ ಪ್ರಾರ್ಥನೆಯನ್ನು ಬಯಸುತ್ತೇವೆ ಎಂದು ಬರೆದುಕೊಂಡಿದ್ದಾರೆ.  

Adriana Thyssen

ಆಡ್ರಿಯಾನಾ  ಥೈಸೆನ್ ಸೆಪ್ಟೆಂಬರ್ 17 ರಂದೇ ಮೃತಪಟ್ಟಿದ್ದಾರೆ.  ಥೈಸೆನ್ ಸೆಪ್ಟೆಂಬರ್ 17 ರಂದು ಬ್ರೆಸಿಲಿಯಾದ ದಕ್ಷಿಣದಲ್ಲಿರುವ ಉಬರ್‌ಲ್ಯಾಂಡಿಯಾದಲ್ಲಿನ ತನ್ನ ನಿವಾಸದಲ್ಲಿ ಮೃತಪಟ್ಟಿದ್ದಾರೆ. ಆದರೆ ಆಕೆಯ ಸಾವಿಗೆ ನಿಖರವಾದ ಕಾರಣವನ್ನು ಆಕೆಯ ಕುಟುಂಬ ಇನ್ನೂ ಬಹಿರಂಗಪಡಿಸಿಲ್ಲ.

Adriana Thyssen

ಗಮನಾರ್ಹವಾಗಿ ತೂಕ ಇಳಿಕೆ ಮಾಡಿದ  ಕಾರಣಕ್ಕೆ ಅವರು ಇನ್ಸ್ಟಾಗ್ರಾಮ್‌ನಲ್ಲಿ ಸಾಕಷ್ಟು ಖ್ಯಾತಿ ಗಳಿಸಿದ್ದರು.  ಆರು ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಅವರು ತಮ್ಮ ಈ ತೂಕ ಇಳಿಕೆಯ ಪಯಣವನ್ನು ಅವರೊಂದಿಗೆ ಹಂಚಿಕೊಳ್ಳುವ ಮೂಲಕ ಫೇಮಸ್ ಆಗಿದ್ದರು. 

Adriana Thyssen

ವಿಚ್ಛೇದನಕ್ಕೊಳಗಾಗಿ ವೈಯಕ್ತಿಕ ಬದುಕಿನಲ್ಲಿ ಕಾಣಿಸಿಕೊಂಡ ಏರುಪೇರುಗಳಿಂದ ಹಿಡಿದು ಮಾದಕ ವ್ಯಸನ, ಖಿನ್ನತೆಗೂ ಒಳಗಾಗಿದ್ದ ಅವರು ಅವುಗಳೆಲ್ಲವೂಗಳಿಂದ ಹೊರ ಬಂದು ಸುಂದರ ಜೀವನ ನಡೆಸಲಾರಂಭಿಸಿದ ಅವರ ಜೀವನ ಅನೇಕರಿಗೆ ಪ್ರೇರಣೆಯಾಗಿತ್ತು.

Adriana Thyssen

ಅವರು ತಮ್ಮ ಹಲವು ವೀಡಿಯೋಗಳಲ್ಲಿ ತಾವು ಹಲವರು ವೈಯಕ್ತಿಕ ಸಮಸ್ಯೆಗಳಿಂದ ಖಿನ್ನತೆಗೆ ಜಾರಿ ತೊಳಲಾಡುತ್ತಿದ್ದ ಕ್ಷಣಗಳ ಬಗ್ಗೆ ಮಾತನಾಡಿದ್ದಾರೆ. ಅಲ್ಲದೇ ಬಾಲ್ಯದಿಂದಲೂ ಇದ್ದ ಸ್ಥೂಲ ಕಾಯದ ಸಮಸ್ಯೆಯ ಬಗ್ಗೆ ಮಾತನಾಡಿದ್ದಾರೆ. 

Adriana Thyssen

39ರ ಹರೆಯಕ್ಕೆ ತಾನು 100 ಕೆಜಿ ತೂಗುತ್ತಿದೆ ಎಂದು ಅವರು ಹೇಳಿಕೊಂಡಿದ್ದರು. ಇಷ್ಟೊಂದು ತೂಕ ಏರಿಕೆಯಾದ ನಂತರ ಅವರು ಹೀಗಿದ್ದರೆ ಸರಿ ಹೋಗದು ಎಂದು ತೂಕ ನಷ್ಟಕ್ಕೆ ಹಲವು ರೀತಿಯ ಆಹಾರ ಪ್ರಯೋಗಗಳನ್ನು ಮಾಡಿದ್ದರು. 

Adriana Thyssen

ಪ್ರಾರಂಭದ 6 ತಿಂಗಳಲ್ಲಿ 36 ಕೆಜಿಗಳಷ್ಟು ತೂಕ ಇಳಿಸಿಕೊಂಡ ಅವರು ನಂತರ 7ನೇ ತಿಂಗಳಲ್ಲಿ 9 ಕೇಜಿ ತೂಕ ಇಳಿಸಿಕೊಂಡಿದ್ದರು. 

Adriana Thyssen

ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವಂತೆ ಮನವಿ ಮಾಡುತ್ತಿದ್ದ ಅವರು ತನ್ನ ಬದ್ಧತೆ ಹೇಗೆ ತೂಕ ಇಳಿಕೆಗೆ ಸಹಾಯವಾಯ್ತು ಎಂಬುದನ್ನು ತಮ್ಮ ಫಾಲೋವರ್‌ಗಳ ಜೊತೆ ಹಂಚಿಕೊಂಡಿದ್ದರು.  ಆದರೆ ಈಗ ಅವರ ದಿಢೀರ್ ಸಾವು ಅವರ ಸಾವಿರಾರು ಅಭಿಮಾನಿಗಳಿಗೆ ಬೇಸರ ಉಂಟು ಮಾಡಿದೆ. 

Latest Videos

click me!