ನೀವು ಇನ್’ಸ್ಟಂಟ್ ಕಾಫಿ ಪ್ರಿಯರೇ? ಹಾಗಿದ್ರೆ ಇದನ್ನ ನೀವು ಓದಲೇಬೇಕು…

First Published | Jan 16, 2024, 7:00 AM IST

ಬೇಗನೆ ಕಾಫಿ ರೆಡಿಯಾಗಲಿ ಎಂದು ಇನ್’ಸ್ಟಂಟ್ ಕಾಫಿ ಕುಡಿತೀರಾ. ಆದರೆ ಈ ಇನ್ ಸ್ಟಂಟ್ ಕಾಫಿ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಅನ್ನೋದು ಗೊತ್ತಿದೆಯೇ?, ಒಳ್ಳೆಯದು ಅಥವಾ ಕೆಟ್ಟದು? ಇಂದು ನಾವು ಈ ಲೇಖನದ ಮೂಲಕ ತಿಳಿಯಲು ಪ್ರಯತ್ನಿಸುತ್ತೇವೆ.
 

ಇಂದಿನ ಒತ್ತಡದ ಜೀವನಶೈಲಿಯಲ್ಲಿ (stressed lifestyle), ಪ್ರತಿಯೊಬ್ಬ ವ್ಯಕ್ತಿಗೆ ಎಲ್ಲವೂ ಫಟಾ ಫಟ್ ಆಗಿ ಸಿಗಬೇಕು. ಅದು ತಿಂಡಿಯೇ ಇರಲಿ, ಕೆಲಸವೇ ಇರಲಿ ಏನೇ ಆಗಿರಲಿ ಎಲ್ಲವೂ ಶೀಘ್ರದಲ್ಲೇ ಆಗಬೇಕು. ಉದಾಹರಣೆಗೆ ತ್ವರಿತ ಇನ್ ಸ್ಟಂಟ್ ಫುಡ್, ಕಾಫಿ, ಧರಿಸಲು ಸಿದ್ಧವಾದ ಬಟ್ಟೆಗಳು. ಮತ್ತು ಇತರ ವಸ್ತುಗಳು ಎಲ್ಲವೂ ರೆಡಿಯಾಗಿ ಸಿಕ್ರೆ ಅದಕ್ಕಿಂತ ಖುಷಿ ನಮಗೆ ಬೇರೆ ಏನಿದೆ ಅಲ್ವ?  ಆದರೆ ಇನ್’ಸ್ಟಂಟ್ ಆಹಾರ ಮತ್ತು ಕಾಫಿ ಆರೋಗ್ಯಕ್ಕೆ ಪ್ರಯೋಜನಕಾರಿಯೇ? 
 

ಮಾರುಕಟ್ಟೆಯಲ್ಲಿ ಇನ್’ಸ್ಟಂಟ್ ಕಾಫಿಯ (instant coffee) ಟ್ರೆಂಡ್ ಹೆಚ್ಚಾಗಿದೆ. ಇದು ಸ್ಯಾಚೆನಲ್ಲಿ ಕಾಫಿ ಪುಡಿಯನ್ನು ಹೊಂದಿರುತ್ತದೆ. ಈ ಪುಡಿಗೆ ಹಾಲು ಮತ್ತು ಸಕ್ಕರೆ ಬೆರೆಸಲಾಗುತ್ತದೆ. ನೀವು ಮಾಡಬೇಕಾಗಿರುವುದು ಇದನ್ನು ಬಿಸಿ ನೀರಿನಲ್ಲಿ ಬೆರೆಸಿ ಕುಡಿಯುವುದು. ಕಾಫಿಯನ್ನು ಇಷ್ಟಪಡುವ ಜನರು ಈ ಇನ್’ಸ್ಟಂಟ್ ಕಾಫಿಯನ್ನು ತುಂಬಾ ಇಷ್ಟಪಡ್ತಾರೆ. ಇಂದು ಆದರೆ ಅದು ಪ್ರಯೋಜನಕಾರಿಯೇ ಅಥವಾ ಅಲ್ಲವೇ ಅನ್ನೋದನ್ನು ನೋಡೋಣ. 
 

Latest Videos


ಇನ್’ಸ್ಟಂಟ್ ಕಾಫಿ ಆರೋಗ್ಯಕ್ಕೆ ಒಳ್ಳೆಯದೇ ಅಥವಾ ಕೆಟ್ಟದ್ದೇ?
ಒಂದು ಮಿತಿಯವರೆಗೆ ಕಾಫಿ ಕುಡಿಯುವುದು ಸರಿ. ಕಾಫಿ ಕುಡಿಯುವುದರಿಂದ ಖಿನ್ನತೆ , ಹೃದ್ರೋಗ ಮತ್ತು ಟೈಪ್ 2 ಮಧುಮೇಹದಂತಹ (type 2 diabetes) ಗಂಭೀರ ಕಾಯಿಲೆಗಳನ್ನು ತಡೆಯುತ್ತದೆ. ಇನ್’ಸ್ಟಂಟ್ ಕಾಫಿಯಲ್ಲಿ ಸಾಕಷ್ಟು ಸಕ್ಕರೆ ಇರುತ್ತದೆ. ಇದನ್ನು ಅತಿಯಾಗಿ ಕುಡಿಯುವುದು ಆರೋಗ್ಯಕ್ಕೆ ತುಂಬಾ ಅಪಾಯಕಾರಿ ಎಂದು ಹೇಳಲಾಗುತ್ತದೆ.

ಇನ್’ಸ್ಟಂಟ್ ಕಾಫಿಯಲ್ಲಿ ಕೊಬ್ಬು ತುಂಬಾ ಹೆಚ್ಚಾಗಿರುತ್ತೆ. ಇದನ್ನ ನಿರಂತರವಾಗಿ  ಕುಡಿಯೋದರಿಂದ ತೂಕ ಹೆಚ್ಚಾಗಬಹುದು. ಮತ್ತು ರಕ್ತದ ಸಕ್ಕರೆಯ ಮಟ್ಟವೂ ಹೆಚ್ಚಾಗಲು ಪ್ರಾರಂಭಿಸುತ್ತದೆ. ಹಾಲಿಗೆ ಅಲರ್ಜಿ (allergy)  ಇರುವವರು ಇನ್’ಸ್ಟಂಟ್ ಕಾಫಿ ಕುಡಿಯಬಾರದು ಏಕೆಂದರೆ ಇದು ಆರೋಗ್ಯಕ್ಕೆ ಒಳ್ಳೇದಲ್ಲ.

ಕಾಫಿ ಬದಲು ಈ ಆರೋಗ್ಯಕರ ಡ್ರಿಂಕ್ಸ್ ಟ್ರೈ ಮಾಡಿ  
ಕಾಫಿಯ ಬದಲು, ನೀವು ಗಿಡಮೂಲಿಕೆ ಚಹಾವನ್ನು ಸಹ ಪ್ರಯತ್ನಿಸಬಹುದು. ಉದಾಹರಣೆಗೆ, ಪುದೀನಾ (Pudeena Tea) ಚಹಾ ಅಥವಾ ಶುಂಠಿ ಚಹಾ, ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.

ಕಾಫಿ ಬದಲು, ನೀವು ಗ್ರೀನ್ ಟೀ ಕುಡಿಯಬಹುದು ಏಕೆಂದರೆ ಇದರಲ್ಲಿ ಸಾಕಷ್ಟು ಉತ್ಕರ್ಷಣ ನಿರೋಧಕಗಳಿವೆ. 
ಚಳಿಗಾಲದಲ್ಲಿ, ನೀವು ಕಾಫಿಯ ಬದಲು ಅರಿಶಿನ ಮತ್ತು ಹಾಲನ್ನು(turmeric milk) ಸಹ ಕುಡಿಯಬಹುದು ಏಕೆಂದರೆ ಇದು ದೇಹ ಬೆಚ್ಚಗಿಡಲು ಕೆಲಸ ಮಾಡುತ್ತದೆ

ವಿಟಮಿನ್ ಸಿ ಇರುವುದರಿಂದ ನೀವು ಚಳಿಗಾಲದಲ್ಲಿ ನಿಂಬೆರಸವನ್ನು ಸಹ ಕುಡಿಯಬಹುದು. ಇದು ರೋಗ ನಿರೋಧಕ ಶಕ್ತಿಯನ್ನು (immunity power) ಹೆಚ್ಚಿಸಲು ಕೆಲಸ ಮಾಡುತ್ತದೆ. 
ಅಷ್ಟೇ ಯಾಕೆ ನೀವು ಎಳನೀರನ್ನು ಸಹ ಬಳಸಬಹುದು. ಇದು ದೇಹವನ್ನು ದೀರ್ಘಕಾಲದವರೆಗೆ ಹೈಡ್ರೇಟ್ ಆಗಿರಿಸುತ್ತೆ. 

click me!