ಉಪ್ಪಿನಕಾಯಿ ನೋಡಿದ್ರೆ ಬಾಯಲ್ಲಿ ನೀರೂರುತ್ತಾ…ಈ ಅಭ್ಯಾಸ ನಿಮ್ಮನ್ನ ಆಸ್ಪತ್ರೆಗೂ ಸೇರಿಸಬಹುದು!

First Published | Jul 16, 2024, 4:04 PM IST

ಉಪ್ಪಿನಕಾಯಿಯನ್ನು ಪ್ರತಿದಿನ ಅಥವಾ ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದು ಸರಿಯಲ್ಲ, ಇದು ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಅಧಿಕ ರಕ್ತದೊತ್ತಡದ ರೋಗಿಗಳು ಅದರಿಂದ ದೂರವಿರಬೇಕು. ಉಪ್ಪಿನಕಾಯಿ ಅತಿಯಾಗಿ ಸೇವಿಸೋದರ ಅಡ್ಡಿ ಪರಿಣಾಮ ತಿಳಿಯೋಣ. 
 

ಉಪ್ಪಿನಕಾಯಿ (pickles) ನಮ್ಮ ಭಾರತೀಯ ಅಡುಗೆಯಲ್ಲಿ ಮುಖ್ಯವಾಗಿ ಬಳಸುವ ಆಹಾರ. ಊಟದ ರುಚಿಯನ್ನು ಹೆಚ್ಚಿಸಲು ಸಾವಿರಾರು ವರ್ಷಗಳಿಂದ ಉಪ್ಪಿನಕಾಯಿಯನ್ನು ಬಳಸಲಾಗುತ್ತಿದೆ. ಉಪ್ಪಿನಕಾಯಿಗಳನ್ನು ವಿವಿಧ ತರಕಾರಿಗಳು ಮತ್ತು ಹಣ್ಣುಗಳಿಂದ ತಯಾರಿಸಲಾಗುತ್ತದೆ. ಇದಕ್ಕೆ ಉಪ್ಪು, ಎಣ್ಣೆ ಮತ್ತು ಮಸಾಲೆ ಸೇರಿಸಿ ಮಾಡೋದ್ರಿಂದ ನೋಡುತ್ತಿದ್ದಂತೆ ಬಾಯಲ್ಲಿ ನೀರೂರುತ್ತೆ. ಉಪ್ಪಿನಕಾಯಿ ತಿನ್ನಲು ತುಂಬಾ ರುಚಿ. ಇದರ ವಿಶಿಷ್ಟ ರುಚಿಯಿಂದಾಗಿ ಜನ ಮತ್ತೆ ಮತ್ತೆ ಉಪ್ಪಿನಕಾಯಿ ತಿನ್ನೋದನ್ನ ಇಷ್ಟಪಡ್ತಾರೆ. ಆದರೆ ಅತಿಯಾಗಿ ಉಪ್ಪಿನಕಾಯಿ ತಿಂದ್ರೆ ಏನಾಗುತ್ತೆ?
 

ಅತಿಯಾದ ಉಪ್ಪಿನಕಾಯಿ ಸೇವನೆ ಆರೋಗ್ಯಕ್ಕೆ ಹಾನಿಕಾರಕ (effects on health). ಏಕೆಂದರೆ ಉಪ್ಪಿನಕಾಯಿಯಲ್ಲಿ ಉಪ್ಪು, ಎಣ್ಣೆ ಮತ್ತು ಮಸಾಲೆ ಹೆಚ್ಚಿರುತ್ತವೆ, ಇದು ಆರೋಗ್ಯಕ್ಕೆ, ವಿಶೇಷವಾಗಿ ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಹೃದಯ ರೋಗಿಗಳಿಗೆ ಒಳ್ಳೆಯದಲ್ಲ. ಉಪ್ಪಿನಕಾಯಿಯ ಅತಿಯಾದ ಸೇವನೆಯಿಂದ ಏನೆಲ್ಲಾ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ನೋಡೋಣ. 
 

Latest Videos


ಅಧಿಕ ರಕ್ತದೊತ್ತಡದ ಸಮಸ್ಯೆ ಹೆಚ್ಚಿಸುತ್ತೆ
ಅಧಿಕ ರಕ್ತದೊತ್ತಡ (high blood pressure) ರೋಗಿಗಳು ಉಪ್ಪಿನಕಾಯಿ ಸೇವಿಸೋದು, ಏಕೆಂದರೆ ಉಪ್ಪಿನಕಾಯಿಯಲ್ಲಿ ಉಪ್ಪಿನ ಪ್ರಮಾಣ ತುಂಬಾ ಹೆಚ್ಚಾಗಿರುತ್ತೆ.. ಉಪ್ಪಿನ ಅತಿ ಸೇವನೆಯು ರಕ್ತದೊತ್ತಡ ಹೆಚ್ಚಿಸುತ್ತದೆ, ಹೃದ್ರೋಗ ಮತ್ತು ಪಾರ್ಶ್ವವಾಯುವಿನ ಅಪಾಯ ಹೆಚ್ಚಿಸುತ್ತದೆ.

ಹೃದ್ರೋಗದ ಅಪಾಯ ಹೆಚ್ಚುತ್ತದೆ
ಉಪ್ಪಿನಕಾಯಿ ಟ್ರಾನ್ಸ್ ಕೊಬ್ಬು ಮತ್ತು ಸ್ಯಾಚುರೇಟೆಡ್ ಕೊಬ್ಬುಗಳನ್ನು ಸಹ ಹೊಂದಿರಬಹುದು, ಇದು ಹೃದಯದ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುತ್ತೆ. ಉಪ್ಪಿನಕಾಯಿಯಲ್ಲಿರುವ ಅಧಿಕ ಪ್ರಮಾಣದ ಉಪ್ಪು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ ಮತ್ತು ಹೃದ್ರೋಗದ ಅಪಾಯವನ್ನು (heart problem) ಹೆಚ್ಚಿಸುತ್ತದೆ.
 

ಜೀರ್ಣಕಾರಿ ಸಮಸ್ಯೆಗಳು ಉಂಟಾಗಬಹುದು
ಉಪ್ಪಿನಕಾಯಿಗಳು ಹೆಚ್ಚಿನ ಪ್ರಮಾಣದ ಎಣ್ಣೆ ಮತ್ತು ಮಸಾಲೆಗಳನ್ನು ಹೊಂದಿರುತ್ತವೆ, ಇದು ಗ್ಯಾಸ್, ಆಸಿಡಿಟಿ ಮತ್ತು ಅಜೀರ್ಣದಂತಹ ಜೀರ್ಣಕಾರಿ ಸಮಸ್ಯೆಗಳಿಗೆ ಕಾರಣವಾಗಬಹುದು. ಹೆಚ್ಚು ಉಪ್ಪಿನಕಾಯಿ ತಿನ್ನೋದ್ರಿಂದ ಅನೇಕ ಜನರು ಹೊಟ್ಟೆಯ ಕಿರಿಕಿರಿ ಮತ್ತು ಹುಣ್ಣುಗಳಂತಹ ಸಮಸ್ಯೆಗಳನ್ನು ಹೊಂದಬಹುದು.

ಉಪ್ಪಿನಕಾಯಿ ತಿನ್ನೋದ್ರಿಂದ ತೂಕ ಹೆಚ್ಚಾಗುತ್ತದೆ
ಉಪ್ಪಿನಕಾಯಿಯಲ್ಲಿ ಹೆಚ್ಚಿನ ಪ್ರಮಾಣದ ಕ್ಯಾಲೊರಿಗಳು ಮತ್ತು ಕೊಬ್ಬು ಇರುತ್ತದೆ. ಹೆಚ್ಚು ಉಪ್ಪಿನಕಾಯಿ ತಿನ್ನುವುದು ತೂಕ ಹೆಚ್ಚಳಕ್ಕೆ (weight gain) ಕಾರಣವಾಗಬಹುದು, ಇದು ಬೊಜ್ಜು ಮತ್ತು ಅದಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ಕಾರಣವಾಗಬಹುದು.

ಮೂತ್ರಪಿಂಡಗಳ ಮೇಲೆ ಕೆಟ್ಟ ಪರಿಣಾಮ
ಅತಿಯಾದ ಉಪ್ಪು ಮತ್ತು ಮಸಾಲೆ ಸೇವನೆಯು ಕಿಡ್ನಿ ಮೇಲೆ ಹೆಚ್ಚುವರಿ ಒತ್ತಡವನ್ನುಂಟು ಮಾಡುತ್ತದೆ, ಇದರಿಂದ ಮೂತ್ರಪಿಂಡದ ಕಾರ್ಯದ ಮೇಲೆ ಪರಿಣಾಮ ಬೀರುತ್ತದೆ. ದೀರ್ಘಕಾಲದವರೆಗೆ ಹೆಚ್ಚು ಉಪ್ಪಿನಕಾಯಿ ತಿನ್ನುವುದು ಮೂತ್ರಪಿಂಡಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಕಾರಣವಾಗಬಹುದು.

click me!