ನಾವೆಲ್ಲರೂ ನಮ್ಮ ಆಹಾರದಲ್ಲಿ ಮೊಟ್ಟೆಗಳನ್ನು ಸೇರಿಸುತ್ತೇವೆ ಏಕೆಂದರೆ ಮೊಟ್ಟೆಗಳು ಅನೇಕ ಪ್ರಯೋಜನಗಳನ್ನು ನೀಡುತ್ತವೆ. ಇದು ಪ್ರೋಟೀನ್ನ ಉತ್ತಮ ಮೂಲ ಮಾತ್ರವಲ್ಲ, ಮೊಟ್ಟೆಗಳಲ್ಲಿ ಅನೇಕ ಆಂಟಿ-ಆಕ್ಸಿಡೆಂಟ್ಗಳು ಮತ್ತು ಖನಿಜಗಳಿವೆ. ಇದು ಉರಿಯೂತದಿಂದ ರಕ್ಷಿಸುತ್ತೆ. ಮಾತ್ರವಲ್ಲ, ಇದು ಚರ್ಮ ಮತ್ತು ಕೂದಲನ್ನು ಉತ್ತಮ ಸ್ಥಿತಿಯಲ್ಲಿರಿಸಲು ಸಹಾಯ ಮಾಡುತ್ತೆ.
ಆದರೆ ಈ ಎಲ್ಲಾ ಪ್ರಯೋಜನಗಳನ್ನು ಹೊಂದಿದ್ದರೂ ಸಹ, ಮೊಟ್ಟೆಗಳು ಅಡ್ಡಪರಿಣಾಮವನ್ನು ನೀಡುತ್ತವೆ. ಈ ಬಗ್ಗೆ ತಿಳಿದಿಲ್ಲದಿದ್ದರೆ, ಮೊಟ್ಟೆಗಳನ್ನು ತಿನ್ನುವ ಮೊದಲು ಈ ವಿಷಯವನ್ನು ತಿಳಿದಿರಬೇಕು. ತಿಳಿದರೆ ಮೊಟ್ಟೆ ಎಷ್ಟು ಅಪಾಯಕಾರಿ ಅನ್ನೋದು ನಿಮಗೆ ತಿಳಿಯುತ್ತೆ...
ಮೊಟ್ಟೆ ತಿನ್ನುವುದರಿಂದ ಕೊಲೆಸ್ಟ್ರಾಲ್ ಹೆಚ್ಚಾಗುತ್ತೆ ಎಂದು ಅನೇಕ ಅಧ್ಯಯನಗಳು ಹೇಳುತ್ತವೆ, ಇದರಿಂದಾಗಿ ಹೃದ್ರೋಗಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚು. ಹಾಗಾದರೆ ಎಷ್ಟು ಮೊಟ್ಟೆ ತಿನ್ನಬೇಕು, ಮತ್ತು ಹೇಗೆ ತಿಂದರೆ ಆರೋಗ್ಯಕ್ಕೆ ಉತ್ತಮ ತಿಳಿಯೋಣ..
ಮೊಟ್ಟೆಗಳು ಹೃದ್ರೋಗಗಳ ಅಪಾಯವನ್ನು ಹೆಚ್ಚಿಸುತ್ತವೆಯೇ? :ದೇಹವು ಒಳ್ಳೆಯ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಹೊಂದಿರುತ್ತದೆ ಎಂದು ತಿಳಿದಿದೆ. ಒಂದು ದೊಡ್ಡ ಗಾತ್ರದ ಮೊಟ್ಟೆಯಲ್ಲಿ 212 ಮಿಗ್ರಾಂ ಕೊಲೆಸ್ಟ್ರಾಲ್ ಇರುತ್ತದೆ.
ಹಾರ್ವರ್ಡ್ ಹೆಲ್ತ್ ಪ್ರಕಾರ, ಮೊಟ್ಟೆ ಉತ್ತಮ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತವೆ ಮತ್ತು ಇದು ಹೃದಯಕ್ಕೆ ಒಳ್ಳೆಯದು ಮತ್ತು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸಿದಾಗ ಹೃದಯ ಕಾಯಿಲೆ ಸಂಭವಿಸುತ್ತದೆ ಆದ್ದರಿಂದ ಹೆಚ್ಚು ಚಿಂತಿಸಬೇಕಾಗಿಲ್ಲ. ಆದರೆ ಎಲ್ಲಾ ರೀತಿಯ ಮೊಟ್ಟೆಗಳು ಒಂದೇ ಆಗಿರುವುದಿಲ್ಲ.
ಮೊಟ್ಟೆಗಳನ್ನು ಯಾರು ಸೇವಿಸಬಾರದು?:ಒಮೆಗಾ -3 ಸಮೃದ್ಧವಾಗಿರುವ ಮೊಟ್ಟೆಗಳು ಹಾನಿ ಮಾಡುವ ಸಾಧ್ಯತೆ ಕಡಿಮೆ ಎಂಬ ತೀರ್ಮಾನಕ್ಕೆ ಬರಬಹುದು. ಅವು ಆರೋಗ್ಯದ ಅಪಾಯವನ್ನೂ ಕಡಿಮೆ ಮಾಡುತ್ತದೆ .
ಈಗಾಗಲೇ ಹೆಚ್ಚಿನ ಕೊಲೆಸ್ಟ್ರಾಲ್, ಮಧುಮೇಹ ಅಥವಾ ಹೃದ್ರೋಗಗಳಂತಹ ಯಾವುದೇ ಸಮಸ್ಯೆ ಇದ್ದರೆ ನಿಯಮಿತವಾಗಿ ಮೊಟ್ಟೆಗಳನ್ನು ಸೇವಿಸಬಾರದು.
ವಾರದಲ್ಲಿ ಎಷ್ಟು ಮೊಟ್ಟೆಗಳನ್ನು ತಿನ್ನಬೇಕು?:ಕ್ಲಿನಿಕ್ ಪ್ರಕಾರ, ಆರೋಗ್ಯವಂತ ವ್ಯಕ್ತಿಯು ವಾರದಲ್ಲಿ 7 ಮೊಟ್ಟೆಗಳನ್ನು ಮಾತ್ರ ತಿನ್ನಬೇಕು. ಇದು ಅವರ ಆರೋಗ್ಯಕ್ಕೆ ಯಾವುದೇ ರೀತಿಯಲ್ಲಿ ಹಾನಿಯಾಗುವುದಿಲ್ಲ.
ಕೊಲೆಸ್ಟ್ರಾಲ್ ಮಟ್ಟದ ಬಗ್ಗೆ ಇನ್ನೂ ಚಿಂತೆ ಮಾಡುತ್ತಿದ್ದರೆ, ಮೊಟ್ಟೆಯ ಬಿಳಿ ಭಾಗವನ್ನು ಹೊರತುಪಡಿಸಿ ಹಳದಿ ಲೋಳೆಯನ್ನು ಮಾತ್ರ ಸೇವಿಸಬಹುದು ಏಕೆಂದರೆ ಈ ಭಾಗದಲ್ಲಿ ಕೇವಲ ಪ್ರೋಟೀನ್ ಇದ್ದು ಮತ್ತು ಕೊಲೆಸ್ಟ್ರಾಲ್ ಅನ್ನು ಹೊಂದಿರುವುದಿಲ್ಲ.