ಈ ತರಕಾರಿ ಹಸಿಯಾಗಿ ತಿಂದು, ರಕ್ತದ ಸಕ್ಕರೆಯಂಶ ನಿಯಂತ್ರಿಸಿಕೊಳ್ಳಬಹುದು ಟ್ರೈ ಮಾಡಿ!

First Published Jul 9, 2024, 5:13 PM IST

ಕೆಲವು ತರಕಾರಿಗಳನ್ನು ಹಸಿಯಾಗಿ ತಿನ್ನುವುದರಿಂದ ಆರೋಗ್ಯದ ಮೇಲೆ ಅದ್ಭುತ ಪರಿಣಾಮಗಳನ್ನು  ಉಂಟುಮಾಡುತ್ತದೆ. ಅವುಗಳು ರಕ್ತದಲ್ಲಿನ  ಸಕ್ಕರೆ ಮಟ್ಟವನ್ನು ಕ್ಷಣಾರ್ಧದಲ್ಲಿ ನಿರ್ವಹಿಸುತ್ತದೆ. ಈ ತರಕಾರಿಗಳನ್ನು ನಿಮ್ಮ ನಿತ್ಯದ ಡಯಟ್‌ನಲ್ಲಿ ಹಸಿಯಾಗಿ ಸೇವಿಸಿ  ಬ್ಲಡ್ ಶುಗರ್  ನಿರ್ವಹಿಸಿಕೊಳ್ಳಿ.

ಅನಾರೋಗ್ಯಕರ ಆಹಾರ ನಿಮ್ಮ ರಕ್ತದ ಸಕ್ಕರೆ ಮಟ್ಟವನ್ನು ಹೆಚ್ಚಿಸಬಹುದು. ಆದರೆ ಕೆಲವು  ಹಸಿ ತರಕಾರಿಗಳನ್ನು  ನಿಯಮಿತವಾಗಿ ತಿನ್ನುವುದರಿಂದ ಕಡಿಮೆ ಸಮಯದಲ್ಲಿ ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು. 

ಮಧುಮೇಹ ದೇಹದ ಮೇಲೆ ಅತಿಯಾಗಿ ಪರಿಣಾಮ ಬೀರುವ ಒಂದು ಕಾಯಿಲೆ. ಮಧುಮೇಹಕ್ಕೆ ದೊಡ್ಡ ಕಾರಣವೆಂದರೆ ಅನಾರೋಗ್ಯಕರ ಜೀವನಶೈಲಿ (Lifestyle) ಮತ್ತು ತಪ್ಪು ಆಹಾರ ಪದ್ಧತಿ (Unhealthy Food Habit). 
 

Latest Videos


Leafy vegetables

ಅನಾರೋಗ್ಯಕರ ಆಹಾರ ನಿಮ್ಮ ರಕ್ತದ ಸಕ್ಕರೆ ಮಟ್ಟವನ್ನು ಹೆಚ್ಚಿಸಬಹುದು. ಆದ್ದರಿಂದ ತಜ್ಞರು ಹಸಿರು ತರಕಾರಿಗಳನ್ನು ತಿನ್ನಲು ರೋಗಿಗಳಿಗೆ ಸಲಹೆ ನೀಡುತ್ತಾರೆ.  ಹಸಿ ತರಕಾರಿಗಳನ್ನು ನಿಯಮಿತವಾಗಿ ತಿನ್ನುವುದರಿಂದ ಕಡಿಮೆ ಸಮಯದಲ್ಲಿ ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು.

ಬ್ರೊಕೊಲಿಯಲ್ಲಿ ಅನೇಕ ಪೋಷಕಾಂಶಗಳಿವೆ. ಇದು ಆರೋಗ್ಯಕ್ಕೆ ಒಳ್ಳೆಯದು. ಹೆಚ್ಚಿನವರು ಇದನ್ನು ಬೇಯಿಸಿ ತಿನ್ನುತ್ತಾರೆ. ಇದನ್ನು ಸಲಾಡ್ ರೂಪದಲ್ಲಿ ಹಸಿಯಾಗಿ ತಿಂದರೆ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ. ಇದರಲ್ಲಿ ಫೈಬರ್‌ ಸಮೃದ್ಧವಾಗಿದೆ (Rich in Fibre) ಮತ್ತು ಕಡಿಮೆ GI ಸೂಚ್ಯಂಕವನ್ನು ಹೊಂದಿರುವುದರಿಂದ, ಬ್ರೊಕೊಲಿಯು ಉತ್ತಮ ಆಯ್ಕೆ.

ರಕ್ತದ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಎಲೆಕೋಸು ಸೇವಿಸಬಹುದು. ತಜ್ಞರು ಇದನ್ನು ರಾ ಸಲಾಡ್ ರೂಪದಲ್ಲಿ ತಿನ್ನಲು ಶಿಫಾರಸು ಮಾಡುತ್ತಾರೆ . ಇದನ್ನು ಸೇವಿಸುವುದರಿಂದ ಮಧುಮೇಹ ಟೈಪ್ 2 ರೋಗಿಗಳಿಗೆ ಪರಿಹಾರವನ್ನು ನೀಡುತ್ತದೆ. ಎಲೆಕೋಸು ಕಡಿಮೆ ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿದೆ, ಇದು ರಕ್ತದ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಬಲ್ಲದು.

ಕ್ಯಾಪ್ಸಿಕಂ ಮಧುಮೇಹಿಗಳಿಗೆ ಹೆಚ್ಚು ಪ್ರಯೋಜನಕಾರಿ. ಇದನ್ನು ಸಲಾಡ್ ಆಗಿ ಸೇವಿಸುವುದು ಉತ್ತಮ ಆಯ್ಕೆ. ದೊಣ್ಣೆ ಮೆಣಸಿನ ಕಾಯಿ ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ ತರಕಾರಿ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. 
 

ದೇಹವನ್ನು ಆರೋಗ್ಯಕರವಾಗಿಡಲು ಪಾಲಕ್ ಉಪಯುಕ್ತ. ಈ ಸೊಪ್ಪಿನಲ್ಲಿ ವಿಟಮಿನ್ ಸಿ, ಪೊಟ್ಯಾಷಿಯಮ್ ಮತ್ತು ಮೆಗ್ನೀಷಿಯಮ್ ಸಮೃದ್ಧವಾಗಿದೆ. ಇದು ರಕ್ತದ ಸಕ್ಕರೆಯನ್ನು ಅಧಿಕವಾಗಿ ನಿಯಂತ್ರಿಸಬಲ್ಲದು. ಪಾಲಕ್ ಸೊಪ್ಪಿನಲ್ಲಿರುವ ಗುಣಗಳು ಮಧುಮೇಹ ರೋಗಿಗಳಿಗೆ ತುಂಬಾ ಸಹಾಯ ಮಾಡುತ್ತದೆ. ತಾಜಾ ಪಾಲಕ್ ಎಲೆಗಳನ್ನು ಸಲಾಡ್‌ನಂತೆ ತಿನ್ನಲು ತಜ್ಞರು ಶಿಫಾರಸು ಮಾಡುತ್ತಾರೆ.

ಮಧುಮೇಹ ರೋಗಿಗಳಿಗೆ ಬೆಂಡೆಕಾಯಿ ಸೇವನೆ ತುಂಬಾ ಸಹಕಾರಿ. ನೀವು ಹಸಿ  ಬೆಂಡೆಕಾಯಿಯನ್ನು ಸಲಾಡ್ ರೂಪದಲ್ಲಿ ಸೇವಿಸಿದರೆ, ಅದು ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಫೈಬರ್ ಜೊತೆಗೆ, ಅಂತಹ ಅನೇಕ ಗುಣಲಕ್ಷಣಗಳು  ಬೆಂಡೆಕಾಯಿಯಲ್ಲಿ ಕಂಡುಬರುತ್ತವೆ. ಇದು ಮಧುಮೇಹ ಟೈಪ್ 1, ಟೈಪ್ 2 ಮತ್ತು ಗರ್ಭಾವಸ್ಥೆಯ ಮಧುಮೇಹವನ್ನು ನಿಯಂತ್ರಿಸಬಲ್ಲದು.

click me!