ಹೆಂಗಸರಿಗೆ, ಊಟದಲ್ಲಿರೋ ಕೊರತೆ, ಹಾರ್ಮೋನ್ ಏರುಪೇರು, PCOD, ಹೈಪರ್ ಅಥವಾ ಹೈಪೋ - ಥೈರಾಯ್ಡ್ ಮುಖ್ಯ ಕಾರಣ ಆಗಿರಬಹುದು. ಅದಕ್ಕೆ ಗಂಡಸರಿಗೂ ಹೆಂಗಸರಿಗೂ ಕೂದಲು ಉದುರೋಕೆ ಬೇರೆ ಬೇರೆ ಕಾರಣ ಇರಬಹುದು, ಆದ್ರೆ ಒತ್ತಡ - ದೈಹಿಕ ಅಥವಾ ಮಾನಸಿಕ, ಸರಿಯಾದ ಪ್ರಾಡಕ್ಟ್ಗಳನ್ನು ಯೂಸ್ ಮಾಡದೇ ಇರೋದು ಇರೋ ಚಿಂತೆನ ಜಾಸ್ತಿ ಮಾಡುತ್ತೆ. ಹೆಲ್ಮೆಟ್ಗಳನ್ನ ಜಾಸ್ತಿ ಹೊತ್ತು ಯೂಸ್ ಮಾಡೋದ್ರಿಂದ ಕೂದಲು ಉದುರುತ್ತಾ? ಹೆಲ್ಮೆಟ್ಗಳನ್ನ ಜಾಸ್ತಿ ಹೊತ್ತು ಯೂಸ್ ಮಾಡೋದ್ರಿಂದ ಕೂದಲು ಉದುರುತ್ತೆ ಅನ್ನೋದು ವೈದ್ಯಕೀಯವಾಗಿ ಸಾಬೀತಾಗಿಲ್ಲ. ಆದ್ರೆ, ಜಾಸ್ತಿ ಹೊತ್ತು ಹೆಲ್ಮೆಟ್ ಹಾಕೋದ್ರಿಂದ ಬೆವರಿನಿಂದ ಆರೋಗ್ಯದ ಸಮಸ್ಯೆಗಳು ಬರಬಹುದು, ಮುಖ್ಯವಾಗಿ ತಲೆಹೊಟ್ಟು ಬರುತ್ತೆ ಮತ್ತೆ ಕೂದಲು ಬೇರುಗಳಿಗೆ ಎಳೆಯೋದು ಟ್ರಾಕ್ಷನ್ ಅಲೋಪೇಶಿಯಾಗೆ ಕಾರಣ ಆಗುತ್ತೆ.