5 Toilet Habits That Reveal Your Gut Health: ನಮ್ಮ ಕರುಳಿನ ಆರೋಗ್ಯ ಹೇಗಿದೆ ಅಂತ ತಿಳಿದುಕೊಳ್ಳೋಕೆ ನಮ್ಮ ಮಲವಿಸರ್ಜನೆಯ ಅಭ್ಯಾಸಗಳನ್ನೇ ಗಮನಿಸಿದರೆ ಸಾಕು ಅಂತಾರೆ ಆರೋಗ್ಯ ತಜ್ಞರು. ಊಟವಾದ ತಕ್ಷಣ ನೀವು ಟಾಯ್ಲೆಟ್‌ಗೆ ಹೋಗುತ್ತಿದ್ದೀರಾ ಅಂದ್ರೆ ಏನರ್ಥ? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್
ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ಅಥವಾ ಒಂದು ನಿರ್ದಿಷ್ಟ ಸಮಯಕ್ಕೆ ಸರಿಯಾಗಿ ಮಲವಿಸರ್ಜನೆ ಆಗುತ್ತಿದ್ದರೆ, ನಿಮ್ಮ ಜೀರ್ಣಾಂಗ ವ್ಯವಸ್ಥೆ ಚೆನ್ನಾಗಿದೆ ಎಂದರ್ಥ. ಆದರೆ, ನಿಮ್ಮ ದೇಹ ಬೇರೆ ರೀತಿ ವರ್ತಿಸುತ್ತಿದ್ದರೆ, ಅದು ಕೆಲವು ಆರೋಗ್ಯ ಸಮಸ್ಯೆಗಳ ಮುನ್ಸೂಚನೆಯಾಗಿರಬಹುದು. ನೀವು ಮುಖ್ಯವಾಗಿ ಗಮನಿಸಬೇಕಾದ 4 ಪ್ರಮುಖ ವಿಚಾರಗಳು ಇಲ್ಲಿವೆ.
26
1. ಕಾಫಿ ಕುಡಿದ ನಂತರವೇ ಟಾಯ್ಲೆಟ್‌ಗೆ ಹೋಗುವುದು
ಕೆಲವರಿಗೆ ಬೆಳಗ್ಗೆ ಕಾಫಿ ಕುಡಿದರಷ್ಟೇ ಟಾಯ್ಲೆಟ್‌ಗೆ ಹೋಗೋಕೆ ಆಗೋದು. ಆದರೆ ಇದು ದೇಹದ ಸ್ವಾಭಾವಿಕ ಜೀರ್ಣಕ್ರಿಯೆ ಅಲ್ಲ. ಇಲ್ಲಿ ಕಾಫಿ ಒಂದು ಉತ್ತೇಜಕವಾಗಿ (stimulator) ಕೆಲಸ ಮಾಡುತ್ತದೆ. ಅಂದರೆ, ನಿಮ್ಮ ದೇಹ ಅದರ ಸಹಜ ಲಯದಲ್ಲಿ ಕೆಲಸ ಮಾಡುತ್ತಿಲ್ಲ ಅಂತ ಇದರರ್ಥ.
36
2. ಊಟ ಮಾಡಿದ ತಕ್ಷಣವೇ ಟಾಯ್ಲೆಟ್‌ಗೆ ಹೋಗುವುದು
ಊಟ ಮಾಡಿದ ತಕ್ಷಣವೇ ಟಾಯ್ಲೆಟ್‌ಗೆ ಹೋಗಬೇಕು ಅನ್ನಿಸೋದು ಕರುಳಿನ ಕಾರ್ಯದಲ್ಲಿನ ಏರುಪೇರು ಅಥವಾ ಪೋಷಕಾಂಶಗಳು ಸರಿಯಾಗಿ ಹೀರಿಕೊಳ್ಳುತ್ತಿಲ್ಲ ಎಂಬುದರ ಸಂಕೇತ. ಆಹಾರವು ಕರುಳಿನ ಮೂಲಕ ತುಂಬಾ ವೇಗವಾಗಿ ಹಾದುಹೋಗುವುದರಿಂದ ಹೀಗೆ ಆಗುತ್ತದೆ. ಇದು ಬೇರೆ ಜೀರ್ಣಕ್ರಿಯೆ ಸಮಸ್ಯೆಗಳಿಗೂ ಕಾರಣವಾಗಬಹುದು.
ನೀವು 2-3 ದಿನಕ್ಕೊಮ್ಮೆ ಮಾತ್ರ ಮಲವಿಸರ್ಜನೆ ಮಾಡುತ್ತಿದ್ದರೆ, ನಿಮಗೆ ದೀರ್ಘಕಾಲದ ಮಲಬದ್ಧತೆ ಇದೆ ಎಂದರ್ಥ. ಕರುಳಿನಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಾಗಳ ಪ್ರಮಾಣದಲ್ಲಿನ ವ್ಯತ್ಯಾಸ ಅಥವಾ ಕಳಪೆ ಕರುಳಿನ ಆರೋಗ್ಯ ಇದಕ್ಕೆ ಕಾರಣವಾಗಿರಬಹುದು.
56
4. ಕೆಲಸದ ಜಾಗದಲ್ಲಿ ಅಥವಾ ಹೊರಗಿದ್ದಾಗ ತುರ್ತುಪರಿಸ್ಥಿತಿ
ಮನೆಯಿಂದ ಹೊರಗಿದ್ದಾಗ ಅಥವಾ ಕೆಲಸದ ಸ್ಥಳದಲ್ಲಿದ್ದಾಗ ಇದ್ದಕ್ಕಿದ್ದಂತೆ ಟಾಯ್ಲೆಟ್‌ಗೆ ಹೋಗಬೇಕು ಅನ್ನಿಸುವುದು, ಮಾನಸಿಕ ಒತ್ತಡ ನಿಮ್ಮ ಕರುಳಿನ ಮೇಲೆ ಎಷ್ಟು ಪರಿಣಾಮ ಬೀರುತ್ತಿದೆ ಅನ್ನೋದಕ್ಕೆ ಸಾಕ್ಷಿ. ಒತ್ತಡವು ಜೀರ್ಣಕ್ರಿಯೆಯನ್ನು ವೇಗಗೊಳಿಸಬಹುದು ಅಥವಾ ಅಡ್ಡಿಪಡಿಸಬಹುದು.
66
5. ಗಮನಿಸಬೇಕಾದ ಅಂಶ
ಪ್ರತಿದಿನ ಒಂದೇ ಸಮಯಕ್ಕೆ ಮಲವಿಸರ್ಜನೆ ಆಗುವುದು ಉತ್ತಮ ಜೀರ್ಣಕ್ರಿಯೆ ಮತ್ತು ಆರೋಗ್ಯಕರ ಕರುಳಿನ ಸಂಕೇತ. ನಿಮ್ಮ ಮಲವಿಸರ್ಜನೆಯ ಸಮಯವನ್ನು ಸರಿಯಾಗಿ ಗಮನಿಸುವುದರಿಂದ, ದೇಹದಲ್ಲಿನ ಇತರ ಆರೋಗ್ಯ ಸಮಸ್ಯೆಗಳನ್ನು ಮೊದಲೇ ಪತ್ತೆಹಚ್ಚಲು ಸಹಾಯವಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.