ಬಿಸಿಲಿದ್ದರೆ ಟೈಟ್ ಜೀನ್ಸ್ ಧರಿಸೋ ಬಗ್ಗೆ ಯೋಚನೇನೂ ಮಾಡ್ಬೇಡಿ.. ಯಾಕ್ ಗೊತ್ತಾ?

First Published | Jun 7, 2023, 5:26 PM IST

ನಾವೆಲ್ಲರೂ ಪ್ರತಿದಿನ ಜೀನ್ಸ್ ಧರಿಸುತ್ತೇವೆ. ಜೀನ್ಸ್ ನಮ್ಮ ಸಂಪೂರ್ಣ ಲುಕ್ ಬದಲಾಯಿಸುತ್ತದೆ ಎಂದು ಹೇಳಿದ್ರೂ ತಪ್ಪಲ್ಲ. ಆದ್ದರಿಂದ, ಮಾರುಕಟ್ಟೆಯಲ್ಲಿ ಅನೇಕ ರೀತಿಯ ಜೀನ್ಸ್ ಮಾರಾಟವಾಗುತ್ತೆ. ಇತ್ತೀಚಿನ ದಿನಗಳಲ್ಲಿ, ಸ್ಕಿನ್ನಿ ಫಿಟ್ ಜೀನ್ಸ್ ಫ್ಯಾಷನ್ ಸಾಕಷ್ಟು ಟ್ರೆಂಡಿಂಗ್ ಆಗಿದೆ. ನೀವು ಇದನ್ನು ಟೈಟ್ ಜೀನ್ಸ್ ಎಂದೂ ಕರೆಯಬಹುದು. ಆದರೆ ಇದನ್ನು ಧರಿಸೋದ್ರಿಂದ ಸಮಸ್ಯೆ ಹೆಚ್ಚುತ್ತೆ. 
 

ನೀವು ಪ್ರತಿದಿನ ಬಿಗಿಯಾದ ಜೀನ್ಸ್ (tight jeans) ಧರಿಸುತ್ತೀರಾ? ಈ ಕಾರಣದಿಂದಾಗಿ ನೀವು ಅನೇಕ ಸಮಸ್ಯೆಗಳನ್ನು ಎದುರಿಸಬಹುದು ಎಂದು ನಿಮಗೆ ತಿಳಿದಿದೆಯೇ? ವಿಶೇಷವಾಗಿ ಬೇಸಿಗೆಯಲ್ಲಿ, ಈ ಸಮಸ್ಯೆಗಳ ಅಪಾಯವು ಹೆಚ್ಚು. ಬೇಸಿಗೆಯಲ್ಲಿ ಟೈಟ್ ಜೀನ್ಸ್ ಧರಿಸೋದ್ರಿಂದ ಏನೆಲ್ಲಾ ಸಮಸ್ಯೆ ಉಂಟಾಗುತ್ತೆ ಅನ್ನೋದನ್ನು ತಿಳಿದುಕೊಳ್ಳೋಣ.

ದದ್ದುಗಳ ಸಮಸ್ಯೆ
ಬೇಸಿಗೆಯಲ್ಲಿ ನಾವು ಯಾವ ಬಟ್ಟೆಯಲ್ಲಿ ಮಾಡಿದ ಉಡುಪುಗಳನ್ನು ಧರಿಸುತ್ತೇವೆ ಅನ್ನೋದನ್ನು ತಿಳಿಯೋದು ತುಂಬಾ ಮುಖ್ಯ. ಏಕೆಂದರೆ ಇದು ಚರ್ಮಕ್ಕೆ ಹಾನಿಯನ್ನುಂಟು ಮಾಡುತ್ತದೆ. ಹವಾಮಾನಕ್ಕೆ (Climate) ಅನುಗುಣವಾಗಿ ಬಟ್ಟೆಗಳನ್ನು ಧರಿಸಲಾಗುತ್ತದೆ. ಬೇಸಿಗೆಯಲ್ಲಿ ಬಿಗಿಯಾದ ಬಟ್ಟೆಗಳನ್ನು ಧರಿಸಬೇಡಿ. ಇದು ಉಸಿರಾಟದ ತೊಂದರೆಗಳನ್ನು ಉಂಟುಮಾಡುವುದಲ್ಲದೆ ಚರ್ಮದ ಸಮಸ್ಯೆಗಳಿಗೆ (skin problem) ಕಾರಣವಾಗಬಹುದು. 

Latest Videos


ನೀವು ಬೇಸಿಗೆಯಲ್ಲಿ ಜೀನ್ಸ್ ಧರಿಸಿದರೆ, ಹಾಗೆ ಮಾಡುವುದನ್ನು ನಿಲ್ಲಿಸಿ. ಏಕೆಂದರೆ ಬಿಗಿಯಾದ ಜೀನ್ಸ್ (jeans) ಧರಿಸಿದ್ರೆ ಗಾಳಿಯು ಪರಿಚಲನೆಯಾಗುವುದಿಲ್ಲ, ಇದರಿಂದ ಹೆಚ್ಚಾಗಿ ಬೆವರುತ್ತೆ. ಹೆಚ್ಚಿನ ಬೆವರುವಿಕೆಯಿಂದಾಗಿ ದದ್ದುಗಳು ಉಂಟಾಗುತ್ತೆ. ಆದ್ದರಿಂದ, ಬೇಸಿಗೆಯಲ್ಲಿ, ಸ್ಕಿನ್ನಿ ಜೀನ್ಸ್ ಬದಲಿಗೆ, ಓಪನ್-ಎಂಡೆಡ್ ಪ್ಯಾಂಟ್ ಧರಿಸಬೇಕು.

ಗುಳ್ಳೆಗಳು
ಟೈಟ್ ಜೀನ್ಸ್ ಧರಿಸುವುದರಿಂದ ಸ್ಟೈಲಿಶ್ ಆಗಿ ಕಾಣಿಸುತ್ತೆ.  ಅದಕ್ಕಾಗಿಯೇ, ಹೆಚ್ಚಿನ ಹುಡುಗಿಯರು ತಮ್ಮ ವಾರ್ಡ್ರೋಬಿನಲ್ಲಿ ಸ್ಕಿನ್ ಟೈಟ್ ಜೀನ್ಸ್ ಇರಿಸಿಕೊಳ್ಳಲು ಬಯಸುತ್ತಾರೆ. ಆದರೆ ಬೇಸಿಗೆಯಲ್ಲಿ ಬಿಗಿಯಾದ ಜೀನ್ಸ್ ಧರಿಸುವುದನ್ನು ತಪ್ಪಿಸಬೇಕು.ಇದರಿಂದ ತೊಡೆ ಸುತ್ತಲೂ ಕೂದಲಿನ ಕಿರುಚೀಲಗಳಿಗೆ ಕಾರಣವಾಗಬಹುದು, ಇದರಿಂದ ಹೀಟ್ ಹೆಚ್ಚುವ ಅಪಾಯ ಉಂಟಾಗುತ್ತೆ.

ತೊಡೆಯ ಮೇಲಿನ ಗುಳ್ಳೆಗಳು ಅತ್ಯಂತ ನೋವಿನಿಂದ ಕೂಡಿರುತ್ತವೆ. ಈ ಕಾರಣದಿಂದಾಗಿ, ನೀವು ಹಲವಾರು ದಿನಗಳವರೆಗೆ ಮನೆಯಲ್ಲಿಯೇ ಇರಬೇಕಾಗಬಹುದು. ವಿಶೇಷವಾಗಿ ಬೇಸಿಗೆಯಲ್ಲಿ ಬರ್ನಿಂಗ್ ಬೇಗನೆ ಗುಣವಾಗೋದಿಲ್ಲ. ಹಾಗಾಗಿ ಜೀನ್ಸ್ ಹಾಕದೇ ಇರೋದು ಉತ್ತಮ. 

ತುರಿಕೆ ಸಮಸ್ಯೆ 
ಫಿಟ್ ಜೀನ್ಸ್ ಧರಿಸಲು ಬಯಸಿದರೆ, ಅದನ್ನು ದೀರ್ಘಕಾಲದವರೆಗೆ ಧರಿಸದಿರಲು ಪ್ರಯತ್ನಿಸಿ. ಜೀನ್ಸ್ ನ ಬಟ್ಟೆ ಸಾಕಷ್ಟು ದಪ್ಪವಾಗಿರುತ್ತದೆ. ಈ ಕಾರಣದಿಂದಾಗಿ, ಗಾಳಿ ಚರ್ಮವನ್ನು ತಲುಪುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಬೆವರು ಒರೆಸದಿದ್ದರೆ ತುರಿಕೆ (itching problem) ಉಂಟಾಗುವ ಎಲ್ಲಾ ಸಾಧ್ಯತೆ ಇದೆ.

ರಕ್ತ ಪರಿಚಲನೆಯಲ್ಲಿ ಸಮಸ್ಯೆಗಳು
ನೀವು ಸ್ಕಿನ್ನಿ ಜೀನ್ಸ್ ಧರಿಸಲು ಇಷ್ಟಪಡುತ್ತಿದ್ರೆ, ಬೇಸಿಗೆಯಲ್ಲಿ ಅದನ್ನು ಧರಿಸುವುದನ್ನು ತಪ್ಪಿಸಿ. ಏಕೆಂದರೆ ಬಿಗಿಯಾದ ಜೀನ್ಸ್ ರಕ್ತ ಪರಿಚಲನೆಯಲ್ಲಿ (blood circulation problem) ಸಮಸ್ಯೆಗಳನ್ನು ಉಂಟುಮಾಡಬಹುದು. ಈ ಕಾರಣದಿಂದಾಗಿ, ತೊಡೆಗಳ ಸುತ್ತಲಿನ ಪ್ರದೇಶವು ಊದಬಹುದು. ಆದ್ದರಿಂದ ಬೇಸಿಗೆಯಲ್ಲಿ ಹತ್ತಿ ಬಟ್ಟೆಗಳನ್ನು ಅಥವಾ ಬ್ಯಾಗಿ ಜೀನ್ಸ್ ಕ್ಯಾರಿ ಮಾಡಿ.

ಹೊಟ್ಟೆಯಲ್ಲಿ ನೋವು
ಬಿಗಿಯಾದ ವಸ್ತು ಧರಿಸುವುದು ನೋವುಂಟು ಮಾಡುತ್ತದೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಅದು ಬಟ್ಟೆಗಳು ಅಥವಾ ಬ್ರೇಸ್ ಲೆಟ್ ಗಳು, ಬಳೆ, ಬ್ಯಾಂಡ್ ಇತ್ಯಾದಿಯಾಗಿರಬಹುದು. ಅದೇ ರೀತಿ ನೀವು ದೀರ್ಘಕಾಲದವರೆಗೆ ಬಿಗಿಯಾದ ಜೀನ್ಸ್ ಧರಿಸಿದರೆ, ಅದು ಹೊಟ್ಟೆ ನೋವಿಗೆ (stomach pain) ಕಾರಣವಾಗಬಹುದು. ಕೆಲವೊಮ್ಮೆ ಬಿಗಿಯಾದ ಜೀನ್ಸ್ ನಿಂದಾಗಿ, ಹೊಟ್ಟೆಯ ಮೇಲೆ ಗಾಯದ ಕಲೆಗಳಾಗುತ್ತೆ ಅದರ ಮೇಲೆ ಬೆವರುವುದರಿಂದ ಅದು ಸೋಂಕಾಗಿ ಬದಲಾಗಬಹುದು. ಆದ್ದರಿಂದ, ವಿಶೇಷವಾಗಿ ಬೇಸಿಗೆಯಲ್ಲಿ ಟೈಟ್ ಜೀನ್ಸ್ ಧರಿಸುವುದನ್ನು ತಪ್ಪಿಸಬೇಕು. 

click me!