ಈ ಅಭ್ಯಾಸ ಬದಲಾಯಿಸಿದ್ರೆ, ಲೈಫಲ್ಲಿ 90% ಸಮಸ್ಯೆಗೆ ಸಿಗುತ್ತೆ ಪರಿಹಾರ!

First Published Jun 6, 2023, 4:44 PM IST

ನಾವೆಲ್ಲರೂ ಪ್ರತಿದಿನ ಕೆಲವು ರೀತಿಯ ಸಮಸ್ಯೆಗಳನ್ನು ಎದುರಿಸುತ್ತೇವೆ. ಅದು ಕೆಲಸ ಅಥವಾ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದೆ. ಆದರೆ, ನೀವು ಅದನ್ನು ಸರಿಯಾಗಿ ನಿಭಾಯಿಸಿದರೆ, ಅದನ್ನು ಪರಿಹರಿಸೋದು ಸುಲಭವಾಗುತ್ತೆ ಮತ್ತು ನೀವು ಒತ್ತಡ ಮುಕ್ತರಾಗಿರುತ್ತೀರಿ.

ನಮ್ಮ ಜೀವನದಲ್ಲಿ ಅನೇಕ ರೀತಿಯ ಸಮಸ್ಯೆಗಳಿರುತ್ತವೆ (Problems) ಮತ್ತು ನಾವು ಅವನ್ನು ಎದುರಿಸಲು ಸಹ ಕಲಿಯುತ್ತೇವೆ. ಇದು ಪ್ರತಿಯೊಬ್ಬರ ಜೀವನದ ಒಂದು ಭಾಗ. ಎಷ್ಟೇ ಪ್ರಯತ್ನಿಸಿದರೂ, ಯಾವಾಗಲೂ ಸಮಸ್ಯೆಗಳು ಇರುತ್ತವೆ. ಆದರೆ ಸಮಸ್ಯೆಯಿಂದ ಹೊರ ಬರಲು ಸಾಧ್ಯವೇ ಇಲ್ಲ ಎನ್ನುವಂತಿಲ್ಲ. ನೀವು ಪ್ರಯತ್ನ ಪಟ್ಟರೆ ಖಂಡಿತವಾಗಿಯೂ ಸಮಸ್ಯೆಯಿಂದ ಹೊರ ಬರಬಹುದು.

ನೀವು ಒಂದು ಸಮಸ್ಯೆಯೊಂದಿಗೆ ಹೋರಾಡುತ್ತಿದ್ದರೆ, ಅದರೊಂದಿಗೆ ಇನ್ನೊಂದು ಸಮಸ್ಯೆ ಬರುತ್ತೆ. ಜೀವನವೇ ಇಷ್ಟು,ನೀವು ಇಷ್ಟಪಡುತ್ತೀರೋ ಇಲ್ಲವೋ, ನಿಮ್ಮೊಂದಿಗಿರುವ ಪ್ರತಿಯೊಬ್ಬರೂ ತೊಂದರೆಯನ್ನು ಎದುರಿಸಬೇಕಾಗುತ್ತೆ. ಜೀವನದಲ್ಲಿ ಏನಾಗುತ್ತೆ ಎಂಬುದರ ಮೇಲೆ ಯಾರಿಗೂ ನಿಯಂತ್ರಣವಿರೋದಿಲ್ಲ(Control), ಆದರೆ ನಾವು ಅದರೊಂದಿಗೆ ಹೇಗೆ ವ್ಯವಹರಿಸುತ್ತೇವೆ ಎಂಬುದು ಖಂಡಿತವಾಗಿಯೂ ನಮ್ಮ ಕೈಯಲ್ಲಿದೆ.

ನೀವು ಸಹ ಆಗಾಗ್ಗೆ ಅಸಮಾಧಾನಗೊಂಡಿದ್ದರೆ, ಅಥವಾ ಪದೇ ಪದೇ ಸಮಸ್ಯೆ ಎದುರಿಸುತ್ತಿದ್ರೆ ನಿಮ್ಮ 90 ಪ್ರತಿಶತದಷ್ಟು ಸಮಸ್ಯೆಗಳನ್ನು ತೊಡೆದು ಹಾಕುವ ಕೆಲವು ವಿಷಯಗಳನ್ನು ಇಲ್ಲಿ ತಿಳಿದುಕೊಳ್ಳಿ.

ಪ್ರತಿದಿನ ಬೆಳಿಗ್ಗೆ ಬೇಗನೆ ಎದ್ದೇಳಿ(Wake up)
ನೀವು ಆಫೀಸ್ ಗೆ ಹೋಗುವ ಅರ್ಧ ಘಂಟೆಯ ಮೊದಲು ಎಚ್ಚರಗೊಂಡರೆ, ಇಂದಿನಿಂದ ಈ ಅಭ್ಯಾಸ ಬದಲಾಯಿಸಿಕೊಳ್ಳಿ. ಬೆಳಗ್ಗೆ ಬೇಗ ಎದ್ದೇಳಿ, ಆದ್ದರಿಂದ ದಿನದ ತಯಾರಿಗೆ ನಿಮಗೆ ಸಾಕಷ್ಟು ಸಮಯ ಸಿಗುತ್ತೆ. ವ್ಯಾಯಾಮ ಮಾಡಿ ಅಥವಾ ಧ್ಯಾನ ಮಾಡಿ. ನಿಮ್ಮ ಜೀವನಶೈಲಿಯಲ್ಲಿ ನೀವು ಈ ವಿಷಯಗಳನ್ನು ಹೆಚ್ಚು ಅಳವಡಿಸಿಕೊಂಡಷ್ಟೂ, ನೀವು ಉತ್ತಮ ಭಾವನೆ ಹೊಂದುತ್ತೀರಿ.

ಮುಂದಿನ ದಿನಕ್ಕಾಗಿ ರಾತ್ರಿಯಲ್ಲಿ ತಯಾರಿ(Prepare) ಮಾಡಿ.
ಒಂದು ರಾತ್ರಿ ಮುಂಚಿತವಾಗಿ ನೀವು ಮುಂದಿನ ದಿನಕ್ಕೆ ತಯಾರಿ ಮಾಡಿದರೆ, ಅದು ನಿಮ್ಮ ಪ್ರೊಡಕ್ಟಿವಿಟಿಯಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರುತ್ತೆ. ಮರುದಿನ ಬೆಳಿಗ್ಗೆ, ಒಂದು ರಾತ್ರಿ ಮುಂಚಿತವಾಗಿ ನೀವು ಕೆಲಸ ಮಾಡಬೇಕಾದ ಅಥವಾ ಅಗತ್ಯವಿರುವ ವಸ್ತುಗಳನ್ನು ಸಿದ್ಧಪಡಿಸಿ. ಎಲ್ಲವನ್ನೂ ಯೋಜಿಸಿದಾಗ ಅಥವಾ ಸಮಯಕ್ಕೆ ಮುಂಚಿತವಾಗಿ ಸಿದ್ಧವಾದಾಗ, ಕೆಲಸ ಸುಲಭವಾಗುತ್ತೆ.

ಸಣ್ಣ ಕೆಲಸಗಳಿಂದ (Work) ದೂರವಿರಬೇಡಿ.
ಒಂದು ಕಾರ್ಯವು 5 ನಿಮಿಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳದಿದ್ದರೆ, ಅದನ್ನು ಮುಂದೂಡಬೇಡಿ. ಏನನ್ನಾದರೂ ಮಾಡಲು ಕಡಿಮೆ ಸಮಯ ತೆಗೆದುಕೊಳ್ಳುತ್ತಿದ್ದರೆ, ಅದನ್ನು ತಕ್ಷಣ ಮಾಡಿ. ಇದು ನಿಮ್ಮ ಕೆಲಸವನ್ನು ಕಡಿಮೆ ಮಾಡುತ್ತೆ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತೆ

ಶಕ್ತಿ ಮತ್ತು ಸಮಯವನ್ನು ಸರಿಯಾಗಿ ವಿನಿಯೋಗಿಸಿ
ನಿಮ್ಮ ಶಕ್ತಿ ಮತ್ತು ಸಮಯವನ್ನು ಸರಿಯಾಗಿ ವಿನಿಯೋಗಿಸಿ. ಇದು ದೊಡ್ಡ ಪರಿಣಾಮ ಬೀರುತ್ತೆ ಮತ್ತು ನಿಮ್ಮ ಉತ್ಪಾದಕತೆಯನ್ನು(Productivity) ಹೆಚ್ಚಿಸುತ್ತೆ. ಏನನ್ನೂ ಸಾಧಿಸದ ವಿಷಯಗಳಲ್ಲಿ ಸಮಯ ವ್ಯರ್ಥ ಮಾಡಬೇಡಿ.

ದೇಹಕ್ಕೆ ವಿಶ್ರಾಂತಿ(Rest) ನೀಡಲು ಬಿಡಿ
ನಾವೆಲ್ಲರೂ ಕಾರ್ಯನಿರತ ಜೀವನಶೈಲಿಯನ್ನು ನಡೆಸುತ್ತಿದ್ದೇವೆ, ಆದರೆ, ನಮ್ಮ ಜೀವನದಲ್ಲಿ ಬದಲಾವಣೆಗಳನ್ನು ಮಾಡುವ ಮೂಲಕ ನಾವು ಅದನ್ನು ಉತ್ತಮಗೊಳಿಸಬಹುದು. ಅವುಗಳಲ್ಲಿ ಒಂದು ದೇಹಕ್ಕೆ ಸಾಕಷ್ಟು ವಿಶ್ರಾಂತಿ ನೀಡುವುದು..

ಇದು ಸಂಭವಿಸದಿದ್ದರೆ, ನೀವು ಜೀವನವನ್ನು(Life) ಆನಂದಿಸಲು ಅಥವಾ ಉತ್ತಮಗೊಳಿಸಲು ಸಾಧ್ಯವಾಗೋದಿಲ್ಲ. ವಿಶ್ರಾಂತಿಯ ಕೊರತೆ ನಿಮ್ಮನ್ನು ಕಿರಿಕಿರಿಗೊಳಿಸುತ್ತೆ ಮತ್ತು ನಿಮ್ಮ ಗಮನವೂ ಕಳಪೆಯಾಗಿರುತ್ತೆ, ಆದ್ದರಿಂದ ನಮ್ಮ ದೇಹ ಮತ್ತು ಮನಸ್ಸು ಸರಿಯಾದ ವಿಶ್ರಾಂತಿ ಪಡೆಯೋದು ಮುಖ್ಯ.

click me!