ಉಗುರಿನ ಮೇಲೆ ಬಿಳಿ ಕಲೆಗಳು (White mark on Nails)
ನಿಮ್ಮ ಬೆರಳುಗಳ ಉಗುರಿನಲ್ಲಿ ಬಿಳಿ ಕಲೆಗಳು, ಸಣ್ಣದಾಗಿ ಅಥವಾ ದೊಡ್ಡದಾಗಿ ಕಾಣಿಸಿಕೊಳ್ಳುತ್ತಿವೆಯೇ? ಹಾಗಿದ್ರೆ ಇದು ಸತು ಅಥವಾ ಝಿಂಕ್ ಕೊರತೆಯಿಂದ ಉಂಟಾದ ಕಾಯಿಲೆ.
ಎಣ್ಣೆಯುಕ್ತ ಚರ್ಮ (Oily Skin)
ಹಲವು ಜನರ ಚರ್ಮ ತುಂಬಾನೆ ಆಯ್ಲಿಯಾಗಿರುತ್ತೆ. ಇದಕ್ಕೆ ಹೆಚ್ಚಾಗಿ ಜನರು ಕ್ರೀಂಗಳನ್ನು, ಫೇಸ್ ವಾಶ್ ಬಳಸಿ ಆಯ್ಲಿನೆಸ್ ಕಡಿಮೆ ಮಾಡ್ತಾರೆ. ಆದ್ರೆ ನಿಮಗೆ ಗೊತ್ತ ಇದು ಸತು ಮತ್ತು ಮಿನರಲ್ಸ್ ಕೊರತೆಯಿಂದ ಉಂಟಾಗುತ್ತೆ
ಒಡೆದ ಹಿಮ್ಮಡಿ (cracked heels)
ಕೆಲವರಿಗೆ ಚಳಿಗಾಲ ಬಂದ ಕೂಡಲೇ ಹಿಮ್ಮಡಿ ಒಡೆಯೋಕೆ ಶುರುವಾಗುತ್ತೆ, ಇನ್ನೂ ಕೆಲವರಿಗೆ ವರ್ಷ ಪೂರ್ತಿ ಹಿಮ್ಮಡಿ ಒಡೆದಿರುತ್ತೆ. ಇದಕ್ಕೆ ಕಾರಣ ಬಿ2 ಮತ್ತು ಬಿ3 ವಿಟಮಿನ್ ಕೊರತೆ.
ಚರ್ಮ ಡ್ರೈ ಆಗೋದು (dry skin)
ಕೆಲವು ವ್ಯಕ್ತಿಗಳ ಚರ್ಮ ತುಂಬಾನೆ ಡ್ರೈ ಆಗಿರುತ್ತೆ. ಡ್ರೈ ಚರ್ಮದ ಸಮಸ್ಯೆ ನಿವಾರಿಸೋಕೆ ನಾವು ಕ್ರೀಂ, ಮಾಯಿಶ್ಚರೈಸರ್ ಬಳಕೆ ಮಾಡುತ್ತೇವೆ. ಆದರೆ ಇದು ಒಮೆಗಾ 3 ಕೊರತೆಯಿಂದ ಉಂಟಾಗುತ್ತೆ.
ತುಟಿ ಒಡೆಯೋದು (Dry Lips)
ತುಟಿ ಒಡೆಯೋದು ಚಳಿಗಾಲದಲ್ಲಿ ಸಾಮಾನ್ಯ ಎಂದು ನೀವು ಭಾವಿಸಬಹುದು. ಆದರೆ ಈ ಸಮಸ್ಯೆ ಎಲ್ಲರನ್ನೂ ಕಾಡೋದಿಲ್ಲ ಅಲ್ವಾ? ಇದು ವಿಟಾಮಿನ್ ಬಿ2 ಕೊರತೆಯಿದ್ರೆ ಮಾತ್ರ ಆಗುತ್ತೆ.
ಹೆಚ್ಚು ಯೋಚನೆ ಮಾಡೋದು (Over Thinking)
ಹೆಚ್ಚು ಹೆಚ್ಚು ಒತ್ತಡದಿಂದ ಸಮಯ ಕಳೆಯೋದು ಅಥವಾ ಏನೂ ಕಾರಣ ಇಲ್ಲದೇ ಇದ್ರೂ ಸಹ ಹೆಚ್ಚು ಯೋಚನೆ ಮಾಡೋದು ಬಿ1 ವಿಟಮಿನ್ ಕೊರತೆಯಿಂದ ಉಂಟಾಗುತ್ತೆ.
ಕೆಳ ಬೆನ್ನು ನೋವು (Lower back pain)
ಪದೇ ಪದೇ ಕೆಳ ಬೆನ್ನಿನಲ್ಲಿ ನೋವು ಕಾಣಿಸಿಕೊಳ್ಳುತ್ತಿದೆಯೇ? ಇದಕ್ಕೆ ಕಾರಣ ಏನು ಗೊತ್ತಾ? ವಿಟಮಿನ್ ಡಿ ಕೊರತೆ. ವಿಟಾಮಿನ್ ಡಿ ಸರಿಯಾದ ದೊರೆತರೆ ಈ ಸಮಸ್ಯೆಯೇ ಬರೋದಿಲ್ಲ.
ಡಿಪ್ರೆಶನ್ (Depression)
ನೀವು ಸಹ ಖಿನ್ನತೆ ಅಥವಾ ಡಿಪ್ರೆಶನ್ ಗೆ ಗುರಿಯಾಗಿದ್ದೀರಾ? ಅಷ್ಟು ಬೇಗ ಖಿನ್ನತೆಯ ಜಾಲಕ್ಕೆ ಸಿಲುಕಿಕೊಳ್ಳಲು ಕಾರಣ ಏನು ಗೊತ್ತಾ? ವಿಟಮಿನ್ ಡಿ ಕೊರತೆ. ನಿಮ್ಮ ದೇಹಕ್ಕೆ ಬೇಕಾದಷ್ಟು ವಿಟಮಿನ್ ಡಿ ದೊರೆಯುವಂತೆ ಮಾಡಿ.