ಹೆಣ್ಣನ್ನು ನಿಯಂತ್ರಿಸುವುದೇ ಹಾರ್ಮೋನ್, ಗಂಡು ಅಂತ ಹೇಳ್ತಾರೆ ಅಷ್ಟೇ!

First Published Nov 29, 2023, 5:38 PM IST

ಹಾರ್ಮೋನುಗಳ ಅಸಮತೋಲನವಿದ್ದಾಗ, ಅನೇಕ ರೋಗಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಭಾರೀ ಋತುಚಕ್ರ, ಪಿಎಂಎಸ್ ಸಮಸ್ಯೆಗಳು (PMS Issues), ನಿದ್ರೆಯ ತೊಂದರೆ ಸೇರಿದಂತೆ ಅನೇಕ ಸಮಸ್ಯೆಗಳೂ ಕಾಡುತ್ತವೆ, ಇದು ಹಾರ್ಮೋನ್ ಏರಿಳಿತಗಳನ್ನು ಸೂಚಿಸುತ್ತದೆ. ಈ ಚಿಹ್ನೆಗಳನ್ನು ಇಗ್ನೋರ್ ಮಾಡಬೇಡಿ. 
 

ಮಹಿಳೆಯರ ದೇಹದಲ್ಲಿ ಹಾರ್ಮೋನುಗಳ ಅಸಮತೋಲನವಿದ್ದಾಗ, (hormonal imbalancce) ಅನೇಕ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಈ ರೋಗಲಕ್ಷಣಗಳನ್ನು ಹೆಚ್ಚಾಗಿ ಮಹಿಳೆಯರು ನಿರ್ಲಕ್ಷಿಸುತ್ತಾರೆ. ಅನೇಕ ಬಾರಿ ಮಹಿಳೆಯರು ಈ ರೋಗಲಕ್ಷಣಗಳ ಹಿಂದಿನ ನಿಜವಾದ ಕಾರಣವನ್ನು ಅರ್ಥಮಾಡಿಕೊಳ್ಳುವುದಿಲ್ಲ. ಇದರಿಂದಾಗಿ ಅವರ ಸಮಸ್ಯೆಗಳು ಮತ್ತಷ್ಟು ಹೆಚ್ಚಾಗುತ್ತವೆ. 

ಹಾರ್ಮೋನುಗಳ ಏರಿಳಿತಗಳು ದೇಹದ ಅನೇಕ ಕಾರ್ಯಗಳ ಮೇಲೆ ಪರಿಣಾಮ ಬೀರುತ್ತವೆ. ವಿಶೇಷವಾಗಿ ಮಹಿಳೆಯರಿಗೆ, ಹಾರ್ಮೋನುಗಳ ಸಮತೋಲನ ಹೊಂದಿರೋದು ತುಂಬಾ ಮುಖ್ಯ. ಒಂದು ಬೇಳೆ ಹಾರ್ಮೋನ್ ಅಸಮತೋಲನ ಉಂಟಾದರೆ ಪಿರಿಯಡ್ಸ್ ಸಮಯದಲ್ಲಿ ಭಾರಿ ರಕ್ತಸ್ರಾವ, ಪಿಎಂಎಸ್ ಸಮಸ್ಯೆಗಳು, ನಿದ್ರೆಯ ತೊಂದರೆ ಮೊದಲಾದ ಸಮಸ್ಯೆಗಳು (health issues) ಕಾಣಿಸುತ್ತವೆ. ಹಾರ್ಮೋನುಗಳ ಅಸಮತೋಲನದಿಂದಾಗಿ ಉಂಟಾಗುವ ಕೆಲವೊಂದು ಸಮಸ್ಯೆಗಳ ಬಗ್ಗೆ ನೀವು ಗಮನ ಹರಿಸಲೇಬೇಕು. ಅವುಗಳ ಬಗ್ಗೆ ತಿಳಿಯೋಣ. 

Latest Videos


ಮಹಿಳೆಯರಲ್ಲಿ ಹಾರ್ಮೋನುಗಳ ಅಸಮತೋಲನದ ಲಕ್ಷಣಗಳು
ದೇಹದಲ್ಲಿ ಈಸ್ಟ್ರೊಜೆನ್ ಮಟ್ಟವು ಹೆಚ್ಚಾದರೆ, ಭಾರಿ ಋತುಚಕ್ರ, ತಲೆನೋವು (headache), ಮುಟ್ಟಿನ ಸಮಯದಲ್ಲಿ ಅತಿಯಾದ ನೋವು ಮತ್ತು ಮಲಬದ್ಧತೆ (constipation) ಉಂಟಾಗಬಹುದು.

ಹಾರ್ಮೋನ್ ಮಹಿಳೆಯರ ಸಂತಾನೋತ್ಪತ್ತಿ ಅಂಗಗಳೊಂದಿಗೆ ಸಂಬಂಧ ಹೊಂದಿದೆ ಮತ್ತು ಮಹಿಳೆಯರ ಆರೋಗ್ಯಕ್ಕಾಗಿ ಇದನ್ನು ಸರಿಯಾದ ಮಟ್ಟದಲ್ಲಿ ಹೊಂದಿರುವುದು ಬಹಳ ಮುಖ್ಯ.ಈ ಲೈಂಗಿಕ ಹಾರ್ಮೋನ್ (sex hormone) ಮಹಿಳೆಯರಲ್ಲಿ ಹೆಚ್ಚು ಅಥವಾ ಕಡಿಮೆ ಇದ್ದಾಗ ಅನೇಕ ಸಮಸ್ಯೆಗಳು ಉಂಟಾಗಬಹುದು.
 

ದೇಹದಲ್ಲಿ ಹಾರ್ಮೋನ್ ಮಟ್ಟವು ಕಡಿಮೆಯಾದಾಗ, ರಾತ್ರಿ ಬೆವರು, ಖಿನ್ನತೆ (Depression), ಒಣ ಯೋನಿ (dry vagina) ಮತ್ತು ಲೈಂಗಿಕ ಬಯಕೆ ಕಡಿಮೆಯಾಗುವುದು ಮುಂತಾದ ಚಿಹ್ನೆಗಳು ಕಾಡಬಹುದು.
ಪ್ರೊಜೆಸ್ಟರಾನ್ ಕೂಡ ಲೈಂಗಿಕ ಹಾರ್ಮೋನ್ ಆಗಿದೆ. ಇದರ ಕೊರತೆಯು ಆತಂಕ, ಪಿಎಂಎಸ್ನಲ್ಲಿ ಹೆಚ್ಚು ತೊಂದರೆ ಮತ್ತು ಮುಟ್ಟಿನ ಸಮಸ್ಯೆಗಳಿಗೆ ಕಾರಣವಾಗಬಹುದು.

ಅತಿಯಾದ ಆಯಾಸ (tired), ತಲೆನೋವು ಮತ್ತು ದಣಿವು ಮೊದಲಾದ ರೋಗಲಕ್ಷಣಗಳು ಸಹ ಹಾರ್ಮೋನ್ ಅಸಮತೋಲದಿಂದ ಕಾಣಿಸಿಕೊಳ್ಳುತ್ತವೆ.
ಗರ್ಭಧರಿಸಲು ಪ್ರೊಜೆಸ್ಟರಾನ್ ಹಾರ್ಮೋನ್ ಸಹ ಅವಶ್ಯಕ. ಈ ಹಾರ್ಮೋನ್ ಪ್ರತಿ ತಿಂಗಳು ಅಂಡೋತ್ಪತ್ತಿ ನಂತರ ಅಂಡಾಶಯಗಳಲ್ಲಿ ಉತ್ಪತ್ತಿಯಾಗುತ್ತದೆ.

ಹಾರ್ಮೋನ್ ಮಟ್ಟ ದೇಹದಲ್ಲಿ ಹೆಚ್ಚಾಗಿರೋದು ಸಹ ಸರಿಯಲ್ಲ. ಇದು ಮೊಡವೆ (pimple), ಎಣ್ಣೆಯುಕ್ತ ಚರ್ಮ, ಮುಖದ ಮೇಲೆ ಅನಗತ್ಯ ಕೂದಲು ಮತ್ತು ಕೂದಲು ಉದುರುವಿಕೆಗೆ (hair fall) ಕಾರಣವಾಗಬಹುದು.

ಒತ್ತಡ ಹೆಚ್ಚಾದಾಗ, ದೇಹದಲ್ಲಿ ಕಾರ್ಟಿಸೋಲ್ ಹಾರ್ಮೋನ್ ಪ್ರಮಾಣ ಹೆಚ್ಚಾಗಲು ಪ್ರಾರಂಭಿಸುತ್ತದೆ. ಇದು ಹೆಚ್ಚಾದಂತೆ, ಆಯಾಸ, ದೌರ್ಬಲ್ಯ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಳದಂತಹ ರೋಗಲಕ್ಷಣಗಳು ಕಾಣಿಸಿಕೊಳ್ಳಬಹುದು.

click me!