Health Tips: ಊಟ ಮಾಡಿದ ನಂತರ ಈ ಕೆಲಸಗಳನ್ನು ಅಪ್ಪಿತಪ್ಪಿಯೂ ಮಾಡ್ಬೇಡಿ

First Published | Aug 16, 2022, 6:21 PM IST

ನಾವು ಮಾಡೋ ಸಣ್ಣ ಪುಟ್ಟ ತಪ್ಪುಗಳೇ ನಮ್ಮ ಆರೋಗ್ಯದ ಮೇಲೆ ಮುಂದೆ ಗಂಭೀರ ಪರಿಣಾಮ ಬೀರುತ್ತೆ. ಗಂಭೀರ ಸಮಸ್ಯೆಗೆ ತುತ್ತಾಗುವವರೆಗೂ ನಮಗೆ ನಾವು ಮಾಡುತ್ತಿರೋ ತಪ್ಪು ಯಾವುದು ಅನ್ನೋದೇ ತಿಳಿಯೋದಿಲ್ಲ. ಆಹಾರವನ್ನು ಸೇವಿಸಿದ ನಂತರ, ಜನರು ಆಗಾಗ್ಗೆ ತಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಕೆಲವು ತಪ್ಪುಗಳನ್ನು ಮಾಡುತ್ತಾರೆ. ಈ ತಪ್ಪುಗಳು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಆದ್ದರಿಂದ ಆಹಾರವನ್ನು ಸೇವಿಸಿದ ನಂತರ ನೀವು ಏನು ಮಾಡಬಾರದು ಅನ್ನೋದನ್ನು ತಿಳಿಸುತ್ತೇವೆ.  

ಆಹಾರವು ನಮ್ಮ ದಿನದ ಅತ್ಯಂತ ಮುಖ್ಯವಾದ ವಿಷಯವಾಗಿದೆ. ನಾವು ತಿನ್ನುವ ಆಹಾರ ನಮಗೆ ಶಕ್ತಿಯನ್ನು ನೀಡುತ್ತದೆ. ಅಷ್ಟೇ ಅಲ್ಲ, ಇದೇ ಆಹಾರದಿಂದಾಗಿ ನಾವು ನಮ್ಮ ಕೆಲಸವನ್ನು ಚೆನ್ನಾಗಿ ಮಾಡಲು ಸಾಧ್ಯವಾಗುತ್ತದೆ. ಆದರೆ ಅನೇಕ ಬಾರಿ ಆಹಾರವನ್ನು ಸೇವಿಸಿದ ನಂತರ, ನಾವು ಕೆಲವು ತಪ್ಪುಗಳನ್ನು ಮಾಡುತ್ತೇವೆ, ಇದರಿಂದಾಗಿ ಅದು ನಮ್ಮ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲು ಪ್ರಾರಂಭಿಸುತ್ತದೆ. 

ಉದಾಹರಣೆಗೆ, ಕೆಲವೊಮ್ಮೆ ನಾವು ಮಾಡುವ ತಪ್ಪುಗಳಿಂದ ದೇಹದಲ್ಲಿ ಕೊಬ್ಬು ಹೆಚ್ಚುತ್ತಲೇ ಹೋಗುತ್ತೆ. ಅಲ್ಲದೇ ದೇಹವು ಹಲವು ಖಾಯಿಲೆಗಳಿಗೆ ನೆಲೆಯಾಗುತ್ತೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಊಟ ಮಾಡಿದ ನಂತರ ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸೋದು ಮುಖ್ಯ. ನಾವು ಇಂದು ನಿಮಗೆ ಊಟದ ನಂತರ ಮಾಡಬಾರದ 5 ವಿಷಯಗಳನ್ನು ತಿಳಿಸುತ್ತೇವೆ. ಅವುಗಳನ್ನು ಪಾಲಿಸಿದರೆ ನೀವು ಆರೋಗ್ಯದಿಂದಿರುತ್ತೀರಿ. 

Tap to resize

ಹಾಸಿಗೆಯ ಮೇಲೆ ಕುಳಿತುಕೊಳ್ಳೋದು ಅಥವಾ ಮಲಗೋದು
ಆಹಾರವನ್ನು ಸೇವಿಸಿದ ತಕ್ಷಣ, ಜನರು ತುಂಬಾ ಸೋಮಾರಿಗಳಾಗಿರುತ್ತಾರೆ ಮತ್ತು ಅವರು ತಮ್ಮ ಮೊಬೈಲ್ ಫೋನ್ ಅಥವಾ ಲ್ಯಾಪ್ಟಾಪ್ ತೆಗೆದುಕೊಂಡು ಹಾಸಿಗೆಯ ಮೇಲೆ ಕುಳಿತುಕೊಳ್ಳುತ್ತಾರೆ ಅಥವಾ ಮಲಗುತ್ತಾರೆ. ಹೀಗೆ ಮಾಡೋದು ತಪ್ಪು. ನೀವು ಆಹಾರವನ್ನು ಸೇವಿಸಿದ ನಂತರ 15 ನಿಮಿಷಗಳ ಕಾಲ ಸಣ್ಣ ಮನೆಕೆಲಸವನ್ನು ಮಾಡಬೇಕು, ಇದರಿಂದ ನೀವು ಲೇಜಿಯಾಗೋದಿಲ್ಲ, ಅಲ್ಲದೇ ತೂಕವೂ ಹೆಚ್ಚೋದಿಲ್ಲ.
 

ಸ್ನಾನ ಮಾಡೋದು
ಆಹಾರ ಸೇವಿಸಿದ ತಕ್ಷಣ ನೀವು ಎಂದಿಗೂ ಸ್ನಾನ ಮಾಡಬಾರದು, ಏಕೆಂದರೆ ಅದು ಜೀರ್ಣಕ್ರಿಯೆಯನ್ನು ಹಾಳುಮಾಡುತ್ತದೆ (poor digestion). ಆಹಾರ ಸೇವಿಸಿದ ನಂತರ ಸ್ನಾನ ಮಾಡಲೇಬೇಕು ಎಂದಾದರೆ, ನೀವು ಕನಿಷ್ಠ 2 ಗಂಟೆಗಳ ಅಂತರವನ್ನು ಇಟ್ಟುಕೊಳ್ಳಬೇಕು. ಎರಡು ಗಂಟೆಯ ನಂತರವೇ ಸ್ನಾನ ಮಾಡಬೇಕು. 

ವಾಕಿಂಗ್
ಆಹಾರವನ್ನು ಸೇವಿಸಿದ ನಂತರ ನೀವು ವಾಕಿಂಗ್ ಮಾಡಬೇಕು (walking) ಎಂದು ಜನರು ಹೇಳುವುದನ್ನು ನೀವು ಕೇಳಿದ್ದೀರಿ.  ಕೆಲವರು ಆಹಾರ ಸೇವಿಸಿದ ನಂತರ ಹೆವಿ ವಾಕಿಂಗ್ ಮಾಡ್ತಾರೆ. ಆದರೆ ನಾವು ಇದನ್ನು ಮಾಡಬಾರದು. ಊಟ ಮಾಡಿದ ನಂತರ, ನಾವು ಕೇವಲ ನೂರು ಹೆಜ್ಜೆ ನಡೆಯಬೇಕು. ಇದರಲ್ಲಿಯೂ ಸಹ, ನಾವು ಅರ್ಧದಿಂದ ಒಂದು ಗಂಟೆಗಳ ಅಂತರವನ್ನು ಕಾಯ್ದುಕೊಳ್ಳಬೇಕು.

ಚಹಾ ಕುಡಿಯೋದು
ಅನೇಕ ಜನರು ಆಹಾರ ಸೇವಿಸಿದ ತಕ್ಷಣ ಚಹಾ ಅಥವಾ ಕಾಫಿ ಕುಡಿಯೋದನ್ನು ರೂಢಿ ಮಾಡಿಕೊಂಡಿದ್ದಾರೆ, ಆದರೆ ಇದು ಹೊಟ್ಟೆಯ ಸಮಸ್ಯೆಗಳನ್ನು (stomach upset) ಉಂಟುಮಾಡಬಹುದು ಮತ್ತು ಅಸಿಡಿಟಿ ಮತ್ತು ಜೀರ್ಣಕಾರಿ ಸಮಸ್ಯೆಗಳನ್ನು ಸಹ ಉಂಟುಮಾಡಬಹುದು. ಹಾಗಾಗಿ ಆಹಾರ ಸೇವಿಸಿದ ನಂತರ ಕನಿಷ್ಠ 1-2 ಗಂಟೆಗಳ ಕಾಲ ಚಹಾ ಅಥವಾ ಕಾಫಿ ಕುಡಿಯೋದನ್ನು ಅವಾಯ್ಡ್ ಮಾಡಿ.

ಇವುಗಳನ್ನು ಸೇವಿಸಲೇಬೇಡಿ
ಆಹಾರ ಸೇವಿಸಿದ ನಂತರ ಎಂದಿಗೂ ಕೋಲ್ಡ್ ಡ್ರಿಂಕ್ಸ್ ಕುಡೀಬೇಡಿ. ಇದು ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತದೆ. ಇದಲ್ಲದೆ, ನೀವು ಆಹಾರವನ್ನು ಸೇವಿಸಿದ ತಕ್ಷಣ ಐಸ್ ಕ್ರೀಮ್ ಅಥವಾ ಯಾವುದೇ ಸಿಹಿ ತಿಂಡಿಗಳನ್ನು ಸಹ ಸೇವಿಸೋದು, ಆರೋಗ್ಯಕ್ಕೆ ಹಾನಿಕಾರಕವಾಗಿದೆ.

ಇಷ್ಟೇ ಅಲ್ಲ, ಕೆಲವು ಜನರು ಆಹಾರವನ್ನು ಸೇವಿಸಿದ ತಕ್ಷಣ ಸ್ಮೋಕಿಂಗ್ ಮಾಡುವ ಅಭ್ಯಾಸ ಹೊಂದಿರುತ್ತಾರೆ. ಇದು ನಿಮ್ಮ ದೇಹದ ಮೇಲೆ ಮಾರಣಾಂತಿಕ ಪರಿಣಾಮ ಬೀರುತ್ತೆ, ಆದ್ದರಿಂದ ಆಹಾರ ಸೇವಿಸಿದ ತಕ್ಷಣ ಇವುಗಳನ್ನು ಮಾಡೋದನ್ನು ಅವಾಯ್ಡ್ ಮಾಡಿ ಉತ್ತಮ ಆರೋಗ್ಯವನ್ನು ಕಾಪಾಡಿ.

Latest Videos

click me!