ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತೆ ವ್ಯಾಯಾಮ, ಹೇಗೆ?

First Published | Aug 2, 2022, 6:54 PM IST

ನಮ್ಮ ದೇಹವು ಯಾವುದೇ ಅನಾರೋಗ್ಯದಿಂದ ಬಳಲುವುದನ್ನು ತಪ್ಪಿಸಲು, ನಮ್ಮ ದೇಹದ ರೋಗ ನಿರೋಧಕ ಶಕ್ತಿ ಬಲವಾಗಿರಬೇಕು. ಅನೇಕ ಜನರು ತಮ್ಮ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಲು ವಿವಿಧ ಆಹಾರಗಳನ್ನು, ಔಷಧಿಗಳನ್ನು ಸೇವಿಸುತ್ತಾರೆ. ಆದರೆ ನಿಮಗೆ ಗೊತ್ತಾ? ಪ್ರತಿದಿನ ವ್ಯಾಯಾಮ ಮಾಡೋದ್ರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಹೆಚ್ಚಿನ ಪ್ರಯೋಜನವಾಗಬಹುದು.
 

ಕೋವಿಡ್-19 ವಿರುದ್ಧ ರೋಗ ನಿರೋಧಕ ಶಕ್ತಿಯು (immunity power) ಅತಿದೊಡ್ಡ ಅಸ್ತ್ರವೆಂದು ಸಾಬೀತಾಗಿದೆ. ಕರೋನಾ ಅವಧಿಯಲ್ಲಿ, ಹೆಚ್ಚಿನ ಜನರು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಲು ವಿವಿಧ ಆಹಾರಗಳನ್ನು ಸೇವಿಸಿದರು. ದೇಹದ ಪ್ರತಿರಕ್ಷಣಾ ವ್ಯವಸ್ಥೆಯು ರೋಗಗಳ ವಿರುದ್ಧ ಹೋರಾಡುತ್ತದೆ ಮತ್ತು ರೋಗಗಳಿಂದ ರಕ್ಷಿಸುತ್ತದೆ. ಪ್ರತಿದಿನ ಕೆಲವು ನಿಮಿಷಗಳ ಕಾಲ ವ್ಯಾಯಾಮ ಮಾಡೋದ್ರಿಂದ ರೋಗ ನಿರೋಧಕ ಶಕ್ತಿ ಬಲವಾಗುತ್ತೆ ಮತ್ತು ಅನೇಕ ರೋಗಗಳ ಅಪಾಯವನ್ನು ಸಹ ಕಡಿಮೆ ಮಾಡುತ್ತದೆ
 

ಆರೋಗ್ಯ ತಜ್ಞರು ಪ್ರತಿದಿನ ವ್ಯಾಯಾಮ ಮಾಡುವಂತೆ ಪ್ರತಿಯೊಬ್ಬರಿಗೂ ಸಲಹೆ ನೀಡುತ್ತಾರೆ. ಇಂದು, ವ್ಯಾಯಾಮ ಮಾಡುವ ಮೂಲಕ ರೋಗ ನಿರೋಧಕ ಶಕ್ತಿಯನ್ನು ಹೇಗೆ ಬಲಪಡಿಸುವುದು ಎಂದು ನಾವು ನಿಮಗೆ ಹೇಳಲಿದ್ದೇವೆ. ಅವುಗಳನ್ನು ಪ್ರತಿದಿನ ಪಾಲಿಸುವ ಮೂಲಕ ಉತ್ತಮ ಆರೋಗ್ಯವನ್ನು ಕಾಪಾಡಿ. 

Tap to resize

ವ್ಯಾಯಾಮ ಮಾಡೋದ್ರಿಂದ ಅನೇಕ ಪ್ರಯೋಜನಗಳಿವೆ

ವರದಿಯ ಪ್ರಕಾರ, ವ್ಯಾಯಾಮ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಇದಲ್ಲದೆ, ವ್ಯಾಯಾಮ ಅನೇಕ ರೋಗಗಳಿಂದ ರಕ್ಷಿಸಲು ಸಹ ಸಹಾಯ ಮಾಡುತ್ತೆ. ಇದು ಹೆಚ್ಚಾಗಿ ವ್ಯಾಯಾಮದ ಆವರ್ತನ, ಸಮಯ ಮತ್ತು ತೀವ್ರತೆಯ ಮೇಲೆ ಅವಲಂಬಿತವಾಗಿರುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಹೆಚ್ಚು ಕಷ್ಟಕರವಲ್ಲದ ವ್ಯಾಯಾಮಗಳು ಹೆಚ್ಚು ಪ್ರಯೋಜನಕಾರಿ ಎಂದು ಅನೇಕ ಸಂಶೋಧನೆಗಳಲ್ಲಿ ಸಾಬೀತಾಗಿದೆ.

ನೀವು ಪ್ರತಿದಿನ ಸುಮಾರು 60 ನಿಮಿಷಗಳು ಈ ರೀತಿಯ ವ್ಯಾಯಾಮ (exercise) ಮಾಡಿದರೆ, ಪ್ರತಿರಕ್ಷಣಾ ವ್ಯವಸ್ಥೆಯು ಬಲವಾಗಿರುತ್ತದೆ. ಇದು ಚಯಾಪಚಯ ವ್ಯವಸ್ಥೆ ಮತ್ತು ಸ್ನಾಯುಗಳ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಿಂದ ನೀವು ಹೆಚ್ಚು ಆರೋಗ್ಯದಿಂದ ಇರಲು ಸಾಧ್ಯವಾಗುತ್ತದೆ.

ವ್ಯಾಯಾಮದಿಂದ ಏನೆಲ್ಲಾ ಪ್ರಯೋಜನಗಳಿವೆ?

ಸುಮಾರು 30-45 ನಿಮಿಷಗಳ ಏರೋಬಿಕ್ ವ್ಯಾಯಾಮ ಪ್ರತಿರಕ್ಷಣಾ ವ್ಯವಸ್ಥೆಯ ರಕ್ಷಣಾತ್ಮಕ ಕೋಶಗಳ ಸಂಖ್ಯೆ ಮತ್ತು ಪರಿಚಲನೆಯನ್ನು ಹೆಚ್ಚಿಸುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಆದುದರಿಂದ ಮಿಸ್ ಮಾಡದೆ ಯಾವಾಗಲೂ ಅರೋಬಿಕ್ಸ್ ಮಾಡಿ. 

ವ್ಯಾಯಾಮವು ಸ್ವಲ್ಪ ಸಮಯದವರೆಗೆ ದೇಹದ ತಾಪಮಾನವನ್ನು ಹೆಚ್ಚಿಸುತ್ತದೆ, ಇದು ಬ್ಯಾಕ್ಟೀರಿಯಾ ಹರಡುವ ಅಪಾಯವನ್ನು ಕಡಿಮೆ ಮಾಡುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಪ್ರತಿದಿನ ಅರ್ಧಗಂಟೆ ವ್ಯಾಯಾಮ ಮಾಡೋದು ಉತ್ತಮ.

ಪ್ರತಿದಿನ ವ್ಯಾಯಾಮ ಮಾಡುವುದು ನಿಮಗೆ ಉತ್ತಮ ನಿದ್ರೆಯನ್ನು ನೀಡುತ್ತದೆ. ಕಡಿಮೆ ನಿದ್ರೆಯು ಪ್ರತಿ ರಕ್ಷಣಾ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆರೋಗ್ಯಕ್ಕೆ ಸರಿಯಾದ ನಿದ್ರೆ ಅತ್ಯಗತ್ಯ. ಸರಿಯಾಗಿ ನಿದ್ರೆ ಮಾಡಿದ್ರೆ ದೇಹಕ್ಕೆ ಹೆಚ್ಚಿನ ಶಕ್ತಿ ಸಿಗುತ್ತೆ, ಇದರಿಂದ ನೀವು ಆರೋಗ್ಯದಿಂದ ಇರಲು ಸಾಧ್ಯವಾಗುತ್ತೆ, 

ವ್ಯಾಯಾಮವು ಹೃದ್ರೋಗ ಮತ್ತು ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿಡುತ್ತದೆ. ಇದರಿಂದ ಹೃದಯದ ಆರೋಗ್ಯವು ಉತ್ತಮವಾಗಿರುತ್ತೆ. ಹೃದಯ ಸರಿಯಾಗಿ ಕೆಲಸ ಮಾಡಿದ್ರೆ ದೈಹಿಕ ಆರೋಗ್ಯವು (physical health) ಉತ್ತಮವಾಗಿರುತ್ತೆ. 

ಇದಲ್ಲದೆ ಅನೇಕ ಪ್ರಯೋಜನಗಳಿವೆ. ಒತ್ತಡ ಅಥವಾ ಆತಂಕದೊಂದಿಗೆ ಹೋರಾಡುತ್ತಿದ್ದರೆ, ಪ್ರತಿದಿನ ವ್ಯಾಯಾಮ ಮಾಡಬೇಕು. ಇದು ಒತ್ತಡವನ್ನು ಕಡಿಮೆ (stress relief) ಮಾಡುತ್ತದೆ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ. ಮಾನಸಿಕ ಆರೋಗ್ಯವು ಸಹ ಉತ್ತಮ ಆರೋಗ್ಯಕ್ಕೆ ಸಹಕಾರಿ. 

Latest Videos

click me!