Detoxification ಗೆ ಕ್ಯಾರಟ್ ಎಲೆ ಬೆಸ್ಟ್ ಮದ್ದು, ನಿಮಗೆ ಗೊತ್ತಿತ್ತಾ?

First Published | Jan 27, 2022, 4:39 PM IST

ಕ್ಯಾರೆಟ್ ಎಲೆಗಳು (carrot leaves) ತಿನ್ನಲು ಬರುತ್ತವೆ ಎಂದರೆ ಅಚ್ಚರಿ ಉಂಟಾಗಬಹುದು ಅಲ್ವಾ? ಕ್ಯಾರೆಟ್ ಗಳ ಜೊತೆಗೆ ಕ್ಯಾರೆಟ್ ಎಲೆಗಳೂ ಇರುತ್ತವೆ. ಕ್ಯಾರೆಟ್ ಎಲೆಗಳು ಕಹಿ ಮತ್ತು ಸಿಹಿಯ ಮಿಶ್ರಣದಲ್ಲಿ ಸ್ವಲ್ಪ ಮಟ್ಟಿಗೆ ರುಚಿಯಾಗಿರುತ್ತವೆ. ಇದರ ಅರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯೋಣ. 
 

ಕ್ಯಾರೆಟ್ ಎಲೆಗಳ ಪ್ರಮುಖ ಪ್ರಯೋಜನಗಳಲ್ಲಿ ಒಂದೆಂದರೆ ಅದರ ಹೆಚ್ಚಿನ ಪ್ರಮಾಣದ ವಿಟಮಿನ್ ಸಿ. ಕ್ಯಾರೆಟ್ ಎಲೆಗಳಲ್ಲಿರುವ ವಿಟಮಿನ್ ಸಿ ಪ್ರಮಾಣ ಬೇರುಗಳಲ್ಲಿರುವ ವಿಟಮಿನ್ ಸಿ ಗಿಂತಲೂ ಸುಮಾರು ಆರು ಪಟ್ಟು ಹೆಚ್ಚು! ಅದಕ್ಕಾಗಿಯೇ ಕ್ಯಾರೆಟ್ ಎಲೆಗಳು ನಮ್ಮ ಮುಂದಿನ ಚಿಕನ್ ಸೂಪ್ ಅಥವಾ ಸಲಾಡ್ ಗೆ ಉಪಯುಕ್ತ ಸೇರ್ಪಡೆಗಳಾಗಿರಬಹುದು. ಏಕೆಂದರೆ ಇತರ ಪದಾರ್ಥಗಳೊಂದಿಗೆ ಸಂಯೋಜಿಸಿ, ಅವು ರೋಗನಿರೋಧಕ ವ್ಯವಸ್ಥೆಯನ್ನು ಹೆಚ್ಚಿಸುವಲ್ಲಿ ಒಟ್ಟಿಗೆ ಕೆಲಸ ಮಾಡಬಹುದು.  
 

ಗೆಡ್ಡೆ ಬೆಳವಣಿಗೆಯನ್ನು ತಡೆಗಟ್ಟಲು ಸಹಾಯಕ

ಕ್ಯಾರೆಟ್ ಹಸಿರು ಎಲೆಗಳಲ್ಲಿ ಕಂಡುಬರುವ ಸಾಮಾನ್ಯ ಸಂಯುಕ್ತವೆಂದರೆ ಕ್ಲೋರೋಫಿಲ್. ಇದು ದ್ಯುತಿಸಂಶ್ಲೇಷಣೆಗೆ ಮತ್ತು ಸಸ್ಯಗಳ ಎಲೆಗಳನ್ನು ಹಸಿರು ಮಾಡಲು ಕಾರಣವಾದ ಒಂದು ರಾಸಾಯನಿಕವಾಗಿದೆ. ಕ್ಲೋರೋಫಿಲ್ ಶಕ್ತಿಯುತ ಪೋಷಕಾಂಶಗಳನ್ನು ಹೊಂದಿರುತ್ತದೆ. ಇದರ ಮುಖ್ಯ ಕಾರ್ಯವೆಂದರೆ ಗೆಡ್ಡೆ ಬೆಳೆಯುವುದನ್ನು ತಡೆಯುವುದು. ಕೆಲವು ಸಂಶೋಧನೆಗಳು ಕ್ಯಾರೆಟ್ ಎಲೆಗಳು ಉದರದಲ್ಲಿ ಗೆಡ್ಡೆಯ ಬೆಳವಣಿಗೆಯನ್ನು ತಡೆಯುವ ಸಾಮರ್ಥ್ಯವನ್ನು ಹೊಂದಿವೆ ಎಂಬುದನ್ನು ಕಂಡುಕೊಂಡಿವೆ.

Tap to resize

ನಿರ್ವಿಷೀಕರಣದಲ್ಲಿ (detoxification) ಸಹಾಯ
ಕ್ಲೋರೋಫಿಲ್ ನಮ್ಮ ದೇಹದಿಂದ ವಿಷಕಾರಿ ವಸ್ತುಗಳನ್ನು ತೆಗೆಯುತ್ತದೆ. ನಿರ್ವಿಷಗೊಳಿಸುವ ಪರಿಣಾಮದಿಂದಾಗಿ ಮೂತ್ರಪಿಂಡವು ನಮ್ಮ ರಕ್ತದಲ್ಲಿರುವ ಹಾನಿಕಾರಕ ವಸ್ತುಗಳನ್ನು ಫಿಲ್ಟರ್ ಮಾಡುತ್ತದೆ. ಪರಿಣಾಮವಾಗಿ ಮೂತ್ರಪಿಂಡದ ಕಲ್ಲುಗಳು ರೂಪುಗೊಳ್ಳುವುದನ್ನು ತಡೆಯುತ್ತದೆ. 
 

ಜೀರ್ಣಾಂಗ ವ್ಯವಸ್ಥೆಯ (digestion system) ಸುಧಾರಣೆ
ಕ್ಲೋರೋಫಿಲ್ ನ ನಿರ್ವಿಷಗೊಳಿಸುವ ಗುಣಲಕ್ಷಣಗಳು ಕರುಳಿನ ಶುದ್ಧೀಕರಣ ಮತ್ತು ಅದರ ವಿಶ್ರಾಂತಿಗೆ ಸಹಾಯ ಮಾಡುತ್ತದೆ. ಇದರ ನಾರಿನಂಶವು ಜೀರ್ಣಕ್ರಿಯೆಯನ್ನು ಸುಲಭಗೊಳಿಸಿ ದೇಹದಿಂದ ತ್ಯಾಜ್ಯ ಹೊರ ಹಾಕಲು ಹಾಗೂ ಪೋಷಕಾಂಶಗಳ ಹೀರುವಿಕೆಗೆ ಸಹಾಯ ಮಾಡುತ್ತದೆ. 

ಹೃದಯದ ಆರೋಗ್ಯ

ಕ್ಯಾರೆಟ್ ಎಲೆಗಳಲ್ಲಿ ಪೊಟ್ಯಾಸಿಯಮ್ ಅಧಿಕವಾಗಿದೆ. ಇದು ರಕ್ತದೊತ್ತಡವನ್ನು ನಿಯಂತ್ರಿಸುವ ಪರಿಣಾಮಕ್ಕೆ ಹೆಸರುವಾಸಿಯಾಗಿದೆ. ರಕ್ತದೊತ್ತಡ ಹೆಚ್ಚಿರುವವರಿಗೆ ಸಾಮಾನ್ಯವಾಗಿ ಪೊಟ್ಯಾಶಿಯಂ ಕೊರತೆ ಇರುತ್ತದೆ. ಅದಕ್ಕಾಗಿಯೇ ನಮ್ಮ ದೈನಂದಿನ ಊಟಕ್ಕೆ ಕ್ಯಾರೆಟ್ ಎಲೆಗಳನ್ನು ಸೇರಿಸುವುದು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುವ ಮೂಲಕ ನಮ್ಮ ಆರೋಗ್ಯವನ್ನು ಸುಧಾರಿಸುತ್ತದೆ.  ಇದರಿಂದಾಗಿ ಸಾಮಾನ್ಯವಾಗಿ ಅಥೆರೊಸ್ಕ್ಲೆರೋಸಿಸ್ ನಿಂದ ಉಂಟಾಗುವ ಪಾರ್ಶ್ವವಾಯುವನ್ನು ತಡೆಯಬಹುದು.

ಮೂಳೆಯ ಸಾಮರ್ಥ್ಯ ಹೆಚ್ಚಳ

ಖನಿಜಗಳು ಮಾತ್ರವಲ್ಲ, ಕ್ಯಾರೆಟ್ ಎಲೆಗಳು ಕೆಲವು ಪ್ರಯೋಜನಕಾರಿ ವಿಟಮಿನ್ ಗಳನ್ನು ಹೊಂದಿರುತ್ತವೆ. ಅವುಗಳಲ್ಲಿ ಒಂದು ವಿಟಮಿನ್ ಕೆ, ಇದು ರಕ್ತ ಹೆಪ್ಪುಗಟ್ಟುವಿಕೆ ಮತ್ತು ಮೂಳೆಸಾಂದ್ರತೆಯನ್ನು ಹೆಚ್ಚಿಸಲು ಮುಖ್ಯವಾಗಿದೆ. ಕ್ಯಾಲ್ಸಿಯಂ ಮತ್ತು ಮೆಗ್ನೀಶಿಯಮ್ ನಂತಹ ಖನಿಜಗಳೊಂದಿಗೆ ಸೇರಿ, ವಿಟಮಿನ್ ಕೆ ಒಟ್ಟಾರೆ ಮೂಳೆಯ ಆರೋಗ್ಯ ಮತ್ತು ಶಕ್ತಿಯನ್ನು ಉತ್ತೇಜಿಸುತ್ತದೆ, ಆಸ್ಟಿಯೊಪೊರೋಸಿಸ್ ನಂತಹ ಮೂಳೆ ಮತ್ತು ಕೀಲು ಸಮಸ್ಯೆಗಳ ಸಾಧ್ಯತೆಗಳನ್ನು ಬಹಳವಾಗಿ ಕಡಿಮೆ ಮಾಡುತ್ತದೆ.
 

ಕಣ್ಣುಗಳ ಆರೋಗ್ಯ

ಕ್ಯಾರೆಟ್ ಎಲೆಗಳ ಬಗ್ಗೆ ಒಳ್ಳೆಯ ವಿಷಯ ನಿಮಗೆ ತಿಳಿದಿದೆಯೇ? ಅವು ನಮ್ಮ ಸಾಮಾನ್ಯ ಸಲಾಡ್ ಗೆ ಉತ್ತಮ ಸೇರ್ಪಡೆಗಳು ಮಾತ್ರವಲ್ಲ, ಅವು ತಮ್ಮದೇ ಆದ ಕ್ಯಾರೆಟ್ ಬೇರುಗಳಂತೆ ಪೌಷ್ಟಿಕವಾಗಿವೆ!  ಕ್ಯಾರೆಟ್ ಎಲೆಗಳು ಹೆಚ್ಚಿನ ಪ್ರಮಾಣದ ವಿಟಮಿನ್ ಎ ಅನ್ನು ಹೊಂದಿರುತ್ತವೆ, ಇದು ಕಣ್ಣುಗಳ ಆರೋಗ್ಯವನ್ನು ಉಳಿಸಿಕೊಳ್ಳುವ  ಪ್ರಯೋಜನವನ್ನು ಹೊಂದಿದೆ.  

Latest Videos

click me!