Health Tips : ಡಯಟ್ ಮೇಲೆ ಗಮನ ಹರಿಸಿದ್ರೆ ಮಧುಮೇಹ, ವಯಸ್ಸು ಎರಡನ್ನೂ ನಿಯಂತ್ರಿಸಬಹುದು..

First Published | Jan 22, 2022, 4:50 PM IST

ಮಧುಮೇಹ (diabetes) ಮತ್ತು ವಯಸ್ಸಾಗುವಿಕೆ ಪ್ರತಿಯೊಬ್ಬರೂ ನಿಯಂತ್ರಿಸಲು ಬಯಸುವ 2 ವಿಷಯಗಳು. ವಾಸ್ತವದಲ್ಲಿ ಕೆಲವೇ ಜನರು ಇದರಲ್ಲಿ ಸಫಲರಾಗುತ್ತಾರೆ. ಈ ಎರಡು ವಿಷಯಗಳನ್ನು ನಿಯಂತ್ರಿಸುವ ಕೆಲವು ಮಾರ್ಗಗಳು ಇದ್ದು, ಅವುಗಳನ್ನು ನೀವು ಪಾಲಿಸಿದರೆ ಉತ್ತಮ ಆರೋಗ್ಯ ನಿಮ್ಮದಾಗುತ್ತದೆ. 

ಒಬ್ಬ ವ್ಯಕ್ತಿಯು ತಾನು ತಿನ್ನುವುದನ್ನು ಸರಿಯಾಗಿ ತಿಂದರೆ ಮಾತ್ರ ಸಾಕಷ್ಟು ತೂಕವನ್ನು ಕಳೆದುಕೊಳ್ಳಬಹುದು. ಅಷ್ಟೇ ಅಲ್ಲ, ಅವನು ತನ್ನ ವಯಸ್ಸಿಗಿಂತ ಸಾಕಷ್ಟು ಚಿಕ್ಕವನೂ ಕಾಣಬಲ್ಲನು. ಆದುದರಿಂದ ತಿನ್ನುವ ಆಹಾರದ ಬಗ್ಗೆ ಗಮನ ಹರಿಸಿ. 

ಈ ತಪ್ಪು ತೂಕ ಹೆಚ್ಚಿಸುತ್ತದೆ 
ಜನರು ಸಾಮಾನ್ಯವಾಗಿ ತರಕಾರಿಗಳು-ಸಲಾಡ್ ಗಳು, ಪ್ರೋಟೀನ್ ಗಳನ್ನು ಒಟ್ಟಾಗಿ ಮಿಕ್ಸ್ ಮಾಡಿ ತಿನ್ನುತ್ತಾರೆ. ಇದು ಹಾರ್ಮೋನುಗಳಿಗೆ (harmones) ವ್ಯತ್ಯಾಸವನ್ನುಂಟು ಮಾಡುತ್ತದೆ ಮತ್ತು ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ಇದು ನೀವು ದಿನ ನಿತ್ಯ ಮಾಡುವ ಅತ್ಯಂತ ದೊಡ್ಡ ತಪ್ಪಾಗಿದೆ. 

Latest Videos


ಕಾರ್ಬೋಹೈಡ್ರೇಟ್ (carbohydrates) ಗಳಿಗೆ ಮೊದಲು ತರಕಾರಿಗಳು ಮತ್ತು ಪ್ರೋಟೀನ್ ಅನ್ನು ಸೇವಿಸಿದರೆ, ಅದು ಇನ್ಸುಲಿನ್ ಮತ್ತು ಗ್ಲುಕೋಸ್ ಸ್ಪೈಕ್ ಗಳನ್ನು 30-40% ನಷ್ಟು ಕಡಿಮೆ ಮಾಡುತ್ತದೆ. ತೂಕ ಇಳಿಕೆ ಮಾಡಲು ಆಹಾರದ ಸರಿಯಾದ ಕ್ರಮಗಳನ್ನು ಅನುಸರಿಸಿದರೆ ಮಾತ್ರ ಸಾಧ್ಯವಾಗುತ್ತದೆ. 

ನ್ಯೂಯಾರ್ಕ್ ನಗರದ ವೀಲ್ ಕಾರ್ನೆಲ್ ವೈದ್ಯಕೀಯ ಕಾಲೇಜಿನ ಸಂಶೋಧಕರು ನಡೆಸಿದ ಅಧ್ಯಯನವು ತಿನ್ನುವ ಸಾಮಾನ್ಯ ವಿಧಾನವು ನಮ್ಮ ದೇಹದಲ್ಲಿ ಇನ್ಸುಲಿನ್ ಮಟ್ಟವನ್ನು (insulin level) ಹೆಚ್ಚಿಸುತ್ತದೆ ಎಂದು ಬಹಿರಂಗಪಡಿಸಿದೆ. ಆದುದರಿಂದ ಇನ್ಸುಲಿನ್ ಹೆಚ್ಚಿಸುವ ಆಹಾರದ ಕಡೆಗೆ ಗಮನ ಇರಲಿ. 

ಕೆಲವೊಮ್ಮೆ ಸಮತೋಲಿತ ಆಹಾರ (balanced food) ತೆಗೆದುಕೊಂಡ ನಂತರವೂ ಪೂರ್ಣ ಫಲಿತಾಂಶ ಸಿಗುವುದಿಲ್ಲ. ಆದ್ದರಿಂದ ಆಹಾರ ಪದಾರ್ಥಗಳನ್ನು ಸರಿಯಾದ ಕ್ರಮದಲ್ಲಿ ಸೇವಿಸುವುದು ಮುಖ್ಯ. ಅಂದರೆ, ಊಟದ ಆರಂಭದಲ್ಲಿ ಯಾವಾಗಲೂ ತರಕಾರಿಗಳು, ಸಲಾಡ್ ಗಳು ಮತ್ತು ಬೇಳೆಕಾಳುಗಳನ್ನು ತಿನ್ನಿ, ನಂತರ ಕಾರ್ಬೋಹೈಡ್ರೇಟ್ ಗಳನ್ನು ಸೇವಿಸಿ. 

ಸಾಕಷ್ಟು ಪ್ರಯೋಜನಗಳಿವೆ 
ಕಾರ್ಬೋಹೈಡ್ರೇಟ್ ಸ್ ಮೊದಲು ಪ್ರೋಟೀನ್ ಮತ್ತು ಫೈಬರ್ (fiber) ತಿನ್ನುವ ಈ ವಿಧಾನವು ಸಾಕಷ್ಟು ಪ್ರಯೋಜನಗಳನ್ನು ಒದಗಿಸುತ್ತದೆ. 
ಈ ರೀತಿ ತಿಂದಾಗ ಹಾರ್ಮೋನುಗಳು ಸಮತೋಲನದಲ್ಲಿರುತ್ತವೆ. ಇದರಿಂದ ಉತ್ತಮ ಆರೋಗ್ಯವೂ ನಿಮ್ಮದಾಗುತ್ತದೆ. 

ಫಲವತ್ತತೆಗೆ ಉತ್ತಮ
 ಚರ್ಮವು ಉತ್ತಮವಾಗುತ್ತದೆ ಮತ್ತು ಮೂಲ ವಯಸ್ಸಿಗಿಂತ ಚಿಕ್ಕವರಾಗಿ ಕಾಣೋದರಲ್ಲಿ ಸಂಶಯವೇ ಇಲ್ಲ ಎಂದು ತೋರುತ್ತದೆ. 
ಹಾಗೆಯೇ ತೂಕವನ್ನು ನಿಯಂತ್ರಿಸಲಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ, ಮಧುಮೇಹವನ್ನು ನಿಯಂತ್ರಿಸುವುದು ಪ್ರಯೋಜನವಾಗಿದೆ. 

click me!