ಎದ್ದಾಗ, ಕುಳಿತಾಗ ಮೂಳೆಗಳಿಂದ ಸೌಂಡ್ ಕೇಳುತ್ತಿದ್ಯಾ? ಹಾಗಿದ್ರೆ ಹುಷಾರ್!

First Published | Jul 12, 2022, 12:33 PM IST

ದೇಹದೊಳಗೆ ರೋಗ ಬೆಳೆಯುತ್ತಿರುವಾಗ, ಅದರ ಲಕ್ಷಣ ಹೊರಭಾಗದಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತೆ. ಎದ್ದೇಳುವಾಗ ಅಥವಾ ನಡೆಯುವಾಗ ಕೆಲವೊಮ್ಮೆ ಮೂಳೆಯ ಶಬ್ದವಾಗುತ್ತೆ. ಮೂಳೆಗಳಿಂದ ಬರುವ ಈ ರೀತಿಯ ಶಬ್ದವನ್ನು ಜನರು ಸಾಮಾನ್ಯವಾಗಿ ನಿರ್ಲಕ್ಷಿಸುತ್ತಾರೆ. ಇದು ದೇಹದೊಳಗೆ ನಡೆಯುತ್ತಿರುವ ಗಂಭೀರ ಸಮಸ್ಯೆಯ ಸಂಕೇತವಾಗಬಹುದು ಎಂದು ತಿಳಿದರೆ ನೀವು ಅಚ್ಚರಿ ಪಡೋದು ಗ್ಯಾರಂಟಿ.


ಕೆಲವೊಮ್ಮೆ ಮೂಳೆ ಸೆಳೆತದ ಶಬ್ದ ಕೇಳೋದು ಅಷ್ಟೊಂದು ಡೇಂಜರಸ್(Dangerous) ಅಲ್ಲವಾದರೂ, ಹೆಚ್ಚಿನ ಸಂದರ್ಭಗಳಲ್ಲಿ ಇದು ಮೂಳೆಗಳ ದೌರ್ಬಲ್ಯ ಅಥವಾ ಸಂಧಿವಾತದಿಂದಾಗಿರಬಹುದು. ಅಂತಹ ಶಬ್ದ ವಿಶೇಷವಾಗಿ ಮೂಳೆಗಳ ಕೀಲುಗಳಲ್ಲಿ ಬರುತ್ತೆ, ಇದು ನಿಮ್ಮ ಕೀಲುಗಳಿಗೆ ಏನೋ ಸಮಸ್ಯೆ ಇದೆ ಎಂದು ಸೂಚಿಸುತ್ತೆ.
 

ವಯಸ್ಸಾದಂತೆ ಕೀಲುಗಳ ಕಾರ್ಟಿಲೇಜ್(Cartilague) ಹದಗೆಡುತ್ತೆ, ಇದು ಅಂತಹ ಶಬ್ದಕ್ಕೆ ಕಾರಣವಾಗಬಹುದು. ಆದರೆ ಶಬ್ದದೊಂದಿಗೆ ಕೀಲುಗಳಲ್ಲಿ ನೋವು ಅಥವಾ ಊತ ಕಾಣಿಸಿಕೊಂಡರೆ ಸಮಸ್ಯೆ ಉಂಟಾಗುತ್ತೆ. ಅಲ್ಲದೆ ನೀವು ಸರ್ಜರಿಗೆ ಒಳಗಾಗಿದ್ದರೆ ಮತ್ತು ಅದರ ನಂತರ ಇನ್ನೂ ಶಬ್ದ ಬರುತ್ತಿದ್ದರೆ, ಏನಾದರೂ ಸೀರಿಯಸ್ ಹೆಲ್ತ್ ಸಮಸ್ಯೆ ಇದ್ಯಾ ಎಂದು ತಿಳಿಯಲು ಡಾಕ್ಟರ್ ಹತ್ತಿರ ಕನ್ಸಲ್ಟ್ ಮಾಡಿ. 

Tap to resize

ಮೂಳೆ ಮುರಿತಕ್ಕೆ ಸಂಬಂಧಿಸಿದ ಫ್ಯಾಕ್ಟ್ಸ್  
ಕೀಲುಗಳಲ್ಲಿ ಈ ರೀತಿಯ ಸೌಂಡ್ ಬರೋದನ್ನು ಕ್ರೆಪಿಟಸ್ (Crapitus)ಎಂದು ಕರೆಯಲಾಗುತ್ತೆ.
ಒಂದು ಅಧ್ಯಯನದ ಪ್ರಕಾರ, ಯುಎಸ್ನಲ್ಲಿ 25 ರಿಂದ 45% ಜನರು ಈ ಸಮಸ್ಯೆ ಹೊಂದಿದ್ದಾರೆ. ಈ ಬಗ್ಗೆ ತುಂಬಾನೆ ಜಾಗರೂಕರಾಗಿರೋದು ಮುಖ್ಯ.

ಬೆರಳುಗಳಿಂದ(Finger) ನೆಟಿಗೆ ತೆಗೆಯುವ ಅಭ್ಯಾಸ ಹೊಂದಿರುವ ಜನರಲ್ಲಿ, ಈ ಸಮಸ್ಯೆ ಹೆಚ್ಚು ಕಂಡುಬಂದಿದೆ. 
ಆದರೆ ಇನ್ನೂ ಕೆಲವೊಂದು ಅಧ್ಯಯನವು ಈ ಮೂಳೆ ಶಬ್ದವು ಯಾವುದೇ ರೋಗಕ್ಕೆ ಸಂಬಂಧಿಸಿಲ್ಲ ಎಂದು ತೋರಿಸಿದೆ.

ಶಬ್ದವು(Sound) ಮೂಳೆಗಳಿಂದ ಏಕೆ ಬರುತ್ತೆ ?
ಮೂಳೆ ಮತ್ತು ಕೀಲುಗಳಲ್ಲಿನ ಶಬ್ದಕ್ಕೆ ವಿಭಿನ್ನ ಕಾರಣಗಳಿರಬಹುದು. ಮೂಳೆಗಳ ಗಂಭೀರ ಸ್ಥಿತಿಗೆ ಇದು ಕಾರಣ ಎಂದು ಕೆಲವರು ನಂಬುತ್ತಾರೆ, ಆದರೆ ಕೆಲವರು ಅದನ್ನು ಗಂಭೀರವಾಗಿ ಪರಿಗಣಿಸೋದಿಲ್ಲ. ವಾಸ್ತವವಾಗಿ, ಅನೇಕ ಅಧ್ಯಯನಗಳ ಹೊರತಾಗಿಯೂ, ಇದಕ್ಕೆ ನಿಖರವಾದ ಕಾರಣ ಕಂಡುಹಿಡಿಯಲಾಗಿಲ್ಲ.
 

ಇದಕ್ಕೆ 3 ಕಾರಣಗಳೂ ಇವೆ.
ಸ್ನಾಯುಗಳಿಗೆ(Muscle) ಹಾನಿ—ಒಂದು ಅಧ್ಯಯನದ ಪ್ರಕಾರ, ಸ್ನಾಯುವಿನ ಹಿಗ್ಗುವಿಕೆ ಇದ್ದಾಗ, ಅಂತಹ ಶಬ್ದ ಬರಬಹುದು. ಇದು ನಿಮ್ಮ ಸ್ನಾಯುಗಳಲ್ಲಿ ಒಂದು ರೀತಿಯ ಒತ್ತಡವಿದೆ ಎಂಬುದರ ಸಂಕೇತವಾಗಿದೆ.

ಕಾರ್ಟಿಲೇಜ್ ನಷ್ಟ- ಇದು ವಯಸ್ಸಾಗುವಿಕೆಯಿಂದ ಉಂಟಾಗಬಹುದು, ಇದು ಕೀಲು ದಪ್ಪವಾಗಲು ಮತ್ತು ಗಟ್ಟಿಯಾಗಲು(hard) ಕಾರಣವಾಗಬಹುದು.
ಸಂಧಿವಾತ- ಸಂಧಿವಾತದ ಸಮಸ್ಯೆ ಇದ್ದಾಗ, ನಿಮಗೆ ಅಂತಹ ಶಬ್ದ ಬರುತ್ತೆ. ಈ ಬಗ್ಗೆ ಎಚ್ಚರಿಕೆಯಿಂದಿರಿ.

ರಕ್ಷಿಸೋದು ಹೇಗೆ?
ಇದನ್ನು ತಪ್ಪಿಸಲು, ನೀವು ದೈಹಿಕವಾಗಿ ಆಕ್ಟಿವ್ ಆಗಿರಬೇಕು. ನೀವು ಸ್ಟ್ರೆಚಿಂಗ್ ಸಹ ಮಾಡಬಹುದು. ಅಲ್ಲದೆ ಮನಸ್ಸು ಮತ್ತು ದೇಹ ಶಾಂತವಾಗಿಡಲು ಪ್ರಯತ್ನಿಸಿ. ಇದನ್ನು ತಡೆಗಟ್ಟಲು ನೀವು ವಾರಕ್ಕೆ ಎರಡು ತೀವ್ರವಾದ ಎಕ್ಸರ್ಸೈಜ್(Exercise) ಸಹ ಮಾಡಬಹುದು.

Latest Videos

click me!