International Day of Yoga: ಯೋಗಾಸನ ಮಾಡಿ ಯೋಗದ ಮಹತ್ವ ತಿಳಿಸಿದ ಸಿಎಂ ಸಿದ್ದರಾಮಯ್ಯ

First Published Jun 21, 2024, 12:42 PM IST

ಬಳ್ಳಾರಿ(ಜೂ.21):  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು(ಶುಕ್ರವಾರ) ಸಂತೋಷ್ ಲಾಡ್ ಫೌಂಡೇಷನ್ ಮತ್ತು ಶ್ವಾಸ ಯೋಗ ಸಂಸ್ಥೆ ಬಳ್ಳಾರಿಯ JSW ಟೌನ್‌ಶಿಪ್‌ನಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಪಾಲ್ಗೊಂಡು, ಯೋಗಾಭ್ಯಾಸ ಮಾಡಿದ್ದಾರೆ. 

ತಮ್ಮ ಅಧಿಕೃತ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿರುವ ಸಿಎಂ ಸಿದ್ದರಾಮಯ್ಯ ಅವರು, ಮಾನಸಿಕ ಮತ್ತು ದೈಹಿಕ ಆರೋಗ್ಯ ವೃದ್ಧಿಗಾಗಿ ಯೋಗ ಒಂದು ಪರಿಣಾಮಕಾರಿ ಸಾಧನ. ಇಂದು ಅಂತಾರಾಷ್ಟ್ರೀಯ ಯೋಗ ದಿನ. ಇಡೀ ಜಗತ್ತು ಭಾರತದ ಕೊಡುಗೆಯಾದ ಯೋಗದ ಮಹತ್ವವನ್ನು ಅರಿತು ಅನುಸರಿಸುತ್ತಿದೆ ಎಂದು ತಿಳಿಸಿದ್ದಾರೆ. 

ಬಳ್ಳಾರಿಯ ಜೆ.ಎಸ್.ಡಬ್ಲ್ಯೂ ಟೌನ್‌ಶಿಪ್‌ನಲ್ಲಿ ಸಂತೋಷ್ ಲಾಡ್ ಫೌಂಡೇಷನ್ ಮತ್ತು ಶ್ವಾಸ ಯೋಗ ಸಂಸ್ಥೆ ಆಯೋಜಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಪಾಲ್ಗೊಂಡು, ಯೋಗಭ್ಯಾಸ ಮಾಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯೋಗದ ಮಹತ್ವದ ಬಗ್ಗೆ ಬರೆದುಕೊಂಡಿದ್ದಾರೆ. 

ವೇದಿಕೆಯ ಮೇಲೆ ಹಾಜರಾಗಿದ್ದ ಸಚಿವರಾದ ಸಂತೋಷ್ ಲಾಡ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಸಂಸದರಾದ ಈ.ತುಕಾರಾಂ, ಸರ್ಕಾರದ ಕಾರ್ಯದರ್ಶಿ ತ್ರಿಲೋಕ್ ಚಂದ್ರ, ನಟಿ ಶ್ರೀಲೀಲಾ, ವಚನಾನಂದ ಸ್ವಾಮೀಜಿ, ಶಾಸಕ ಶ್ರೀನಿವಾಸ್, ಕೆಎಂಎಫ್ ಅಧ್ಯಕ್ಷರಾದ ಭೀಮಾನಾಯ್ಕ್ ಸೇರಿ ಹಲವು ಗಣ್ಯರು ಸಾಮೂಹಿಕವಾಗಿ ಯೋಗಾಸನ ಮಾಡಿದ್ದಾರೆ. 

Latest Videos

click me!